ರಫೇಲ್ ಲೂಟಿಗೆ ಬಾಗಿಲು ತೆರೆದಿದ್ದೇ ಪ್ರಧಾನಿ ಮೋದಿ; ರಾಹುಲ್ ಗಾಂಧಿ ವಾಗ್ದಾಳಿ

ಈ ಬಗ್ಗೆ ಟ್ವೀಟ್​ ಕೂಡ ಮಾಡಿರುವ ರಾಹುಲ್ ಗಾಂಧಿ, ಚೌಕಿದಾರರಾಗಿರುವ ಮೋದಿ ಅವರೇ ಅನಿಲ್ ಅಂಬಾನಿ ಭಾರತೀಯ ವಾಯುಸೇನೆಯಿಂದ 30 ಸಾವಿರ ಕೋಟಿ ಲೂಟಿ ಮಾಡಲು ಬಾಗಿಲು ತೆರೆದುಕೊಟ್ಟಿದ್ದಾರೆ ಎಂದು ಟೀಕಿಸಿದ್ದಾರೆ.

sushma chakre | news18
Updated:February 11, 2019, 12:51 PM IST
ರಫೇಲ್ ಲೂಟಿಗೆ ಬಾಗಿಲು ತೆರೆದಿದ್ದೇ ಪ್ರಧಾನಿ ಮೋದಿ; ರಾಹುಲ್ ಗಾಂಧಿ ವಾಗ್ದಾಳಿ
ರಾಹುಲ್​ ಗಾಂಧಿ
sushma chakre | news18
Updated: February 11, 2019, 12:51 PM IST
ನವದೆಹಲಿ (ಫೆ. 11): ರಫೇಲ್ ಹಗರಣದ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಇದೀಗ ಕಾಂಗ್ರೆಸ್​ ಅಧ್ಯಕ್ಷ ರಾಹುಲ್ ಗಾಂಧಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಫೇಲ್ ಯುದ್ಧವಿಮಾನ ಡೀಲ್​ನಲ್ಲಿ ಲೂಟಿ ಮಾಡಲು ಬಾಗಿಲು ತೆರೆದವರೇ ಮೋದಿ ಎಂದು ಟೀಕಿಸಿದ್ದಾರೆ.

ಪ್ರತಿಯೊಂದು ರಕ್ಷಣಾ ಒಪ್ಪಂದದಲ್ಲೂ ಭ್ರಷ್ಟಾಚಾರ ನಿಗ್ರಹ ಷರತ್ತು ಇರುತ್ತದೆ. ಆದರೆ, ಪ್ರಧಾನಿ ಮೋದಿ ಅವರು ಭ್ರಷ್ಟಾಚಾರ ನಿಗ್ರಹ ಷರತ್ತನ್ನು ಉಲ್ಲಂಘಿಸಿದ್ದಾರೆ. ನರೇಂದ್ರ ಮೋದಿ ಅವರು ಲೂಟಿ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಚೌಕಿದಾರ ಚೋರ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ನವದೆಹಲಿಯ ಆಂಧ್ರಭವನದ ಹೊರಗೆ ನಡೆಯುತ್ತಿರುವ ಚಂದ್ರಬಾಬು ನಾಯ್ಡು ಅವರ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ರಾಹುಲ್ ಗಾಂಧಿ ಮಾತನಾಡಿದ್ದಾರೆ.

ಆಂಧ್ರಕ್ಕೆ ವಿಶೇಷ ಮಾನ್ಯತೆ ನೀಡಲು ಆಗ್ರಹಿಸಿ ಉಪವಾಸ ಸತ್ಯಾಗ್ರಹಕ್ಕೆ ಕುಳಿತ ಸಿಎಂ ಚಂದ್ರಬಾಬು ನಾಯ್ಡು

ಈ ಬಗ್ಗೆ ಟ್ವೀಟ್​ ಕೂಡ ಮಾಡಿರುವ ರಾಹುಲ್ ಗಾಂಧಿ, ಚೌಕಿದಾರರಾಗಿರುವ ಮೋದಿ ಅವರೇ ಅನಿಲ್ ಅಂಬಾನಿ ಅವರಿಗೆ ಭಾರತೀಯ ವಾಯುಸೇನೆಯಿಂದ 30 ಸಾವಿರ ಕೋಟಿ ಲೂಟಿ ಮಾಡಲು ಬಾಗಿಲು ತೆರೆದುಕೊಟ್ಟಿದ್ದಾರೆ ಎಂದು ಟೀಕಿಸಿದ್ದಾರೆ.

ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಕೂಡ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ರಫೇಲ್ ಹಗರಣ ಕೇಂದ್ರ ಸರ್ಕಾರದ ಯೋಚನೆಗಿಂತಲೂ ವೇಗವಾಗಿ ಭೇದಿಸಲ್ಪಡುತ್ತಿದೆ. ಇದರ ಹಿಂದಿರುವ ಸೂತ್ರಧಾರರು ಹೊರಬರಲೇಬೇಕು ಎಂದು ಹೇಳಿದ್ದಾರೆ. ಯಾವುದೇ ಖಚಿತತೆಯಿಲ್ಲದೆ, ಬ್ಯಾಂಕ್​ ಭರವಸೆಗಳೂ ಇಲ್ಲದೆ, ಮುದ್ರಿತ ದಾಖಲೆಗಳೂ ಇಲ್ಲದೆ ಇಷ್ಟೊಂದು ದೊಡ್ಡ ಮೊತ್ತವನ್ನು ಅಡ್ವಾನ್ಸ್​ ರೂಪದಲ್ಲಿ ನೀಡಲು ಹೇಗೆ ಸಾಧ್ಯ? ಎಂದು ಪಿ. ಚಿದಂಬರಂ ಟ್ವೀಟ್​ ಮಾಡಿದ್ದಾರೆ.

First published:February 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...