ನೂತನ ಮೋಟಾರು ಕಾಯ್ದೆ ತಂದ ಸಾವು; ಸಂಚಾರಿ ಪೊಲೀಸರ ಬಳಿ ವಾಗ್ವಾದ ನಡೆಸುತ್ತಲೇ ಹೃದಯಾಘಾತಕ್ಕೆ ಬಲಿಯಾದ ಟೆಕ್ಕಿ!

ಮಧುಮೇಹ ರೋಗಿಯಾಗಿದ್ದ ಟೆಕ್ಕಿ ತನ್ನ ವಯಸ್ಸಾದ ತಂದೆ ತಾಯಿಯ ಜೊತೆಗೆ ಸಂಚರಿಸುತ್ತಿದ್ದ ವೇಳೆ ಘಾಜಿಯಾಬಾದ್​ನ ಸಿಐಎಸ್ಎಫ್ ಕಟ್ ಬಳಿ ಸಂಚಾರಿ ಪೊಲೀಸರು ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಪೊಲೀಸರು ನೂತನ ಮೋಟಾರು ವಾಹನ ಕಾಯ್ದೆಯ ನೆಪದಲ್ಲಿ ಪರಿಶೀಲನೆ ಹೆಸರಲ್ಲಿ ಟೆಕ್ಕಿಯ ಬಳಿ ದುರ್ವರ್ತನೆ ತೋರಿದ್ದಾರೆ.

MAshok Kumar | news18-kannada
Updated:September 10, 2019, 11:35 AM IST
ನೂತನ ಮೋಟಾರು ಕಾಯ್ದೆ ತಂದ ಸಾವು; ಸಂಚಾರಿ ಪೊಲೀಸರ ಬಳಿ ವಾಗ್ವಾದ ನಡೆಸುತ್ತಲೇ ಹೃದಯಾಘಾತಕ್ಕೆ ಬಲಿಯಾದ ಟೆಕ್ಕಿ!
ಸಾಂದರ್ಭಿಕ ಚಿತ್ರ.
  • Share this:
ನೋಯ್ಡಾ (ಸೆಪ್ಟೆಂಬರ್.10); ರಸ್ತೆ ಸಂಚಾರ ನಿಯಮ ಉಲ್ಲಂಘನೆ ಕುರಿತು ಸಂಚಾರಿ ಪೊಲೀಸರ ಜೊತೆ ವಾಗ್ವಾದ ನಡೆಸಿದ ಕಾರಣ ಒತ್ತಡಕ್ಕೆ ಒಳಗಾದ ವ್ಯಕ್ತಿಯೊಬ್ಬ ಹೃದಯಾಘಾತದಿಂದ ಮೃತಪಟ್ಟ ಘಟನೆ ಉತ್ತರಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ಈ ಕುರಿತು ಆತನ 65 ವರ್ಷದ ತಂದೆ ಆರೋಪಿಸಿ ಪ್ರಕರಣ ದಾಖಲಿಸಿದ್ದಾರೆ.

35 ವರ್ಷದ ಸಾಫ್ಟ್​ವೇರ್​ ಇಂಜಿನಿಯರ್ ಹೃದಯಾಘಾತಕ್ಕೆ ಬಲಿಯಾಗಿದ್ದು, ಭಾನುವಾರ ಸಂಜೆ ಘಾಜಿಯಾಬಾದ್​ನಲ್ಲಿ ಘಟನೆ ನಡೆದಿದೆ. ಈ ಘಟನೆಯಲ್ಲಿ ಭಾಗಿಯಾಗಿರುವ ಪೊಲೀಸರು ಘಾಜಿಯಾಬಾದ್ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿಗಳೇ ಎಂದು ನೋಯ್ಡಾ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಮಧುಮೇಹ ರೋಗಿಯಾಗಿದ್ದ ಟೆಕ್ಕಿ ತನ್ನ ವಯಸ್ಸಾದ ತಂದೆ ತಾಯಿಯ ಜೊತೆಗೆ ಸಂಚರಿಸುತ್ತಿದ್ದ ವೇಳೆ ಘಾಜಿಯಾಬಾದ್​ನ ಸಿಐಎಸ್ಎಫ್ ಕಟ್ ಬಳಿ ಸಂಚಾರಿ ಪೊಲೀಸರು ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಪೊಲೀಸರು ನೂತನ ಮೋಟಾರು ವಾಹನ ಕಾಯ್ದೆಯ ನೆಪದಲ್ಲಿ ಪರಿಶೀಲನೆ ಹೆಸರಲ್ಲಿ ಟೆಕ್ಕಿಯ ಬಳಿ ದುರ್ವರ್ತನೆ ತೋರಿದ್ದಾರೆ. ಈ ವೇಳೆ ಪೊಲೀಸರ ಜೊತೆ ಮಾತಿನ ಚಕಮಕಿ ಏರ್ಪಟ್ಟು ಟೆಕ್ಕಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಚಂದ್ರನ ಅಂಗಳದಲ್ಲಿ ವಿಕ್ರಂ ಲ್ಯಾಂಡರ್ ಸುರಕ್ಷಿತ,​ ಸಂಪರ್ಕಿಸಲು ಸತತ ಪ್ರಯತ್ನ; ಇಸ್ರೋ ಅಧಿಕೃತ ಮಾಹಿತಿ

ಈ ಕುರಿತು ವಿಷಾಧ ವ್ಯಕ್ತಪಡಿಸಿರುವ ಮೃತ ವ್ಯಕ್ತಿಯ ತಂದೆ, “ಸಂಚಾರಿ ನಿಯಮಗಳನ್ನು ಬದಲಿಸಿರುವುದು ಒಳ್ಳೆಯದೆ. ಆದರೆ, ಕಾನೂನಿನ ಅಡಿಯಲ್ಲಿ ವಾಹನವನ್ನು ಪರಿಶೀಲನೆ ನಡೆಸಲು ಒಂದು ವಿಧಾನ ಇದೆ. ಆದರೆ, ನಮ್ಮ ವಾಹನ ತಪಾಸಣೆ ನಡೆಸುವಾಗ ಈ ವಿಧಾನಗಳನ್ನು ಪಾಲಿಸಲಾಗಿಲ್ಲ. ಬಿಳಿ ಬಟ್ಟೆ ತೊಟ್ಟಿದ್ದ ಪೇದೆಯೊಬ್ಬ ತಪಾಸಣೆ ಎಂಬ ಹೆಸರಿನಲ್ಲಿ ತನ್ನ ಲಾಠಿಯನ್ನು ಕಾರಿಗೆ ಮನಸ್ಸೋ ಇಚ್ಚೆ ಬಡಿಯುತ್ತ ದರ್ಪದಿಂದ ವರ್ತಿಸಿದ.

ನಾವು ವೇಗವಾಗಿ ವಾಹನ ಚಲಾಯಿಸಿರಲಿಲ್ಲ. ಇನ್ನು ಕಾರಿನ ಒಳಗೆ ಇಬ್ಬರು ವಯಸ್ಕರಿದ್ದಾರೆ ಎಂಬುದನ್ನೂ ಪರಿಗಣಿಸದ ಆತ ತೀರಾ ಅಸಭ್ಯವಾಗಿ ವರ್ತಿಸಿದ. ಪೊಲೀಸರು ಹೀಗೆ ವರ್ತಿಸಬೇಕು ಎಂಬ ಕಾನೂನಾದರು ಎಲ್ಲಿದೆ. ಇವರ ಜೊತೆಗಿನ ಮಾತಿನ ಚಕಮಕಿಯ ವೇಳೆ ಅಧಿಕ ಒತ್ತಡದಿಂದಾಗಿ ನನ್ನ ಮಗ ಮೃತ ಪಟ್ಟಿದ್ದಾನೆ. ಆದರೆ, ನೋಯ್ಡಾ ಪೊಲೀಸ್ ಅಧಿಕಾರಿಗಳು ನನ್ನ ಮಗ ಮೃತಪಟ್ಟ ನಂತರ ಈಗ ನಮ್ಮ ಬಳಿ ಮೃದುವಾಗಿ ಮಾತನಾಡುತ್ತಿದ್ದಾರೆ.

ಆತನ 5 ವರ್ಷಗಳಿಗೆ ಈಗ ಯಾರು ಧಿಕ್ಕು. ವಯಸ್ಸಾದ ನಾವು ಆಕೆಯ ಭವಿಷ್ಯಕ್ಕೆ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಹೇಗೆ ಹೊಂದಿಸುವುದು ಎಂದು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ತಮಗೆ ನ್ಯಾಯ ದೊರಕಲಿದೆ” ಎಂದೂ ಭರವಸೆ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ : ಜಾರ್ಖಂಡ್​​ ಸಾಮೂಹಿಕ ಹಲ್ಲೆ ಪ್ರಕರಣ: 11 ಆರೋಪಿಗಳ ವಿರುದ್ದದ ಚಾರ್ಜ್​ಶೀಟ್​ ಕೈ ಬಿಟ್ಟ ಪೊಲೀಸರು

ಈ ಕುರಿತು ಪ್ರತಿಕ್ರಿಯೆ ನೀಡಿರುವ ಗೌತಮ್ ಬುದ್ಧ ನಗರದ ಹಿರಿಯ ಪೊಲೀಸ್ ಅಧೀಕ್ಷಕ ವೈಭವ್ ಕೃಷ್ಣ, “ಘಟನೆ ಗಾಜಿಯಾಬಾದ್​ನಲ್ಲಿ ಭಾನುವಾರ ಸಂಜೆ 6 ಗಂಟೆಗೆ ನಡೆದಿದ್ದು, ಪ್ರಕರಣದ ಪ್ರಾಥಮಿಕ ತನಿಖೆಯಿಂದ ಟೆಕ್ಕಿ ಹೃದಯಾಘಾತದಿಂದ ಮೃತಪಟ್ಟಿರುವುದು ದೃಢಪಟ್ಟಿದೆ. ಈ ಮಾಹಿತಿಯನ್ನು ಘಾಜಿಯಾಬಾದ್ ಪೊಲೀಸರಿಗೆ ಈಗಾಗಲೇ ರವಾನಿಸಲಾಗಿದ್ದು, ಮುಂದಿನ ತನಿಖೆಯನ್ನು ಅವರೇ ಕೈಗೊಳ್ಳಲಿದ್ದಾರೆ” ಎಂದು ತಿಳಿಸಿದ್ದಾರೆ.

First published:September 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading