News18 India World Cup 2019

ರಾಜ್ಯಸಭಾ ಚುನಾವಣೆಯಲ್ಲಿ ಇನ್ಮುಂದೆ 'ನೋಟಾ' ಆಯ್ಕೆ ಇಲ್ಲ!


Updated:August 21, 2018, 1:10 PM IST
ರಾಜ್ಯಸಭಾ ಚುನಾವಣೆಯಲ್ಲಿ ಇನ್ಮುಂದೆ 'ನೋಟಾ' ಆಯ್ಕೆ ಇಲ್ಲ!

Updated: August 21, 2018, 1:10 PM IST
ನ್ಯೂಸ್​ 18 ಕನ್ನಡ

ನವದೆಹಲಿ(ಆ.21): ಸುಪ್ರೀಂ ಕೋರ್ಟ್​ ರಾಜ್ಯಸಭಾ ಚುನಾವಣೆಯಲ್ಲಿ 'ಇವರಲ್ಲಿ ಯಾರೂ ಬೇಡ(ನೋಟಾ)' ಆಯ್ಕೆ ನೀಡಲು ನಿರಾಕರಿಸಿದೆ. ಚೀಫ್​ ಜಸ್ಟೀಸ್​ ದೀಪಕ್​ ಮಿಶ್ರಾ, ಜಸ್ಟೀಸ್​ ಎ. ಎಂ ಖಾನ್ವಿಲ್​ಕರ್​ ಹಾಗೂ ಜಸ್ಟೀಸ್​ ಡಿ. ವೈ ಚಂದ್ರಚೂಡ್​ರವರ ತ್ರಿಸದಸ್ಯ ಪೀಠವು ರಾಜ್ಯಸಭಾ ಚುನಾವಣೆಯ ಬ್ಯಾಲೆಟ್​ನಲ್ಲಿ ನೀಡಲಾಗುತ್ತಿದ್ದ ನೋಟಾ ಆಯ್ಕೆಯನ್ನು ಚುನಾವಣಾ ಆಯೋಗದ ಅಧಿಸೂಚನೆಯನ್ನು ರದ್ದುಗೊಳಿಸಿದೆ. ಚುನಾವಣಾ ಆಯೋಗದ ಈ ಅಧಿಸೂಚನೆಯನ್ನು ಪ್ರಶ್ನಿಸಿದ ಸುಪ್ರೀಂ ಕೋರ್ಟ್​ 'ನೋಟಾ' ಆಯ್ಕೆಯು ಸಾರ್ವರ್ತಿಕ ಚುನಾವಣೆಯಲ್ಲಿ ಸಾಮಾನ್ಯ ಮತದಾರರಿಗೆ ಬಳಸಲು ತರಲಾಗಿತ್ತು ಎಂದಿದೆ.

ಈ ನಿರ್ಧಾರವು ಶೈಲೇಷ್​ ಮನುಭಾಯಿ ಪರ್ಮಾರ್​ರವರ ಮನವಿ ಮೇರೆಗೆ ವಿಚಾರಣೆ ನಡೆದಿದ್ದು, ಇದೀಗ ಈ ತ್ರಿಸದಸ್ಯ ಪೀಠ ಈ ತೀರ್ಪು ನೀಡಿದೆ. ಕಳೆದ ರಾಜ್ಯಸಭಾ ಚುನಾವಣೆಯಲ್ಲಿ ಅವರು ಗುಜರಾತ್​ ವಿಧಾನಸಭೆಯಲ್ಲಿ ಕಾಂಗ್ರೆಸ್​ನ ಮುಖ್ಯ ವ್ಹಿಪ್​(ಸಚೇತಕ) ಆಗಿದ್ದರು. ಆದರೆ ಈ ಸಂದರ್ಭದಲ್ಲಿ ಪಕ್ಷವು ಸಂಸದ ಅಹ್ಮದ್​ ಪಟೇಲ್​ರನ್ನು ಕಣಕ್ಕಿಳಿಸಿದ್ದರು ಎಂಬುವುದು ಗಮನಾರ್ಹ. ಪರ್ಮಾರ್​ ಮತಪತ್ರಗಳಲ್ಲಿ ನೋಟಾ ಆಯ್ಕೆಗೆ ಅನುಮತಿ ನೀಡುವ ಆಯೋಗದ ಅಧಿಸೂಚನೆಯನ್ನು ಪ್ರಶ್ನಿಸಿದ್ದರು.

ಸುಪ್ರೀಂ ಕೋರ್ಟ್​ ಆರಂಭದಲ್ಲಿ ನೋಟಾ ಬಳಕೆಗೆ ತರುವ ಮೂಲಕ ಚುನಾವಣಾ ಆಯೋಗವು ಮತದಾನ ಮಾಡದಿರುವಂತಹ ಸಂದೇಶ ನೀಡುತ್ತದೆ ಎಂದಿತ್ತು. ಈ ಕುರಿತಾಗಿ ಗುಜರಾತ್​ನ ಕಾಂಗ್ರೆಸ್​ ನಾಯಕ ಕೂಡಾ ರಾಜ್ಯಸಭಾ ಚುನಾವಣೆಯಲ್ಲಿ ಒಂದು ವೇಳೆ ನೋಟಾಗೆ ಅನುಮತಿ ನೀಡಿದರೆ, ಆ ಮೂಲಕ 'ಖರೀದಿ ಹಾಗೂ ಭ್ರಷ್ಟಾಚಾರ'ಕ್ಕೆ ಕುಮ್ಮಕ್ಕು ನೀಡಿದಂತಾಗುತ್ತದೆ ಎಂದಿದ್ದರು.

ಏನಿದು ನೋಟಾ?:

ನೋಟಾ ಎಂಬುವುದಷ್ಟು ಮತದಾರರಿಗೆ ನೀಡುವ ಹಕ್ಕು. ಈ ಮೂಲಕ ಮತದಾರರು ಬ್ಯಾಲೆಟ್​ ಪೇಪರ್​ನಲ್ಲಿ ನೀಡಲಾದ ಅಭ್ಯರ್ಥಿಗಳಲ್ಲಿ ಯಾರನ್ನೂ ಆಯ್ಕೆ ಮಾಡಲು ಬಯಸುವುದಿಲ್ಲ ಎಂಬುವುದನ್ನು ಆಯ್ಕೆ ಮಾಡಬಹುದು. 2009ರ ಮೊದಲು ಮತದಾರರು ತಾವು ನೀಡಿರುವ ಆಯ್ಕೆಯಲ್ಲಿ ಯಾರಿಗೂ ಮತ ನೀಡಲು ಬಯಸುವುದಿಲ್ಲ ಎಂದು ಆ ಬೂತ್​ಗೆ ನಿಗಧಿಪಡಿಸಿದ ಚುನಾವಣಾ ಅಧಿಕಾರಿಗೆ ಹೇಳಬೇಕಾಗಿತ್ತು. ಇದನ್ನು ತಡೆಗಟ್ಟುವ ಸಲುವಾಗಿ 2009ರಲ್ಲಿ ಚುನಾವಣಾ ಆಯೋಗವು ನೋಟಾ ಎಂಬ ಆಯ್ಕೆಯನ್ನು ಅಧಿಕೃತವಾಗಿ ಬ್ಯಾಲೆಟ್​ ಪೇಪರ್​ನಲ್ಲಿ ಬಳಕೆಗೆ ತಂದಿತ್ತು.
Loading...

ಈ ನೋಟಾ ಆಯ್ಕೆಯು ಮತದಾರರಿಗೆ ವಿಶೇಷ ಹಕ್ಕು ನೀಡಿದರೂ ಇದರಿಂದ ಪ್ರಯೋಜನವಿರಲಿಲ್ಲ. ಯಾಕೆಂದರೆ ಶೇ. 80 ರಷ್ಟು ಮತದಾರರು ನೋಟಾಗೆ ಮತ ನೀಡಿದರೂ ಇನ್ನುಳಿದ ಶೇ. 20ರಷ್ಟು ಮತಗಳಲ್ಲಿ ಯಾರು ಹೆಚ್ಚು ಮತಗಳನ್ನು ಪಡೆಯುತ್ತಾರೋ ಅವರೇ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿ ಎಂದು ಘೋಷಿಸಲಾಗುತ್ತದೆ.
First published:August 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...