ಕಾಶ್ಮೀರ ವಿಷಯ ಕುರಿತು ರಾಹುಲ್​ ಮಾತ್ರವಲ್ಲ, ಹರ್ಯಾಣ ಸಿಎಂ, ಬಿಜೆಪಿ ನಾಯಕರ ಹೇಳಿಕೆಯನ್ನು ವಿಶ್ವಸಂಸ್ಥೆಗೆ ಉಲ್ಲೇಖಿಸಿದ ಪಾಕ್​​

ಕಾಶ್ಮೀರಿ ಮಹಿಳೆಯರ ಬಗ್ಗೆ ಬಿಜೆಪಿ ನಾಯಕರ ನೀಡಿದ್ದ ಹೇಳಿಕೆಯನ್ನು ಪಾಕಿಸ್ತಾನ ವಿಶ್ವಸಂಸ್ಥೆಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದೆ.

Seema.R | news18-kannada
Updated:August 29, 2019, 11:07 AM IST
ಕಾಶ್ಮೀರ ವಿಷಯ ಕುರಿತು ರಾಹುಲ್​ ಮಾತ್ರವಲ್ಲ, ಹರ್ಯಾಣ ಸಿಎಂ, ಬಿಜೆಪಿ ನಾಯಕರ ಹೇಳಿಕೆಯನ್ನು ವಿಶ್ವಸಂಸ್ಥೆಗೆ ಉಲ್ಲೇಖಿಸಿದ ಪಾಕ್​​
ಹರಿಯಾಣ ಸಿಎಂ ಮನೋಹರ್​ ಕಟ್ಟಾರ್​​
  • Share this:
ನವದೆಹಲಿ(ಆ.29): ಕಾಶ್ಮೀರದಲ್ಲಿ ಹಿಂಸಾಚಾರ ಕುರಿತು ರಾಹುಲ್​ ಗಾಂಧಿ ಹೇಳಿಕೆ ಮಾತ್ರವಲ್ಲದೇ,  ಹರಿಯಾಣ ಬಿಜೆಪಿ ಮುಖ್ಯಮಂತ್ರಿ ಕೂಡ ಈ ಬಗ್ಗೆ ಧ್ವನಿ ಎತ್ತಿದ್ದಾರೆ ಎಂದು ಪಾಕಿಸ್ತಾನದ ಮಾನವ ಹಕ್ಕು ಸಚಿವೆ ವಿಶ್ವಸಂಸ್ಥೆಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಭಾರತ ಸರ್ಕಾರ ಕಾಶ್ಮೀರ ವಿಷಯದಲ್ಲಿ ತೆಗೆದುಕೊಂಡ ನಿರ್ಧಾರಕ್ಕೆ ರಾಹುಲ್​ ಗಾಂಧಿ ವಿರೋಧದ ಕುರಿತು ಪಾಕಿಸ್ತಾ ನ ಮಾನವ ಹಕ್ಕು ಸಚಿವೆ ಶೆರೀನ್​ ಮಜಾರಿ ವಿಶ್ವಸಂಸ್ಥೆಗೆ ಪತ್ರಬರೆದಿದ್ದರು. ಈ ಪತ್ರದಲ್ಲಿ ಕಾಶ್ಮೀರದಲ್ಲಿ ವಿಧಿಸಿರುವ ನಿರ್ಬಂಧವನ್ನು ಗುಲಾಂ ನಬಿ ಆಜಾದ್​ ಪ್ರಶ್ನಿಸಿರುವ ಬಗ್ಗೆ ಕೂಡ ಉಲ್ಲೇಖಿಸಲಾಗಿಸಿದ್ದರು. ಈಗ ಈ ಪತ್ರದಲ್ಲಿ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್​​ ಖಟ್ಟರ್​ ಮತ್ತು ಉತ್ತರ ಪ್ರದೇಶ ಬಿಜೆಪಿ ಶಾಸಕ ವಿಕ್ರಂ ಸೈನಿ ಕೂಡ ಕಾಶ್ಮೀರ ಮಹಿಳೆಯ ಬಗ್ಗೆಗಿನ ಹೇಳಿಕೆ ಉಲ್ಲೇಖಿಸಿದ್ದಾರೆ.

ಲಿಂಗತಾರತಮ್ಯದ ಆಧಾರ ಮೇಲಿನ ಹಿಂಸಾಚಾರದ ವಿಧಿ ಅಡಿಯಲ್ಲಿ ಸೈನಿ ಅವರ ಹೇಳಿಕೆಯನ್ನು ಪಾಕ್​ ದಾಖಲಿಸಿದೆ. ಮುಸ್ಲಿಂ ಪಕ್ಷದ ಕಾರ್ಯಕರ್ತರು ಹೊಸ ಪ್ರಾತಿನಿತ್ಯವನ್ನು ಸಂಭ್ರಮಿಸಬೇಕು. ಅವರಿಗೆ ಬಿಳಿ ಮೈ ಬಣ್ಣದ ಕಾಶ್ಮೀರಿ ಮಹಿಳೆಯರನ್ನು ಮದುವೆಯಾಗಬಹುದು ಎಂದಿದ್ದರು.

ಕಾಶ್ಮೀರಕ್ಕೆ ಈಗ ಮುಕ್ತ ಪ್ರವೇಶವಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಅಲ್ಲಿಂದ ಮಧುಮಕ್ಕಳನ್ನು ಕರೆ ತರಬಹುದು. ಹಾಸ್ಯದ ಹೊರತಾಗಿ ಅಲ್ಲಿನ ಲಿಂಗಾತಾರತಮ್ಯ ಸುಧಾರಿಸಲಿದ್ದು, ಸಮಾಜದಲ್ಲಿ ಸಮತೋಲನ ಕಾಯ್ದುಕೊಳ್ಳಬಹುದು ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್​ ಲಾಲ್​ ಕಟ್ಟರ್​ ಬೇಟಿ ಬಚಾವೋ ಬೇಟಿ ಪಡಾವೊ ಕಾರ್ಯಕ್ರಮದಲ್ಲಿ ಹೇಳಿದ್ದರು.

ಕಾಶ್ಮೀರಿ ಮಹಿಳೆಯರ ಬಗ್ಗೆ ಬಿಜೆಪಿ ನಾಯಕರ ಈ ಹೇಳಿಕೆ ವಿಪಕ್ಷಗಳಿಂದ ಸಾಕಷ್ಟು ಟೀಕೆಗೆ ಗುರಿಯಾಗಿದ್ದವು.

ಕಟ್ಟಾರ್ ಹೇಳಿಕೆಯಿಂದ ಕಟ್ಟಾರ್​ ಅವರ ತುಚ್ಛ ಮನಸ್ಥಿತಿ ವ್ಯಕ್ತವಾಗುತ್ತಿದೆ ಎಂದು ಮಾಯಾವತಿ ಟೀಕಿಸಿದರು.  ರಾಹುಲ್​ ಗಾಂಧಿ ಕೂಡ ಕಾಶ್ಮೀರಿ ಮಹಿಳೆಯರ ಬಗ್ಗೆ ಹರ್ಯಾಣ ಸಿಎಂ ಕಟ್ಟಾರ್​ ಹೇಳಿಕೆ ಕೀಳು ಮಟ್ಟದ ಹೇಳಿಕೆ ನೀಡುತ್ತಿದ್ದಾರೆ ಎಂದಿದ್ದರು.

ಇದನ್ನು ಓದಿ: ಕಾಶ್ಮೀರ ಭಾರತದ ಆಂತರಿಕ ವಿಷಯ, ಅಲ್ಲಿನ ಹಿಂಸಾಚಾರಕ್ಕೆ ಕಾರಣ ಪಾಕ್​; ರಾಹುಲ್​ ಗಾಂಧಿಇದಾದ ಬಳಿಕ ಎಚ್ಚೆತ್ತ ಕಟ್ಟಾರ್​ ಮಾಧ್ಯಮಗಳು ತಮ್ಮ ಹೇಳಿಕೆಯನ್ನು ತಿರುಚಿವೆ. ಹೆಣ್ಣು ಮಕ್ಕಳು ನಮ್ಮ ಗೌರವ, ಇಡೀ ದೇಶದ ಹೆಣ್ಣು ಮಕ್ಕಳು ನಮ್ಮ ಮಕ್ಕಳು ಎಂದು ಟ್ವೀಟ್​ ಮಾಡುವ ಮೂಲಕ ಡ್ಯಾಮೇಜ್​ ಕಂಟ್ರೋಲ್​ ಮಾಡಿದ್ದರು.

ರಾಹುಲ್​ ಗಾಂಧಿ ಕೂಡ ತಮ್ಮ ಹೇಳಿಕೆಯಿಂದ ಪಾಕ್​ ಲಾಭಾ ಪಡೆಯಲು ಮುಂದಾಗುತ್ತಿದ್ದಂತೆ ಎಚ್ಚೆತ್ತು, ಕಾಶ್ಮೀರ ನಮ್ಮ ದೇಶದ ಆಂತರಿಕ ವಿಚಾರ. ಕಾಶ್ಮೀರದಲ್ಲಿನ ಹಿಂಸಾಚಾರಕ್ಕೆ ಪಾಕಿಸ್ತಾನವೇ ಕಾರಣ ಎಂದಿದ್ದರು.

First published:August 29, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ