La Nina: ಲಾ ನಿನಾ ತರಲಿರುವ ಶೀತಚಳಿಗಾಲದಿಂದ ದೇಶಗಳಲ್ಲಿ ಉಂಟಾಗುವ ಚಳಿಗಾಲದ ಪ್ರಭಾವಗಳೇನು?

La Nina: ಕಳೆದ ಚಳಿಗಾಲದಲ್ಲಿ ಬೇಡಿಕೆ ಹೆಚ್ಚಾದ ಕಾರಣ ಸಾಕಷ್ಟು ಇಂಧನವಿಲ್ಲದೆ ಅನಾನುಕೂಲತೆಗಳು ಹೆಚ್ಚಾಗಿದ್ದವು ಇದರಿಂದ ದುಬಾರಿ ದ್ರವೀಕೃತ ನೈಸರ್ಗಿಕ ಅನಿಲ ಸಾಗಣೆಗಳ ಖರೀದಿ ಮಾಡಬೇಕಾಯಿತು. ಚಳಿಗಾಲದ ತಿಂಗಳಿಗಾಗಿ ಸಿದ್ಧತೆಗಳನ್ನು ನಡೆಸಲು ವ್ಯಾಪಾರ ಸಚಿವಾಲಯವು ಈಗಾಗಲೇ ಪ್ರಮುಖ ವಿದ್ಯುತ್, ಅನಿಲ ಮತ್ತು ತೈಲ ಸಂಸ್ಥೆಗಳೊಂದಿಗೆ ಸಭೆ ನಡೆಸುತ್ತಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತೀವ್ರ ಚಳಿಗಾಲಕ್ಕೆ(Winter) ಎಡೆಮಾಡಿಕೊಡುವ ಹವಾಮಾನ ಸಂಭವನೀಯತೆ ಮುಂದೆರಗಲಿದ್ದು ಏಷ್ಯಾದ ಶಕ್ತಿ ವಿಷಮ ಸ್ಥಿತಿಗೆ ವಿನಾಶಕಾರಿಯಾಗಲಿರುವ ನಿರೀಕ್ಷೆ ಇದೆ. ಸಮುದ್ರ ತಳದಿಂದ ಶೀತದ ಹಾಗೂ ಆಳವಾದ ನೀರನ್ನು ಹೊರತರಲು ಸಮಭಾಜಕ ಟ್ರೇಡ್ ಮಾರುತಗಳು (ಪೂರ್ವದಿಂದ ಬೀಸುವ ಗಾಳಿ) ಬಲಗೊಂಡಾಗ ರೂಪುಗೊಳ್ಳುವ ಲಾ ನಿನಾ (La Nina) ಮಾದರಿಯು ಪೆಸಿಫಿಕ್‌ನಲ್ಲಿ(pacific) ಹೊರಹೊಮ್ಮಿದೆ. ಇದು ಸಾಮಾನ್ಯವಾಗಿ ಉತ್ತರ ಗೋಳಾರ್ಧದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ತಾಪಮಾನವನ್ನು ಉಂಟುಮಾಡುತ್ತದೆ ಹಾಗೂ ಶೀತ ಗಾಳಿಯ ಚಳಿಗಾಲದ ಕುರಿತು ಎಚ್ಚರಿಕೆಯನ್ನು ನೀಡುತ್ತದೆ.

ಹಲವಾರು ರಾಷ್ಟ್ರಗಳು ಅದರಲ್ಲೂ ಚೀನಾ ದೇಶ ಹೆಚ್ಚುತ್ತಿರುವ ಇಂಧನ ಬೆಲೆಗಳೊಂದಿಗೆ ಸೆಣಸಾಡುತ್ತಿದ್ದು ಇನ್ನು ಕೆಲವು ದೇಶಗಳಿಗೆ ಭಾರೀ ಉದ್ಯಮಗಳಿಗೆ ಪೂರೈಕೆಯನ್ನೊದಗಿಸುವ ವಿದ್ಯುತ್ ಕೊರತೆ ಹಾಗೂ ನಿರ್ಬಂಧಗಳಂತಹ ಸಮಸ್ಯೆಗಳ ಸುಳಿಗಳಲ್ಲಿ ಸಿಲುಕಿಕೊಂಡಿವೆ. ಕಲ್ಲಿದ್ದಲು ಹಾಗೂ ಅನಿಲ ಬೆಲೆಗಳು ಈಗ ಹೆಚ್ಚಿದ್ದು ಚಳಿಗಾಲದ ಕಹಿ ತಾಪಮಾನವು ಬೇಡಿಕೆಯನ್ನು ಹೆಚ್ಚಿಸುವುದರೊಂದಿಗೆ ಮತ್ತಷ್ಟು ಲಾಭವನ್ನುಂಟು ಮಾಡಲಿದೆ.

"ಈಶಾನ್ಯ ಏಷ್ಯಾದಾದ್ಯಂತ ಈ ಚಳಿಗಾಲದಲ್ಲಿ ತಾಪಮಾನವು ಸಾಮಾನ್ಯಕ್ಕಿಂತ ತಂಪಾಗಿರುತ್ತದೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ" ಎಂದು ಡೇಟಾ ಪೂರೈಕೆದಾರ DTN ನಲ್ಲಿನ ಹವಾಮಾನ ಕಾರ್ಯಾಚರಣೆಗಳ ಉಪಾಧ್ಯಕ್ಷ ರೆನ್ನಿ ವಾಂಡೆವೆಜ್ ತಿಳಿಸಿದ್ದಾರೆ. ಶಕ್ತಿಯ ಎಷ್ಟು ಪ್ರಮಾಣ ಅಗತ್ಯವಿದೆ ಎಂಬುದನ್ನು ಊಹಿಸಲು ಹವಾಮಾನ ಮುನ್ಸೂಚನೆಯ ಡೇಟಾ ನಿರ್ಣಾಯಕ ಅಂಶವಾಗಿದೆ ಎಂದು ರೆನ್ನಿ ತಿಳಿಸಿದ್ದಾರೆ.
ಪ್ರಮುಖ ದೇಶಗಳ ಮೇಲೆ ಹವಾಮಾನ ಮುನ್ಸೂಚನೆಯ ಅಂಕಿ ಅಂಶಗಳ ಪ್ರಭಾವಗಳೇನು ಎಂಬುದನ್ನು ತಿಳಿದುಕೊಳ್ಳೋಣ

ಚೀನಾ:
ದೇಶದ ಹವಾಮಾನ ಕೇಂದ್ರ ತಿಳಿಸಿರುವ ಮಾಹಿತಿಯ ಪ್ರಕಾರ ಪೂರ್ವ ಚೀನಾದ ಬಹುತೇಕ ಭಾಗಗಳಲ್ಲಿ ಕಳೆದ ವಾರದ ಆರಂಭದಲ್ಲಿಯೇ ತಾಪಮಾನವು ಕುಸಿದಿದೆ ಹಾಗೂ ಕೆಲವು ಪ್ರದೇಶಗಳು ಸಾಮಾನ್ಯಕ್ಕಿಂತ ತಂಪಾಗಿವೆ ಎಂದಾಗಿದೆ. ಹೀಲಾಂಗ್‌ಜಿಯಾಂಗ್, ಶಾಂಕ್ಸಿ ಮೊದಲಾದ ಪ್ರಾಂತ್ಯಗಳು ಕಳೆದ ವರ್ಷಕ್ಕೆ ಹೋಲಿಸಿದಾಗ 13 ದಿನಗಳ ಹಿಂದೆಯೇ ಚಳಿಗಾಲದ ಋತುವನ್ನು ಆರಂಭಿಸಿವೆ.

ಸ್ಥಳೀಯ ಸರಕಾರ-ನಿಯಂತ್ರಿತ ವ್ಯವಸ್ಥೆಗಳು ಹೆಚ್ಚಿನ ಪ್ರದೇಶಗಳಲ್ಲಿ ಮನೆಗಳನ್ನು ಬೆಚ್ಚಗಿಡಲು ಕಲ್ಲಿದ್ದಲು ಹಾಗೂ ಅನಿಲ ಚಾಲಿತ ಬೆಂಕಿ ವ್ಯವಸ್ಥೆಯನ್ನು ಮಾಡಲಾಗಿದೆ. ಜಾಗತಿಕ ತಾಪಮಾನ ಏರಿಕೆಯ ಪರಿಣಾಮವಾಗಿ ವಿಪರೀತ ಹವಾಮಾನ ಪರಿಸ್ಥಿತಿಗಳು ಹೆಚ್ಚು ನಿಯಮಿತವಾಗಿ ಸಂಭವಿಸಬಹುದು ಎಂದು ನಾನ್‌ಜಿಂಗ್ ವಿಶ್ವವಿದ್ಯಾಲಯದ ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನದ ವಾತಾವರಣದ ವಿಜ್ಞಾನ ಪ್ರಾಧ್ಯಾಪಕ ಝಿ ಕ್ಸಿಫೆಯ್ ತಿಳಿಸಿದ್ದಾರೆ. ಹೆಚ್ಚಿನ ತಾಪಮಾನ ಕುಸಿತಗಳಿಗೆ ಶೀತ ಅಲೆಗಳು ಕಾರಣವಾಗಬಹುದಾಗಿದ್ದು ಅಸಾಮಾನ್ಯ ವಾತಾವರಣ ಬೆಚ್ಚಗಿರಿಸುವ ಘಟನೆಗಳು ಸಂಭವಿಸಬಹುದು ಎಂದು ತಿಳಿಸಿದ್ದಾರೆ

ಇದನ್ಮೂ ಓದಿ: ಮಹಿಳೆಯರ ಮೇಲಿನ ದೌರ್ಜನ್ಯ ತಡೆ, ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯ; ಪಿಣರಾಯಿ ವಿಜಯನ್

ಜಪಾನ್:
ಶರತ್ಕಾಲ-ಚಳಿಗಾಲದ ಅವಧಿಯಲ್ಲಿ ಲಾ ನಿನಾದ (La Nina) 60% ಸಾಧ್ಯತೆಯ ಮುನ್ಸೂಚನೆಯನ್ನು ಮೊದಲೇ ನೀಡಿದ್ದ ಜಪಾನ್‌ನ ಹವಾಮಾನ ಸಂಸ್ಥೆಯು, ಜಪಾನ್ ಮುಂದಿನ ತಿಂಗಳು ಸಾಮಾನ್ಯ ತಾಪಮಾನಕ್ಕಿಂತ ಕಡಿಮೆ ತಾಪಮಾನಕ್ಕೆ ಒಳಗಾಗಲಿದೆ ಎಂದು ತಿಳಿಸಿದೆ. ಇಂಧನ ಬಿಕ್ಕಟ್ಟಿನಿಂದ ತುಲನಾತ್ಮಕವಾಗಿ ಪ್ರತ್ಯೇಕಿಸಲಾದ ರಾಷ್ಟ್ರವು ಸಗಟು ವಿದ್ಯುತ್ ಬೆಲೆಗಳ ಏರಿಕೆಯಲ್ಲಿ ಆಳವಾದ ಸ್ಥಗಿತವನ್ನು ಕಂಡುಕೊಂಡ ನಂತರ ಜಾಗರೂಕವಾಗಿದೆ.

ಕಳೆದ ಚಳಿಗಾಲದಲ್ಲಿ ಬೇಡಿಕೆ ಹೆಚ್ಚಾದ ಕಾರಣ ಸಾಕಷ್ಟು ಇಂಧನವಿಲ್ಲದೆ ಅನಾನುಕೂಲತೆಗಳು ಹೆಚ್ಚಾಗಿದ್ದವು ಇದರಿಂದ ದುಬಾರಿ ದ್ರವೀಕೃತ ನೈಸರ್ಗಿಕ ಅನಿಲ ಸಾಗಣೆಗಳ ಖರೀದಿ ಮಾಡಬೇಕಾಯಿತು. ಚಳಿಗಾಲದ ತಿಂಗಳಿಗಾಗಿ ಸಿದ್ಧತೆಗಳನ್ನು ನಡೆಸಲು ವ್ಯಾಪಾರ ಸಚಿವಾಲಯವು ಈಗಾಗಲೇ ಪ್ರಮುಖ ವಿದ್ಯುತ್, ಅನಿಲ ಮತ್ತು ತೈಲ ಸಂಸ್ಥೆಗಳೊಂದಿಗೆ ಸಭೆ ನಡೆಸುತ್ತಿದೆ ಹಾಗೂ ಜಪಾನ್‌ನ ಪ್ರಮುಖ ವಿದ್ಯುತ್ ಪೂರೈಕೆದಾರರು ಹೊಂದಿರುವ ಎಲ್‌ಎನ್‌ಜಿ (LNG) ಪೂರೈಕೆಗಳು ಪ್ರಸ್ತುತ ನಾಲ್ಕು ವರ್ಷಗಳ ಸರಾಸರಿಗಿಂತ 24% ರಷ್ಟು ಹೆಚ್ಚಿವೆ.

ದಕ್ಷಿಣ ಕೊರಿಯಾ:
ದಕ್ಷಿಣ ಕೊರಿಯಾ ಚಳಿಗಾದ ಮೊದಲಾರ್ಧದಲ್ಲಿ ತಂಪಾದ ವಾತಾವರಣನ್ನು ಪಡೆಯಲಿದೆ ಹಾಗೂ ದೇಶದ ಹವಾಮಾನ ವರದಿಯ ಪ್ರಕಾರ ಲಾ ನಿನಾ ಪರಿಣಾಮಗಳಿಗೆ ದೇಶವು ಒಳಗಾಗುವ ಸಾಧ್ಯತೆ ಇದೆ. ಕಳೆದ ವರ್ಷಕ್ಕೆ ಹೋಲಿಸಿದಾಗ ಈ ಬಾರಿ 15 ದಿನಕ್ಕಿಂತ ಮುಂಚಿತವಾಗಿ ದೇಶವು ಮೊದಲ ಹಿಮವರ್ಷವನ್ನು ಕಂಡಿದೆ.
ಈ ಸಮಯದಲ್ಲಿ ಇಂಧನ ಪೂರೈಕೆಯನ್ನು ಹೆಚ್ಚಿಸಲು ಹಾಗೂ ಹೆಚ್ಚಿನ ಬೆಲೆಗಳ ಪರಿಣಾಮವನ್ನು ಕಡಿಮೆ ಮಾಡಲು ಸರಕಾರವು ಈಗಾಗಲೇ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇಂಧನ ತೆರಿಗೆಗಳು ಹಾಗೂ LNG ಆಮದು ಸುಂಕಗಳನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಲಾಗುತ್ತದೆ ಎಂದು ಉಪ ಹಣಕಾಸು ಸಚಿವ ಲೀ ಇಯೊಗ್-ವೀನ್ ತಿಳಿಸಿದ್ದಾರೆ.

ಭಾರತ:
ಉತ್ತರ ಭಾರತದ ಕೆಲವು ಪ್ರದೇಶಗಳಲ್ಲಿ ತಾಪಮಾನವು ಜನವರಿ ಹಾಗೂ ಫೆಬ್ರವರಿ ಮಾಸಗಳಲ್ಲಿ 3 ಡಿಗ್ರಿ ಸೆಲ್ಸಿಯಸ್ (37 ಫ್ಯಾರನ್‌ಹೀಟ್) ಗೆ ಇಳಿಯುವ ನಿರೀಕ್ಷೆಯಿದೆ. ಇತರ ರಾಷ್ಟ್ರಗಳಿಗೆ ಹೋಲಿಸಿದಾಗ ತಂಪಿನ ಹವಾಮಾನದಿಂದ ಹವಾನಿಯಂತ್ರಣಕ್ಕೆ ಬೇಡಿಕೆ ಕಡಿಮೆಯಾಗುವುದರಿಂದ ಶಕ್ತಿಯ ಕಡಿಮೆ ಬಳಕೆಗೆ ಕಾರಣವಾಗುತ್ತದೆ.

ಹೆಚ್ಚು ಪ್ರಮುಖವಾಗಿ, ಮುಂಗಾರು ಋತುವಿನ ಅಂತ್ಯದಲ್ಲಿ ದೇಶವು ಶುಷ್ಕ ಸಮಯವನ್ನು ನಿರೀಕ್ಷಿಸುತ್ತದೆ. ಪ್ರಮುಖ ಕಲ್ಲಿದ್ದಲು ಗಣಿಗಾರಿಕೆಗಳು ಇತ್ತೀಚಿನ ತಿಂಗಳುಗಳಲ್ಲಿ ಅಪಾರ ನಷ್ಟಕ್ಕೆ ಕಾರಣವಾಗಿದ್ದು ಇದು ರಾಷ್ಟ್ರದ ಸುಮಾರು 70% ರಷ್ಟು ವಿದ್ಯುತ್ ಉತ್ಪಾದಿಸಲು ಬಳಸುವ ಇಂಧನದ ಪೂರೈಕೆಯ ಮೇಲೆ ಒತ್ತಡವನ್ನುಂಟು ಮಾಡಿದ್ದವು.

ಲಾ ನಿನಾ ಅಲ್ಲದೆ ಚಳಿಗಾಲದ ಹವಾಮಾನದ ಮೇಲೆ ಪ್ರಭಾವ ಬೀರುವ ಇನ್ನೂ ಕೆಲವು ಅಂಶಗಳಿವೆ ಎಂದು ಹವಾಮಾನ ನಿರ್ದೇಶಕ ಟಾಡ್ ಕ್ರಾಫೋರ್ಡ್ ತಿಳಿಸಿದ್ದಾರೆ. ವಾಮಾನ ಬದಲಾವಣೆಯು ಆರ್ಕ್ಟಿಕ್‌ನ ಕಾರಾ ಸಮುದ್ರದಲ್ಲಿ ಸಮುದ್ರದ ಮಂಜುಗಡ್ಡೆಯ ಕೊರತೆಗೆ ಕಾರಣವಾಗಿದ್ದು ಇದು ಆ ಪ್ರದೇಶದಲ್ಲಿ ಹೆಚ್ಚಿನ ಒತ್ತಡದ ಜಲಾನಯನಕ್ಕೆ ಕಾರಣವಾಗಬಹುದು ಎಂದು ತಿಳಿಸಿದ್ದಾರೆ. ಇದರಿಂದ ಈಶಾನ್ಯ ಏಷ್ಯಾದಾದ್ಯಂತ ತಂಪಾದ ಹವಾಮಾನ ಉಂಟಾಗುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ನಿಮ್ಮ ಬಳಿ ದೇವಿಯ ಚಿತ್ರ ಇರೋ 5-10 ರೂ ನಾಣ್ಯ ಇದ್ಯಾ? ಈಗಲೇ 10 ಲಕ್ಷ ರೂಪಾಯಿ ಪಡೆಯಬಹುದು!

ಧ್ರುವದಲ್ಲಿ ತಣ್ಣಗಾಗುವ ಗಾಳಿಯ ಕವಚವು ಧ್ರುವದ ಸುಳಿಯಿಂದಾಗಿ ಚಳಿಗಾಲದ ಆರಂಭದಲ್ಲಿ ಸಾಮಾನ್ಯಕ್ಕಿಂತ ದುರ್ಬಲವಾಗಬಹುದಾದ್ದರಿಂದ ಇದು ಶೀತದ ಗಾಳಿಯನ್ನು ದಕ್ಷಿಣ ಭಾಗಕ್ಕೆ ಬೀಸುವಂತೆ ಮಾಡುತ್ತದೆ ಎಂದು  ಕ್ರಾಫೋರ್ಡ್ ತಿಳಿಸಿದ್ದಾರೆ.
Published by:Sandhya M
First published: