Pegasus spyware: ಏನಿದು ಪೆಗಾಸಸ್ ಸ್ಪೈವೇರ್ ವಿವಾದ? ಸುಪ್ರೀಂ ಕೋರ್ಟ್ ಪ್ಯಾನಲ್ ವರದಿ ಹೇಳಿದ್ದೇನು?

ಕಳೆದ ಕೆಲ ಸಮಯದ ಹಿಂದೆ ಪೆಗಾಸಸ್ ಮಾಲ್ವೇರ್ ದೇಶದ ರಾಜಕೀಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಬೇಹುಗಾರಿಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಅದಕ್ಕೆ ಸಂಬಂಧಿಸಿದಂತೆ ಈ ಪ್ರಕರಣದ ತನಿಖೆಗಾಗಿ ಸುಪ್ರೀಂ ನ್ಯಾಯಾಲಯವು ಪ್ಯಾನಲ್ ಒಂದನ್ನು ರಚಿಸಿತ್ತು. ಇದೀಗ ಗುರುವಾರದಂದು ಅಂದರೆ ಇಂದು ಆ ಪ್ಯಾನಲ್ ಮುಖ್ಯ ನ್ಯಾಯಾಧೀಶರಿಗೆ ತನ್ನ ವರದಿಯನ್ನು ಒಪ್ಪಿಸಿದ್ದು ಅದರಲ್ಲಿ ಅದು ತಾನು ಪರೀಕ್ಷಿಸಿದ 29 ಫೋನುಗಳಲ್ಲಿ ಪೆಗಾಸಸ್ ಉಪಸ್ಥಿತಿ ಇರುವಂತಹ ಯಾವುದೇ ಪುರಾವೆಗಳನ್ನು ಕಂಡಿಲ್ಲ ಎಂದು ಹೇಳಿದೆ.

ಪೆಗಾಸಸ್ ಸ್ಪೈವೇರ್

ಪೆಗಾಸಸ್ ಸ್ಪೈವೇರ್

  • Share this:
ಕಳೆದ ಕೆಲ ಸಮಯದ ಹಿಂದೆ ಪೆಗಾಸಸ್ ಮಾಲ್ವೇರ್ (Pegasus Malware) ದೇಶದ ರಾಜಕೀಯದಲ್ಲಿ (Politics) ಸಾಕಷ್ಟು ಸಂಚಲನ ಮೂಡಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಬೇಹುಗಾರಿಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಅದಕ್ಕೆ ಸಂಬಂಧಿಸಿದಂತೆ ಈ ಪ್ರಕರಣದ ತನಿಖೆಗಾಗಿ ಸುಪ್ರೀಂ ನ್ಯಾಯಾಲಯವು ಪ್ಯಾನಲ್ (Supreme Court Panel) ಒಂದನ್ನು ರಚಿಸಿತ್ತು. ಇದೀಗ ಗುರುವಾರದಂದು ಅಂದರೆ ಇಂದು ಆ ಪ್ಯಾನಲ್ ಮುಖ್ಯ ನ್ಯಾಯಾಧೀಶರಿಗೆ (Chief Justice) ತನ್ನ ವರದಿಯನ್ನು ಒಪ್ಪಿಸಿದ್ದು ಅದರಲ್ಲಿ ಅದು ತಾನು ಪರೀಕ್ಷಿಸಿದ 29 ಫೋನುಗಳಲ್ಲಿ (Phones) ಪೆಗಾಸಸ್ ಉಪಸ್ಥಿತಿ ಇರುವಂತಹ ಯಾವುದೇ ಪುರಾವೆಗಳನ್ನು ಕಂಡಿಲ್ಲ ಎಂದು ಹೇಳಿದೆ.

ಸುಪ್ರೀಂ ಕೋರ್ಟ್ ರಚಿಸಿರುವ ಪ್ಯಾನಲ್ ನ ವರದಿಯಲ್ಲಿ ಏನಿದೆ
ಈ ಮುಂಚೆ ಫಾರೆನ್ಸಿಕ್ ವಿಶ್ಲೇಷಣೆಯು ಐದು ಫೋನುಗಳು ಕೆಲ ಮಾಲ್ವೇರ್ ಗಳಿಂದ ಬಾಧಿತವಾಗಿವೆ ಎಂದು ಹೇಳಿತ್ತು. ಸದ್ಯ ಸುಪ್ರೀಂ ರಚಿಸಿರುವ ಪ್ಯಾನಲ್ ಆ ಬಗ್ಗೆ ತನ್ನ ವರದಿಯಲ್ಲಿ ಅದು ಪೆಗಾಸಸ್ ವೈರಾಣುವೇ ಆಗಿತ್ತು ಎಂಬುದರ ಬಗ್ಗೆ ಅಸ್ಪಷ್ಟತೆಯಿರುವುದಾಗಿ ಹೇಳಿದೆ.

ಪ್ಯಾನಲ್ ನೀಡಿರುವ ಸೀಲ್ ಮಾಡಿದ ವರದಿಯನ್ನು ಆಧರಿಸಿ ಅಪೆಕ್ಸ್ ನ್ಯಾಯಾಲಯದ ನ್ಯಾ. ಎನ್.ವಿ ರಮಣ ಅವರು ಸರ್ಕಾರವು ನ್ಯಾಯಾಲಯ ರಚಿಸಿದ ಸಮಿತಿಯೊಂದಿಗೆ ಯಾವುದೇ ಸಹಯೋಗ ತೋರದೆ ಇರುವುದನ್ನು ಗಮನಿಸಿದ್ದಲ್ಲದೆ ಈ ಹಿಂದೆ ತಾನು ನಾಗರಿಕರ ಮೇಲೆ ನೀಗಾ ಇಡಲು ಅನುಕೂಲವಾಗುವಂತೆ ಪೆಗಾಸಸ್ ಅನ್ನು ಬಳಸಿರುವುದರ ಬಗ್ಗೆ ಸರ್ಕಾರ ಈಗಲೂ ಯಾವುದೇ ಸ್ಪಷ್ಟನೇ ನೀಡದೆ ಇರುವುದನ್ನೂ ಸಹ ಮನಗಂಡರು.

ಪೆಗಾಸಸ್ ಸ್ಪೈವೇರ್ ನ ದುರುಪಯೋಗದ ಆಪಾದನೆ 
ಈ ಹಿಂದೆ ಪತ್ರಕರ್ತರು, ರಾಜಕಾರಣಿಗಳು ಹಾಗೂ ಕಾರ್ಯಕರ್ತರ ಮೇಲೆ ನಿಗಾ ಇಡಲು ಪೆಗಾಸಸ್ ನಂತಹ ಸ್ಪೈವೇರ್ ಅನ್ನು ದುರುಪಯೋಗ ಗೊಳಿಸಿಕೊಳ್ಳಲಾಗಿತ್ತು ಎಂಬ ಆಪಾದನೆ ಕೇಳಿ ಬಂದ ಮೇಲೆ ಅದನ್ನು ತನಿಖೆ ಮಾಡುವಂತೆ ಸುಪ್ರೀಂ ನ್ಯಾಯಾಲಯವು ನಿವೃತ್ತ ಸುಪ್ರೀಂ ಕೋರ್ಟ್ ಜಡ್ಜ್ ಆದ ಆರ್.ವಿ ರವೀಂದ್ರನ್ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಆ ಸಮಿತಿಯು ಜುಲೈ ಆರಂಭದಲ್ಲೇ ತನ್ನ ಅಂತಿಮ ವರದಿಯನ್ನು ಸಲ್ಲಿಸಿದೆ.

ಇದನ್ನೂ ಓದಿ:  Google Paly Store​ನಿಂದ ಆ್ಯಪ್​ ಡೌನ್​ಲೋಡ್​ ಮಾಡುವಾಗ ಎಚ್ಚರದಿಂದಿರಿ! ಯಾಕಂದ್ರೆ ನಿಮ್ಮ ಫೋನ್​ ಹ್ಯಾಕ್​ ಆಗಬಹುದು

ಸದ್ಯ ಈ ಪ್ರಕರಣವನ್ನು ಆಲಿಸುತ್ತಿರುವ ತ್ರಿಸದಸ್ಯ ನ್ಯಾಯಪೀಠವು ನ್ಯಾ. ಸೂರ್ಯ ಕಾಂತ್ ಹಾಗೂ ನ್ಯಾ. ಹಿಮಾ ಕೊಹ್ಲಿ ಅವರನ್ನೂ ಸಹ ಒಳಗೊಂಡಿದೆ. ಇದೀಗ ಈ ಪೀಠವು ರವೀಂದ್ರನ್ ಅವರ ನೇತೃತ್ವದ ಸಮಿತಿಯು ಸಲ್ಲಿಸಿದ ವರದಿಯನ್ನು ಪಬ್ಲಿಕ್ ಡೊಮೈನ್ ನಲ್ಲಿ ಇರಿಸುವುದಾಗಿ ಹೇಳಿದೆ.

ಯಾವೆಲ್ಲಾ ವಿಷಯಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ
ಇನ್ನು ರವೀಂದ್ರನ್ ಅವರು ತಮ್ಮ ವರದಿಯಲ್ಲಿ ನಾಗರಿಕರ ಸುರಕ್ಷತೆಗೆ ಸಂಬಂಧಿಸಿದಂತೆ ಸಲಹೆಗಳು, ಭವಿಷ್ಯದಲ್ಲಿ ತೆಗೆದುಕೊಳ್ಳಬಹುದಾದ ಕ್ರಮಗಳು, ಹೊಣೆಗಾರಿಕೆ, ಖಾಸಗಿ ಗೌಪ್ಯತೆಯನ್ನು ಸಂರಕ್ಷಿಸುವ ಕಾನೂನು ತಿದ್ದುಪಡಿ, ದೂರುಗಳಿಗೆ ತ್ವರಿತವಾಗಿ ಸ್ಪಂದಿಸುವಂತಹ ಪ್ರಕ್ರಿಯೆ ಇತ್ಯಾದಿ ವಿಷಯಗಳ ಬಗ್ಗೆಯೂ ತಮ್ಮ ವರದಿಯಲ್ಲಿ ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ. ಈಗ ಪೆಗಾಸಸ್ ಸ್ನೂಪಿಂಗ್ ಪ್ರಕರಣವನ್ನು ಮತ್ತೆ ನಾಲ್ಕು ವಾರಗಳ ನಂತರ ಆಲಿಸಲಾಗುವುದೆಂದು ಹೇಳಲಾಗಿದ್ದು ರೆಜಿಸ್ಟ್ರಿಯು ಆ ಬಗ್ಗೆ ದಿನಾಂಕವನ್ನು ನೀಡಲಿದೆ ಎಂದು ತಿಳಿದುಬಂದಿದೆ.

ಏನಿದು ಪೆಗಾಸಸ್ ಸ್ಪೈವೇರ್ ವಿವಾದ?
ಈ ಹಿಂದೆ ಅಂತಾರಾಷ್ಟ್ರೀಯ ಮಾಧ್ಯಮ ಕನ್ಸೋರ್ಟಿಯಂ ಭಾರತದಲ್ಲಿ ಒಬ್ಬ ಸಿಟ್ಟಿಂಗ್ ಜಡ್ಜ್, ಇಬ್ಬರು ಕೇಂದ್ರ ಸಚಿವರು, ಮೂರು ವಿರೋಧ ಪಕ್ಷದ ನಾಯಕರು, 40 ಪ್ರಭಾವಿ ಪತ್ರಕರ್ತರು ಹಾಗೂ ಹಲವು ಕಾರ್ಯಕರ್ತರು ಸೇರಿದಂತೆ ಒಟ್ಟು 300 ದೃಢೀಕರಿಸಲಾದ ಮೊಬೈಲ್ ಫೋನ್ ಸಂಖ್ಯೆಗಳ ಮೇಲೆ ಇಸ್ರೇಲಿ ನಿರ್ಮಿತ ಸ್ಪೈವೇರ್ ಆದ ಪೆಗಾಸಸ್ ಅನ್ನು ಬಳಸಿ ಕಣ್ಣಿಡಲಾಗಿದೆ ಎಂದು ಆರೋಪಿಸಿ ವರದಿ ಮಾಡಿತ್ತು. ಆದರೆ, ಕೇಂದ್ರ ಸರ್ಕಾರವು ಈ ರೀತಿಯ ಯಾವುದೇ ಬೇಹುಗಾರಿಕೆಯಲ್ಲಿ ಅದು ತೊಡಗಿಲ್ಲ ಎಂದು ಹೇಳುವ ಮೂಲಕ ಆರೋಪವನ್ನು ನೇರವಾಗಿ ತಳ್ಳಿ ಹಾಕಿತ್ತು. ಈ ಸಂದರ್ಭದಲ್ಲಿ ಮಾಹಿತಿ ತಂತ್ರಜ್ಞಾನ ಸಚಿವಾಲಯವು "ಅನಧಿಕೃತ ನಿಗ್ರಾವಣೆಯಿಲ್ಲ" ಎಂದು ಹೇಳಿಕೆ ನೀಡಿತ್ತು.

ಇದನ್ನೂ ಓದಿ: Google Chrome​ ಬಳಕೆದಾರರಿಗೆ ಎಚ್ಚರಿಕೆ ನೀಡಿದ ಕೇಂದ್ರ ಸರ್ಕಾರ! ಬೇಗ ಅಪ್ಡೇಟ್​ ಮಾಡಿ

ಆದರೆ ವಿರೋಧ ಪಕ್ಷವು ಸರ್ಕಾರದ ಈ ನಡೆಯನ್ನು ವಿರೋಧಿಸಿ ಸರ್ಕಾರ ಈ ಬಗ್ಗೆ ಯಾವುದೇ ರೀತಿಯ ಪಾರದರ್ಶಕತೆಯನ್ನು ತೋರುತ್ತಿಲ್ಲ. ನಾಗರಿಕರ ಮೇಲೆ ನಿಗಾ ಇಡುವುದರ ಬಗ್ಗೆ ಸ್ಪೈವೇರ್‍ ಬಳಕೆಯನ್ನು ದುರುಪಯೋಗಪಡಿಸಿಕೊಂಡಿರುವ ಬಗ್ಗೆ ಯಾವುದೇ ಸ್ಪಷ್ಟನೆ ನೀಡುತ್ತಿಲ್ಲ ಎಂದು ಆರೋಪಿಸಿತ್ತು. ಆದರೆ, ಇಸ್ರೇಲ್ ದೇಶದ, ಪೆಗಾಸಸ್ ಸ್ಪೈವೇರ್ ನಿರ್ಮಿಸಿರುವ NSO Group, ತಾನು ಕಡ್ಡಾಯವಾಗಿ, ಉಗ್ರಗಾಮಿ ಆತಂಕದ ವಿರುದ್ಧ ಹೋರಾಡಲು ಸರ್ಕಾರಗಳಷ್ಟೇ ಬಳಸುವಂತೆ ಸ್ಪೈವೇರ್ ನಿರ್ಮಿಸಿರುವುದಾಗಿ ಹೇಳಿಕೊಂಡಿದೆ.
Published by:Ashwini Prabhu
First published: