ವಿಮಾನ ಅಲ್ಲ, ಸ್ವಾತಂತ್ರ್ಯ ಬೇಕು; ಜಮ್ಮು ಕಾಶ್ಮೀರಕ್ಕೆ ಆಹ್ವಾನಿಸಿದ ರಾಜ್ಯಪಾಲರಿಗೆ ತಿರುಗೇಟು ನೀಡಿದ ರಾಹುಲ್​ ಗಾಂಧಿ

ನಮಗೆ ರಾಜ್ಯದಲ್ಲಿ ಸಂಚರಿಸಲು ವಿಮಾನದ ಅವಶ್ಯಕತೆಗಿಂತ , ಜನರನ್ನು, ಪ್ರಮುಖ ನಾಯಕರನ್ನು ಹಾಗೂ ಪರಿಸ್ಥಿತಿ ಬಗ್ಗೆ ವಿವರಣೆ ಪಡೆಯಲು ಸೈನಿಕರನ್ನು ಮಾತನಾಡಿರುವ ಸ್ವಾತಂತ್ರ್ಯದ ಅವಶ್ಯಕತೆ ಹೆಚ್ಚಿದೆ

Seema.R | news18-kannada
Updated:August 13, 2019, 3:26 PM IST
ವಿಮಾನ ಅಲ್ಲ, ಸ್ವಾತಂತ್ರ್ಯ ಬೇಕು; ಜಮ್ಮು ಕಾಶ್ಮೀರಕ್ಕೆ ಆಹ್ವಾನಿಸಿದ ರಾಜ್ಯಪಾಲರಿಗೆ ತಿರುಗೇಟು ನೀಡಿದ ರಾಹುಲ್​ ಗಾಂಧಿ
ರಾಹುಲ್​​ ಗಾಂಧಿ
  • Share this:
ನವದೆಹಲಿ (ಆ.13): ರಾಜ್ಯದಲ್ಲಿ ಹಿಂಸೆ ನಡೆಯುತ್ತಿದೆ ಎಂದು ಮಾತನಾಡುವ ಬದಲು ಇಲ್ಲಿಗೆ ಬಂದು ಸ್ಥಿತಿಗತಿ ಅರಿಯಿರಿ ಎಂಬ ಜಮ್ಮು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್​ ಮಲ್ಲಿಕ್​ ಆಹ್ವಾನ ಸ್ವೀಕರಿಸಿರುವ ರಾಹುಲ್​ ಗಾಂಧಿ, ನನ್ನೊಟ್ಟಿಗೆ ವಿಪಕ್ಷಗಳನ್ನು ಕರೆ ತರುತ್ತೇನೆ.  ರಾಜ್ಯದಲ್ಲಿ ಓಡಾಡಲು ವಿಮಾನದ ನೀಡುವ ಬದಲು ಮುಕ್ತವಾಗಿ ಸಂಚರಿಸುವ ಸ್ವಾತಂತ್ರ್ಯ ನೀಡಿ ಎಂದು ತಿರುಗೇಟು ನೀಡಿದ್ದಾರೆ.

ಜಮ್ಮು ಕಾಶ್ಮೀರಕ್ಕೆ ನೀಡಿದ ವಿಶೇಷ ಸೌಲಭ್ಯ ಕಲಂ 370 ರದ್ದು ಮಾಡಿರುವುದರಿಂದ ರಾಜ್ಯದಲ್ಲಿ ಹಿಂಸಾಚಾರ ಹೆಚ್ಚಿದೆ. ಜನರು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ರಾಹುಲ್​ ಗಾಂಧಿ ಸೋಮವಾರ ಹೇಳಿಕೆ ನೀಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್​ ಸಿಂಗ್, ಇಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿಯಲು ರಾಜ್ಯಕ್ಕೆ​ ರಾಹುಲ್​ ಗಾಂಧಿ ಆಹ್ವಾನಿಸುತ್ತೇನೆ. ಇಲ್ಲಿನ ವಸ್ತು ಸ್ಥಿತಿ  ಅರಿಯಲು ರಾಜ್ಯ ಸಂಚಾರಕ್ಕೆ ವಿಶೇಷ ವಿಮಾನ ಕಳುಹಿಸುತ್ತೇನೆ. ಬಳಿಕ ಈ ಬಗ್ಗೆ ಮಾತನಾಡಿ. ನೀವೊಬ್ಬ ಜವಾಬ್ಧಾರಿ ವ್ಯಕ್ತಿಯಾಗಿ ಈ ರೀತಿ ಮಾತಾಡಬಾರದು ಎಂದಿದ್ದರು.

ಈ ಹೇಳಿಕೆಗೆ ಇಂದು ತಿರುಗೇಟು ನೀಡಿರುವ ರಾಹುಲ್​ ಗಾಂಧಿ, ನಮಗೆ ರಾಜ್ಯದಲ್ಲಿ ಸಂಚರಿಸಲು ವಿಮಾನದ ಅವಶ್ಯಕತೆಗಿಂತ , ಜನರನ್ನು, ಪ್ರಮುಖ ನಾಯಕರನ್ನು ಹಾಗೂ ಪರಿಸ್ಥಿತಿ ಬಗ್ಗೆ ವಿವರಣೆ ಪಡೆಯಲು ಸೈನಿಕರನ್ನು ಮಾತನಾಡಿರುವ ಸ್ವಾತಂತ್ರ್ಯದ ಅವಶ್ಯಕತೆ ಹೆಚ್ಚಿದೆ ಎಂದಿದ್ದಾರೆ.

ಇದನ್ನು ಓದಿ: Gold Price: ದಾಖಲೆ ಬೆಲೆ ಏರಿಕೆ ಕಂಡ ಬಂಗಾರ; 39 ಸಾವಿರ ಗಡಿಯತ್ತ ಚಿನ್ನ, ಬೆಳ್ಳಿ ಕೂಡ ದುಬಾರಿ

ಕೇಂದ್ರ ಸರ್ಕಾರದ ನಿರ್ಣಯವನ್ನು ಸಮರ್ಥನೆ ಮಾಡಿಕೊಂಡಿರುವ ರಾಜ್ಯಪಾಕ ಸತ್ಯಪಾಲ್​ ಸಿಂಗ್​, ಇದರಿಂದ ಯಾವುದೇ ಹಿಂಸಾಚಾರ ಸಂಭವಿಸಿಲ್ಲ ಎಂದಿದ್ದಾರೆ.

ವಿದೇಶಿ ಮಾಧ್ಯಮಗಳು ನಾವು ಇಲ್ಲಿನ ಜನರನ್ನು ಬೆದರಿಸು ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿವೆ. ಆದರೆ ಇಲ್ಲಿನ ಆಸ್ಪತ್ರೆಗಳ ಪ್ರವೇಶಕ್ಕೆ ನಿಮಗೆ ಮುಕ್ತ ಅವಕಾಶವಿದೆ. ಆದರೆ ಯುವಕರ ನಡುವಿನ ಘರ್ಷಣೆ ವೇಳೆ ನಾಲ್ವರು ಯುವಕರ ಕಾಲಿಗೆ ಗಾಯಗಳಾಗಿವೆ. ಇವು ಗಂಭೀರ ಗಾಯಗಳಲ್ಲ ಎಂದಿದ್ದಾರೆ.
First published:August 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ