ತಿರುವನಂತಪುರಂ; ಶಬರಿಮಲೆ ದೇವಸ್ಥಾನದ ಪ್ರಸಾದದ ಕಿಟ್ ಅನ್ನು ಅಂಚೆ ಇಲಾಖೆ ಇನ್ನು ಮುಂದೆ ಮನೆ ಮನೆಗೆ ಡೆಲಿವರಿ ಮಾಡಲಿದೆ. ಈ ಕಿಟ್ನಲ್ಲಿ ಅರವಣ, ಅರಿಶಿಣ, ಕುಂಕುಮ, ವಿಭೂತಿ ಹಾಗೂ ಇತರೆ ಪ್ರಸಾದ ಇರಲಿದೆ. ಒಂದು ಕಿಟ್ಗೆ 450 ರೂಪಾಯಿ ದರ ನಿಗದಿ ಮಾಡಲಾಗಿದೆ.
ಸ್ವಾಮಿ ಪ್ರಸಾದಂ ಹೆಸರಿನ ಕಿಟ್ಅನ್ನು ದೇಶದ ಯಾವುದೇ ಪೋಸ್ಟ್ ಆಫೀಸ್ನಲ್ಲಿ ಈ ಪೇಮಂಟ್ ಮುಖಾಂತರ ಬುಕ್ ಮಾಡಬಹುದಾಗಿದೆ. ಸ್ಪೀಡ್ ಪೋಸ್ಟ್ ಮೂಲಕ ಕಿಟ್ ಅನ್ನು ಡೆಲಿವರಿ ಮಾಡಲಾಗುತ್ತದೆ. ಶುಕ್ರವಾರದಿಂದ ಬುಕ್ಕಿಂಗ್ ಆರಂಭವಾಗಲಿದ್ದು, ಕಿಟ್ಗಳನ್ನು ನವೆಂಬರ್ 16ರಿಂದ ಕಳುಹಿಸಿಕೊಡಲಾಗುತ್ತದೆ. ಶಬರಿಮಲೆ ದೇವಸ್ವಂ ಮಂಡಳಿ ಒಂದು ಕಿಟ್ಗೆ 250 ರೂಪಾಯಿ ದರ ನಿಗದಿ ಮಾಡಿದೆ. ಉಳಿದ 200 ರೂಪಾಯಿ ಅಂಚೆ ಇಲಾಖೆಯ ವೆಚ್ಚವಾಗಿದೆ.
ದೇವಸ್ವಂ ಮಂಡಳಿಯವರು ಪ್ರಸಾದದ ಕಿಟ್ಅನ್ನು ಸನ್ನಿಧಾನದಿಂದ ಪಂಬಾಗೆ ಕಳುಹಿಸಲಿದೆ. ಪಂಬಾದಿಂದ ಅಂಚೆ ಇಲಾಖೆ ಡಿಲಿವರಿ ವಿಳಾಸಕ್ಕೆ ಮೂರು ದಿನದಲ್ಲಿ ಪ್ರಸಾದದ ಕಿಟ್ ತಲುಪಿಸಲಿದೆ. ಈ ಸಂಬಂಧ ಅಂಚೆ ಇಲಾಖೆ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ವಿವಿಧ ಭಾಷೆಗಳಲ್ಲಿ ಡಿಸ್ಪ್ಲೆ ನೋಟಿಫಿಕೇಷನ್ ಹೊರಡಿಸಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ