HOME » NEWS » National-international » NOIDA TOP COP SAYS POLICE TO BE POLITE NOT STOP THOSE CARRYING ESSENTIAL ITEMS DURING CORONAVIRUS LOCKDOWN SNVS

ಲಾಕ್ ಡೌನ್ ವೇಳೆ ಅಗತ್ಯ ವಸ್ತು ಸಾಗಿಸುತ್ತಿರುವವರನ್ನು ತಡೆಯದಿರಿ: ನೋಯ್ಡಾ ಪೊಲೀಸರಿಗೆ ಸೂಚನೆ

ಬಡವರಿಗೆ ಮತ್ತು ನಿರ್ಗತಿಕರಿಗೆ ಸಹಾಯ ಮಾಡಲು ಸೂಚನೆ ಸಿಕ್ಕ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಪೊಲೀಸರು ಸಾವಿರಾರು ಜನರಿಗೆ ಆಹಾರ ಮತ್ತು ಪಡಿತರ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

news18
Updated:March 30, 2020, 1:45 PM IST
ಲಾಕ್ ಡೌನ್ ವೇಳೆ ಅಗತ್ಯ ವಸ್ತು ಸಾಗಿಸುತ್ತಿರುವವರನ್ನು ತಡೆಯದಿರಿ: ನೋಯ್ಡಾ ಪೊಲೀಸರಿಗೆ ಸೂಚನೆ
ಪ್ರಾತಿನಿಧಿಕ ಚಿತ್ರ
  • News18
  • Last Updated: March 30, 2020, 1:45 PM IST
  • Share this:
ನೋಯ್ಡಾ: ಲಾಕ್ ಡೌನ್ ಸಮಯದಲ್ಲಿ ಜನರೊಂದಿಗೆ ಸಭ್ಯವಾಗಿ ವರ್ತಿಸದಂತೆ ಮತ್ತು ಅಗತ್ಯ ಸರಕುಗಳನ್ನು ಸಾಗಿಸುವವರನ್ನು ತಡೆಯದಂತೆ ಉತ್ತರ ಪ್ರದೇಶದ ಗೌತಮ್ ಬುದ್ಧನಗರ ಪೊಲೀಸ್ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಡವರಿಗೆ ಮತ್ತು ನಿರ್ಗತಿಕರಿಗೆ ಸಹಾಯ ಮಾಡಲು ಪೊಲೀಸ್ ಸಿಬ್ಬಂದಿಗೆ ಸೂಚನೆ ಇದೆ. ಪೊಲೀಸರು ನಿನ್ನೆ ಭಾನುವಾರ 2 ಸಾವಿರ ಜನರಿಗೆ ಆಹಾರ ಮತ್ತು ಪಡಿತರವನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ ಎಂದು ಪೊಲೀಸ್ ಆಯುಕ್ತ ಅಲೋಕ್ ಸಿಂಗ್ ಹೇಳಿದ್ಧಾರೆ.

ಜನರೊಂದಿಗೆ ಸಭ್ಯವಾಗಿ ವರ್ತಿಸುವಂತೆ ಸೂಚನೆ ನೀಡಲಾಗಿದ್ದು, ಅಗತ್ಯ ವಸ್ತುಗಳನ್ನು ಸಾಗಿಸುವ ವಾಹನಗಳನ್ನು ನಿಲ್ಲಿಸದಂತೆ ಪೊಲೀಸ್ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಧ್ವನಿವರ್ಧಕಗಳ ಮೂಲಕ ಜನರಿಗೆ ಸಾಮಾಜಿಕ ಅಂತರದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಮತ್ತು ಜನರು ತಮ್ಮ ಮನೆಗಳಿಂದ ಹೊರಬರದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಸಿಂಗ್ ಹೇಳಿದರು.

ಅಲ್ಲದೆ, 924 ವಾಹನಗಳನ್ನು ಪರಿಶೀಲನೆ ನಡೆಸಲಾಗಿದ್ದು, ಅವುಗಳಲ್ಲಿ 132 ಮಾಲೀಕರಿಗೆ ಕಾನೂನು ಉಲ್ಲಂಘನೆಗಾಗಿ ದಂಡ ವಿಧಿಸಿ ಚಲನ್ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Lockdown In India: ಏಪ್ರಿಲ್​ 14ರ ನಂತರವೂ ಲಾಕ್​ಡೌನ್​ ಮುಂದುವರಿಯಲಿದೆ ಅನ್ನೋದು ಸುಳ್ಳು; ಕೇಂದ್ರದ ಸ್ಪಷ್ಟನೆ

ಲಾಕ್ ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರು ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ ತಮ್ಮ ಹಳ್ಳಿಗಳಿಗೆ ಕಾಲ್ನಡಿಗೆಯಲ್ಲಿ ತೆರಳುತ್ತಿರುವ ಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಇಂಥವರ ಸಹಾಯಕ್ಕಾಗಿ ಹೆಚ್ಚುವರಿ ಡಿಸಿಪಿ ರಣವಿಜಯ್ ಸಿಂಗ್ ನೋಯ್ಡಾದ ವಿವಿಧ ಸ್ಥಳಗಳಲ್ಲಿ 350 ಆಹಾರ ಪ್ಯಾಕೆಟ್​ಗಳನ್ನ ವಿತರಿಸಿದ್ದಾರೆಂದು ಅಲೋಕ್ ಸಿಂಗ್ ವಿವರಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 18 ರಂದು 21 ದಿನಗಳ ರಾಷ್ಟ್ರವ್ಯಾಪಿ ಲಾಕ್ ಡೌನ್ ಘೋಷಿಸಿದರು. ಅಗತ್ಯ ಸೇವೆಗಳಲ್ಲಿರುವವರನ್ನು ಹೊರತುಪಡಿಸಿ ಉಳಿದ ಜನರು ತಮ್ಮ ಮನೆಗಳಿಂದ ಹೊರ ಬರದಂತೆ ಆದೇಶಿಸಿದ್ದರು. ಏಪ್ರಿಲ್ 14ರವರೆಗೆ ಈ ಲಾಕ್ ಡೌನ್ ಇರಲಿದೆ. ಭಾರತದಾದ್ಯಂತ 1 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿರುವುದು ತಿಳಿದುಬಂದಿದೆ. ಗೌತಮ್ ಬುದ್ಧ ನಗರ್ ಜಿಲ್ಲೆಯಲ್ಲಿ 30ಕ್ಕೂ ಹೆಚ್ಚು ಮಂದಿಗೆ ಸೋಂಕು ಹರಡಿದೆ.

- ಸಂಧ್ಯಾ ಎಂ.
First published: March 30, 2020, 1:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories