ನವದೆಹಲಿ: ದೇಶದಲ್ಲಿ ಅತ್ಯಂತ ಹೆಚ್ಚು ಮಾಲಿನ್ಯದಿಂದ (Pollution) ಕೂಡಿರುವ ನಗರ (City) ಎಂದರೆ ಎಲ್ಲರ ನೆನಪಿಗೆ ಬರುವ ಮೊದಲ ಹೆಸರು ರಾಷ್ಟ್ರ ರಾಜಧಾನಿ ನವದೆಹಲಿ (New Delhi) ಹೆಸರು. ಆದರೆ ದೇಶದ ಅತ್ಯಂತ ಕಲುಷಿತ ನಗರ ನಿಜಕ್ಕೂ ದೆಹಲಿಯಲ್ಲ, ಮುಂಬೈ (Mumbai) ಎಂಬುದು ಅಧ್ಯಯನ ವೊಂದರಿಂದ ತಿಳಿದುಬಂದಿದೆ. ಸ್ವಿಸ್ ಏರ್ ಟ್ರ್ಯಾಕಿಂಗ್ ಇಂಡೆಕ್ಸ್ ಐಕ್ಯೂಏರ್ (ನೈಜ ಸಮಯದ ವಾಯು ಗುಣಮಟ್ಟ ಸೂಚ್ಯಂಕ) ಪ್ರಕಾರ ಮುಂಬೈ ದೇಶದ ಅತ್ಯಂತ ಮಾಲಿನ್ಯ ಹೊಂದಿರುವ ನಗರ ಎಂದು ತಿಳಿದುಬಂದಿದೆ. ಮುಂಬೈ ದೇಶದಲ್ಲಿ ಮಾತ್ರವಲ್ಲದೆ ವಿಶ್ವದಲ್ಲಿ ಮಾಲಿನ್ಯ ಹೊಂದಿರುವ ಶ್ರೇಯಾಂಕದಲ್ಲಿ 2ನೇ ಸ್ಥಾನ ಪಡೆದುಕೊಂಡಿದೆ. ಈಗಾಗಲೇ ಮಾಲಿನ್ಯದಿಂದ ಹೆಸರು ಪಡೆದಿರುವ ದೆಹಲಿಯು ಈ ಟಾಪ್ 10ರಲ್ಲೂ ಕಾಣಿಸಿಕೊಂಡಿಲ್ಲ ಎನ್ನುವುದು ಅಚ್ಚರಿಯ ಸಂಗತಿ. ಹಾಗಾದರೆ ವಿಶ್ವದ ಅತ್ಯಂತ ಹೆಚ್ಚು ಕಲುಷಿತ ನಗರಗಳು ಯಾವುವು ಎಂಬುದನ್ನು ಈ ಸುದ್ದಿಯಲ್ಲಿ ತಿಳಿದುಕೊಳ್ಳೋಣ.
ಮುಂಬೈಗೆ 2ನೇ ಸ್ಥಾನ
ಜನವರಿ 29ರಿಂದ ಫೆಬ್ರವರಿ 8ರವರೆಗೆ ನಡೆಸಿರುವ ಪರೀಕ್ಷೆಯಲ್ಲಿ ಮುಂಬೈ ವಿಶ್ವದಲ್ಲೇ 2ನೇ ಕಲುಷಿತ ನಗರ ಎಂಬ ಕುಖ್ಯಾತಿಗೆ ಗುರಿಯಾಗಿದೆ. ವಿಶೇಷವೆಂದರೆ ದೆಹಲಿ ಈ ಪಟ್ಟಿಯಲ್ಲಿ ಟಾಪ್ 10ರಲ್ಲೂ ಕಾಣಿಸಿಕೊಂಡಿಲ್ಲ. ಜನವರಿ 29ರಂದು ಗಾಳಿಯ ಗುಣಮಟ್ಟದ ಶ್ರೇಯಾಂಕದಲ್ಲಿ ಮುಂಬೈ 10 ನೇಸ್ಥಾನದಲ್ಲಿತ್ತು. ಆದರೆ ಫೆಬ್ರವರಿ 2ರ ವೇಳೆಗೆ 2ನೇ ಸ್ಥಾನ ಪಡೆದುಕೊಂಡಿದೆ. ಫೆಬ್ರವರಿ 8ರ ವರೆಗೂ ದೇಶದ ವಾಣಿಜ್ಯ ನಗರಿ 2ನೇ ಸ್ಥಾನದಲ್ಲೇ ಮುಂದುವರಿದಿದೆ. ಫೆಬ್ರವರಿ 13ರಂದು ಮುಂಬೈ ಹಿಂದಿಕ್ಕಿ ದೇಶದ ಅತಿ ಮಾಲಿನ್ಯಯುತ ವಾಯು ಗುಣಮಟ್ಟ ಹೊಂದಿರುವ ನಗರ ಎನಿಸಿಕೊಂಡಿದೆ.
ಪಾಕ್ನ ಲಾಹೋರ್ ವಿಶ್ವದ ಅತ್ಯಂತ ಕಲುಷಿತ ನಗರ
ಭಾರತದ ಬಹುತೇಕ ನಗರಗಳು ಮಿತಿ ಮೀರಿದ ವಾಹನದಟ್ಟಣೆಯಿಂದ ಮಾಲಿನ್ಯಕ್ಕೊಳಗಾಗಿ ಕೆಟ್ಟ ಹೆಸರಿಗೆ ತುತ್ತಾಗುತ್ತಿವೆ. ಅದರಲ್ಲೂ ಕೋವಿಡ್ 19 ಬಿಕ್ಕಟ್ಟಿನ ಸಂದರ್ಭದಿಂದಲೂ ದೆಹಲಿ ದೇಶದ ಅತಿ ಮಲಿನವಾದ ನಗರ ಎಂದು ಗುರುತಿಸಲಾಗಿತ್ತು. ಅಚ್ಚರಿ ಎಂದರೆ ಇದೀ ಸ್ವಿಸ್ ಏರ್ ಟ್ರಾಕಿಂಗ್ ಇಂಡೆಕ್ಸ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ದೆಹಲಿ ಅಗ್ರ ಹತ್ತರ ಸ್ಥಾನದಲ್ಲಿಲ್ಲ. ಪಾಕಿಸ್ತಾನದ ಲಾಹೋರ್ ನಗರ ಜಗತ್ತಿನ ಅತಿ ಮಾಲಿನ್ಯ ಹೊಂದಿರುವ ನಗರ ಎಂಬ ಕುಖ್ಯಾತಿಗೆ ಒಳಗಾಗಿದೆ. ಮುಂಬೈ ನಂತರದ ಸ್ಥಾನದಲ್ಲಿದ್ದರೆ, ಕಾಬೂಲ್, ತೈವಾನ್ ಕಾಹ್ಸಿಯುಂಗ್ ನಗರ 4ನೇ ಸ್ಥಸ್ಥಾನ ಪಡೆದುಕೊಂಡಿದೆ.
IQAir ಅಂದರೆ ಏನು?
IQAir ಎಂಬುದು ಸ್ವಿಸ್ ಏರ್ ಟ್ರಾಕಿಂಗ್ ಇಂಡಕ್ಸ್. ಇದು ವಿಶ್ವಾದ್ಯಂತ ನೈಜ-ಸಮಯದ ಗಾಳಿಯ ಗುಣಮಟ್ಟವನ್ನು ಮಾನಿಟರ್ ಮಾಡುತ್ತದೆ. ಯುಎನ್‌ಇಪಿ, ಗ್ರೀನ್‌ಪೀಸ್, ಭಾರತದ ಸೆಂಟ್ರಲ್ ಪೊಲ್ಯುಷನ್ ಕಂಟ್ರೋಲ್ ಬೋರ್ಡ್ (ಸಿಪಿಸಿಬಿ) ಡೇಟಾಗಳನ್ನು ಬಳಸಿಕೊಂಡು ದೇಶದ ಗಾಳಿಯ ಗುಣಮಟ್ಟವನ್ನು ಅಳೆಯುತ್ತದೆ. ನಂತರ ನಗರಗಳನ್ನು ಆರೋಗ್ಯಕರ , ಅನಾರೋಗ್ಯಕರ ಮತ್ತು ಅಪಾಯಕಾರಿ ಎಂದು ಮೂರು ಭಾಗಗಳಾಗಿ ವರ್ಗೀಕರಿಸಲಾಗಿದೆ.
ಜಗತ್ತಿನ ಅಗ್ರ 10 ಮಾಲಿನ್ಯ ನಗರಗಳು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ