Kim Jong Un: ಸರ್ವಾಧಿಕಾರಿಯ ಮತ್ತೊಂದು ವಿಚಿತ್ರ ಆದೇಶ: ತನ್ನ ಸ್ಟೈಲ್​ ಕಾಪಿ ಮಾಡ್ತಾರೆ ಎಂದು ಲೆದರ್​ ಜಾಕೆಟ್​​ ಬ್ಯಾನ್!

Kim Jong Un: ಇದೀಗ ಜನರು ಲೆದರ್​ ಜಾಕೆಟ್​(Leather Jacket)ಗಳನ್ನು ಧರಿಸದಂತೆ ದೇಶಾದ್ಯಂತ ಬ್ಯಾನ್ ಮಾಡಲಾಗಿದೆ. ಹೌದು, ಕೇಳಲು ವಿಚಿತ್ರ ಎನಿಸಿದರು ಇದು ಸತ್ಯ. ಇಂಥದ್ದೊಂದು ಆದೇಶವನ್ನು ಉತ್ತರಕೊರಿಯಾದಲ್ಲಿ ಜಾರಿಗೊಳಿಸಲಾಗಿದೆ. ಅದಕ್ಕೆ ಕಾರಣ ಕೇಳಿದ್ರೆ ಶಾಕ್​ ಆಗುತ್ತಿರ. 

ಕಿಮ್​ ಜಾಂಗ್​ ಉನ್​

ಕಿಮ್​ ಜಾಂಗ್​ ಉನ್​

  • Share this:
ಲೀಡರ್(Leader) ಎಂದರೆ ಹೇಗಿರಬೇಕು. ಒಂದು ಟೀಂ ಚೆನ್ನಾಗಿ ಕೆಲಸ ಮಾಡಬೇಕೆಂದರೆ ಅದಕ್ಕೆ ಟೀಂ(Team) ಲೀಡರ್​ ಪ್ರಮುಖ ಪಾತ್ರ ವಹಿಸುತ್ತಾರೆ. ತಾನೂ ಮುಂದೆ ನಿಂತು ತನ್ನ ಟೀಂ ಅನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವವನೇ ಲೀಡರ್. ಟೀಂವೊಂದಕ್ಕೆ ಲೀಡರ್​ ಆಗಬೇಕಾದರೆ ಇಷ್ಟೆಲ್ಲಾ ಅರ್ಹತೆಗಳು ಇರಬೇಕು. ಇನ್ನೂ ದೇಶವನ್ನು ಆಳುವ ಲೀಡರ್​ ಹೇಗಿರಬೇಕು ಹೇಳಿ. ಆದರೆ, ಉತ್ತರ ಕೊರಿಯಾ(North Korea) ದೇಶದ ಲೀಡರ್​ ಆಗಿರುವ ಕಿಮ್​ ಜಾಂಗ್​ ಉನ್(Kim Jong Un) ಕಂಡರೆ ಅಲ್ಲಿನ ಜನ ಹೆದರಿ ಸಾಯುತ್ತಾರೆ. ಆ ರೀತಿಯ ಕಠಿಣ ನಿಯಮಗಳನ್ನು ಉತ್ತರ ಕೊರಿಯಾದಲ್ಲಿ ಜಾರಿಗೆ ತರಲಾಗಿದೆ. ಕಿಮ್​ ಜಾಂಗ್​ ಉನ್​ ರೀತಿಯಲ್ಲೇ ಎಲ್ಲರೂ ಹೇರ್ ಸ್ಟೈಲ್(Hairstyle)​ ಮಾಡಿಕೊಳ್ಳಬೇಕು. ಅವರನ್ನು ನೇರವಾಗಿ ಇರಲಿ, ಅವರ ಪ್ರತಿಮೆ(Statue)ಯನ್ನು ತಲೆ ಎತ್ತಿ ನೋಡುವಂತಿಲ್ಲ. ಉತ್ತರ ಕೊರಿಯಾ  ತನ್ನ ವಿಚಿತ್ರ ನಿಯಮಗಳಿಗೆ ಹೆಸರುವಾಸಿಯಾಗಿದೆ. ಇದೀಗ ಮತ್ತೆ ಇದು ಇಂತಹದ್ದೇ ವಿಚಿತ್ರ ನಿಯಮವನ್ನು ಜಾರಿಗೆ ತಂದಿದೆ. ಈ ರೂಲ್ಸ್(Rules)​ ಕಂಡು ಅಲ್ಲಿನ ಜನತೆ ಶಾಕ್​ ಆಗಿದ್ದಾರೆ. ಅಲ್ಲಿಯವರಿಗೆ ಇದು ಕಾಮನ್​. ಹೊರಗಿನರಿಗೆ ಇದ್ಯಾವ ಸೀಮೆ ರೂಲ್ಸ್​ ಎಂಬ ಆಲೋಚನೆ ಬರುತ್ತೆ. ಸರ್ವಾಧಿಕಾರಿ ಕಿಂಗ್​ ಜಾಂಗ್​ ಉನ್​ ಸದಾ ಈ ರೀತಿಯ ವಿಚಿತ್ರ ಆದೇಶಗಳನ್ನೇ ನೀಡುತ್ತಾರೆ. ಮನೆಗಳಲ್ಲಿ ಬೆಕ್ಕು(Cats) ಸಾಕದಂತೆ ಇತ್ತೀಚೆಗೆ ಆದೇಶ ಹೊರಡಿಸಲಾಗಿತ್ತು. ಇದೀಗ ಜನರು ಲೆದರ್​ ಜಾಕೆಟ್​(Leather Jacket)ಗಳನ್ನು ಧರಿಸದಂತೆ ದೇಶಾದ್ಯಂತ ಬ್ಯಾನ್ ಮಾಡಲಾಗಿದೆ. ಹೌದು, ಕೇಳಲು ವಿಚಿತ್ರ ಎನಿಸಿದರು ಇದು ಸತ್ಯ. ಇಂಥದ್ದೊಂದು ಆದೇಶವನ್ನು ಉತ್ತರಕೊರಿಯಾದಲ್ಲಿ ಜಾರಿಗೊಳಿಸಲಾಗಿದೆ. ಅದಕ್ಕೆ ಕಾರಣ ಕೇಳಿದ್ರೆ ಶಾಕ್​ ಆಗುತ್ತಿರ. 

ತನ್ನ ಸ್ಟೈಲ್​ ಕಾಪಿ ಮಾಡ್ತರಂತ ಲೆದರ್​ ಜಾಕೆಟ್​  ಬ್ಯಾನ್​!

ಉದ್ದನೆಯ ಚರ್ಮದ ಟ್ರೆಂಚ್ ಕೋಟ್​​ಗಳನ್ನು  ದೇಶದಲ್ಲಿ ಯಾರೂ ಮಾರಾಟ ಮಾಡುವಂತಿಲ್ಲ ಹಾಗೂ ಧರಿಸುವಂತಿಲ್ಲ. ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್  ಅವರ ಫ್ಯಾಷನ್ ಅನ್ನು ಯಾರೂ ನಕಲು ಮಾಡಬಾರದು ಎಂದು ಈ ನಿಯಮವನ್ನು ಜಾರಿಗೆ ತರಲಾಗಿದೆ. ಕಿಮ್ ಕೆ ಟಿವಿಯಲ್ಲಿ ಕಾಣಿಸಿಕೊಂಡ ನಂತರ 2019 ರಲ್ಲಿ ಲೆದರ್ ಟ್ರೆಂಚ್ ಕೋಟ್‌ಗಳು ಜನಪ್ರಿಯವಾಗಿವೆ. ಇದರ ನಂತರ, ಉತ್ತರ ಕೊರಿಯಾದಲ್ಲಿ ಅಂತಹ ಕೋಟ್ ಧರಿಸಲು ಫ್ಯಾಷನ್ ಇತ್ತು. ಹೆಚ್ಚಿನ ಸಂಖ್ಯೆಯ ಜನರು ಚೀನಾದಿಂದ ಅಂತಹ ಕೋಟ್‌ಗಳನ್ನು ಆರ್ಡರ್ ಮಾಡಲು ಪ್ರಾರಂಭಿಸಿದರು.

ಇದನ್ನು ಓದಿ : `2025ರವೆರೆಗೆ ಕಡಿಮೆ ತಿನ್ನಿ’: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್​ ಜಾಂಗ್​​ ಉನ್​ ಎಚ್ಚರಿಕೆ

ಎಲ್ಲರೂ ಅದೇ ಕೋಟ್​ ಧರಿಸಿದರೆ ಕಿಮ್​ಗೆ ಅವಮಾನವಂತೆ!

ಜನಸಾಮನ್ಯರು ಕಿಮ್​ ಜಾಂಗ್​ ಉನ್​ ಅವರಂತೆಯೇ ಜಾಕೆಟ್​ ಧರಿಸಿ ಅವಮಾಮ ಮಾಡಲಾಗಿದ್ಯಂತೆ. ಈ ವರ್ಷದ ಜನವರಿಯಲ್ಲಿ 8 ನೇ ಪಕ್ಷದ ಕಾಂಗ್ರೆಸ್‌ನಲ್ಲಿ ಮಿಲಿಟರಿ ಪರೇಡ್‌ನಲ್ಲಿ (Military Parade), ಎಲ್ಲಾ ಹಿರಿಯ ಅಧಿಕಾರಿಗಳು ಅಂತಹ ಕೋಟ್‌ಗಳನ್ನು ಧರಿಸಿದ್ದರು. ಕೋಟ್‌ನ ವಿಷಯವು ಎಷ್ಟರಮಟ್ಟಿಗೆ ಹೋಯಿತು ಎಂದರೆ ಚರ್ಮದ ಕೋಟ್ ಅನ್ನು ಶಕ್ತಿಯ ಸಂಕೇತವೆಂದು ಗುರುತಿಸಲಾಯಿತು. ಹೀಗಾಗಿ ತನ್ನ ಸ್ಟೈಲ್​ ಎಲ್ಲ ಕಡೆ ಬಳಸಲಾಗುತ್ತಿದೆ. ನನ್ನ ಸ್ಟೈಲ್​ ಯಾರು ಕಾಪಿ ಮಾಡಬಾರದೆಂದು ಈ ರೀತಿಯ ಆದೇಶಗಳನ್ನು ಹೊರಡಿಸಲಾಗಿದೆ.

ಇದನ್ನು ಓದಿ: ತೂಕ ಇಳಿಸಿಕೊಂಡ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ - ಹುಟ್ಟಿಕೊಂಡ ಹಲವಾರು ಪ್ರಶ್ನೆಗಳು

ನಕಲಿ ಲೆದರ್​​ ಜಾಕೆಟ್​ಗಳು ವಶ!

ಖಾಸಗಿ ಬಟ್ಟೆ ವ್ಯಾಪಾರಿಗಳು ಈ ವರ್ಷದ ಸೆಪ್ಟೆಂಬರ್‌ನಿಂದ ಕೃತಕ ಚರ್ಮವನ್ನು ಆಮದು ಮಾಡಿಕೊಳ್ಳಲು ಆರಂಭಿಸಿದರು.ಇದೆ ವೇಳೆ ಲೆದರ್ ಕೋಟ್‌ಗಳ ವಿನ್ಯಾಸವನ್ನು ನಕಲಿಸಿದ್ದಾರೆ. ಈಗ ಅದನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು. ಇದನ್ನು ಅರಿತ ಅಲ್ಲಿನ ಪೊಲೀಸರು ಮಾರುಕಟ್ಟೆಗಳಿಗೆ ತೆರಳಿ ನಕಲಿ ಕೋಟ್​​ಗಳನ್ನು ವಶ ಪಡಿಸಿಕೊಂಡಿದ್ದಾರೆ. ಚರ್ಮದ ಕೋಟ್​ ಧರಿಸದಂತೆ ಆದೇಶ ಸಹ ನೀಡಿದ್ದಾರೆ.
Published by:Vasudeva M
First published: