North Korea: ಉತ್ತರ ಕೋರಿಯಾದಲ್ಲಿ ಮತ್ತೊಂದು ಸೋಂಕಿನ ಸ್ಫೋಟ! ಯಾವುದು ಈ ಹೊಸ ಸೋಂಕು?

ಉತ್ತರ ಕೋರಿಯಾ ದೀರ್ಘಕಾಲದಿಂದ ಆಹಾರದ ಕೊರತೆ ಮತ್ತು ಕೋವಿಡ್ -19 ಸೋಂಕಿನ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದು ಚೇತರಿಸಿಕೊಳ್ಳಲಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಪತ್ತೆಯಾಗಿರುವ ಮತ್ತೊಂದು ಸೋಂಕಿನ ಆತಂಕ ದೇಶದ ಮೇಲೆ ಮತ್ತಷ್ಟು ಒತ್ತಡವನ್ನು ಉಂಟುಮಾಡಿದೆ ಎಂದು ಹೇಳಬಹುದು.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಕೋವಿಡ್ ಬಿಕ್ಕಟ್ಟು ಇನ್ನೂ ಪರಿಪೂರ್ಣವಾಗಿ ಮಾಯವಾಗದೆ ಇರುವ ಈ ಸಂದರ್ಭದಲ್ಲಿ ಉತ್ತರ ಕೋರಿಯಾದಲ್ಲಿ (North Korea) ಗುರುವಾರದಂದು ಕೃಷಿ ಪ್ರದೇಶ ಒಂದರಲ್ಲಿ ಗುರುತಿಸಲಾಗದ ಕರುಳಿನ ಸಾಂಕ್ರಾಮಿಕ ರೋಗವೊಂದು ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಈಗಾಗಲೇ ಉತ್ತರ ಕೋರಿಯಾ ದೀರ್ಘಕಾಲದಿಂದ ಆಹಾರದ ಕೊರತೆ (Lack Of Food) ಮತ್ತು ಕೋವಿಡ್ -19 ಸೋಂಕಿನ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದು ಚೇತರಿಸಿಕೊಳ್ಳಲಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಪತ್ತೆಯಾಗಿರುವ ಮತ್ತೊಂದು ಸೋಂಕಿನ ಆತಂಕ ದೇಶದ ಮೇಲೆ ಮತ್ತಷ್ಟು ಒತ್ತಡವನ್ನು ಉಂಟುಮಾಡಿದೆ ಎಂದು ಹೇಳಬಹುದು. ಈ ಸಂದರ್ಭದಲ್ಲಿ ದೇಶದ ನಾಯಕನಾಗಿರುವ ಕಿಮ್ ಜೊಂಗ್ ಉನ್ (Kim Jong Un) Acute Enteric Epidemic ರೋಗದಿಂದ ಬಳಲುತ್ತಿರುವ ರೋಗಿಗಳಿಗೆ ಸಹಾಯ ಮಾಡಲಿದೆ ಎನ್ನಲಾಗಿದೆ.

ತೀವ್ರಸಾಂಕ್ರಾಮಿಕ ರೋಗ
ಈ ನಿಟ್ಟಿನಲ್ಲಿ ಅದು ಎಷ್ಟು ಜನ ಈ ಸೋಂಕಿನಿಂದ ಪೀಡಿತರಾಗಿದ್ದಾರೆ ಎಂಬ ಅಂಕಿ ಸಂಖ್ಯೆಯನ್ನು ಬಹಿರಂಗಪಡಿಸಿಲ್ಲ. ಎಂಟರಿಕ್ ಎಂಬುದು ಜಠರಗರುಳಿನ ಪ್ರದೇಶವನ್ನು ಸೂಚಿಸುತ್ತದೆ.

ಕಾಲರಾ ಅಥವಾ ಟೈಫಾಯಿಡ್ ಎಂದು ಶಂಕಿಸಲಾದ ಸೋಂಕು
ದಕ್ಷಿಣ ಕೊರಿಯಾದ ಸಚಿವಾಲಯದ ಆಂತರಿಕ ವ್ಯವಹಾರಗಳನ್ನು ನಿರ್ವಹಿಸುವ ಅಧಿಕಾರಿಯೊಬ್ಬರು, ಕಾಲರಾ ಅಥವಾ ಟೈಫಾಯಿಡ್ ಎಂದು ಶಂಕಿಸಲಾದ ಸೋಂಕೊಂದು ಏಕಾಏಕಿ ಪತ್ತೆಯಾಗಿದ್ದು ಸದ್ಯ ಸರ್ಕಾರವು ಅದರ ಮೇಲ್ವಿಚಾರಣೆ ನಡೆಸುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Police Dog: ಪೊಲೀಸ್ ಡಾಗ್​ಗೆ ಕಣ್ಣಿನ ಸಮಸ್ಯೆ, ಚೆನ್ನೈ ಟ್ರಿಪ್ ಅನುಮತಿಗೆ ಕಾಯುತ್ತಿದೆ ಶ್ವಾನ

ಉತ್ತರ ಕೋರಿಯಾವು ತನ್ನ ಮೊದಲ ಕೋವಿಡ್ -19 ನೊಂದಿಗೆ ಹೋರಾಟ ನಡೆಸುತ್ತಿರುವ ಈ ಸಂದರ್ಭದಲ್ಲಿ ಏಕಾಏಕಿ ಮತ್ತೊಂದು ಗುರುತಿಸಲಾಗದ ಸೋಂಕು ಪತ್ತೆಯಾಗಿರುವುದು ನಿಜಕ್ಕೂ ದೇಶದ ಮೇಲೆ ದೊಡ್ಡ ಬರೆ ಹಾಕಿದಂತಾಗಿದ್ದು ಈಗಾಗಲೇ ದೇಶದಲ್ಲಿ ಉದ್ಭವಾಗಿರುವ ಲಸಿಕೆಗಳು ಮತ್ತು ವೈದ್ಯಕೀಯ ಸರಬರಾಜುಗಳ ಕೊರತೆಯ ಮಧ್ಯೆ ಇದು ಕಳೆದ ತಿಂಗಳು ಒಂದು ರೀತಿಯ ತುರ್ತು ಪರಿಸ್ಥಿತಿ ಘೋಷಿಸಿದಂತಾಗಿದೆ.

ದಕ್ಷಿಣ ಕೊರಿಯಾದ ಬೇಹುಗಾರಿಕಾ ಸಂಸ್ಥೆ ಈ ಹಿಂದೆಯೇ ದೇಶದಲ್ಲಿ ಕೊರೋನಾ ಸ್ಫೋಟ ಸಂಭವಿಸುದಕ್ಕಿಂತ ಮುಂಚೆಯೇ ಟೈಫಾಯಿಡ್‌ನಂತಹ ಜಲಸಂಬಂಧಿ ಕಾಯಿಲೆಗಳು, ಉತ್ತರ ಕೊರಿಯಾದಲ್ಲಿ ವ್ಯಾಪಕವಾಗಿ ಹರಡಿರುವ ಬಗ್ಗೆ ತಿಳಿಸಿತ್ತು.

ಆಹಾರದ ಕೊರತೆಯ ಮೇಲೆ ಸಂಭವನೀಯ ಪರಿಣಾಮ ಬೀರಿದ ಹೊಸ ಕಾಯಿಲೆ
"ಉತ್ತರ ಕೊರಿಯಾದಲ್ಲಿ ಟೈಫಾಯಿಡ್ ಮತ್ತು ಶಿಗೆಲೊಸಿಸ್‌ನಂತಹ ಕರುಳಿನ ಕಾಯಿಲೆಗಳು ವಿಶೇಷವಾಗಿ ಹೊಸದಲ್ಲ. ಆದರೆ ದೇಶವು ಈಗಾಗಲೇ ಕೋವಿಡ್ -19 ನಿಂದ ಹೆಣಗಾಡುತ್ತಿರುವ ಸಮಯದಲ್ಲಿ ಇದು ಬರುತ್ತಿದೆ" ಎಂದು ಸಿಯೋಲ್ ನ ಹನ್ಯಾಂಗ್ ವಿಶ್ವವಿದ್ಯಾಲಯದ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಶಿನ್ ಯಂಗ್-ಜಿಯೋನ್ ಹೇಳಿದ್ದಾರೆ.

ಈಗ ಸ್ಫೋಟಗೊಂಡಿರುವ ಸೋಂಕನ್ನು ನಿಭಾಯಿಸಲು ದಕ್ಷಿಣ ಕೊರಿಯಾ ಉತ್ತರದೊಂದಿಗೆ ಸಹಕರಿಸಲು ಸಿದ್ಧವಾಗಿದೆ, ಅಲ್ಲದೆ ಕೋವಿಡ್ ಲಸಿಕೆಗಳನ್ನು ಒದಗಿಸುವ ಸಿಯೋಲ್‌ನ ಹಿಂದಿನ ಪ್ರಸ್ತಾವನೆಯೂ ಉತ್ತರ ಕೋರಿಯಾದ ಮುಂದಿದ್ದು ಅದಕ್ಕೆ ಇನ್ನು ಉತ್ತರದ ಪ್ಯೊಂಗ್ಯಾಂಗ್ ನಿಂದ ಸ್ಪಂದನೆ ಸಿಕ್ಕಿಲ್ಲ ಎಂದು ಇನ್ನೊಬ್ಬ ದ.ಕೋರಿಯಾ ಅಧಿಕಾರಿ ಹೇಳಿದ್ದಾರೆ.

ದಕ್ಷಿಣ ಹ್ವಾಂಘೇ ಪ್ರಾಂತ್ಯವು ಉತ್ತರ ಕೊರಿಯಾದ ಪ್ರಮುಖ ಕೃಷಿ ಪ್ರದೇಶವಾಗಿದ್ದು, ದೇಶದಲ್ಲಿ ಈಗಾಗಲೇ ಉದ್ಭವವಾಗಿರುವ ಭೀಕರ ಆಹಾರದ ಕೊರತೆಯ ಮೇಲೆ ಸಂಭವನೀಯ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಬೆಳೆಗಳ ಮೂಲಕ ಸೋಂಕುಗಳು ಹರಡುವ ಸಾಧ್ಯತೆಯು ಕಡಿಮೆ ಕಂಡುಬಂದರೂ, ರೋಗವು ನೀರಿನಿಂದ ಹರಡುವ ಸಾಧ್ಯತೆಯಿರುವುದರಿಂದ ನೀರು ಸರಬರಾಜು ಮೂಲಗಳನ್ನು ಸೋಂಕುರಹಿತಗೊಳಿಸುವುದು ಮುಖ್ಯವಾಗಿದೆ ಎಂದು ಗಚೋನ್ ವಿಶ್ವವಿದ್ಯಾಲಯದ ಗಿಲ್ ವೈದ್ಯಕೀಯ ಕೇಂದ್ರದ ಸಾಂಕ್ರಾಮಿಕ ರೋಗ ತಜ್ಞ ಇಒಮ್ ಜುಂಗ್-ಸಿಕ್ ಹೇಳಿದ್ದಾರೆ.

ಉತ್ತರ ಕೋರಿಯಾ ಸರ್ಕಾರವು ಬಿಡುಗಡೆ ಮಾಡುತ್ತಿರುವ ಅಂಕಿಅಂಶಗಳ ಮೇಲೆ ಶಂಕೆ
ಸದ್ಯ ಪ್ಯೊಂಗ್ಯಾಂಗ್ ಪ್ರಾಂತವು ಜ್ವರ ಬಂದ ರೋಗಿಗಳ ಸಂಖ್ಯೆಯನ್ನು ಕೋವಿಡ್ ರೋಗಿಗಳು ಎಂದು ನಿರ್ದಿಷ್ಟಪಡಿಸದೆ ಪ್ರತಿದಿನ ಪ್ರಕಟಿಸುತ್ತಿದೆ, ಏಕೆಂದರೆ ಅದರ ಬಳಿ ಕೋವಿಡ್ ಪರೀಕ್ಷೆ ಮಾಡಲು ಸಾಕಷ್ಟು ಪರೀಕ್ಷಾ ಕಿಟ್‌ಗಳಿರದಿರುವುದೇ ಕಾರಣ ಎನ್ನಲಾಗಿದೆ.

ಅಲ್ಲದೆ ಉತ್ತರ ಕೋರಿಯಾ ಸರ್ಕಾರವು ತನ್ನ ನಿಯಂತ್ರಿತ ಮಾಧ್ಯಮಗಳ ಮೂಲಕ ಬಿಡುಗಡೆ ಮಾಡುತ್ತಿರುವ ಅಂಕಿಅಂಶಗಳ ಮೇಲೆಯೂ ತಜ್ಞರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Financial Crisis: ಪಾಪರ್ ಪಾಕಿಸ್ತಾನ! ಚಹಾ ಖರೀದಿಗೂ ದುಡ್ಡಿಲ್ಲವಂತೆ!

ಉತ್ತರ ಕೋರಿಯಾ ಗುರುವಾರದಂದು ಜ್ವರ ರೋಗಲಕ್ಷಣವುಳ್ಳ 26,010 ಜನರನ್ನು ವರದಿ ಮಾಡಿದೆ, ಏಪ್ರಿಲ್ ಅಂತ್ಯದಿಂದ ದೇಶಾದ್ಯಂತ ಒಟ್ಟು ಜ್ವರ ರೋಗಿಗಳ ಸಂಖ್ಯೆ 4.56 ಮಿಲಿಯನ್ ಗೆ ತಲುಪಿದೆ. ಏಕಾಏಕಿ ಸಂಬಂಧಿಸಿರುವ ಸಾವಿನ ಸಂಖ್ಯೆ 73 ಆಗಿದೆ. ಈ ನಡುವೆ ಉತ್ತರ ಕೋರಿಯಾ ಸರ್ಕಾರವು ಕೋವಿಡ್ ಅಲೆಯು ಕಡಿಮೆಯಾಗುವ ಲಕ್ಷಣಗಳನ್ನು ತೋರಿಸಿದೆ ಎಂದು ಎಂದು ಹೇಳಿದೆಯಾದರೂ, ವಿಶ್ವ ಆರೋಗ್ಯ ಸಂಸ್ಥೆ ಈ ತಿಂಗಳ ಆರಂಭದಲ್ಲಿ ಪ್ಯೊಂಗ್ಯಾಂಗ್‌ನ ಹೇಳಿಕೆಗಳ ಮೇಲೆ ಅನುಮಾನಗಳನ್ನು ವ್ಯಕ್ತಪಡಿಸುತ್ತ ಅಲ್ಲಿನ ಪರಿಸ್ಥಿತಿಯು ಹದಗೆಡುತ್ತಿದೆ ಎಂದು ತಾನು ನಂಬಿರುವುದಾಗಿ ಹೇಳಿದೆ.
Published by:Ashwini Prabhu
First published: