ಭಾರತದ ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಎಂದರೆ "ಆಜಾದಿ ಕಾ ಅಮೃತ್ ಮಹೋತ್ಸವ" ದ ಆಚರಣೆಯ ಭಾಗವಾಗಿ ರಾಷ್ಟ್ರಪತಿ ಭವನದಲ್ಲಿರುವ ಅಪ್ರತಿಮ ಮೊಘಲ್ ಉದ್ಯಾನವನ್ನು 'ಅಮೃತ್ ಉದ್ಯಾನ್'(Amrit Udyan) ಎಂದು ಮರುನಾಮಕರಣ ಮಾಡಲಾಯಿತು. ಈಗಾಗಲೇ ಮಂಗಳವಾರದಿಂದ ಎಂದರೆ ಜನವರಿ 31ನೇ ತಾರೀಖಿನಿಂದ ಪ್ರವಾಸಿಗರಿಗೆ(Tourists) ಈ ಉದ್ಯಾನ ತೆರೆದಿದ್ದು, ಈ ಹಸಿರಿನಿಂದ ಮತ್ತು ಅನೇಕ ರೀತಿಯ ಹೂದೋಟಗಳಿಂದ ತುಂಬಿರುವ ಉದ್ಯಾನ ವರ್ಷಕ್ಕೊಮ್ಮೆ ಸಾರ್ವಜನಿಕರಿಗೆ ತೆರೆದಿರುತ್ತದೆ.
ನಮ್ಮ ಭಾರತ ದೇಶದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾನುವಾರ ರಾಷ್ಟ್ರಪತಿ ಭವನದ ಉದ್ಯಾನ - ಉದ್ಯಾನ್ ಉತ್ಸವ್ 2023 ರ ಉದ್ಘಾಟನೆಯಲ್ಲಿ ಭಾಗವಹಿಸಿದ್ದರು.
ಸಾರ್ವಜನಿಕರಿಗಾಗಿ ತೆರೆದ ಉದ್ಯಾನದಲ್ಲಿ ಏನೆಲ್ಲಾ ಇದೆ ಗೊತ್ತೇ?
ರಾಷ್ಟ್ರಪತಿ ಭವನದಲ್ಲಿರುವ ಪ್ರಸಿದ್ಧ ಅಮೃತ್ ಉದ್ಯಾನ್ ಜನವರಿ 31 ರಿಂದ ಸಾರ್ವಜನಿಕರಿಗೆ ತೆರೆದಿದ್ದು, ಇಲ್ಲಿಗೆ ಬರುವ ಪ್ರವಾಸಿಗರು ಇತರ ಆಕರ್ಷಣೆಗಳ ನಡುವೆ 12 ವಿಧದ ತುಲಿಪ್ ಹೂವುಗಳ ಸೌಂದರ್ಯವನ್ನು ಸವಿಯಬಹದುಉ
ಈಗ ಈ ಅಮೃತ್ ಉದ್ಯಾನವನಕ್ಕೆ ನೀವು ಭೇಟಿ ನೀಡುವುದಾದರೆ, ಮುಂಚಿತವಾಗಿಯೇ ನಿಮ್ಮ ಟಿಕೆಟ್ ಗಳನ್ನು ಆನ್ಲೈನ್ ನಲ್ಲಿ ಕಾಯ್ದಿರಿಸಬೇಕು.
ಇದನ್ನೂ ಓದಿ: IndiGo Airlines: ವಿಮಾನದಲ್ಲೂ ಯಡವಟ್ಟು, ಬಿಹಾರಕ್ಕೆ ಹೋಗಬೇಕಿದ್ದ ಪ್ರಯಾಣಿಕನನ್ನು ರಾಜಸ್ಥಾನಕ್ಕೆ ಕರೆದೊಯ್ದ ಇಂಡಿಗೋ!
ಆನ್ಲೈನ್ ನಲ್ಲಿ ಟಿಕೆಟ್ ಬುಕ್ ಮಾಡುವುದು ಹೇಗೆ?
ಹಂತ 1: ಟಿಕೆಟ್ ಕಾಯ್ದಿರಿಸಲು ಅಧಿಕೃತ ಪೋರ್ಟಲ್ https://rb.nic.in/rbvisit/visit_plan.aspx ಗೆ ಭೇಟಿ ನೀಡಿ.
ಹಂತ 2: 'ಉದ್ಯಾನ ಉತ್ಸವಕ್ಕಾಗಿ ಸರ್ಕ್ಯೂಟ್ 3' ವಿಭಾಗದ ಅಡಿಯಲ್ಲಿ 'ಬುಕ್ ನೌ' ಬಟನ್ ಅನ್ನು ಕ್ಲಿಕ್ ಮಾಡಿ.
ಹಂತ 3: ಸಂದರ್ಶಕರ ಸಂಖ್ಯೆಯನ್ನು ನಮೂದಿಸಿ, ಟೈಮ್ ಸ್ಲಾಟ್ ಅನ್ನು ಆರಿಸಿ ಮತ್ತು ನಂತರ ಸಂದರ್ಶಕರ ವಿವರಗಳನ್ನು ಅಲ್ಲಿ ನಮೂದಿಸಿ.
ಹಂತ 4: ನಿಮ್ಮ ಮೊಬೈಲ್ ಫೋನ್ ಸಂಖ್ಯೆ ನಮೂದಿಸಿ ಮತ್ತು ನಿಮಗೆ ಬಂದ ಒಟಿಪಿಯನ್ನು ಸಹ ಅಲ್ಲಿ ನಮೂದಿಸಿ.
ಹಂತ 5: ಇಷ್ಟು ಮಾಡಿದರೆ ನಿಮ್ಮ ಬುಕಿಂಗ್ ಪೂರ್ಣಗೊಳ್ಳುತ್ತದೆ, ವಿಸಿಟರ್ ಪಾಸ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ ಮತ್ತು ನಿಮ್ಮ ಭೇಟಿಯಲ್ಲಿ ಅದನ್ನು ನಿಮ್ಮೊಂದಿಗೆ ಕೊಂಡೊಯ್ಯಿರಿ.
ಒಬ್ಬ ಸಂದರ್ಶಕರು ಆರು ಬಾರಿ ಈ ಸ್ಲಾಟ್ ಗಳನ್ನು ಆಯ್ಕೆ ಮಾಡುವ ಆಯ್ಕೆಯನ್ನು ಹೊಂದಿರುತ್ತಾರೆ. ರಾಷ್ಟ್ರಪತಿ ಭವನದ ಗೇಟ್ ಸಂಖ್ಯೆ 12 ರ ಬಳಿಯ ಸ್ವಯಂ ಸೇವಾ ಕಿಯೋಸ್ಕ್ ಮತ್ತು ಸೌಲಭ್ಯ ಕೌಂಟರ್ ಗಳಲ್ಲಿ ನೋಂದಾಯಿಸಿದ ನಂತರ ವಾಕ್-ಇನ್ ಸಂದರ್ಶಕರಿಗೆ ಉದ್ಯಾನಗಳಿಗೆ ಪ್ರವೇಶಿಸಲು ಅವಕಾಶ ನೀಡಲಾಗುವುದು. ಆದರೆ ಗೇಟ್ ನಲ್ಲಿ ನೂಕುನುಗ್ಗಲನ್ನು ತಪ್ಪಿಸಲು ಮುಂಚಿತವಾಗಿ ಬುಕಿಂಗ್ ಮಾಡಲು ಸೂಚಿಸಲಾಗಿದೆ.
ಈ ಅಮೃತ್ ಉದ್ಯಾನವು ಯಾವ ದಿನಾಂಕದವರೆಗೆ ಸಾರ್ವಜನಿಕರ ಭೇಟಿಗೆ ತೆರೆದಿರುತ್ತದೆ?
ಈ ಅಪ್ರತಿಮ ಉದ್ಯಾನವನ ಈ ವರ್ಷ ಸುಮಾರು ಎರಡು ತಿಂಗಳ ಕಾಲ ತೆರೆದಿರುತ್ತವೆ. ಈ ಬಾರಿ ಹರ್ಬಲ್ ಗಾರ್ಡನ್, ಬೋನ್ಸಾಯ್ ಗಾರ್ಡನ್, ಸೆಂಟ್ರಲ್ ಲಾನ್, ಲಾಂಗ್ ಗಾರ್ಡನ್ ಮತ್ತು ವರ್ತುಲ ಉದ್ಯಾನ ಸೇರಿದಂತೆ ಉದ್ಯಾನಗಳು ಜನವರಿ 31 ರಿಂದ ಮಾರ್ಚ್ 26 ರವರೆಗೆ ಸಾರ್ವಜನಿಕರಿಗೆ ತೆರೆದಿರುತ್ತವೆ.
ಆದಾಗ್ಯೂ, ನಿರ್ವಹಣೆಗಾಗಿ ಸೋಮವಾರ ಮತ್ತು ಹೋಳಿ ಹಬ್ಬದ ಕಾರಣ ಮಾರ್ಚ್ 8 ರಂದು ಉದ್ಯಾನ ಸಾರ್ವಜನಿಕರ ಭೇಟಿಗೆ ತೆರೆದಿರುವುದಿಲ್ಲ.
ಅಮೃತ್ ಉದ್ಯಾನ್ ಮಾರ್ಚ್ 28 ರಿಂದ 31 ರವರೆಗೆ ವಿಶೇಷ ವರ್ಗದ ಸಂದರ್ಶಕರಿಗೆ ತೆರೆದಿರುತ್ತದೆ. ಮಾರ್ಚ್ 28 ರಂದು ರೈತರಿಗೆ, ಮಾರ್ಚ್ 29 ರಂದು ವಿಕಲಚೇತನರಿಗೆ, ಮಾರ್ಚ್ 30 ರಂದು ರಕ್ಷಣಾ, ಅರೆಸೈನಿಕ ಪಡೆಗಳು ಮತ್ತು ಪೊಲೀಸ್ ಸಿಬ್ಬಂದಿಗೆ ಮತ್ತು ಮಾರ್ಚ್ 31 ರಂದು ಬುಡಕಟ್ಟು ಮಹಿಳಾ ಸ್ವಸಹಾಯ ಗುಂಪುಗಳು ಸೇರಿದಂತೆ ಮಹಿಳೆಯರಿಗೆ ಉದ್ಯಾನವು ತೆರೆದಿರುತ್ತವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ