ಲೈಂಗಿಕ ಕ್ರಿಯೆಗೆ ನಿರಾಕರಿಸಿದ ಬಾಲಕನ ಜನನಾಂಗವನ್ನು ಗಾಯಗೊಳಿಸಿದ ಮಹಿಳೆ

Seema.R | news18
Updated:October 10, 2018, 12:38 PM IST
ಲೈಂಗಿಕ ಕ್ರಿಯೆಗೆ ನಿರಾಕರಿಸಿದ ಬಾಲಕನ ಜನನಾಂಗವನ್ನು ಗಾಯಗೊಳಿಸಿದ ಮಹಿಳೆ
ಸಾಂದರ್ಭಿಕ ಚಿತ್ರ
  • News18
  • Last Updated: October 10, 2018, 12:38 PM IST
  • Share this:
ನ್ಯೂಸ್​ 18 ಕನ್ನಡ

ನೋಯ್ಡಾ(ಅ.10) : ತನ್ನ ಲೈಂಗಿಕ ಆಸಕ್ತಿಯನ್ನು ಪೂರೈಸಲು ನಿರಾಕರಿಸಿದ ಹಿನ್ನಲೆಯಲ್ಲಿ ಮಹಿಳೆಯೊಬ್ಬಳು 13 ವರ್ಷದ ಬಾಲಕನ ಜನನಾಂಗವನ್ನು ಬಿಸಿ ಇಕ್ಕಳದಿಂದ ಗಾಯಗೊಳಿಸಿರುವ ಘಟನೆ ಗ್ರೇಟರ್​ ನೋಯ್ಡಾದಲ್ಲಿ ನಡೆದಿದೆ.

ಚಪುರೌಲ್​ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಘಟನೆ ಬಳಿಕ ಮಹಿಳೆ ನಾಪತ್ತೆಯಾಗಿದ್ದಾಳೆ. ತನ್ನ ಲೈಂಗಿಕ ಬಯಕೆ ಈಡೇರಿಸಿಕೊಳ್ಳಲು ತನ್ನ ನೆರೆಮನೆಯ ಮಹಿಳೆ ತನ್ನ ಮಗನನ್ನು ಬಳಕೆ ಮಾಡಿಕೊಂಡಿದ್ದಾಳೆ ಎಂದು ಬಾಲಕನ ತಾಯಿ ಆರೋಪಿಸಿದ್ದಾಳೆ.

ಮಹಿಳೆ ಶುಕ್ರವಾರ ಮನೆಯಲ್ಲಿ ಒಬ್ಬಳೆ ಇದ್ದಾಗ ಬಾಲಕನನ್ನು ಕರೆದುಕೊಂಡು ಹೋಗಿ   ಈ ಘಟನೆ ನಡೆಸಿದ್ದಾಳೆ . ಮಹಿಳೆ ಮೇಲೆ ಪೋಕ್ಸೋ ಕಾಯ್ದೆಯನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರಕರಣ ಸಂಬಂಧ ಮಂಗಳವಾರ ಪೊಲೀಸರು ಎಫ್​ಐಆರ್​ ದಾಖಲಿಸಿದ್ದು, ಐಪಿಸಿ ಸೆಕ್ಷನ್​​ 323 (ಸ್ವಯಂ ಪ್ರೇರಿತ ಗಾಯ), 324 (ಸಲಕರಣೆಗಳಿಂದ ಗಾಯಗೊಳಿಸುವಿಕೆ) , 342 , 363 (ಅಪಹರಣ), 506 (ಕ್ರಿಮಿನಲ್​ ಬೆದರಿಕೆ) ಕಾಯ್ದೆಗಳಾನುಸರ ಪ್ರಕರಣ ದಾಖಲಿಸಲಾಗಿದೆ.

ಎಲ್ಲಾ ಪ್ರಮುಖ ಆಯಾಮಗಳಲ್ಲಿ ಪೊಲೀಸರು ತನಿಖೆ ಶುರುಮಾಡಿದ್ದು, ಪ್ರಕರಣವನ್ನು ತಡವಾಗಿ ಪೊಲೀಸರ ಗಮನಕ್ಕೆ ತಂದಿರುವುದು ಕೂಡ ಹಲವು ಅನುಮಾನಗಳಿಗೂ ಗುರಿಮಾಡಿದೆ ಎನ್ನಲಾಗಿದೆ.

 
First published: October 10, 2018, 10:56 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading