HOME » NEWS » National-international » NORWAY PM GETS A FINE OF RS 1 75 LAKH FOR BREAKING COVID RULES DURING BIRTHDAY CELEBRATION SNVS

ಕೇವಲ 13 ಮಂದಿ ಸೇರಿ ಹುಟ್ಟುಹಬ್ಬ ಆಚರಿಸಿದ್ದಕ್ಕೆ ಪ್ರಧಾನಿಗೆ ಲಕ್ಷಾಂತರ ದಂಡ ವಿಧಿಸಿದ ಪೊಲೀಸರು

ನಾರ್ವೆ ದೇಶದಲ್ಲಿ ಒಂದು ಕಾರ್ಯಕ್ರಮದಲ್ಲಿ 10ಕ್ಕಿಂತ ಹೆಚ್ಚು ಮಂದಿ ಪಾಲ್ಗೊಳ್ಳುವಂತಿಲ್ಲ. ಆದರೆ, 13 ಮಂದಿ ಸೇರಿ ಹುಟ್ಟುಹಬ್ಬ ಆಚರಿಸಿದ್ದಕ್ಕೆ ಪ್ರಧಾನಿಗೆ 1.75 ಲಕ್ಷ ರೂ ದಂಡ ವಿಧಿಸಿದ್ದಾರೆ ಅಲ್ಲಿನ ಪೊಲೀಸರು.

news18
Updated:April 17, 2021, 1:06 PM IST
ಕೇವಲ 13 ಮಂದಿ ಸೇರಿ ಹುಟ್ಟುಹಬ್ಬ ಆಚರಿಸಿದ್ದಕ್ಕೆ ಪ್ರಧಾನಿಗೆ ಲಕ್ಷಾಂತರ ದಂಡ ವಿಧಿಸಿದ ಪೊಲೀಸರು
ನಾರ್ವೆ ಪಿಎಂ ಎರ್ನಾ ಸೋಲ್​ಬರ್ಗ್
  • News18
  • Last Updated: April 17, 2021, 1:06 PM IST
  • Share this:
ನವದೆಹಲಿ: ನಿಯಮ ಮಾಡಿದವರಿಗೆ ನಿಯಮ ಅನ್ವಯ ಆಗುವುದಿಲ್ಲ ಎಂಬಂತೆ ನಮ್ಮಲ್ಲಿ ರಾಜಕಾರಣಿಗಳು, ಅಧಿಕಾರಿಗಳು ವರ್ತಿಸುತ್ತಾರೆ. ಆದರೆ, ಕೆಲ ದೇಶಗಳಲ್ಲಿ ಬಹಳ ಕಟ್ಟುನಿಟ್ಟಿನ ಕಾನೂನುಗಳಿವೆ. ಅಷ್ಟೇ ಕಟ್ಟುನಿಟ್ಟಾಗಿ ಆ ಕಾನೂನುಗಳನ್ನ ಜಾರಿಗೆ ತರುತ್ತಾರೆ. ಅಂಥದ್ದೊಂದು ದೇಶಗಳಲ್ಲಿ ನಾರ್ವೆ ಕೂಡ ಒಂದು. ಇದಕ್ಕೆ ಒಂದು ನಿದರ್ಶನ ಅಲ್ಲಿನ ಪ್ರಧಾನಿಗೆ ಪೊಲೀಸರು ದಂಡ ವಿಧಿಸಿರುವುದು. ಸಾಮಾಜಿಕ ಅಂತರ ಪಾಲನೆ ಮಾಡಿಲ್ಲ ಎಂಬ ಕಾರಣಕ್ಕೆ ನಾರ್ವೆ ಪ್ರಧಾನ ಮಂತ್ರಿ ಎರ್ನಾ ಸೋಲ್ಬರ್ಗ್ ಅವರಿಗೆ ಪೊಲೀಸರು 20 ಸಾವಿರ ಕ್ರೌನ್ (ಸುಮಾರು 1.75 ಲಕ್ಷ ರೂ) ಹಣವನ್ನು ದಂಡವಾಗಿ ವಿಧಿಸಿದ್ದಾರೆ. ಈ ಘಟನೆ ಇತ್ತೀಚೆಗೆ ನಡೆದಿರುವುದು ವರದಿಯಾಗಿದೆ.

60 ವರ್ಷದ ಎರ್ನಾ ಸೋಲ್​ಬರ್ಗ್ ಎರಡು ಅವಧಿ ಪ್ರಧಾನಿಯಾದವರು. ಹಾಲಿ ಪ್ರಧಾನಿಯೂ ಆಗಿರುವ ಇವರು ಫೆಬ್ರವರಿ ತಿಂಗಳಲ್ಲಿ ರೆಸಾರ್ಟ್​ವೊಂದರಲ್ಲಿ ತಮ್ಮ 60ನೇ ಜನ್ಮದಿನ ಆಚರಿಸಿಕೊಂಡಿದ್ದರು. ಅದರಲ್ಲಿ ಅವರ ಕುಟುಂಬದ 13 ಮಂದಿ ಸದಸ್ಯರು ಪಾಲ್ಗೊಂಡಿದ್ದರು. ಇದು ನಾರ್ವೆ ದೇಶದಲ್ಲಿ ವಿಧಿಸಲಾಗಿರುವ ಕೋವಿಡ್ ನಿಯಮಗಳ ಉಲ್ಲಂಘನೆಯಾಗಿದೆ. ಅಲ್ಲಿ ಒಂದು ಕಾರ್ಯಕ್ರಮದಲ್ಲಿ 10ಕ್ಕಿಂತ ಹೆಚ್ಚು ಮಂದಿ ಪಾಲ್ಗೊಳ್ಳುವಂತಿಲ್ಲ ಎಂದು ಸರ್ಕಾರವೇ ಕಟ್ಟಳೆ ವಿಧಿಸಿದೆ. ಹೀಗಾಗಿ, ಪ್ರಧಾನಿ ಕುಟುಂಬದ ಕಾರ್ಯಕ್ರಮದಲ್ಲಿ 13 ಮಂದಿ ಪಾಲ್ಗೊಂಡಿದ್ದ ಅದೇ ರೂಪಿಸಿದ ನಿಯಮಗಳ ಉಲ್ಲಂಘನೆ ಆಗಿದೆ. ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿ ಎರ್ನಾ ಸೊಲ್ಬರ್ಗ್ ಅವರಿಗೆ ನಿಯಮದ ಅನುಸಾರ ದಂಡ ಹಾಕಿದ್ದಾರೆ.

ಪ್ರಧಾನಿಗೆ ದಂಡ ವಿಧಿಸಿದ ಕ್ರಮವನ್ನು ಅಲ್ಲಿನ ಪೊಲೀಸ್ ಮುಖ್ಯಸ್ಥರು ಸಮರ್ಥಿಸಿಕೊಂಡಿದ್ದಾರೆ. ಇಂಥ ಪ್ರಕರಣಗಳಲ್ಲಿ ಇಷ್ಟು ನಗಣ್ಯ ಉಲ್ಲಂಘನೆಗಳಿಗೆ ಸಾಮಾನ್ಯವಾಗಿ ದಂಡ ಹಾಕಲಾಗುವುದಿಲ್ಲ. ಆದರೆ, ನಿರ್ಬಂಧ ಹೇರಿರುವ ಸರ್ಕಾರದ ಮುಖ್ಯಸ್ಥರೇ ಉಲ್ಲಂಘನೆ ಮಾಡುವುದು ಸರಿ ಅಲ್ಲ. ಹೀಗಾಗಿ, ಅವರಿಗೆ ದಂಡ ಹಾಕುವುದು ಸರಿಯಾದ ಕ್ರಮವಾಗಿದೆ ಎಂದು ಪೊಲೀಸ್ ಮುಖ್ಯಸ್ಥರಾದ ಓಲೆ ಸೀವೆರುಡ್ ಹೇಳುತ್ತಾರೆ.

ಇದನ್ನೂ ಓದಿ: ಕುಂಭಮೇಳ ಸಾಂಕೇತಿಕವಾಗಿರಲಿ ಎಂದು ಪ್ರಧಾನಿ ಕೋರಿಕೆ; ಮುಂದಿನ ಶಾಹಿ ಸ್ನಾನ ಬೇಡವೆಂದು ಸಂತರ ಮನವಿ

ಅಂದಹಾಗೆ, ಯೂರೋಪ್ ಖಂಡದಲ್ಲಿರುವ ನಾರ್ವೆ ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊರೋನಾ ಕೇಸ್​ಗಳು ಕಂಡುಬಂದಿಲ್ಲ. ಅತ್ಯಂತ ಕಡಿಮೆ ಕೊರೋನಾ ಕೇಸ್ ದಾಖಲಾಗಿರುವ ದೇಶಗಳ ಪೈಕಿ ನಾರ್ವೆಯೂ ಒಂದು. ಆದರೂ ಅಲ್ಲಿ ಕೋವಿಡ್ ಬಿಗಿ ನಿಯಮಗಳು, ನಿರ್ಬಂಧಗಳು ಚಾಲನೆಯಲ್ಲಿವೆ. ಕೊರೋನಾ ಕೇಸ್​ಗಳು ಇನ್ನೂ ಇಳಿಮುಖವಾದರೆ ಮತ್ತು ಆಸ್ಪತ್ರೆಗಳಿಗೆ ಜನರು ದಾಖಲಾಗುವುದು ಕಡಿಮೆ ಆದಲ್ಲಿ ಮಾತ್ರ ಜೂನ್ ಅಂತ್ಯದ ವೇಳೆ ನಿರ್ಬಂಧಗಳನ್ನ ಸಡಿಲಿಸುವುದಾಗಿ ಅಲ್ಲಿನ ಆಡಳಿತ ಹೇಳಿದೆ.

ನಾರ್ವೆಯಲ್ಲಿ ಕೋವಿಡ್ ಕೇಸ್​ಗಳಿಗೆ ಹೋಲಿಸಿದರೆ ಆಸ್ಪತ್ರೆಗೆ ದಾಖಲಾಗುವವ ಅನುಪಾತ ಹೆಚ್ಚೇ ಇದೆ. ಇದು ಅಲ್ಲಿನ ಸರ್ಕಾರಕ್ಕೆ ಆತಂಕ ತಂದಿದೆ. ಹೀಗಾಗಿ, ಕಟ್ಟುನಿಟ್ಟಿನ ನಿರ್ಬಂಧಗಳನ್ನು ಅಷ್ಟು ಸುಲಭವಾಗಿ ಸಡಿಲಿಸುವ ಧೈರ್ಯ ಮಾಡುತ್ತಿಲ್ಲ.

ಇದನ್ನೂ ಓದಿ: Coronavirus Updates: ಭಾರತದಲ್ಲಿ ಕೊರೋನಾ ಹೆಚ್ಚಳ; ಯಾವ ರಾಜ್ಯಗಳಲ್ಲಿ ಏನೇನು ಕ್ರಮ ಕೈಗೊಳ್ಳಲಾಗುತ್ತಿದೆ?ನಾರ್ವೆಯಲ್ಲಿ ಈಗ ಕೋವಿಡ್ ಸೋಂಕಿನ ನಾಲ್ಕನೇ ಅಲೆ ಇದೆ. ಸುಮಾರು 50 ಲಕ್ಷದಷ್ಟು ಜನಸಂಖ್ಯೆ ಇರುವ ಆ ಪುಟ್ಟ ದೇಶದಲ್ಲಿ ಇದೂವರೆಗೆ ಅಲ್ಲಿ ದಾಖಲಾಗಿರುವ ಕೇಸ್​ಗಳ ಸಂಖ್ಯೆ 1 ಲಕ್ಷಕ್ಕಿಂತ ತುಸು ಹೆಚ್ಚು ಮಾತ್ರ. ಸಕ್ರಿಯೆ ಪ್ರಕರಣಗಳು ಸದ್ಯ 13 ಸಾವಿರದಷ್ಟಿವೆ. ಜನಸಂಖ್ಯೆಗೆ ಹೋಲಿಸಿದರೆ ಕೇಸ್​ಗಳು ಹೆಚ್ಚೇ ಇದೆಯಾದರೂ ಆತಂಕಕಾರಿ ಹಂತ ತಲುಪಿಲ್ಲ.

ನಾರ್ವೆ ಪ್ರಧಾನಿ ಕೋವಿಡ್ ನಿಯಮ ಉಲ್ಲಂಘಿಸಿದ್ದಕ್ಕೆ ದಂಡ ಕಕ್ಕಿದ ಸಂಗತಿಯನ್ನು ಭಾರತದ ಸ್ಥಿತಿಗೆ ಹೋಲಿಸಿದರೆ ತೀರಾ ಅಚ್ಚರಿ ಎನಿಸುವುದರಲ್ಲಿ ಅನುಮಾನ ಇಲ್ಲ. ಭಾರತದಲ್ಲಿ ಪ್ರಧಾನಿ ಸೇರಿದಂತೆ ಬಹುತೇಕ ರಾಜಕಾರಣಿಗಳು ಲಕ್ಷಾಂತರ ಮಂದಿಯೊಂದಿಗೆ ಸೇರಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಅನೇಕ ರಾಜಕಾರಣಿಗಳು ಮುಖಕ್ಕೆ ಮಾಸ್ಕ್ ಹಾಕುವುದಾಗಲೀ, ಸಾಮಾಜಿಕ ಅಂತರ ಪಾಲನೆ ಮಾಡುವುದಾಗಲೀ ಇಲ್ಲವೇ ಇಲ್ಲ ಎನ್ನುವಂಥ ಸ್ಥಿತಿ ಇದೆ. ಜನಸಾಮಾನ್ಯರ ಸ್ಥಿತಿಯಂತೂ ಕೇಳುವುದೇ ಬೇಡ.
Published by: Vijayasarthy SN
First published: April 17, 2021, 1:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories