ನವದೆಹಲಿ (ಏ.27): ಕೊರೋನಾ ವೈರಸ್ ಸೋಂಕಿತರ ಸಂಪರ್ಕದಲ್ಲಿದ್ದರೆ ಕೊರೋನಾ ಸೋಂಕು ತಗಲುತ್ತದೆ. ಹೀಗಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸರ್ಕಾರ ಕೋರಿದೆ. ಆದರೆ, ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುವವರಿಗೆ ಮಾತ್ರ ಬೇರೆ ಮಾರ್ಗವೇ ಇಲ್ಲ. ಅವರು ರೋಗಿ ಬಳಿ ತೆರಳಿಯೇ ಚಿಕಿತ್ಸೆ ನೀಡಬೇಕು. ಪರಿಣಾಮ, ವೈದ್ಯರು, ಆಸ್ಪತ್ರೆಯ ಸಿಬ್ಬಂದಿಗೆ ಕೊರೋನಾ ವೈರಸ್ ತಗುಲುತ್ತಿದೆ.
ಪಶ್ಚಿಮ ಬಂಗಾಳದಲ್ಲಿ ಕೊರೋನಾದಿಂದ ವೈದ್ಯ ಮೃತಪಟ್ಟಿದ್ದಾನೆ. 60 ವರ್ಷದ ಡಾ.ವಿಪ್ಲಬ್ ಕಾಂತ್ ದಾಸ್ ಗುಪ್ತಾ ಕೊರೋನಾ ಪೀಡಿತರಿಗೆ ಚಿಕಿತ್ಸೆ ನೀಡುತ್ತಿದ್ದರು. ಈ ವೇಳೆ ಅವರಿಗೂ ಕೊರೋನಾ ವೈರಸ್ ಅಂಟಿತ್ತು. ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ವೈದ್ಯನ ಸಾವಿಗೆ ಸಿಎಂ ಮಮತಾ ಬ್ಯಾನರ್ಜಿ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಭಾನುವಾರ ದಾಖಲೆ ಪ್ರಕರಣ; ಒಂದೇ ದಿನ ಸುಮಾರು 2 ಸಾವಿರ ಜನರಿಗೆ ಕೊರೋನಾ!
ಇನ್ನು,
ದೆಹಲಿಯ ಆಸ್ಪತ್ರೆಗಳಲ್ಲೇ ಕೊರೋನಾ ಸೋಂಕಿನ ಅಬ್ಬರ ಜೋರಾಗಿದೆ. ನಿನ್ನೆ ಒಂದೇ ದಿನ ಆರೋಗ್ಯ ಸೇವೆಯ 51 ಜನರಲ್ಲಿ ಸೋಂಕು ಪತ್ತೆಯಾಗಿದೆ. ದೆಹಲಿಯ ರೋಹಿಣಿಯ ಅಂಬೇಡ್ಕರ್ ಆಸ್ಪತ್ರೆಯಲ್ಲಿ 32 ಜನ, ಜಗಜೀವನರಾಮ್ ಆಸ್ಪತ್ರೆಯಲ್ಲಿ 19 ನರ್ಸ್ಗಳು, ಎಮ್ಸ್ ಆಸ್ಪತ್ರೆಯ ನರ್ಸ್ ಮತ್ತು ಅವರ ಇಬ್ಬರು ಮಕ್ಕಳಲ್ಲಿ ಕೊರೋನಾ ಕಾಣಿಸಿಕೊಂಡಿದೆ. ಇನ್ನು, ಅಂಬೇಡ್ಕರ್ ಆಸ್ಪತ್ರೆಯಲ್ಲಿ ಕೊರೋನಾ ಪೀಡಿತ ಗರ್ಭಿಣಿ ಮೃತಪಟ್ಟಿದ್ದಾರೆ.
ಕೇಂದ್ರ ಆರೋಗ್ಯ ಸಚಿವರ ಕಚೇರಿಯಲ್ಲೇ ಕೊರೋನಾ:
ವಿಚಿತ್ರ ಎಂದರೆ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ್ ವರ್ಧನ್ ಕಚೇರಿಯಲ್ಲೇ ಕೊರೋನಾ ಕಾಣಿಸಿಕೊಂಡಿದೆ. ಹರ್ಷವರ್ಧನ್ ಒಎಸ್ಡಿ ಕಚೇರಿ ಸಿಬ್ಬಂದಿಗೆ ಕೊರೋನಾ ಇರುವುದು ದೃಢಪಟ್ಟಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ