ಕಾಶ್ಮೀರದಲ್ಲಿ ಒಂದೇ ಒಂದು ಗುಂಡನ್ನು ಹಾರಿಸಿಲ್ಲ; ರಕ್ತದ ಹೊಳೆ ಹರಿಯುತ್ತಿದೆ ಎಂಬ ರಾಹುಲ್ ಗಾಂಧಿ ಆರೋಪಕ್ಕೆ ಅಮಿತ್ ಶಾ ತಿರುಗೇಟು

ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್​ ಜಿ ಮತ್ತು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಅವರಲ್ಲಿ ನಾನು ಕೇಳುತ್ತೇನೆ, 370ನೇ ವಿಧಿಯನ್ನು ರದ್ದುಗೊಳಿಸಿದ್ದು ತಮಗೆ ಇಷ್ಟವಿದೆಯೋ ಇಲ್ಲವೋ ಎಂಬುದನ್ನು ಮಹಾರಾಷ್ಟ್ರ ಜನರ ಮುಂದೆ ಸ್ಪಷ್ಟಪಡಿಸಿ ಎಂದು ಅಮಿತ್ ಶಾ ಆಗ್ರಹಿಸಿದರು.

HR Ramesh | news18-kannada
Updated:October 10, 2019, 5:53 PM IST
ಕಾಶ್ಮೀರದಲ್ಲಿ ಒಂದೇ ಒಂದು ಗುಂಡನ್ನು ಹಾರಿಸಿಲ್ಲ; ರಕ್ತದ ಹೊಳೆ ಹರಿಯುತ್ತಿದೆ ಎಂಬ ರಾಹುಲ್ ಗಾಂಧಿ ಆರೋಪಕ್ಕೆ ಅಮಿತ್ ಶಾ ತಿರುಗೇಟು
ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಂಡ ಅಮಿತ್ ಶಾ
  • Share this:
ಸಾಂಗ್ಲಿ/ಸೊಲ್ಲಾಪುರ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಪ್ರಾತಿನಿಧ್ಯದ 370ನೇ ವಿಧಿಯನ್ನು ತೆಗೆದುಹಾಕುವ ಮೂಲಕ ಅತ್ಯುತ್ತಮ ಕೆಲಸ ಮಾಡಿದೆ ಎಂದು ಗೃಹ ಸಚಿವ ಅಮಿತ್ ಶಾ ಅವರು ಪ್ರಶಂಸಿಸಿದರು. ಜೊತೆಗೆ ರಾಹುಲ್ ಗಾಂಧಿ, ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಈ ವಿಚಾರವಾಗಿ ಪರ ಇದ್ದಾರೋ ಅಥವಾ ವಿರುದ್ಧ ಇದ್ದಾರೋ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ಸಾಂಗ್ಲಿ ಮತ್ತು ಸೊಲ್ಲಾಪುರ ಜಿಲ್ಲೆಯಲ್ಲಿ ಚುನಾವಣಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅಮಿತ್ ಶಾ, ಕಾಂಗ್ರೆಸ್​ ಮತ್ತು ಎನ್​ಸಿಪಿಗೆ ತಮ್ಮ ರಾಜಕೀಯಕ್ಕಾಗಿ ಹಾಗೂ ಮತ ಬ್ಯಾಂಕ್​ನ ಸಮಾಧಾನಕ್ಕಾಗಿ ಕಾಶ್ಮೀರ 370ನೇ ವಿಧಿ ರದ್ದತಿಯನ್ನು ವಿರೋಧಿಸುತ್ತಿವೆ ಎಂದು ಆರೋಪಿಸಿದರು. ಇಡೀ ಜಗತ್ತಿನಾದ್ಯಂತ ಭಾರತದ ಚಿತ್ರಣವನ್ನು ಪ್ರಧಾನಿ ಮೋದಿ ಅವರು ಸದೃಢಗೊಳಿಸಿದ್ದಾರೆ ಎಂದು ಕೂಗಿ ಹೇಳಿದರು.


ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮತ್ತು ಎನ್​ಸಿಪಿ ಸರ್ಕಾರ ಜನರಿಗೆ ಏನನ್ನು ಮಾಡಿದೆ ಎಂದು ಪ್ರಶ್ನೆ ಮಾಡಿದ ಅಮಿತ್ ಶಾ, ಮೋದಿ ಸರ್ಕಾರ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದಾಗ ಸಂಸತ್ತಿನಲ್ಲಿ ಐತಿಹಾಸಿಕ ಪ್ರಸ್ತಾವನೆಯನ್ನು ತಂದಿದೆ. ಕಾಶ್ಮೀರಕ್ಕೆ ನೀಡಲಾಗಿದ್ದ 370ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ ಅತ್ಯುತ್ತಮ ಕೆಲಸ ಮಾಡಿದೆ. ಭಾರತ ಒಟ್ಟುಗೂಡಿಸಬೇಕು ಎಂಬ ಸರ್ದಾರ್ ವಲ್ಲಭ್​ಬಾಯಿ ಪಟೇಲ್ ಅವರ ಕನಸನ್ನು ನನಸು ಮಾಡಿದೆ ಎಂದು ಹೇಳಿದರು.

ಇದನ್ನು ಓದಿ: ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿ ಬಳಿಕ 300ಕ್ಕೂ ಹೆಚ್ಚು ಕಲ್ಲು ತೂರಾಟ ಘಟನೆ: ಭದ್ರತಾ ಪಡೆ ವರದಿ

ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್​ ಜಿ ಮತ್ತು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಅವರಲ್ಲಿ ನಾನು ಕೇಳುತ್ತೇನೆ, 370ನೇ ವಿಧಿಯನ್ನು ರದ್ದುಗೊಳಿಸಿದ್ದು ತಮಗೆ ಇಷ್ಟವಿದೆಯೋ ಇಲ್ಲವೋ ಎಂಬುದನ್ನು ಮಹಾರಾಷ್ಟ್ರ ಜನರ ಮುಂದೆ ಸ್ಪಷ್ಟಪಡಿಸಿ ಎಂದು ಅಮಿತ್ ಶಾ ಆಗ್ರಹಿಸಿದರು.

ಕಾಶ್ಮೀರದಲ್ಲಿ ರಕ್ತದ ಹೊಳೆ ಹರಿಯುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸುತ್ತಾರೆ. ಆದರೆ, ಇದನ್ನು ನಾನು ಸಂಪೂರ್ಣ ನಿರಾಕರಿಸುತ್ತೇನೆ. ಏಕೆಂದರೆ 370ನೇ ವಿಧಿ ರದ್ದತಿ ಬಳಿಕ ಜಮ್ಮು ಮತ್ತು ಕಾಶ್ಮೀರ ಸಂಪೂರ್ಣ ಶಾಂತವಾಗಿದೆ ಹಾಗೂ ಇದುವರೆಗೂ ಒಂದೇ ಒಂದು ಗುಂಡನ್ನು ಸಹ ಹಾರಿಸಲಾಗಿಲ್ಲ ಎಂದು ಹೇಳಿದರು.

 

First published: October 10, 2019, 5:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading