• Home
  • »
  • News
  • »
  • national-international
  • »
  • Note Ban: ನೋಟು ನಿಷೇಧ ಪರಿಶೀಲನೆ ಬಗ್ಗೆ ಅಫಿಡವಿಟ್ ಸಲ್ಲಿಸಿ, ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಖಡಕ್ ಸೂಚನೆ

Note Ban: ನೋಟು ನಿಷೇಧ ಪರಿಶೀಲನೆ ಬಗ್ಗೆ ಅಫಿಡವಿಟ್ ಸಲ್ಲಿಸಿ, ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಖಡಕ್ ಸೂಚನೆ

ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್

ಸರ್ಕಾರದ ನೀತಿ ನಿರ್ಧಾರಗಳ ನ್ಯಾಯಾಂಗ ಪರಾಮರ್ಶೆಗೆ ಸಂಬಂಧಿಸಿದ ಲಕ್ಷ್ಮಣ ರೇಖೆಯ ಬಗ್ಗೆ ಅರಿವಿದೆ, ಆದರೆ ಈ ವಿಷಯವು ಕೇವಲ ಶೈಕ್ಷಣಿಕ ವ್ಯಾಯಾಮವಾಗಿದೆಯೇ ಎಂದು ನಿರ್ಧರಿಸಲು 2016ರ ನೋಟು ಅಮಾನ್ಯೀಕರಣದ ನಿರ್ಧಾರವನ್ನು ಪರಿಶೀಲಿಸಬೇಕು ಎಂದು ಸುಪ್ರೀಂ ಕೋರ್ಟ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಮುಂದೆ ಓದಿ ...
  • News18 Kannada
  • Last Updated :
  • New Delhi, India
  • Share this:

ನವದೆಹಲಿ: ಕೇಂದ್ರ ಸರ್ಕಾರವು (Central Government) 500 ಮತ್ತು 1000 ರೂಪಾಯಿ ನೋಟುಗಳನ್ನು ಅಮಾನ್ಯಗೊಳಿಸಿದ ಆರು ವರ್ಷಗಳ ನಂತರ, ಐವರು ನ್ಯಾಯಮೂರ್ತಿಗಳ ಸುಪ್ರೀಂ ಕೋರ್ಟ್ (Supreme court) ಸಂವಿಧಾನ ಪೀಠವು ಅದರ ಸಿಂಧುತ್ವ ಮತ್ತು ನಿರ್ಧಾರವನ್ನು ಪರಿಶೀಲಿಸಬೇಕು ಎಂದು ಬುಧವಾರ ಹೇಳಿದೆ. ಸರ್ಕಾರದ ನೀತಿ ನಿರ್ಧಾರಗಳ ನ್ಯಾಯಾಂಗ ಪರಾಮರ್ಶೆಗೆ ಸಂಬಂಧಿಸಿದ ಲಕ್ಷ್ಮಣ ರೇಖೆಯ ಬಗ್ಗೆ ಅರಿವಿದೆ, ಆದರೆ ಈ ವಿಷಯವು ಕೇವಲ ಶೈಕ್ಷಣಿಕ ವ್ಯಾಯಾಮವಾಗಿದೆಯೇ ಎಂದು ನಿರ್ಧರಿಸಲು 2016ರ ನೋಟು ಅಮಾನ್ಯೀಕರಣದ (Demonetisation) ನಿರ್ಧಾರವನ್ನು ಪರಿಶೀಲಿಸಬೇಕು ಎಂದು ಸುಪ್ರೀಂ ಕೋರ್ಟ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.


ಸಮಗ್ರ ವರದಿ ಸಲ್ಲಿಕೆಗೆ ಕೇಂದ್ರ, ಆರ್‌ಬಿಐಗೆ ಸುಪ್ರೀಂ ಸೂಚನೆ
ನ್ಯಾಯಮೂರ್ತಿಗಳಾದ ಎಸ್ ಅಬ್ದುಲ್ ನಜೀರ್, ಬಿಆರ್ ಗವಾಯಿ, ಎಎಸ್ ಬೋಪಣ್ಣ, ವಿ ರಾಮಸುಬ್ರಮಣಿಯನ್ ಮತ್ತು ಬಿವಿ ನಾಗರತ್ನ ಅವರ ಪೀಠವು ಆರ್‌ಬಿಐ ಕಾಯ್ದೆಯ ಸೆಕ್ಷನ್ 26 ರ ನೋಟುಗಳ ಅಮಾನ್ಯೀಕರಣವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ಬಗ್ಗೆ ಸಮಗ್ರ ಅಫಿಡವಿಟ್ ಸಲ್ಲಿಸುವಂತೆ ಕೇಂದ್ರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಸೂಚಿಸಿದೆ.


ನವೆಂಬರ್ 9 ಕ್ಕೆ ವಿಚಾರಣೆ
ನವೆಂಬರ್ 8, 2016ರ ಅಧಿಕ ಮೌಲ್ಯದ ಕರೆನ್ಸಿ ನೋಟುಗಳ ಅಮಾನ್ಯೀಕರಣದ ವಿರುದ್ಧದ ಅರ್ಜಿಗಳನ್ನು ವಿಚಾರಣೆ ನಡೆಸುವುದಾಗಿ ಹೇಳಿದ ಸರ್ವೋಚ್ಛ ನ್ಯಾಯಾಲಯವು ನವೆಂಬರ್ 9 ಕ್ಕೆ ಈ ಅರ್ಜಿಗಳನ್ನು ವಿಚಾರಣೆ ನಡೆಸಲಿದೆ.


ನೋಟು ಬ್ಯಾನ್ ಬಗ್ಗೆ ಕಟುವಾಗಿ ಟೀಕಿಸಿದ್ದ ಪಿ. ಚಿದಂಬರಂ
ನೋಟು ರದ್ದಾದ ಕೆಲವೇ ದಿನಗಳಲ್ಲಿ ಹಲವಾರು ಜನರು ನ್ಯಾಯಾಲಯದ ಮೊರೆ ಹೋಗಿದ್ದರು. ನೋಟು ರದ್ದತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಕೆಲವು ಅರ್ಜಿದಾರರ ಪರ ಹಾಜರಾದ ಮಾಜಿ ವಿತ್ತ ಸಚಿವ ಮತ್ತು ನೋಟು ಅಮಾನ್ಯೀಕರಣದ ಕಟು ಟೀಕಾಕಾರ, ಪಿ ಚಿದಂಬರಂ, ಇದು ಒಂದು ಬುದ್ದಿಹೀನ ಕಸರತ್ತು ಎಂದು ನರೇಂದ್ರ ಮೋದಿಯನ್ನು ಟೀಕಿಸಿದ್ದರು. ಇದು ನಾಗರಿಕರಿಗೆ ತೀವ್ರ ತೊಂದರೆ ಉಂಟುಮಾಡಿದೆ.


ಇದನ್ನೂ ಓದಿ:  Shocking Law: ತಾಯಿಯಿಂದ ಮಕ್ಕಳನ್ನು ದೂರವಾಗಿರಿಸುವುದೂ ಕಾನೂನುಬದ್ಧವಂತೆ!


ಸಣ್ಣ ಮೊತ್ತವನ್ನು ಹಿಂಪಡೆಯಲು ಎಟಿಎಂಗಳ ಮುಂದೆ ಗಂಟೆಗಳ ಕಾಲ ಸರತಿಯಲ್ಲಿ ನಿಲ್ಲುವ ಪರಿಸ್ಥಿತಿ ಬಂದಿದೆ. ವಿದ್ಯಾರ್ಥಿಗಳು ಕಾಲೇಜು ಶುಲ್ಕ ಕಟ್ಟಲು ಪರದಾಡುವಂತಾಯಿತು. ಔಷಧ ಖರೀದಿಸಲೂ ಸಾಧ್ಯವಾಗಲಿಲ್ಲ. ನೋಟು ಅಮಾನ್ಯೀಕರಣವು ಕಪ್ಪುಹಣ, ಭಯೋತ್ಪಾದನೆ ನಿಧಿ ಮತ್ತು ನಕಲಿ ಕರೆನ್ಸಿಗಳನ್ನು ತಡೆಯುವ ಉದ್ದೇಶಗಳನ್ನು ಸಾಧಿಸಲು ವಿಫಲವಾಗಿದೆ ಎಂದು ಅವರು ವಾದಿಸಿದ್ದರು.


ಈ ರೀತಿಯ ನೋಟು ಅಮಾನ್ಯೀಕರಣಕ್ಕೆ ಸಂಸತ್ತಿನ ಪ್ರತ್ಯೇಕ ಕಾಯಿದೆಯ ಅಗತ್ಯವಿದೆ ಎಂದು ಮಾಜಿ ಹಣಕಾಸು ಸಚಿವ, ಹಿರಿಯ ವಕೀಲ ಪಿ ಚಿದಂಬರಂ ವಾದಿಸಿದ್ದಾರೆ. ಇದೇ ರೀತಿಯ ನೋಟು ಅಮಾನ್ಯೀಕರಣವನ್ನು 1978ರಲ್ಲಿ ಮಾಡಲಾಗಿತ್ತು. ಆರ್‌ಬಿಐನಿಂದ (ನೋಟು ರದ್ದತಿಗಾಗಿ) ಶಿಫಾರಸುಗಳು ಸತ್ಯ ಮತ್ತು ಸಂಶೋಧನೆಗಳೊಂದಿಗೆ ಹೊರಹೊಮ್ಮಿರಬೇಕು ಮತ್ತು ಸರ್ಕಾರವು ಪರಿಗಣಿಸಬೇಕಿತ್ತು. ಆದರೆ, ಇದು ಇಲ್ಲಿ ವಿರುದ್ಧವಾಗಿತ್ತು" ಎಂದು ಪಿ ಚಿದಂಬರಂ ವಾದಿಸಿದ್ದರು.


"ಆರ್ಥಿಕತೆಯು ಕೇವಲ ದೇಶೀಯವಾಗಿಲ್ಲ"
ಇದಕ್ಕೂ ಮುನ್ನ ಕೇಂದ್ರದ ಪರ ವಾದಿಸಿದ್ದ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರು, “ಅಗತ್ಯವಿದ್ದಲ್ಲಿ ಮತ್ತು ಸರ್ಕಾರವು ಈ ದಾಖಲೆಗಳನ್ನು ತೋರಿಸುತ್ತದೆ. ಆದರೆ ನಿರ್ಧಾರವು ಸ್ವತಃ ಕಾರ್ಯರೂಪಕ್ಕೆ ಬಂದಾಗ ನ್ಯಾಯಾಲಯವು ಶೈಕ್ಷಣಿಕ ಕಸರತ್ತು ನಡೆಸುವುದು ಅಗತ್ಯವೇ? ಆರ್ಥಿಕತೆಯು ಇನ್ನು ಮುಂದೆ ಕೇವಲ ದೇಶೀಯವಾಗಿಲ್ಲ, ಇದು ಜಾಗತಿಕ ಆರ್ಥಿಕತೆಯೊಂದಿಗೆ ಆಂತರಿಕ ಸಂಪರ್ಕವನ್ನು ಹೊಂದಿದೆ" ಎಂದಿದ್ದಾರೆ.


ನ್ಯಾಯಪೀಠವು ಅಟಾರ್ನಿ ಜನರಲ್ ಹೇಳಿಕೆಗೆ, “ನೀವು ದಾಖಲೆಗಳನ್ನು ನ್ಯಾಯಾಲಯದ ಪರಿಶೀಲನೆಯಿಂದ ದೂರವಿಡಲು ಸಾಧ್ಯವಿಲ್ಲ. ಕಾಗದಗಳನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ. ನಾವು ಅವುಗಳನ್ನು ಪರಿಶೀಲಿಸಬೇಕಾದಲ್ಲಿ ಕೇಳುತ್ತೇವೆ" ಎಂದಿದೆ.


ಇದನ್ನೂ ಓದಿ:   ಹಿಂದೂಗಳು ಒಬ್ಬರನ್ನು ಮದುವೆಯಾಗಿ ಮೂವರನ್ನು ಇಟ್ಟುಕೊಳ್ಳುತ್ತಾರೆ; AIMIM ಮುಖಂಡ


ಅಂತಿಮವಾಗಿ ನ್ಯಾಯಮೂರ್ತಿ ಎಸ್‌ಎ ನಜೀರ್ ನೇತೃತ್ವದ ಪೀಠವು ಸಾಂವಿಧಾನಿಕ ಪೀಠದ ಮುಂದೆ ಸಮಸ್ಯೆ ಉದ್ಭವಿಸಿದಾಗ ಉತ್ತರಿಸುವುದು ಅದರ ಕರ್ತವ್ಯ ಎಂದು ಹೇಳುವ ಮೂಲಕ ನೋಟು ಅಮಾನ್ಯೀಕರಣ ವಿಚಾರಕ್ಕೆ ಸಂಬಂಧಿಸಿದ ವಿಚಾರಣೆಗಳನ್ನು ಕೈಗೆತ್ತಿಕೊಂಡಿದ್ದಾರೆ.


ಆರು ವರ್ಷ ಪೂರೈಸಿದ ನೋಟ್‌ ಬ್ಯಾನ್
ನವೆಂಬರ್ 9, 2016 ರಂದು ರಾಷ್ಟ್ರವನ್ನುದ್ದೇಶಿಸಿ ಹಠಾತ್ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯರಾತ್ರಿಯಿಂದ ಅಸ್ತಿತ್ವದಲ್ಲಿರುವ ₹ 500 ಮತ್ತು ₹ 1,000 ನೋಟುಗಳನ್ನು ಇನ್ನು ಮುಂದೆ ಯಾವುದೇ ವಹಿವಾಟುಗಳಿಗೆ ಬಳಸಲಾಗುವುದಿಲ್ಲ ಎಂದು ಘೋಷಿಸಿದ್ದರು.

Published by:Ashwini Prabhu
First published: