HOME » NEWS » National-international » NORWAY POLICE SLAP RS 1 LAKH 75 THOUSAND FINE ON PRIME MINISTER FOR VIOLATING COVID RULES SKTV

ಬರ್ತಡೇ ಪಾರ್ಟಿ ಮಾಡಿ ಕೋವಿಡ್ ರೂಲ್ಸ್ ಬ್ರೇಕ್; ನಾರ್ವೆಯಲ್ಲಿ ಪ್ರಧಾನಿಗೇ 1.75 ಲಕ್ಷ ರೂ ದಂಡ ವಿಧಿಸಿದ ಪೋಲೀಸರು !

ಫೆಬ್ರವರಿ ತಿಂಗಳಲ್ಲಿ ನಾರ್ವೆ ದೇಶದ ಪ್ರಧಾನಿ ಎರ್ನಾ ಸೋಲ್ಬರ್ಗ್​ಗೆ 60 ವರ್ಷ ತುಂಬಿತು. ಈ ಸಂದರ್ಭಕ್ಕಾಗಿ ಆಕೆ ತನ್ನ ಪತಿಯ ಜೊತೆ ಸೇರಿ ಒಸ್ಲೊದ ರೆಸಾರ್ಟ್ ಒಂದರಲ್ಲಿ 13 ಜನ ಕುಟುಂಬ ಸದಸ್ಯರನ್ನು ಆಮಂತ್ರಿಸಿ ಪಾರ್ಟಿ ನೀಡಿದ್ದಾರೆ. ಆ ಪಾರ್ಟಿಯಲ್ಲಿ ಸಾಮಾಜಿಕ ಅಂತರ ಕಾಪಾಡದೇ ಎಲ್ಲರೂ ಒಬ್ಬರಿಗೊಬ್ಬರು ಹತ್ತಿರದಲ್ಲೇ ಇದ್ದರು.

Soumya KN | news18-kannada
Updated:April 11, 2021, 2:54 PM IST
ಬರ್ತಡೇ ಪಾರ್ಟಿ ಮಾಡಿ ಕೋವಿಡ್ ರೂಲ್ಸ್ ಬ್ರೇಕ್; ನಾರ್ವೆಯಲ್ಲಿ ಪ್ರಧಾನಿಗೇ 1.75 ಲಕ್ಷ ರೂ ದಂಡ ವಿಧಿಸಿದ ಪೋಲೀಸರು !
ನಾರ್ವೆಯ ಪ್ರಧಾನಿ ಎರ್ನಾ ಸೋಲ್​ಬರ್ಗ್
  • Share this:
ಓಸ್ಲೊ(ಏಪ್ರಿಲ್ 11): ದೇಶದ ಪ್ರಧಾನಿಗೇ ದಂಡ ವಿಧಿಸಿದ್ದು ಎಲ್ಲಾದರೂ ಕಂಡಿದ್ದೀರಾ? ನಮ್ಮ ದೇಶದಲ್ಲಿ ಅಂಥವೆಲ್ಲಾ ನಡೆಯೋದನ್ನ ಊಹಿಸೋಕೂ ಆಗುವುದಿಲ್ಲ. ಆದ್ರೆ ನಾರ್ವೆ ದೇಶದಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಕೋವಿಡ್ ನಿಯಮವನ್ನು ಉಲ್ಲಂಘಿಸಿದರು ಎನ್ನುವ ಕಾರಣಕ್ಕೆ ಅಲ್ಲಿನ ಪೋಲೀಸರು ದೇಶದ ಪ್ರಧಾನಿಗೇ ಭಾರೀ ದಂಡ ವಿಧಿಸಿದ್ದಾರೆ. ತನ್ನ ತಪ್ಪನ್ನು ಒಪ್ಪಿಕೊಂಡು ಪ್ರಧಾನಿ ದೇಶದ ನಾಗರಿಕರಲ್ಲಿ ಕ್ಷಮೆ ಕೂಡಾ ಯಾಚಿಸಿದ್ದಾರೆ.

ಆಗಿದ್ದಿಷ್ಟು…ಫೆಬ್ರವರಿ ತಿಂಗಳಲ್ಲಿ ನಾರ್ವೆ ದೇಶದ ಪ್ರಧಾನಿ ಎರ್ನಾ ಸೋಲ್ಬರ್ಗ್​ಗೆ 60 ವರ್ಷ ತುಂಬಿತು. ಈ ಸಂದರ್ಭಕ್ಕಾಗಿ ಆಕೆ ತನ್ನ ಪತಿಯ ಜೊತೆ ಸೇರಿ ಒಸ್ಲೊದ ರೆಸಾರ್ಟ್ ಒಂದರಲ್ಲಿ 13 ಜನ ಕುಟುಂಬ ಸದಸ್ಯರನ್ನು ಆಮಂತ್ರಿಸಿ ಪಾರ್ಟಿ ನೀಡಿದ್ದಾರೆ. ಆ ಪಾರ್ಟಿಯಲ್ಲಿ ಸಾಮಾಜಿಕ ಅಂತರ ಕಾಪಾಡದೇ ಎಲ್ಲರೂ ಒಬ್ಬರಿಗೊಬ್ಬರು ಹತ್ತಿರದಲ್ಲೇ ಇದ್ದರು.

ಇದು ಅಲ್ಲಿನ ಪೋಲೀಸರ ಗಮನಕ್ಕೆ ಬಂದಿದ್ದೇ ಅವರು ಪ್ರಧಾನಿ ಸೋಲ್ಬರ್ಗ್​ಗೆ 20,000 ನಾರ್ವೆಜಿಯನ್ ಕ್ರೌನ್ಸ್ ಅಂದ್ರೆ ಸುಮಾರು 1.75 ಲಕ್ಷ ರೂಪಾಯಿಯಷ್ಟು ದಂಡ ವಿಧಿಸಿದ್ದಾರೆ. ಕಳೆದ ಬಾರಿ ಕೋವಿಡ್ ಆರ್ಭಟಿಸಿದ್ದಾಗ ವಿಶ್ವದಲ್ಲಿ ಅತ್ಯಂತ ಕಡಿಮೆ ಸೋಂಕಿತರು ಇದ್ದ ಕೆಲವೇ ದೇಶಗಳಲ್ಲಿ ನಾರ್ವೆ ಕೂಡಾ ಒಂದಾಗಿತ್ತು.

ಆದ್ರೆ ಈ ಬಾರಿ ಜನವರಿ ತಿಂಗಳಿಂದ ಕೋವಿಡ್ ಸೋಂಕು ಅಲ್ಲಿಯೂ ವೇಗವಾಗಿ ಹರಡುತ್ತಿದೆ. ಹಾಗಾಗಿ ಪ್ರಧಾನಿ ಸೋಲ್ಬರ್ಗ್ ಅತ್ಯಂತ ಕಠಿಣ ನಿಯಮಗಳನ್ನು ಜಾರಿ ಮಾಡಿದ್ದಾರೆ. ಅದರಲ್ಲಿ 10 ಜನರಿಗಿಂತ ಹೆಚ್ಚಿನ ಜನ ಒಂದೆಡೆ ಸೇರುವಂತಿಲ್ಲ ಎನ್ನುವುದೂ ಒಂದು. ಆ ನಿಯಮವನ್ನು ಖುದ್ದು ಅವರೇ ಮುರಿದಿರುವುದರಿಂದ ದಂಡ ವಿಧಿಸಲಾಗಿದೆ ಎಂದಿದ್ದಾರೆ ಫೈನ್ ಹಾಕಿದ ಪೋಲಿಸ್ ಅಧಿಕಾರಿ ಓಲೆ ಸೋವೆರ್ಡ್.
Youtube Video

ಜನರಲ್ಲಿ ಪ್ರಧಾನಿ ಮತ್ತು ನಿಯಮ ಪಾಲನೆಯ ಬಗ್ಗೆ ಅರಿವು ಮೂಡಿಸಲು ಈ ಸನ್ನಿವೇಶ ಉದಾಹರಣೆಯಾಗಿ ಬಳಕೆಯಾಗುತ್ತದೆ. ನಿಯಮ ಮುರಿದರೆ ಅದು ದೇಶದ ಪ್ರಧಾನಿಯೇ ಆದರೂ ದಂಡ ತೆರಬೇಕು ಎನ್ನುವುದು ಅವರ ಅಭಿಪ್ರಾಯ.
Published by: Soumya KN
First published: April 11, 2021, 2:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories