ಅಂತರ್ಜಾತಿ ಹಾಗೂ ಅಂತರ್​ ಧರ್ಮೀಯ ವಿವಾಹಗಳು ಸಮಾಜವಾದಕ್ಕೆ ಪೂರಕ; ಸುಪ್ರೀಂ ಕೋರ್ಟ್​ ಅಭಿಮತ

ಛತ್ತೀಸ್​ಗಢದಲ್ಲಿ ಇತ್ತೀಚೆಗೆ ಓರ್ವ ವ್ಯಕ್ತಿ ತನ್ನ ಪ್ರೇಯಸಿಯನ್ನು ಮದುವೆಯಾಗುವುದಕ್ಕೋಸ್ಕರ ಇಸ್ಲಾಂ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದ. ಆದರೆ, ಈ ವಿವಾಹ ನಮ್ಮ ನಂಬಿಕೆಗೆ ವಿರುದ್ಧವಾಗಿದ್ದು, ಈ ವಿವಾಹದ ಮಾನ್ಯತೆಯನ್ನೇ ರದ್ದುಗೊಳಿಸಬೇಕು ಎಂದು ಕೋರಿ ಹುಡುಗಿಯ ತಂದೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

MAshok Kumar | news18-kannada
Updated:September 11, 2019, 2:15 PM IST
ಅಂತರ್ಜಾತಿ ಹಾಗೂ ಅಂತರ್​ ಧರ್ಮೀಯ ವಿವಾಹಗಳು ಸಮಾಜವಾದಕ್ಕೆ ಪೂರಕ; ಸುಪ್ರೀಂ ಕೋರ್ಟ್​ ಅಭಿಮತ
ಸುಪ್ರೀಂ ಕೋರ್ಟ್​
MAshok Kumar | news18-kannada
Updated: September 11, 2019, 2:15 PM IST
ಭಾರತದಲ್ಲಿ ಸಮಾಜವಾದವನ್ನು ಎತ್ತಿಹಿಡಿಯಲು ಅಂತರ್ಜಾತಿ ಹಾಗೂ ಅಂತರ್ ಧರ್ಮೀಯ ಮದುವೆಗಳು ಸೂಕ್ತ ಮಾದರಿ. ಹೀಗಾಗಿ ಇಂತಹ ಮದುವೆಗಳಿಗೆ ನಾವು ಹಿಂಜರಿಯುವುದಿಲ್ಲ. ಇಲ್ಲಿ ಹಿಂದೂ-ಮುಸ್ಲಿಂ ಮದುವೆಗಳು ಸಹ ಸ್ವೀಕಾರಾರ್ಹ. ಜೋಡಿಗಳು ಪರಸ್ಪರ ಒಪ್ಪಿ ಮದುವೆಯಾದರೆ ಸಮಸ್ಯೆಯಾದರೂ ಏನು? ಎಂದು ಸುಪ್ರೀಂ ಕೋರ್ಟ್ ಬುಧವಾರ ಅಭಿಪ್ರಾಯಪಟ್ಟಿದೆ.

ಛತ್ತೀಸ್​ಗಢದಲ್ಲಿ ಇತ್ತೀಚೆಗೆ ಓರ್ವ ವ್ಯಕ್ತಿ ತನ್ನ ಪ್ರೇಯಸಿಯನ್ನು ಮದುವೆಯಾಗುವುದಕ್ಕೋಸ್ಕರ ಇಸ್ಲಾಂ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದ. ಆದರೆ, ಈ ವಿವಾಹ ನಮ್ಮ ನಂಬಿಕೆಗೆ ವಿರುದ್ಧವಾಗಿದ್ದು, ಈ ವಿವಾಹದ ಮಾನ್ಯತೆಯನ್ನೇ ರದ್ದುಗೊಳಿಸಬೇಕು ಎಂದು ಕೋರಿ ಹುಡುಗಿಯ ತಂದೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ವೇಳೆ ಅಂತರ್ಜಾತಿ ಹಾಗೂ ಅಂತರ್ ಧರ್ಮೀಯ ಮದುವೆಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಮೂರ್ತಿ ಅರುಣ್ ಮಿಶ್ರಾ ಮತ್ತು ಎಮ್.ಆರ್. ಶಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠ,

“ಲೈವ್-ಇನ್ ಸಂಬಂಧಗಳನ್ನು ಈಗಾಗಲೇ ನ್ಯಾಯಾಲಯ ಅಂಗೀಕರಿಸಿದೆ. ಹೀಗಾಗಿ ಈ ಪ್ರಕರಣದ ತನಿಖೆ ಅಥವಾ ವಿಚಾರಣೆ ಅಗತ್ಯವಿಲ್ಲ. ನ್ಯಾಯಾಲಯ ದಂಪತಿಗಳ ಹಿತಾಸಕ್ತಿಗಳನ್ನಷ್ಟೇ ರಕ್ಷಿಸಲು ಬಯಸುತ್ತದೆ. ಅಲ್ಲದೆ, ಇಂತಹ ಮದುವೆಗಳಿಂದ ಮಾತ್ರ ಸಮಾಜದಲ್ಲಿ ನಿಜಕ್ಕೂ ಸಮಾಜವಾದವನ್ನು ಎತ್ತಹಿಡಿಯಲು ಸಾಧ್ಯ. ಹೀಗಾಗಿ ಅಂತರ್ಜಾತಿ ಹಾಗೂ ಅಂತರ್ ಧರ್ಮೀಯ ವಿವಾಹವನ್ನು ನಾವು ಬೆಂಬಲಿಸುತ್ತೇವೆ" ಎಂದು ಸುಪ್ರೀಂ ದ್ವಿಸದಸ್ಯ ಪೀಠ ತಿಳಿಸಿದೆ.

ಇದನ್ನೂ ಓದಿ : ಭಾರತಕ್ಕೆ ನುಸುಳಲು ಅಲ್-ಬದರ್​ನ 45 ಉಗ್ರರು ಸಜ್ಜು: ಕಾಶ್ಮೀರದಲ್ಲಿ ಹೈ ಅಲರ್ಟ್

ಈ ಪ್ರರಕಣವನ್ನು ಈ ಹಿಂದೆಯೇ ಛತ್ತೀಸ್​ಗಢ ಹೈಕೋರ್ಟ್ ವಿಚಾರಣೆ ನಡೆಸಿ ದಂಪತಿಗಳು ಒಟ್ಟಿಗೆ ಬದುಕಲು ಅವಕಾಶ ಮಾಡಿಕೊಟ್ಟಿತ್ತು. ಆದರೆ, ಹುಡುಗಿಯ ತಂದೆ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದರು. ಇಂದಿನ ವಿಚಾರಣೆ ವೇಳೆ ತಂದೆಯ ಪರವಾಗಿ ಸುಪ್ರೀಂ ಕೋರ್ಟ್​ಗೆ ಹಾಜರಾದ ಹಿರಿಯ ವಕೀಲ ಮುಕುಲ್ ರೊಹ್ಟೋಗಿ, “ಅಂತರ್ ಧರ್ಮೀಯ ವಿವಾಹಗಳ ಹೆಸರಿನಲ್ಲಿ ದಂಧೆ ನಡೆಸಲಾಗುತ್ತಿದೆ. ಸುಪ್ರೀಂ ಕೋರ್ಟ್ ಈ ಕುರಿತು ಗಮನಹರಿಸಬೇಕು” ಎಂದು ಆರೋಪಿಸಿದರು.

ದಂಪತಿಗಳ ಪರವಾಗಿ ಹಾಜರಾದ ಮತ್ತೋರ್ವ ಹಿರಿಯ ವಕೀಲ ರಾಕೇಶ್ ದ್ವಿವೇದಿ “ಪ್ರೇಯಸಿಯನ್ನು ಮದುವೆಯಾಗಬೇಕು ಎಂಬ ಉದ್ದೇಶದಿಂದ ಹುಡುಗ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾನೆ ಹಾಗೂ ಇವರ ದಾಂಪತ್ಯದಲ್ಲಿ ಯಾವುದೇ ಬಿರುಕುಗಳಿಲ್ಲ" ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು. ಅಲ್ಲದೆ, ಇಂತಹದ್ದೇ ಕೇರಳದ ಹಡಿಯಾ ಪ್ರಕರಣದಲ್ಲಿ ಈ ಹಿಂದೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸಿದರು.
Loading...

ಆದರೆ, ವಾದ ವಿವಾದಗಳನ್ನು ಆಲಿಸಿ  ಈ ಪ್ರಕರಣದ ಕುರಿತು ಸ್ಪಷ್ಟತೆ ನೀಡಿರುವ ಸುಪ್ರೀಂ ಕೋರ್ಟ್, “ನ್ಯಾಯಾಲಯ ವಿವಾಹದ ಕುರಿತು ತನಿಖೆ ನಡೆಸುವುದಿಲ್ಲ. ಬದಲಾಗಿ ಅಂತರ್ ಧರ್ಮೀಯ ಮದುವೆಗೆ ಒಳಗಾಗಿರುವ ಹುಡುಗಿಯ ಹಿತರಕ್ಷಣೆಗಳನ್ನು ಮಾತ್ರ ಖಚಿತಪಡಿಸಿಕೊಳ್ಳಲು ಇಚ್ಚಿಸುತ್ತದೆ ಎಂದು ತಿಳಿಸಿದೆ. ಅಲ್ಲದೆ, ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 24ಕ್ಕೆ ಮುಂದೂಡಿದೆ.

ಇದನ್ನೂ ಓದಿ : ಕಾಶ್ಮೀರದಲ್ಲಿ ಐದು ವರ್ಷದ ಮಗುವಿನ ಮೇಲೆ ದಾಳಿ ನಡೆಸಿದ್ದ ಲಷ್ಕರ್-ಎ-ತೊಯ್ಬಾ ಉಗ್ರನ ಹತ್ಯೆ

First published:September 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...