ಪ್ರಪಂಚದಲ್ಲಿ ಇಂಥ ಘಟನೆಗಳು ನಡೆಯುತ್ತಾ ಎಂಬ ಅನುಮಾನಗಳು ಮೂಡುತ್ತೆ. ಇದೆನಪ್ಪಾ ಹೀಗೆ ಹೇಳುತ್ತಾ ಇದ್ದಾರೆ ಅಂದುಕೊಳ್ಳಬೇಡಿ. ಇಲ್ಲಿ ಹೇಳುವ ವಿಚಾರ ನಿಮ್ಮನ್ನು ಒಂದು ಕ್ಷಣ ದಂಗಾಗಿಸಬಹುದು. ತಪ್ಪು(Mistake) ಯಾರು ಮಾಡಲ್ಲ ಹೇಳಿ.. ಎಲ್ಲರೂ ತಿಳಿದು, ತಿಳಿಯದೆಯೋ ತಪ್ಪು ಮಾಡಿರುತ್ತೆವೆ. ಸಣ್ಣ ಪುಟ್ಟ ತಪ್ಪು ಮಾಡಿದಾಗ ಅಪ್ಪ, ಅಮ್ಮ ಬೈದು, ಹೊಡೆದು ಮತ್ತೆ ಹಾಗೇ ಮಾಡಬೇಡ ಎಂದು ಹೇಳುತ್ತಾರೆ. ದೊಡ್ಡ ತಪ್ಪುಗಳನ್ನು ಮಾಡಿದವರಿಗಾಗಿ ಕಾನೂನಿದೆ(Law), ಕೋರ್ಟ್(Court) ಇದೆ. ಆದರೆ ಇಲ್ಲಿ ಸಣ್ಣ ತಪ್ಪು ಮಾಡಿದ್ದಕ್ಕೆ ಘನಘೋರ ಶಿಕ್ಷೆಯೊಂದನ್ನು ನೀಡಲಾಗಿದೆ. ವಿದ್ಯಾರ್ಥಿಯೊಬ್ಬ ಸೌತ್ ಕೊರಿಯಾ(South Korea) ಭಾಷೆಯ ಸ್ಕ್ವಿಡ್ ಗೇಮ್ ನೋಡಿ, ಅದರ ನಕಲನ್ನು ತನ್ನ ಸ್ನೇಹಿತರಿಗೆ ಹಂಚಿದ್ದಕ್ಕೆ ಆತನಿಗೆ ಮರಣದಂಡನೆ ಶಿಕ್ಷೆಯನ್ನು ನೀಡಲಾಗಿದೆ. ಹೌದು, ಜನಪ್ರಿಯ ನೆಟ್ಫ್ಲಿಕ್ಸ್(Netflix) ಸರಣಿಯಾದ ಸ್ಕ್ವಿಡ್ ಗೇಮ್(Squid Game)ನ್ನು ಕಳ್ಳಸಾಗಣೆ ಮಾಡಿದ ಆರೋಪದಡಿ ಉತ್ತರ ಕೊರಿಯಾ(North Korea)ದಲ್ಲಿ ವ್ಯಕ್ತಿಯೊಬ್ಬನಿಗೆ ಮರಣದಂಡನೆ ವಿಧಿಸಲಾಗಿದೆ. ಹಾಗೇ, ಈ ವ್ಯಕ್ತಿ ವಿತರಿಸಿದ ಸ್ಕ್ವಿಡ್ ಗೇಮ್ ಶೋವನ್ನು ಅಕ್ರಮವಾಗಿ ವೀಕ್ಷಿಸಿದವರಿಗೆ ಕಠಿಣ ಶ್ರಮದ 5ವರ್ಷಗಳ ಜೈಲು ಶಿಕ್ಷೆ ನೀಡಲಾಗಿದೆ.
ಮರಣದಂಡನೆಗೆ ಗುರಿಯಾದ ವ್ಯಕ್ತಿ ಸ್ಕ್ವಿಡ್ ಗೇಮ್ ಶೋ ಪ್ರತಿಯನ್ನು ಚೀನಾದಿಂದ ಉತ್ತರ ಕೊರಿಯಾಕ್ಕೆ ತಂದಿದ್ದ. ಹಾಗೇ ಅದನ್ನು ಯುಎಸ್ಬಿ ಫ್ಲ್ಯಾಶ್ ಡ್ರೈವ್ ಮೂಲಕ ಮಾರಾಟ ಮಾಡಿದ್ದ ಎಂದು ರೇಡಿಯೋ ಫ್ರೀ ಏಷ್ಯಾ ವರದಿ ಮಾಡಿದೆ. ಕೊರೊನಾ ವೈರಸ್ ಹಿನ್ನಲೆ ಉತ್ತರ ಕೊರಿಯಾ ತನ್ನ ಗಡಿಗಳನ್ನು ಬಂದ್ ಮಾಡಿಕೊಂಡಿದೆ. ಈ ನಡುವೆ ವಿಧ್ಯಾರ್ಥಿಯೊಬ್ಬ ಸ್ಕ್ವಿಡ್ ಗೇಮ್ ನೋಡಬೇಕುಂದು ಆಸೆ ಹೊಂದಿದ್ದ. ಹರಸಾಹಸ ಪಟ್ಟು ಸೀರಿಸ್ನ ನಕಲಿ ಕಾಪಿ ಈತನ ಕೈ ಸೇರಿತ್ತು. ಇದನ್ನು ನೋಡಿ ಬಳಿಕ ತನ್ನ ಸ್ನೇಹಿತರಿಗೂ ಹಂಚಿದ್ದ. ಈ ಸುದ್ದಿ ಹೇಗೋ ಹೊರಬಂದಿತ್ತು. ಈ ಬಗ್ಗೆ ಅಲ್ಲಿ ವಿಚಾರಣೆ ನಡೆಸಲಾಯ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ