• Home
  • »
  • News
  • »
  • national-international
  • »
  • ಟ್ವಿಟರ್​ನಲ್ಲಿ ಟಾಪ್​ ಟ್ರೆಂಡಿಂಗ್​ ಆದ NoModiNoTwitter ಹ್ಯಾಷ್​ ಟ್ಯಾಗ್​​

ಟ್ವಿಟರ್​ನಲ್ಲಿ ಟಾಪ್​ ಟ್ರೆಂಡಿಂಗ್​ ಆದ NoModiNoTwitter ಹ್ಯಾಷ್​ ಟ್ಯಾಗ್​​

ಪ್ರಧಾನಿ ನರೇಂದ್ರ ಮೋದಿ.

ಪ್ರಧಾನಿ ನರೇಂದ್ರ ಮೋದಿ.

ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣದಿಂದ ಹೊರ ಬರುವುದಾಗಿ ಘೋಷಣೆ ಮಾಡುತ್ತಿದ್ದಂತೆ ಟ್ವೀಟರ್​ನಲ್ಲಿ NoModiNoTwitter ಹ್ಯಾಷ್​ ಟ್ಯಾಗ್​ ಟ್ರೆಂಡಿಂಗ್​ ಆಗಿದೆ.

  • Share this:

ನವದೆಹಲಿ (ಮಾ.03): ಪೌರತ್ವದ ಕಿಚ್ಚಿನ ಜೊತೆ ಕೊರೊನ ವೈರಸ್​ ನರ್ತನಕ್ಕೆ ದೇಶ ನಲುಗುತ್ತಿದೆ. ಈ ನಡುವೆ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಿಂದ ಪ್ರಧಾನಿ ನರೇಂದ್ರ ಮೋದಿ ಹೊರಬರುವುದಾಗಿ ಘೋಷಣೆ ಮಾಡುವ ಮೂಲಕ ತಮ್ಮ ಅಭಿಮಾನಿಗಳಿಗೆ ಶಾಕ್​ ನೀಡಿದ್ದಾರೆ.


ಸೋಮವಾರ ರಾತ್ರಿ ತಮ್ಮೆಲ್ಲಾ ಸಾಮಾಜಿಕ ಜಾಲತಾಣ ಖಾತೆಗಳಾದ ಟ್ವಿಟರ್​, ಫೇಸ್​ಬುಕ್​, ಯೂಟ್ಯೂಬ್​ ಹಾಗೂ ಇನ್ಸ್ಟಾಗ್ರಾಂಗಳಿಗೆ ಇದೇ ಭಾನುವಾರ ಗುಡ್​ಬೈ ಹೇಳುವುದಾಗಿ ಅವರು ಟ್ವೀಟ್​ ಮೂಲಕ ತಿಳಿಸಿದ್ದಾರೆ.


ಅವರ ಈ ಟ್ವೀಟ್​ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದು, ನಮ್ಮೆಲ್ಲರ ಸ್ಪೂರ್ತಿಯಾಗಿರುವ ನೀವು ಟ್ವಿಟರ್​ನಿಂದ ಹೊರಗೆ ಹೋಗಬೇಡಿ ಎಂದು ಮನವಿ ಮಾಡಿದ್ದಾರೆ. ದಿನಬೆಳಗಾಗುವುದರಲ್ಲಿ #NoModiNoTwitter ಹ್ಯಾಷ್​ ಟ್ಯಾಗ್​ ಟ್ರೆಂಡ್​ ಆಗಿದೆ. ಮೋದಿ ಇಲ್ಲದಿದ್ದರೆ, ಟ್ವಿಟರೇ ಇಲ್ಲ. ಈ ನಿರ್ಧಾರ ಕೈಗೊಳ್ಳಬೇಡಿ ಎಂದು ಕೇಳಿಕೊಂಡಿದ್ದಾರೆ.ಇನ್ನು ನರೇಂದ್ರ ಮೋದಿಯವರ ಈ ನಿರ್ಧಾರವನ್ನು ಕೆಲವರು ವ್ಯಂಗ್ಯಮಾಡಿದ್ದು, ಪ್ರಚಾರಕ್ಕಾಗಿ ಮೋದಿ ಮಾಡುತ್ತಿರುವ ನಾಟಕ ಇದು. ಪೌರತ್ವ ಕಿಚ್ಚನ್ನು ಪರಿಹಾರ ಮಾಡಲಾಗದೇ ವಿಷಯ ಮರೆಮಾಚಲು ಮತ್ತು ಜನರ ಗಮನ ಬೇರೆಡೆ ಸೆಳೆಯಲು ಈ ನಿರ್ಧಾರ ಪ್ರಕಟಿಸಿದ್ದಾರೆ ಎಂದು ವಿಪಕ್ಷಗಳು ಸೇರಿದಂತೆ ಕೆಲವರು ಟೀಕಿಸಿದ್ದಾರೆ.


ದೆಹಲಿ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಟ್ವೀಟ್​ ಮಾಡಿದ ಹಿನ್ನೆಲೆ ನರೇಂದ್ರ ಮೋದಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದಿದ್ದಾರೆ.

ವಿಶ್ವದ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ನರೇಂದ್ರ ಮೋದಿ ಇನ್ಸ್​ಸ್ಟಾಗ್ರಾಂನಲ್ಲಿ 30 ಮಿಲಿಯನ್ (3 ಕೋಟಿ) ಫಾಲೋವರ್ಸ್ ದಾಟಿದ ಜಾಗತಿಕ ನಾಯಕ ಎಂಬ ಹೆಗ್ಗಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಪಾತ್ರರಾಗಿದ್ದಾರೆ. ಟ್ವಿಟರ್​​​ನಲ್ಲಿ 50 ಮಿಲಿಯನ್ (5 ಕೋಟಿ) ಅನುಯಾಯಿಗಳು ಹೊಂದಿರುವ ನರೇಂದ್ರ ಮೋದಿ, ಇನ್​​ಸ್ಟಾಗ್ರಾಂನಲ್ಲೂ 30 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ ಎನ್ನುವುದು ಐತಿಹಾಸಿಕ ದಾಖಲೆ.


Published by:Seema R
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು