ನಾರ್ವೆಯಲ್ಲಿ ಕೊರೋನಾ ವೈರಸ್ ವಿರುದ್ಧ ಫೈಜರ್ ಲಸಿಕೆ ಪಡೆದವರಲ್ಲಿ 23 ವೃದ್ಧರ ಸಾವು!

ಡಿಸೆಂಬರ್ ಅಂತ್ಯದಿಂದ ನಾರ್ವೆಯಲ್ಲಿ ಈವರೆಗೆ ಕೊರೋನಾ ವೈರಸ್ ವಿರುದ್ಧ 30 ಸಾವಿರಕ್ಕೂ ಹೆಚ್ಚು ಮಂದಿ ಫೈಜರ್ ಲಸಿಕೆ ಅಥವಾ ಪರ್ಯಾಯ ಲಸಿಕೆ ಪಡೆದಿದ್ದಾರೆ. ಅದರಲ್ಲಿ 23 ಮಂದಿ ವಯೋವೃದ್ಧರು ಮೃತಪಟ್ಟಿದ್ದಾರೆ. ಹೀಗಾಗಿ ವೈದ್ಯರು ಈಗ ಯಾರೆಗೆ ಲಸಿಕೆ ನೀಡಬೇಕು ಎಂಬುದನ್ನು ಪರಿಗಣಿಸಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ಲಸಿಕೆ ಚಿತ್ರಣ

ಲಸಿಕೆ ಚಿತ್ರಣ

 • Share this:
  ಕೋವಿಡ್-19 ಲಸಿಕೆ ಪಡೆದ ಕ್ಷಣ ಕಾಲದ ಬಳಿಕ 23 ವೃದ್ಧರು ಸಾವನ್ನಪ್ಪಿರುವ ಘಟನೆ ನಾರ್ವೆಯಲ್ಲಿ ವರದಿಯಾಗಿದೆ. 23 ಮಂದಿ ಸಾವಿನ ಜೊತೆಗೆ ಔಷಧ ಪಡೆದ ಹಲವು ಮಂದಿ ಅನಾರೋಗ್ಯಕ್ಕೂ ತುತ್ತಾಗಿದ್ದಾರೆ. ಸಾವಿನ ಬಗ್ಗೆ ತನಿಖೆ ನಡೆಸಲು ನಾರ್ವೆ ಸರ್ಕಾರ ಆದೇಶ ಹೊರಡಿಸಿದೆ. 

  ಕೊರೋನಾ ವೈರಸ್ ಸೋಂಕು ನಿವಾರಣೆಗಾಗಿ ನೀಡಲಾದ ಫೈಜರ್-ಬಯೋಟೆಕ್ ಲಸಿಕೆ ಪಡೆದ ತಕ್ಷಣದಲ್ಲೇ 23 ಮಂದಿ ಸಾವನ್ನಪ್ಪಿರುವ ಬಗ್ಗೆ ನಾರ್ವೆ ವೈದ್ಯರು ತನಿಖೆ ಆರಂಭಿಸಿದ್ದಾರೆ ಎಂದು ಬ್ಲೂಮ್​ಬರ್ಗ್​ ವರದಿ ಮಾಡಿದೆ. ಈ ಸಂಬಂಧ ಮಾತನಾಡಿರುವ ವೈದ್ಯರು, 80 ವರ್ಷ ದಾಟಿದ ವೃದ್ಧರು ದೇಹವು ಸಾಕಷ್ಟು ದುರ್ಬಲವಾಗಿರುತ್ತದೆ. ಇಂತಹವರಲ್ಲಿ ಲಸಿಕೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.

  ಫೈಜರ್ ಲಸಿಕೆ ಮತ್ತು ಈ ಸಾವುಗಳ ನಡುವೆ ಇದುವರೆಗೂ ನೇರ ಸಂಪರ್ಕ ಕಲ್ಪಿಸಿಲ್ಲ. ಸಾವನ್ನಪ್ಪಿದ 23 ಜನರಲ್ಲಿ 13 ಮಂದಿ ಅತಿಸಾರ ಭೇದಿ, ವಾಕರಿಕೆ ಮತ್ತು ಜ್ವರದಂತಹ  ತೊಂದರೆಗಳಿಂದ ಬಳಲುತ್ತಿದ್ದರು ಎಂದು ತಜ್ಞರು ಹೇಳಿದ್ದಾರೆ. ಏತನ್ಮಧ್ಯೆ, ನಾರ್ವೆಯಲ್ಲಿ ಹೆಚ್ಚಿದ ಸಾವಿನ ಸಂಖ್ಯೆಯಿಂದಾಗಿ ಫೈಜರ್ ಕಂಪನಿ ತಾತ್ಕಾಲಿಕವಾಗಿ ಯುರೋಪ್​ಗೆ ಸರಬರಾಜನ್ನು ಕಡಿಮೆ ಮಾಡಿದೆ.

  ವಿತರಣೆಯಲ್ಲಿ ಕಡಿಮೆ ಮಾಡಿರುವುದರಿಂದ ಫೈಜರ್ ಕಂಪನಿ ವರ್ಷಕ್ಕೆ 2 ಬಿಲಿಯನ್ ಲಸಿಕೆ ತಯಾರಿಸುವ ಸಾಮರ್ಥ್ಯ ಹೊಂದಿದ್ದರು ಪ್ರಸ್ತುತ 1.3 ಬಿಲಿಯನ್ ಲಸಿಕೆ ಉತ್ಪಾದಿಸುತ್ತಿದೆ ಎಂದು ನಾರ್ವೆ ಸಾರ್ವಜನಿಕ ಆರೋಗ್ಯ ಸಂಸ್ಥೆ ಹೇಳಿದೆ.

  ಇದನ್ನು ಓದಿ: Covid-19 Vaccine: ಭಾರತದ ಕೋವಿಡ್​ ಲಸಿಕೆಗಳು ಅಗ್ಗ ಮತ್ತು ಉತ್ತಮ ವದಂತಿಗಳಿಗೆ ಕಿವಿಗೊಡಬೇಡಿ; ಪ್ರಧಾನಿ ಮೋದಿ ಮನವಿ

  80 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರಿಗೆ ಲಸಿಕೆ ಹಾಕುವ ಸಂಬಂಧ ನಾರ್ವೆ ಸಾರ್ವಜನಿಕ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಅಲ್ಪಾವಧಿಯ ಜೀವಿತಾವಧಿ ಹೊಂದಿರುವವರು ಲಸಿಕೆಯಿಂದ ಹೆಚ್ಚಿನ ಪ್ರಯೋಜನ ಇಲ್ಲ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.

  ಡಿಸೆಂಬರ್ ಅಂತ್ಯದಿಂದ ನಾರ್ವೆಯಲ್ಲಿ ಈವರೆಗೆ ಕೊರೋನಾ ವೈರಸ್ ವಿರುದ್ಧ 30 ಸಾವಿರಕ್ಕೂ ಹೆಚ್ಚು ಮಂದಿ ಫೈಜರ್ ಲಸಿಕೆ ಅಥವಾ ಪರ್ಯಾಯ ಲಸಿಕೆ ಪಡೆದಿದ್ದಾರೆ. ಅದರಲ್ಲಿ 23 ಮಂದಿ ವಯೋವೃದ್ಧರು ಮೃತಪಟ್ಟಿದ್ದಾರೆ. ಹೀಗಾಗಿ ವೈದ್ಯರು ಈಗ ಯಾರೆಗೆ ಲಸಿಕೆ ನೀಡಬೇಕು ಎಂಬುದನ್ನು ಪರಿಗಣಿಸಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
  Published by:HR Ramesh
  First published: