Economic Crisis: ಶ್ರೀಲಂಕಾ ಒಂದೇ ಅಲ್ಲ, ಈ ದೇಶಗಳಿಗೂ ಇದೆ ಆರ್ಥಿಕ ಬಿಕ್ಕಟ್ಟು!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಈಗಾಗಲೇ ಶ್ರೀಲಂಕಾ, ಲೆಬನಾನ್, ರಷ್ಯಾ, ಸುರಿನಾಮ್ ಮತ್ತು ಜಾಂಬಿಯಾ ದೇಶಗಳು ಸಾಲದ ಸುಸ್ತಿದಾರ ದೇಶಗಳಾಗಿವೆ. ಬೆಲಾರಸ್ ಕೂಡ ಸಾಲದ ಹೊರೆಯ ಅಂಚಿನಲ್ಲಿದೆ.

  • Share this:

ಕೋವಿಡ್ 19ರ ನಂತರ ವಿಶ್ವಕ್ಕೆ ವಿಶ್ವವೇ ಆರ್ಥಿಕವಾಗಿ ಜರ್ಝರಿತವಾಗುತ್ತಿದೆ. ಹಣದುಬ್ಬರ, ಅಗತ್ಯವಸ್ತುಗಳ ಬೆಲೆ ಏರಿಕೆ, ಹಲವಾರು ಆಹಾರ ಪದಾರ್ಥಗಳ ಪೂರೈಕೆಯ ಕೊರತೆ, ವ್ಯಾಪಾರ-ವಹಿವಾಟುಗಳ ನಷ್ಟ ಹೀಗೆ ಹತ್ತಾರು ಆರ್ಥಿಕ ಸಮಸ್ಯೆಗಳನ್ನು (Financial Problem) ಪ್ರತಿಯೊಂದು ದೇಶವು ಎದುರಿಸುವಂತಾಗಿದೆ. ಈಗಾಗಲೇ ಶ್ರೀಲಂಕಾ, ಲೆಬನಾನ್, ರಷ್ಯಾ, ಸುರಿನಾಮ್ ಮತ್ತು ಜಾಂಬಿಯಾ ದೇಶಗಳು (Country) ಸಾಲದ ಸುಸ್ತಿದಾರ ದೇಶಗಳಾಗಿವೆ. ಬೆಲಾರಸ್ ಕೂಡ ಸಾಲದ ಹೊರೆಯ ಅಂಚಿನಲ್ಲಿದೆ. ಇವಷ್ಟೇ ಅಲ್ಲದೇ ಹೆಚ್ಚುತ್ತಿರುವ ಸಾಲದ ವೆಚ್ಚಗಳು, ಹಣದುಬ್ಬರ (Inflation) ಮತ್ತು ಸಾಲಗಳು, ಆರ್ಥಿಕ ಕುಸಿತದಿಂದಾಗಿ ಇನ್ನೂ ಹನ್ನೆರೆಡು ದೇಶಗಳು ಆರ್ಥಿಕ ಬಿಕ್ಕಟ್ಟಿನ ಭೀತಿಯಲ್ಲಿವೆ. 1,000 ಬೇಸಿಸ್ ಪಾಯಿಂಟ್ ಬಾಂಡ್ ಸ್ಪ್ರೆಡ್ಗಳನ್ನು ಮಾನದಂಡವಾಗಿ ಬಳಸಿ, ವಿಶ್ಲೇಷಕರು 400 ಬಿಲಿಯನ್ ಡಾಲರ್ ಸಾಲವನ್ನು ಅಂದಾಜಿಸಿದ್ದಾರೆ. 


ಅರ್ಜೆಂಟೀನಾ
ಸಾಲ ಹಿಂತಿರುಗಿಸದವರಲ್ಲಿ ದಾಖಲೆ ಹೊಂದಿರುವ ದೇಶಗಳ ಸಾಲಿನಲ್ಲಿ ಅರ್ಜೆಂಟೀನಾ ಕೂಡ ಸೇರುವ ಸಾಧ್ಯತೆಯಿದೆ. ಪೆಸೊ (ಪೆಟ್ರೋಲಿಯಂ ಮತ್ತು ಎಕ್ಸ್ಲೂಸಿವ್ ಸೇಫ್ಟಿ ಆರ್ಗನೈಸೇಷನ್) ಈಗ ಕಪ್ಪು ಮಾರುಕಟ್ಟೆಯಲ್ಲಿ ಸುಮಾರು 50% ರಿಯಾಯಿತಿಯಲ್ಲಿ ವಹಿವಾಟು ನಡೆಸುತ್ತಿದೆ. ದೇಶದ ರೀಸರ್ವ್ ಗಳು ವಿಮರ್ಶಾತ್ಮಕವಾಗಿ ಕಡಿಮೆಯಾಗಿದೆ ಮತ್ತು ಡಾಲರ್‌ನಲ್ಲಿ ಕೇವಲ 20 ಸೆಂಟ್‌ಗಳಲ್ಲಿ ಬಾಂಡ್‌ಗಳು ವ್ಯಾಪಾರವಾಗುತ್ತಿವೆ. ಇದು 2020ರಲ್ಲಿ ದೇಶದ ಸಾಲ ಮರುರಚನೆ ವೇಳೆಯ ಅರ್ಧಕ್ಕಿಂತಲೂ ಕಡಿಮೆ ಇದೆ.


ಉಕ್ರೇನ್
ರಷ್ಯಾದ ದಾಳಿಯಿಂದಾಗಿ ತತ್ತರಿಸಿ ಹೋಗಿರುವ ಉಕ್ರೇನ್ ಹೊಸದಾಗಿ ಬಲಗೊಳ್ಳಬೇಕಾಗಿದೆ. ಸೆಪ್ಟೆಂಬರ್‌ನಲ್ಲಿ ಅದರ 1.2 ಬಿಲಿಯನ್ ಡಾಲರ್ ಬಾಂಡ್ ಪಾವತಿ ಬಾಕಿ ಇದೆ. ಬೇರೆ ದೇಶಗಳಿಂದ ಬಂದ ಸಹಾಯ ಹಣ ಮತ್ತು ಮೀಸಲು ಹಣ ಉಕ್ರೇನ್ ಗೆ 1.2 ಬಿಲಿಯನ್ ಮೊತ್ತ ಪಾವತಿಗೆ ಸಹಾಯಮಾಡಬಹುದು. ಆದರೆ ಸರ್ಕಾರಿ ಚಾಲಿತ ನಫ್ಟೋಗಾಜ್ ಎರಡು ವರ್ಷಗಳ ಸಾಲವನ್ನು ಫ್ರೀಜ್ ಮಾಡುವಂತೆ ಕೇಳಿಕೊಂಡಿದೆ. ಇದನ್ನು ಸರ್ಕಾರ ಸಹ ಅನುಸರಿಸಲಿದೆ ಎಂದು ಹೂಡಿಕೆದಾರರು ಊಹಿಸಿದ್ದಾರೆ.


ಟುನೀಶಿಯಾ
ಐಎಂಎಫ್ ನೆರವಿಗಾಗಿ ಕಾದಿರುವ ಹಲವು ದೇಶಗಳು ಆಫ್ರಿಕಾದ್ದಾಗಿವೆ. ಅದರಲ್ಲೂ ಟುನೀಶಿಯಾ ಅತ್ಯಂತ ಆರ್ಥಿಕ ಅಪಾಯದಲ್ಲಿದೆ. ಸುಮಾರು 10% ರಷ್ಟು ಬಜೆಟ್ ಕೊರತೆಯಿಂದಾಗಿ, ವಿಶ್ವದಲ್ಲೇ ಅತ್ಯಧಿಕ ಸಾರ್ವಜನಿಕ ವಲಯದ ವೇತನ ಬಿಲ್‌ಗಳಲ್ಲಿ ಒಂದಾಗಿದೆ. ಮತ್ತು ಅಧ್ಯಕ್ಷ ಕೈಸ್ ಸೈಯದ್ ಅವರ ಅಧಿಕಾರದ ಮೇಲೆ ತನ್ನ ಹಿಡಿತವನ್ನು ಬಲಪಡಿಸುವ ಪ್ರಯತ್ನದಿಂದಾಗಿ ಐಎಂಎಫ್ ನೆರವು ನೀಡುವುದು ಸಹ ಕಷ್ಟವಾಗಿದೆ.


ಟುನೀಶಿಯಾ ಬಾಂಡ್ ಸ್ಪ್ರೆಡ್ಸ್ – ಪ್ರೀ ಮಿಯಂ ಹೂಡಿಕೆದಾರರು ಅಮೆರಿಕಾ ಬಾಂಡ್ ಗಿಂತ ಹೆಚ್ಚಾ ಗಿ ಸಾಲವನ್ನು ಖರೀದಿಸಲು ಒತ್ತಾಯಿಸುತ್ತಾರೆ. ಇದು 2,800 ಬೇಸಿಸ್ ಪಾಯಿಂಟ್ಗಳಿಗೆ ಏರಿಕೆಯಾಗಿದೆ ಮತ್ತು ಉಕ್ರೇನ್ ಮತ್ತು ಎಲ್ ಸಾಲ್ವಡಾರ್ ಜೊತೆಗೆ ಟುನೀಶಿಯಾ ಕೂಡ ಮೊದಲ ಮೂರು ಸಂಭವನೀಯ ಸಾಲದ ಸುಸ್ತಿದಾರರ ಪಟ್ಟಿಯಲ್ಲಿದೆ.


ಘಾನಾ
ಘಾನಾದ ಜಿಡಿಪಿ ಅನುಪಾತದ ಸಾಲ ಸುಮಾರು 85% ಕ್ಕೆ ಏರಿದೆ. ಅದರ ಕರೆನ್ಸಿ, ಸೆಡಿ, ಈ ವರ್ಷ ಅದರ ಮೌಲ್ಯದ ಕಾಲು ಭಾಗದಷ್ಟು ಕಳೆದುಕೊಂಡಿದೆ ಮತ್ತು ಇದು ಈಗಾಗಲೇ ತೆರಿಗೆ ಆದಾಯದ ಅರ್ಧಕ್ಕಿಂತ ಹೆಚ್ಚಿನ ಹಣವನ್ನು ಸಾಲದ ಬಡ್ಡಿ ಪಾವತಿಗೆ ಖರ್ಚು ಮಾಡುತ್ತಿದೆ. ಘಾನಾದಲ್ಲಿ ಹಣದುಬ್ಬರವೂ ಶೇ.30ರ ಸಮೀಪಕ್ಕೆ ಬರುತ್ತಿದೆ.


ಈಜಿಪ್ಟ್
ಈಜಿಪ್ಟ್ ಸುಮಾರು 95 ಪ್ರತಿಶತದಷ್ಟು ಜಿಡಿಪಿ ಅನುಪಾತದ ಸಾಲ ಹೊಂದಿದೆ ಮತ್ತು ಈ ವರ್ಷ ಅಂತರರಾಷ್ಟ್ರೀಯ ನಗದಿನ ಅತಿದೊಡ್ಡ ಹರಿವನ್ನು ಕಂಡಿದೆ. ಜೆಪಿ ಮೋರ್ಗಾನ್ ಪ್ರಕಾರ, ಇದು ಸುಮಾರು $11 ಬಿಲಿಯನ್ ಡಾಲರ್ ಆಗಿದೆ. ಈಜಿಪ್ಟ್ ಮುಂದಿನ ಐದು ವರ್ಷಗಳಲ್ಲಿ ಪಾವತಿಸಲು $100 ಬಿಲಿಯನ್ ಹಾರ್ಡ್ ಕರೆನ್ಸಿ ಸಾಲವನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ. ಕೈರೋ ಪೌಂಡ್ ಅನ್ನು 15% ರಷ್ಟು ಅಪಮೌಲ್ಯಗೊಳಿಸಿತು ಮತ್ತು ಮಾರ್ಚ್‌ನಲ್ಲಿ ಐಎಂಎಫ್ ಸಹಾಯ ಕೇಳಿತು. ಆದರೆ ಬಾಂಡ್ ಸ್ಪ್ರೆಡ್‌ಗಳು ಈಗ 1,200 ಬೇಸಿಸ್ ಪಾಯಿಂಟ್‌ಗಳು ಮತ್ತು ಕ್ರೆಡಿಟ್ ಡೀಫಾಲ್ಟ್ ಸ್ವಾಪ್‌ಗಳು (CDS) 55% ಇದ್ದರಿಂದ ಐಎಂಎಫ್ ಹಿಂದೇಟು ಹಾಕಿತು.


ಕೀನ್ಯಾ
ಕೀನ್ಯಾ ತನ್ನ ಅಂದಾಜು ಶೇ. 30ರಷ್ಟು ಆದಾಯವನ್ನು ಬಡ್ಡಿ ಪಾವತಿಗಳ ಮೇಲೆ ವ್ಯಯ ಮಾಡುತ್ತಿದೆ. ಅದರ ಬಾಂಡ್‌ಗಳು ಅವುಗಳ ಅರ್ಧದಷ್ಟು ಮೌಲ್ಯವನ್ನು ಕಳೆದುಕೊಂಡಿವೆ ಮತ್ತು ಪ್ರಸ್ತುತ ಬಂಡವಾಳ ಮಾರುಕಟ್ಟೆಗಳಿಗೆ ಯಾವುದೇ ಪ್ರವೇಶವನ್ನು ಹೊಂದಿಲ್ಲ. 2024 ರಲ್ಲಿ 2 ಬಿಲಿಯನ್ ಡಾಲರ್ ಬಾಂಡ್ ಬಾಕಿ ಇರಲಿದ್ದು ಮತ್ತಷ್ಟು ಬಿಕ್ಕಟ್ಟು ಎದುರಾಗಲಿದೆ.


ಇದನ್ನೂ ಓದಿ:  Sri Lanka: ಕಿಂಗ್ ಮೇಕರ್ ಆಗ್ತಾರಾ ಸಜಿತ್? ರನಿಲ್, ರಾಜಪಕ್ಸೆಗೆ ಆಗುತ್ತಾ ಮುಖಭಂಗ? 


ಕೀನ್ಯಾ, ಈಜಿಪ್ಟ್, ಟುನೀಶಿಯಾ ಮತ್ತು ಘಾನಾ ಕುರಿತು ಮೂಡೀಸ್ ಡೇವಿಡ್ ರೊಗೊವಿಕ್ ಎಂಬುವವರು: "ಮೀಸಲುಗಳಿಗೆ ಸಂಬಂಧಿಸಿದಂತೆ ಬರುವ ಸಾಲದ ಪ್ರಮಾಣ ಮತ್ತು ಸಾಲದ ಹೊರೆಗಳನ್ನು ಸ್ಥಿರಗೊಳಿಸುವ ವಿಷಯದಲ್ಲಿ ಹಣಕಾಸಿನ ಸವಾಲುಗಳ ಕಾರಣದಿಂದಾಗಿ ಈ ದೇಶಗಳು ಹೆಚ್ಚು ದುರ್ಬಲವಾಗಿವೆ." ಎಂದಿದ್ದಾರೆ.


ಇಥಿಯೋಪಿಯಾ
ಅಡಿಸ್ ಅಬಾಬಾ G20 ಕಾಮನ್ ಫ್ರೇಮ್‌ವರ್ಕ್ ಕಾರ್ಯಕ್ರಮದ ಅಡಿಯಲ್ಲಿ ಸಾಲ ಪರಿಹಾರವನ್ನು ಪಡೆಯುವ ಮೊದಲ ದೇಶಗಳಲ್ಲಿ ಒಂದಾಗಲು ಇಥಿಯೋಪಿಯಾ ಯೋಜಿಸಿದೆ. ಆದರೆ ದೇಶದಲ್ಲಿ ನಡೆಯುತ್ತಿರುವ ಅಂತರ್ಯುದ್ಧದಿಂದ ಈ ಪ್ರಕ್ರಿಯೆ ಸ್ಥಗಿತಗೊಂಡಿದೆ. ಆದಾಗ್ಯೂ ತನ್ನ ಏಕೈಕ 1 ಬಿಲಿಯನ್ ಅಂತಾರಾಷ್ಟ್ರೀಯ ಬಾಂಡ್‌ನಲ್ಲಿ ಇಥಿಯೋಪಿಯಾ ಮುಂದುವರಿದಿದೆ.


ಎಲ್ ಸಾಲ್ವಡಾರ್
ಬಿಟ್‌ಕಾಯಿನ್ ಅನ್ನು ಕಾನೂನುಬದ್ಧ ಟೆಂಡರ್ ಮಾಡುವ ಎಲ್ ಸಾಲ್ವಡಾರ್ನ ಉಪಕ್ರಮದಿಂದಾಗಿ, ಐಎಂಎಫ್‌ನ ಭರವಸೆಗಳಿಗೆ ಬಾಗಿಲು ಮುಚ್ಚಿದೆ. ಆರು ತಿಂಗಳುಗಳಲ್ಲಿ ಮೆಚ್ಯುರಿಟಿಯಾಗುವ $800 ಮಿಲಿಯನ್ ಬಾಂಡ್‌ಗಳು 30% ರಷ್ಟು ರಿಯಾಯಿತಿಯಲ್ಲಿ ಮತ್ತು ದೀರ್ಘಾವಧಿಯವುಗಳು 70% ರಷ್ಟು ರಿಯಾಯಿತಿಯಲ್ಲಿ ವಹಿವಾಟು ನಡೆಸುವ ಹಂತಕ್ಕೆ ಕುಸಿತ ಕಂಡಿದೆ.


ಪಾಕಿಸ್ತಾನ
ಪಾಕಿಸ್ತಾನವು ಈ ವಾರದಲ್ಲಿ ಐಎಂಎಫ್ ಜತೆ ನಿರ್ಣಾಯಕ ಒಪ್ಪಂದ ಮಾಡಕೊಂಡಿದೆ. ಹೆಚ್ಚಿನ ಇಂಧನ ಆಮದು ಬೆಲೆಗಳು ದೇಶವನ್ನು ಪಾವತಿಗಳ ಸಮತೋಲನದ ಬಿಕ್ಕಟ್ಟಿನ ಅಂಚಿಗೆ ತಳ್ಳುತ್ತಿವೆ. ವಿದೇಶ ಕರೆನ್ಸಿ ಮೀಸಲು$ 9.8 ಮಿಲಿಯನ್ ಕುಸಿತಕಂಡಿದ್ದು ಇದು ಆಮದಿಗೆ ಇನ್ನು ಕೇವಲ ಐದು ವಾರಗಳಿಗೆ ಸಾಕಾಗಬಹುದು. ಪಾಕಿಸ್ತಾನದ ರೂಪಾಯಿ ದಾಖಲೆಯ ಮಟ್ಟದಲ್ಲಿ ಕುಸಿದಿದೆ. ಹೊಸ ಸರ್ಕಾರವು ತನ್ನ ಆದಾಯದ 40% ರಷ್ಟನ್ನು ಬಡ್ಡಿ ಪಾವತಿಗೆ ಖರ್ಚು ಮಾಡುವುದರಿಂದ ಈಗ ತ್ವರಿತವಾಗಿ ವೆಚ್ಚವನ್ನು ಕಡಿತಗೊಳಿಸಬೇಕಾಗಿದೆ.


ಬೆಲಾರುಸ್
ರಷ್ಯಾ-ಉಕ್ರೇನ್ ಯುದ್ಧ ಸಂದರ್ಭದಲ್ಲಿ, ರಷ್ಯಾಗೆ ಬೆಂಬಲವಾಗಿ ನಿಂತಿದ್ದ ಬೆಲಾರುಸ್ ಕೂಡ ಆರ್ಥಿಕ ಹೊಡೆತ ಎದುರಿಸುತ್ತಿದೆ. ರಷ್ಯಾಕ್ಕೆ ಪಾಶ್ಚಿಮಾತ್ಯ ನಿರ್ಬಂಧಗಳು ವ್ಯಾಕಪ ಪರಿಣಾಮ ಬೀರಿದ್ದವು, ಸದ್ಯ ಅದೇ ರೀತಿಯ ಪರಿಣಾಮ ಬೆಲಾರುಸ್ ಮೇಲೂ ಉಂಟಾಗಿದೆ.


ಈಕ್ವೆಡಾರ್
ಲ್ಯಾಟಿನ್ ಅಮೇರಿಕನ್ ದೇಶ ಈಕ್ವೆಡರ್ ಕೇವಲ ಎರಡು ವರ್ಷಗಳ ಹಿಂದೆ ಸಾಲದ ಹೊರೆಯನ್ನು ಇಳಿಸಿತ್ತು. ಆದರೆ ಅಧ್ಯಕ್ಷ ಗ್ಯುಲೆರ್ನೋ ಲಸ್ಸೋ ಅವರನ್ನು ಪದಚ್ಯುತಗೊಳಿಸುವ ಪ್ರಯತ್ನದಿಂದ ಅದು ಮತ್ತೆ ಬಿಕ್ಕಟ್ಟಿಗೆ ಸಿಲುಕಿದೆ. ಬಹಳಷ್ಟು ಸಾಲವನ್ನು ಹೊಂದಿರುವ ಈ ದೇಶ ಈ ವರ್ಷ ಜಿಡಿಪಿಯ ಶೇ 2.4ರಷ್ಟು ಸಾರ್ವಜನಿಕ ವಲಯದ ಹಣಕಾಸು ಕೊರತೆ ಮತ್ತು ಮುಂದಿನ ವರ್ಷ ಶೇ 2.1ರಷ್ಟು ಕೊರತೆ ಅನುಭವಿಸಲಿದೆ ಎಂದು ಹೇಳಲಾಗಿದೆ.


ಇದನ್ನೂ ಓದಿ: President of India: ರಾಷ್ಟ್ರಪತಿ ಹುದ್ದೆ ಎಷ್ಟು ಮಹತ್ವದ್ದು? ಅವರ ಸಂಬಳ, ಸವಲತ್ತುಗಳೇನು?


ನೈಜೀರಿಯಾ
ನೈಜೀರಿಯಾದ ಬಾಂಡ್ ಕೇವಲ 1,000 ಬಿಪಿಎಸ್ಗಿಂತ ಹೆಚ್ಚಿವೆ. ಆದರೆ ನೈಜೀರಿಯಾದ $500 ಮಿಲಿಯನ್ ಬಾಂಡ್ ಪಾವತಿಯನ್ನು ಒಂದು ವರ್ಷದ ಅವಧಿಯಲ್ಲಿ ಮೀಸಲು ನಿಧಿಗಳ ಮೂಲಕ ಸುಲಭವಾಗಿ ಪಾವತಿಸಬಹುದಾಗಿದೆ. ಇದು ತನ್ನ ಸಾಲದ ಮೇಲೆ ಬಡ್ಡಿಯನ್ನು ಪಾವತಿಸಲು ಸುಮಾರು 30% ರಷ್ಟು ಸರ್ಕಾರದ ಆದಾಯವನ್ನು ಖರ್ಚು ಮಾಡುತ್ತದೆ.

Published by:Ashwini Prabhu
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು