ಅಜಿತ್ ಅಥವಾ ಶರದ್ ಪವಾರ್​ರಿಂದ ದ್ರೋಹ ಆಗಿಲ್ಲ; ಮಹಾರಾಷ್ಟ್ರ ತಪ್ಪು ಲೆಕ್ಕಾಚಾರದ ಬಗ್ಗೆ ಅಮಿತ್ ಶಾ ಹೇಳಿಕೆ

ಮಹಾರಾಷ್ಟ್ರದಲ್ಲಿ ಏನಾಗಿದೆ ಎಂಬುದು ಇಡೀ ದೇಶಕ್ಕೆ ಗೊತ್ತು. ಬಿಜೆಪಿ ಮತ್ತು ಶಿವಸೇನೆ ಮೈತ್ರಿಯಾಗಿಯೇ ಚುನಾವಣೆಯನ್ನು ಎದುರಿಸಿದ್ದವು. ಸರ್ಕಾರ ರಚನೆಗೆ ಜನಾದೇಶ ಬಿಜೆಪಿಗೆ ಇತ್ತು. ಫಲಿತಾಂಶದ ಬಳಿಕ ಅವರು ವಿಭಿನ್ನ ಬೇಡಿಕೆಗಳನ್ನು ಇಟ್ಟು, ಮೈತ್ರಿ ಕಡಿದುಕೊಂಡು ಹೋದರು ಎಂದು ಅಮಿತ್ ಶಾ ಹೇಳಿದರು.

HR Ramesh | news18-kannada
Updated:November 28, 2019, 8:46 PM IST
ಅಜಿತ್ ಅಥವಾ ಶರದ್ ಪವಾರ್​ರಿಂದ ದ್ರೋಹ ಆಗಿಲ್ಲ; ಮಹಾರಾಷ್ಟ್ರ ತಪ್ಪು ಲೆಕ್ಕಾಚಾರದ ಬಗ್ಗೆ ಅಮಿತ್ ಶಾ ಹೇಳಿಕೆ
ಅಮಿತ್​ ಶಾ
  • Share this:
ನವದೆಹಲಿ: ಎನ್​ಸಿಪಿ, ಕಾಂಗ್ರೆಸ್​ ಬೆಂಬಲದೊಂದಿಗೆ ಸರ್ಕಾರ ರಚಿಸಿರುವ ಶಿವಸೇನೆಯ ನಿರ್ಧಾರವನ್ನು ಟೀಕಿಸಿರುವ ಬಿಜೆಪಿ ಮುಖ್ಯಸ್ಥ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ, ಮೂರು ಪಕ್ಷಗಳಿಗೆ ಅಧಿಕಾರ ದಾಹ ಇದೆಯೇ ಹೊರತು ಸಾಮಾನ್ಯ ಸಿದ್ಧಾಂತಗಳು ಇಲ್ಲ ಎಂದು ತೆಗಳಿದ್ದಾರೆ.

ನ್ಯೂಸ್ 18 ಜಾರ್ಖಂಡ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅಮಿತ್ ಶಾ, ಮಹಾರಾಷ್ಟ್ರದಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರು ಸರ್ಕಾರ ರಚಿಸುವಲ್ಲಿ ಏಕೆ ವಿಫಲವಾಯಿತು ಮತ್ತು ಎನ್​ಸಿಪಿಯ ಅಜಿತ್ ಪವಾರ್ ಬೆಂಬಲದೊಂದಿಗೆ ಪಕ್ಷ ಸರ್ಕಾರ ರಚಿಸುವ ನಿರ್ಧಾರವನ್ನು ಸಮರ್ಥಿಸಿಕೊಂಡರು.

ಅಜಿತ್ ಪವಾರ್​ ಬೆಂಬಲ ಪಡೆದದ್ದು ತಪ್ಪು ಲೆಕ್ಕಾಚಾರವಾಯಿತೆ ಎಂಬುದಕ್ಕೆ ಸ್ಪಷ್ಟನೆ ನೀಡಿರುವ ಅಮಿತ್ ಶಾ, ಹಾಗೆ ಅಂದುಕೊಳ್ಳಬಹುದಾದು. ಆದರೆ, ಬಿಜೆಪಿ ಅಜಿತ್ ಪವಾರ್ ಅವರನ್ನೇ ಆಗಲಿ, ಅಥವಾ ಶರದ್ ಪವಾರ್ ಅವರಿಂದ ದ್ರೋಹ ಆಯಿತು ಎಂದು ಹೇಳುವುದಿಲ್ಲ. ಎನ್​ಸಿಪಿ ಯಾವಾಗಲೂ ನಮ್ಮ ವಿರುದ್ಧವಾಗಿಯೇ ಸ್ಪರ್ಧೆ ಮಾಡಿಕೊಂಡು ಬಂದದ್ದು. ಆದರೆ, ನಮಗೆ ಶಿವಸೇನೆಯಿಂದ ದ್ರೋಹವಾಯಿತು ಎಂದು ಅಸಮಾಧಾನ ಹೊರಹಾಕಿದರು.

ಇದನ್ನು ಓದಿ: ಠಾಕ್ರೆ ಕುಟುಂಬದ ಮೊದಲ ಸಿಎಂ ಉದ್ಧವ್ ಕೇವಲ ರಾಜಕಾರಣಿಯಲ್ಲ!; ಇಲ್ಲಿದೆ ಅವರ ಕುರಿತ ಸಂಪೂರ್ಣ ಮಾಹಿತಿ

ಮಹಾರಾಷ್ಟ್ರದಲ್ಲಿ ಏನಾಗಿದೆ ಎಂಬುದು ಇಡೀ ದೇಶಕ್ಕೆ ಗೊತ್ತು. ಬಿಜೆಪಿ ಮತ್ತು ಶಿವಸೇನೆ ಮೈತ್ರಿಯಾಗಿಯೇ ಚುನಾವಣೆಯನ್ನು ಎದುರಿಸಿದ್ದವು. ಸರ್ಕಾರ ರಚನೆಗೆ ಜನಾದೇಶ ಬಿಜೆಪಿಗೆ ಇತ್ತು. ಫಲಿತಾಂಶದ ಬಳಿಕ ಅವರು ವಿಭಿನ್ನ ಬೇಡಿಕೆಗಳನ್ನು ಇಟ್ಟು, ಮೈತ್ರಿ ಕಡಿದುಕೊಂಡು ಹೋದರು ಎಂದು ಅಮಿತ್ ಶಾ ಹೇಳಿದರು.

ಬಿಜೆಪಿ ಮುಖ್ಯಮಂತ್ರಿ ಸ್ಥಾನ ನೀಡುವುದಾಗಿ ಹೇಳಿತ್ತು ಎಂಬ ಶಿವಸೇನೆ ಹೇಳಿಕೆಯನ್ನು ಅಲ್ಲಗಳೆದ ಅಮಿತ್ ಶಾ, ಚುನಾವಣೆ ಸಮಯದಲ್ಲಿ ಹಲವು ಪ್ರಚಾರದ ಸಮಾವೇಶದಲ್ಲಿ ಉದ್ಧವ್ ಠಾಕ್ರೆ ಉಪಸ್ಥಿತಿಯಲ್ಲಿಯೇ ಈ ಬಗ್ಗೆ ಸ್ಪಷ್ಟವಾಗಿ ಹೇಳಲಾಗಿತ್ತು. ಮೈತ್ರಿ ಮತ್ತೆ ಅಧಿಕಾರಕ್ಕೆ ಬಂದರೆ ದೇವೇಂದ್ರ ಫಡ್ನವೀಸ್ ಅವರೇ  ಮುಂದಿನ ಮುಖ್ಯಮಂತ್ರಿ ಎಂದು ಬಹಿರಂಗವಾಗಿಯೇ ಹೇಳಿದ್ದೆವು ಎಂದರು.

ಬಿಜೆಪಿ ಕುದುರೆ ವ್ಯಾಪಾರಯಲ್ಲಿ ತೊಡಗಿಕೊಂಡಿದೆ ಅಥವಾ ಆ ಕೆಲಸ ಮಾಡಿದೆ ಎಂಬುದನ್ನು ನಿರಾಕರಿಸಿದ ಅಮಿತ್ ಶಾ, ಕಾಂಗ್ರೆಸ್​ ಪಕ್ಷವೇ ಕುದುರೆ ವ್ಯಾಪಾರ ಮಾಡಿದೆ ಎಂದು ಆರೋಪಿಸಿದರು.ಎನ್​ಸಿಪಿಯ ಅಜಿತ್ ಪವಾರ್ ಬೆಂಬಲ ಪಡೆದ ಬಿಜೆಪಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವ ಪ್ರಯತ್ನ ಮಾಡಿತು. ಮತ್ತು ದೇವೇಂದ್ರ ಫಡ್ನವೀಸ್ ಅವರು ನವೆಂಬರ್ 22ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನವನ್ನೂ ಸ್ವೀಕರಿಸಿದರು. ಆದರೆ, ಅಜಿತ್ ಪವಾರ್ ಅವರು ಶಾಸಕರನ್ನು ಕರೆತರುವಲ್ಲಿ ವಿಫಲವಾದ ಕಾರಣ ಸರ್ಕಾರ 80 ಗಂಟೆಯಲ್ಲಿ ಪತನಗೊಂಡಿತು.

ಚುನಾವಣೆ ವೇಳೆ ಬಿಜೆಪಿಯೂ ಅಜಿತ್ ಪವಾರ್ ಅವರ ಮೇಲೆ ಹಲವು ಭ್ರಷ್ಟಾಚಾರ ಆರೋಪಗಳನ್ನು ಮಾಡಿತ್ತು. ಆದರೆ, ಕೊನೆಗೆ ಅವರ ಬೆಂಬಲದೊಂದಿಗೆ ಸರ್ಕಾರ ರಚನೆಯ ಕಸರತ್ತನ್ನು ನಡೆಸಿ, ಅದರಲ್ಲಿ ವಿಫಲವಾಯಿತು. ದೇವೇಂದ್ರ ಫಡ್ನವೀಸ್ ಅವರು ಅಜಿತ್ ಪವಾರ್ ಅವರೊಂದಿಗೆ ಸೇರಿ ಸರ್ಕಾರ ರಚಿಸಿದ ದಿನದ ಬಳಿಕ ನೀರಾವರಿ ಹಗರಣಗಳಿಗೆ ಸಂಬಂಧಿಸಿದ 9 ಪ್ರಕರಣಗಳ ತನಿಖೆಯನ್ನು ರದ್ದುಗೊಳಿಸಿತ್ತು. ಈ ಪ್ರಕರಣಗಳಲ್ಲಿ ಅಜಿತ್ ಪವಾರ್ ಅವರ ಹೆಸರು ಥಳುಕು ಹಾಕಿಕೊಂಡಿತ್ತು. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಅಮಿತ್ ಶಾ ಅವರು, ಒಂದು ವೇಳೆ ಅಜಿತ್ ಪವಾರ್ ಅವರು ಸರ್ಕಾರದ ಭಾಗವೇ ಆಗಿದ್ದರೂ ಅವರ ವಿರುದ್ಧ ಇರುವ ನೀರಾವರಿ ಹಗರಣಗಳ ತನಿಖೆ ಮುಂದುವರೆಯುತ್ತಿತ್ತು ಎಂದು ಹೇಳಿದರು. ಜೊತೆಗೆ ಶಿವಸೇನೆ ಸೈದ್ಧಾಂತಿಕವಾಗಿ ವಿರುದ್ಧವಾಗಿ ಕಾಂಗ್ರೆಸ್​ ಜೊತೆಗೆ ಮೈತ್ರಿ ಮಾಡಿಕೊಂಡಂತೆ ಬಿಜೆಪಿ ಅಜಿತ್ ಪವಾರ್ ಅವರ ಬೆಂಬಲ ಪಡೆದಿದ್ದರಲ್ಲಿ ಯಾವುದೇ ಸೈದ್ಧಾಂತಿಕ  ಭಿನ್ನಾಭಿಪ್ರಾಯ ಇಲ್ಲ ಎಂದರು.

 

First published: November 28, 2019, 8:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading