Mukhtar Abbas Naqvi: ಜನ ಏನನ್ನು ತಿನ್ನಬೇಕು, ತಿನ್ನಬಾರದು ಅಂತ ಹೇಳೋದು ಸರ್ಕಾರದ ಕೆಲಸವಲ್ಲ: ನಖ್ವಿ

ಹಲಾಲ್ ಮಾಂಸವನ್ನು ನಿಷೇಧಿಸಲು ಸರ್ಕಾರ ಯೋಜಿಸಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಭಾರತದ ಪ್ರಜೆಗಳಿಗೆ ಅವರು ಬಯಸಿದ್ದನ್ನು ತಿನ್ನುವ ಸ್ವಾತಂತ್ರ್ಯವಿದೆ ಎಂದು ಹೇಳಿದರು.

 ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ

ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ

  • Share this:
ನವದೆಹಲಿ: ದೇಶದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ಬರುವಂತೆ ಘಟನೆಗಳು(Communal Tensions) ಇತ್ತೀಚೆಗೆ ಮೇಲಿಂದ ಮೇಲೆ ನಡೆಯುತ್ತಲೇ ಇವೆ. ರಾಜ್ಯದಲ್ಲೇ ಹಿಜಾಬ್(Hijab Controversy)​, ಹಲಾಲ್​​ ಕಟ್​​( Halal Controversy), ಜಟ್ಕಾ ಕಟ್​​ ಹಾಗೂ ಮುಸ್ಲಿಂ (Muslims) ವ್ಯಾಪಾರಿಗಳ ಮೇಲೆ ನಿರ್ಬಂಧವೇರಿ ಎಂಬ ಕರೆ ಸೇರಿದಂತೆ ಹಲವು ಘಟನೆಗಳು ಸರಣಿಯಾಗಿ ನಡೆಯುತ್ತಲೇ ಇವೆ. ಈ ಮಧ್ಯೆ ಕೇಂದ್ರ ಸಚಿವರ ಮುಖ್ತಾರ್​ ಅಬ್ಬಾಸ್​ ನಖ್ವಿ ಮಹತ್ವದ ಹೇಳಿಕೆ ನೀಡಿದ್ದಾರೆ. ದೇಶವಾಸಿಗಳನ್ನು ಏನನ್ನು ತಿನ್ನಬೇಕು, ಏನನ್ನು ತಿನ್ನಬಾರದು ಎಂದು ಹೇಳುವುದು ಸರ್ಕಾರದ ಕೆಲಸವಲ್ಲ ಎಂದು ಹೇಳಿಕೆ ನೀಡಿದ್ದಾರೆ.  ದೇಶದ ವಿವಿಧ ಭಾಗಗಳಲ್ಲಿ ಹೆಚ್ಚುತ್ತಿರುವ ಕೋಮು ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಸಮುದಾಯಗಳ ನಡುವೆ ಯಾವುದೇ ಕೋಮು ಅಸಹಿಷ್ಣುತೆ ಇಲ್ಲ, ಕೇವಲ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕದಡಲು ಬಯಸುವ ಕೆಲವು ಶಕ್ತಿಗಳ ಸಂಚು ಇದು ಎಂದು ಹೇಳಿದ್ದಾರೆ.

ಹಿಜಾಬ್ ಧರಿಸುವುದನ್ನು ನಿಷೇಧಿಸಲಾಗಿಲ್ಲ

ದಿ ಎಕನಾಮಿಕ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ನಖ್ವಿ, ಭಾರತದಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಲಾಗಿಲ್ಲ ಮತ್ತು ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ನಿಷೇಧಿಸುವುದನ್ನು ಕೋಮು ಸಮಸ್ಯೆ ಎಂದು ಬಣ್ಣಿಸಬಾರದು ಎಂದು ಹೇಳಿದರು. ಹಲಾಲ್ ಮಾಂಸವನ್ನು ನಿಷೇಧಿಸಲು ಸರ್ಕಾರ ಯೋಜಿಸಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಭಾರತದ ಪ್ರಜೆಗಳಿಗೆ ಅವರು ಬಯಸಿದ್ದನ್ನು ತಿನ್ನುವ ಸ್ವಾತಂತ್ರ್ಯವಿದೆ ಎಂದು ಹೇಳಿದರು.

ಇದನ್ನೂ ಓದಿ: Covidನಿಂದ ಭಾರತದಲ್ಲಿ ಐದಲ್ಲ, ಬರೋಬ್ಬರಿ 40 ಲಕ್ಷ ಜನ ಸತ್ತಿದ್ದಾರೆ: ರಾಹುಲ್ ಗಾಂಧಿ ಆರೋಪ

ಸರಣಿ ಕೋಮು ಸಂಘರ್ಷಗಳು

ಏಪ್ರಿಲ್ 10 ರಂದು ರಾಮನವಮಿಯಂದು ಹಾಸ್ಟೆಲ್ ಮೆಸ್‌ನಲ್ಲಿ ಮಾಂಸಾಹಾರಿ ಆಹಾರವನ್ನು ನೀಡಿದ್ದಕ್ಕಾಗಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ(JNU) ವಿದ್ಯಾರ್ಥಿಗಳ ನಡುವೆ ಘರ್ಷಣೆ ಸಂಭವಿಸಿದೆ. ಈ ಸಂದರ್ಭದಲ್ಲಿ ಭಾರತದಾದ್ಯಂತ ಹಲವಾರು ರಾಜ್ಯಗಳಿಂದ ಹಿಂಸಾಚಾರ, ಕಲ್ಲು ತೂರಾಟ ಮತ್ತು ಬೆಂಕಿ ಹಚ್ಚುವಿಕೆಯ ಇತರ ನಿದರ್ಶನಗಳು ವರದಿಯಾಗಿವೆ. ದೆಹಲಿಯ ಜಹಾಂಗೀರಪುರಿಯಲ್ಲಿ ಶನಿವಾರ ಸಂಜೆ ಹನುಮ ಜಯಂತಿ ಮೆರವಣಿಗೆ ವೇಳೆ ಕೋಮು ಘರ್ಷಣೆ ನಡೆದು ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ಪೊಲೀಸರ ಪ್ರಕಾರ ಹದಿನಾಲ್ಕು ಮಂದಿಯನ್ನು ಬಂಧಿಸಲಾಗಿದೆ. ಮಹಾರಾಷ್ಟ್ರದಲ್ಲಿ, ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರ  ಹೇಳಿಕೆಗಳಿಂದ ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕ ಬೇಕೆಂಬ ಬೇಡಿಕೆ ಹೆಚ್ಚುತ್ತಿದೆ.

'ಭಾರತದಲ್ಲಿ ಹಿಜಾಬ್ ಮೇಲೆ ಯಾವುದೇ ನಿಷೇಧವಿಲ್ಲ'

ಶಾಲಾ-ಕಾಲೇಜುಗಳಲ್ಲಿ ಮುಸ್ಲಿಂ ಹುಡುಗಿಯರು ಹಿಜಾಬ್ ಧರಿಸುವುದನ್ನು ನಿಷೇಧಿಸುವ ಕರ್ನಾಟಕ ಹೈಕೋರ್ಟ್‌ನ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ನಖ್ವಿ, ಭಾರತದ ಅಂತರ್ಗತ ಸಂಸ್ಕೃತಿಯನ್ನು ದೂಷಿಸುವ ಪಿತೂರಿಯ ಭಾಗವಾಗಿ ಕೆಲವರು ಈ ವಿಷಯಕ್ಕೆ ಕೋಮು ಬಣ್ಣ ನೀಡುತ್ತಿದ್ದಾರೆ" ಎಂದು ಪ್ರಕಟಣೆಗೆ ತಿಳಿಸಿದ್ದಾರೆ.  ಧ್ವನಿವರ್ಧಕ ವಿಚಾರದಲ್ಲಿ ಶಬ್ದ ಮಾಲಿನ್ಯ ಕಾನೂನುಗಳತ್ತ ಗಮನಸೆಳೆದ ಅವರು, ಪರಿಸ್ಥಿತಿಗೆ ಕೋಮು ಬಣ್ಣ ಬಳಿಯುವ ಅಗತ್ಯವಿಲ್ಲ ಎಂದು ಹೇಳಿದರು.ಜೆಎನ್‌ಯು ಘರ್ಷಣೆಗಳು ಮಾಂಸ ಸೇವನೆಗೆ ಸಂಬಂಧಿಸಿಲ್ಲ ಎಂದು ನಖ್ವಿ ಹೇಳಿದರು ಮತ್ತು ಅದನ್ನು ಸುಳ್ಳು ಮತ್ತು ನಕಲಿ ನಿರೂಪಣೆ" ಎಂದು ಕರೆದರು.

"ಕೆಲವರು ರಾಮ ನವಮಿಯಂದು ಪೂಜೆಯನ್ನು ವಿರೋಧಿಸಿದಾಗ ಈ ಸಮಸ್ಯೆ ಸಂಭವಿಸಿದೆ. ದೇಶದ ಏಕತೆ ಮತ್ತು ಸೌಹಾರ್ದತೆಯ ಶಕ್ತಿಯನ್ನು ದೂಷಿಸಲು ನೀಚ ಮನಸ್ಥಿತಿ ಹೊಂದಿರುವವರು ಪೂಜೆಯನ್ನು ವಿರೋಧಿಸಿದರು" ಎಂದು ಅವರು ತಿಳಿಸಿದರು."ಕೆಲವರು ರಾಮ ನವಮಿಯಂದು ಪೂಜೆಯನ್ನು ವಿರೋಧಿಸಿದಾಗ ಈ ಸಮಸ್ಯೆ ಸಂಭವಿಸಿದೆ. ದೇಶದ ಏಕತೆ ಮತ್ತು ಸೌಹಾರ್ದತೆಯ ಶಕ್ತಿಯನ್ನು ದೂಷಿಸಲು ನೀಚ ಮನಸ್ಥಿತಿ ಹೊಂದಿರುವವರು ಪೂಜೆಯನ್ನು ವಿರೋಧಿಸಿದರು" ಎಂದು ಅವರು ತಿಳಿಸಿದರು
Published by:Kavya V
First published: