ಚೀನಾ ಜೊತೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಯಾವುದೇ ಆಸಕ್ತಿ ಉಳಿದಿಲ್ಲ; ಕಡ್ಡಿ ಮುರಿದಂತೆ ಹೇಳಿದ ಟ್ರಂಪ್

ಜನವರಿ ತಿಂಗಳಲ್ಲಿ ಚೀನಾದ ಜೊತೆಗೆ ಮೊದಲನೆ ಹಂತದಲ್ಲಿ ಒಂದಷ್ಟು ಒಪ್ಪಂದಗಳನ್ನು ಮಾಡಿಕೊಂಡಿತ್ತು. ಇದಾದ ತಿಂಗಳಲ್ಲೇ ಅಮೆರಿಕಕ್ಕೆ ಕೊರೋನಾ ವೈರಸ್​ ಕಾಲಿಟ್ಟಿತ್ತು. ಈ ಬಗ್ಗೆ ಟ್ರಂಪ್​ ಅಸಮಾಧಾನ ಹೊರಹಾಕಿದ್ದಾರೆ.

news18-kannada
Updated:July 15, 2020, 12:16 PM IST
ಚೀನಾ ಜೊತೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಯಾವುದೇ ಆಸಕ್ತಿ ಉಳಿದಿಲ್ಲ; ಕಡ್ಡಿ ಮುರಿದಂತೆ ಹೇಳಿದ ಟ್ರಂಪ್
ಡೊನಾಲ್ಡ್ ಟ್ರಂಪ್
  • Share this:
ವಾಷಿಂಗ್ಟನ್​ (ಜು.15):  ಕೊರೋನಾ ವೈರಸ್​ ಅಮೆರಿಕಕ್ಕೆ ಕಾಲಿಟ್ಟಾಗಿನಿಂದಲೂ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಚೀನಾವನ್ನು ದೂಷಿಸುತ್ತಲೇ ಬರುತ್ತಿದ್ದಾರೆ. ಕೊರೋನಾ ಚೀನಾದ ಪಿಡುಗು ಎಂದು ಸಾರ್ವಜನಿಕವಾಗಿಯೇ ದೂರಿದ್ದಾರೆ. ಇನ್ನು, ಚೀನಾದ ಎಲೆಕ್ಟ್ರಾನಿಕ್​ ವಸ್ತುಗಳ ಬಳಕೆ ಕಡಿಮೆ ಮಾಡುವಂತೆ ಟ್ರಂಪ್ ಕೋರಿದ್ದಾರೆ. ಈ ಮಧ್ಯೆ ಚೀನಾದ ಜೊತೆ ವ್ಯಾಪಾರ ಒಪ್ಪಂಡ ಮಾಡಿಕೊಳ್ಳಲು ಯಾವುದೇ ಆಸಕ್ತಿ ಉಳಿದಿಲ್ಲ ಎಂದು ಟ್ರಂಪ್​ ಕಡ್ಡಿ ಮುರಿದಂತೆ ಹೇಳಿದ್ದಾರೆ. ಈ ಮೂಲಕ ಚೀನಾ-ಅಮೆರಿಕನ ವ್ಯಾಪಾರ ಸಂಬಂಧ ಮತ್ತಷ್ಟು ಹದಗೆಡುವ ಸೂಚನೆ ಸಿಕ್ಕಿದೆ.

ಜನವರಿ ತಿಂಗಳಲ್ಲಿ ಚೀನಾದ ಜೊತೆಗೆ ಮೊದಲನೆ ಹಂತದಲ್ಲಿ ಒಂದಷ್ಟು ಒಪ್ಪಂದಗಳನ್ನು ಮಾಡಿಕೊಂಡಿತ್ತು. ಇದಾದ ತಿಂಗಳಲ್ಲೇ ಅಮೆರಿಕಕ್ಕೆ ಕೊರೋನಾ ವೈರಸ್​ ಕಾಲಿಟ್ಟಿತ್ತು. ಈ ಬಗ್ಗೆ ಟ್ರಂಪ್​ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ, ಎರಡನೆ ಹಂತದಲ್ಲಿ ಯಾವುದೇ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ನಾವು ಚೀನಾ ಜೊತೆ ಅದ್ಭುತ ವ್ಯಾಪಾರ ಒಪ್ಪಂದ ಮಾಡಿಕೊಂಡಿದ್ದೆವು. ಜನವರಿಯಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಿದ್ದೆವು. ಸಹಿ ಹಾಕಿದ್ದರ ಇಂಕ್​ ಕೂಡ ಇನ್ನೂ ಆರಿರಲಿಲ್ಲ. ಆಗಲೇ ಕೊರೋನಾ ವೈರಸ್​ ಅಮೆರಿಕಕ್ಕೆ ಲಗ್ಗೆ ಇಟ್ಟಿತ್ತು. ಹೀಗಾಗಿ ಚೀನಾ ಜೊತೆ ಎರಡನೇ ಹಂತದ ವ್ಯಾಪಾರ ವಹಿವಾಟಿನ ಒಪ್ಪಂದ ಮಾಡಿಕೊಳ್ಳಲು ಯಾವುದೇ ಆಸಕ್ತಿ ಉಳಿದಿಲ್ಲ ಎಂದಿದ್ದಾರೆ.

ಚೀನಾ ವಸ್ತುಗಳನ್ನು ಬ್ಯಾನ್​ ಮಾಡುವ ಬಗ್ಗೆಯೂ ಟ್ರಂಪ್​ ಮಾತನಾಡಿದ್ದರು. ವಿಶ್ವಾಸಾರ್ಹವಲ್ಲದ ಚೀನೀ ತಂತ್ರಜ್ಞಾನ ಮತ್ತು ಟೆಲಿಕಾಂ ಪೂರೈಕೆದಾರ ವಸ್ತುಗಳನ್ನು ಬಳಕೆ ಮಾಡುವುದನ್ನು ನಿಲ್ಲಿಸುವುದು ನಮ್ಮ ಮುಂದಿರುವ ದೊಡ್ಡ ಸವಾಲು. ನಾವು ಅನೇಕ ರಾಷ್ಟ್ರಗಳಿಗೆ ಹುವಾಯಿ ಸಂಸ್ಥೆಯ ಮೊಬೈಲ್​ಗಳನ್ನು ಬಳಕೆ ಮಾಡದಂತೆ ಕೋರಿದ್ದೇವೆ. ಭದ್ರತಾ ದೃಷ್ಟಿಯಿಂದ ಈಗಾಗಲೇ ಇಂ​ಗ್ಲೆಂಡ್​ ಹುವಾಯಿ ಮೊಬೈಲ್​ ಬಳಕೆ ಮಾಡುವುದರ ಮೇಲೆ ನಿಷೇಧ ಹೇರಿದೆ ಎಂದರು.
Published by: Rajesh Duggumane
First published: July 15, 2020, 12:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading