Twin Towers: 9 ಸೆಕೆಂಡ್‍ನಲ್ಲಿ ನೆಲಸಮವಾಗಲಿವೆ ಅವಳಿ ಕಟ್ಟಡಗಳು! ಜಾಗತಿಕ ಇತಿಹಾಸದಲ್ಲಿಯೇ ಅಪರೂಪದ ಕಾರ್ಯಾಚರಣೆ ಇದು

337 ಅಡಿ ಎತ್ತರದ ನೋಯ್ಡಾದ ಸೂಪರ್​ಟೆಕ್ ಅವಳಿ ಕಟ್ಟಡಗಳ ನೆಲಸಮ ಕಾರ್ಯಾಚರಣೆ ಇಂದು ಮಧ್ಯಾಹ್ನ ನಡೆಯಲಿದೆ. ಇದು ಜಾಗತಿಕ ಇತಿಹಾಸದಲ್ಲಿಯೇ ಅಪರೂಪದ ಕಾರ್ಯಾಚರಣೆ ಆಗಿದೆ. ಕೆಡವುತ್ತಿರುವ ಕಟ್ಟಡಕ್ಕೆ ಸಮೀಪದಲ್ಲಿ ಸುಮಾರು 7,000 ಜನರು ವಾಸವಿದ್ದಾರೆ. ಇದರ ಜೊತಗೆ 150 ಸಾಕುಪ್ರಾಣಿಗಳು ಮತ್ತು 2,500 ವಾಹನಗಳು ಇವೆ. ಮುಂಜಾನೆ 7 ಗಂಟೆಗೆ ಜನರು ಮತ್ತು ಸಾಕುಪ್ರಾಣಿಗಳನ್ನು ಸ್ಥಳಾಂತರಿಸಲಾಗಿದೆ.

ಸೂಪರ್‌ಟೆಕ್ ಅವಳಿ ಗೋಪುರ ನೋಯ್ಡಾ

ಸೂಪರ್‌ಟೆಕ್ ಅವಳಿ ಗೋಪುರ ನೋಯ್ಡಾ

  • Share this:
    337 ಅಡಿ ಎತ್ತರದ ನೋಯ್ಡಾದ (Noida) ಸೂಪರ್​ಟೆಕ್ (Super tech) ಅವಳಿ ಕಟ್ಟಡಗಳ ನೆಲಸಮ (Demolition) ಕಾರ್ಯಾಚರಣೆ ಇಂದು ಮಧ್ಯಾಹ್ನ ನಡೆಯಲಿದೆ. ಇದು ಜಾಗತಿಕ ಇತಿಹಾಸದಲ್ಲಿಯೇ ಅಪರೂಪದ ಕಾರ್ಯಾಚರಣೆ ಆಗಿದೆ. ನೋಯ್ಡಾದ ಸೆಕ್ಟರ್ 93ಎ ( 93A) ಪ್ರದೇಶದಲ್ಲಿರುವ ಎರಡು ದೊಡ್ಡ ಕಟ್ಟಡಗಳನ್ನು ಕಾನೂನಿನ ನಿಯಮದ ವಿರುದ್ಧವಾಗಿ ನಿರ್ಮಿಸಲಾಗಿದೆಯಂತೆ. ಹಲವು ವರ್ಷಗಳ ಕಾನೂನು ಹೋರಾಟದ ನಂತರ ಈ ಕಟ್ಟಡಗಳು ಧರೆಗುರುಳಲಿದೆ. ಈ ಕಟ್ಟಡದ 8 ಮೀಟರ್ ದೂರದಲ್ಲಿ 7 ಸಾವಿರ (7 Thousand) ಜನ ವಾಸಿಸುವ ಅಪಾರ್ಟ್‍ಮೆಂಟ್ (Apartment) ಇದೆ. ಈ ಅವಳಿ ಕಟ್ಟಡ ಕೆಡವುದರಿಂದ ಅವರಿಗೆ ತೊಂದರೆ ಸಾಧ್ಯತೆ ಇದೆ. ಈ ಕಾರ್ಯಾಚರಣೆ ಎಷ್ಟು ದೊಡ್ಡದು ಎಂದು ತಿಳಿಯಬೇಕೇ? ಇಲ್ಲಿದೆ ಮಾಹಿತಿ.

    ಅವಳಿ ಕಟ್ಟಡದಲ್ಲಿ ಎಷ್ಟು ಮಹಡಿಗಳಿವೆ?
    2 ಕಟ್ಟಡಗಳಲ್ಲಿ 40 ಮಹಡಿಗಳನ್ನು ಕಟ್ಟಲು ಯೋಜನೆ ರೂಪಿಸಲಾಗಿತ್ತಂತೆ. ಆದ್ರೆ ನ್ಯಾಯಾಲಯವು ತಡೆಯಾಜ್ಞೆ ಕೊಟ್ಟ ಕಾರಣ ಒಂದಿಷ್ಟು ಮಹಡಿಗಳನ್ನು ಕಟ್ಟಿಲ್ಲ. ಈ ಅವಳಿ ಕಟ್ಟಡಗಳ ಪೈಕಿ ಒಂದಾಗಿರುವ ಅಪೆಕ್ಸ್ ಟವರ್ 32 ಹಾಗೂ ಸಯಾನಿ 29 ಮಹಡಿಗಳನ್ನು ಹೊಂದಿದೆ. ಎರಡೂ ಕಟ್ಟಡಗಳಿಂದ 900 ಕ್ಕೂ ಹೆಚ್ಚು ಫ್ಲಾಟ್‍ಗಳನ್ನು ಮಾರಲು ಬಿಲ್ಡರ್​ಗಳು ಚಿಂತನೆ ನಡೆಸಿದ್ದರು. ಆ ಸಮಯದಲ್ಲಿ  ಮೂರನೇ ಎರಡರಷ್ಟು ಫ್ಲಾಟ್‍ಗಳನ್ನು ಬುಕ್ ಆಗಿದ್ದವು. ಕೆಲವು ಫ್ಲಾಟ್‍ಗಳನ್ನು ಮಾರಾಟ ಮಾಡಲಾಗಿತ್ತು. ಕೋರ್ಟ್ ಗ್ರಾಹಕರಿಗೆ ಬಡ್ಡಿ ಸಹಿತ ಹಣ ಹಿಂದಿರುಗಿಸುವಂತೆ ಆದೇಶಿಸಿತ್ತು.

    ಅಪೆಕ್ಸ್ ಟವರ್ ನ ಎತ್ತರ 103 ಮೀಟರ್
    ಅಪೆಕ್ಸ್ ಟವರ್ ನ ಎತ್ತರ 103 ಮೀಟರ್ ಇದೆ. ಸಯಾನಿ 97 ಮೀಟರ್ ಎತ್ತರವಿದೆ. ಈ ಕಟ್ಟಡಗಳನ್ನು ಕೆಡವಲು ಗುತ್ತಿಗೆ ಪಡೆದಿರುವ ಎಡಿಫಿಸ್ ಎಂಜಿನಿಯರಿಂಗ್ ಡೆಮಾಲಿಶನ್ ಕಂಪನಿಯು ದಕ್ಷಿಣ ಆಫ್ರಿಕಾದ ತಜ್ಞರ ನೆರವು ಪಡೆದಿದೆ. ದಕ್ಷಿಣ ಆಫ್ರಿಕಾದ ರಾಜಧಾನಿ ಜೊಹನ್ಸ್‍ಬರ್ಗ್‍ನಲ್ಲಿ ಮೂರು ವರ್ಷಗಳ ಹಿಂದೆ 108 ಮೀಟರ್ ಎತ್ತರದ ಬ್ಯಾಂಕ್ ಕಟ್ಟಡವನ್ನು ಕೆಡವಿದ ಕಾರ್ಯಾಚರಣೆಯಲ್ಲಿ ಇವರು ಪಾಲ್ಗೊಂಡಿದ್ದರು.

    ಇದನ್ನೂ ಓದಿ: Building Demolition: 9 ಸೆಕೆಂಡ್​ಗಳಲ್ಲಿ ಕೊನೆಯಾಗಲಿದೆ 9 ವರ್ಷಗಳ ಹೋರಾಟ, ಇದು ಅವಳಿ ಕಟ್ಟಡದ ಕತೆ!

    ಹತ್ತಿರದಲ್ಲಿ ಇದೆ ಅಪಾರ್ಟ್‍ಮೆಂಟ್
    ಇಂದು ಕೆಡವ ಬೇಕಿರುವ ಅವಳಿ ಕಟ್ಟಡಗಳಿಗೆ ಕೇವಲ 8 ಮೀಟರ್ ದೂರದಲ್ಲಿ ಬೇರೆ ಅಪಾರ್ಟ್‍ಮೆಂಟ್‍ಗಳು ಇವೆ. ಈ ಕಟ್ಟಡಗಳಿಗೆ ಧೂಳು ನುಗ್ಗದಂತೆ ತಡೆಯಲು ವಿಶೇಷ ಬಟ್ಟೆಯಿಂದ ಮುಚ್ಚಲಾಗುತ್ತದೆ. ದಕ್ಷಿಣ ಆಫ್ರಿಕಾದಲ್ಲಿ ಇದಕ್ಕೂ ಎತ್ತರದ ಕಟ್ಟಡ ಬೀಳಿಸುವಾಗ ಪಕ್ಕದ ಕಟ್ಟಡಗಳು ಕೇವಲ 7.8 ಮೀಟರ್ ದೂರದಲ್ಲಿದ್ದವು. ಆ ಕಟ್ಟಡಗಳಿಗೆ ತೊಂದರೆಯಾಗದಂತೆ ಕಟ್ಟಡ ಕೆಡವಲಾಗಿತ್ತು.

    ಕಟ್ಟಡ ಕೆಡವಲು ಸ್ಫೋಟಕ ಬಳಕೆ
    ಈ ಕಟ್ಟಡವನ್ನು ಸುರಕ್ಷಿತವಾಗಿ ಕೆಡವಲು ಕಂಬಗಳಲ್ಲಿ 7,000 ರಂಧ್ರಗಳನ್ನು ಕೊರೆದು ಸ್ಫೋಟಕಗಳನ್ನು ತುಂಬಲಾಗಿದೆ. ಈ ರಂಧ್ರಗಳು ಎರಡು ಮೀಟರ್ ಉದ್ದವಿದೆ. ಅಂದರೆ ಇಡೀ ಕಟ್ಟಡದಲ್ಲಿ ಸುಮಾರು 14 ಕಿಮೀಗಳಷ್ಟು ರಂಧ್ರಗಳಿದ್ದು, ಸ್ಫೋಟಕಗಳನ್ನು ತುಂಬಿಸಲಾಗಿದೆ. ಏಕಕಾಲಕ್ಕೆ ಸ್ಫೋಟಕಗಳು ಆಕ್ಟಿವೇಟ್ ಆಗಲು ಅನುವಾಗುವಂತೆ 20,000 ಸರ್ಕೀಟ್‍ಗಳನ್ನು ಅಳವಡಿಸಲಾಗಿದೆ.
    ಡಿಟೊನೇಟರ್​ಗಳ ಮೂಲಕ ಸ್ಫೋಟಕಕ್ಕೆ ಸಂಕೇತ ರವಾನೆಯಾದಾಗ ಏಕಕಾಲಕ್ಕೆ ಎಲ್ಲ ಕಂಬಗಳೂ ಸ್ಫೋಟಗೊಂಡು, ಲಂಬವಾಗಿ ಕಟ್ಟಡ ಕುಸಿಯುತ್ತದೆ. ಇದನ್ನು ಜಲಪಾತ ತಂತ್ರ ಎನ್ನುತ್ತಾರೆ.

    ಕಟ್ಟಡ ಕುಸಿದು ಬೀಳಲು ಕೇವಲ 9 ಸೆಕೆಂಡ್ ಸಾಕು
    ಆಫ್ರಿಕಾದಿಂದ ಬಂದಿರುವ ಮೂವರು ತಜ್ಞರು ಮತ್ತು ನೋಯ್ಡಾ ನಗರಾಡಳಿತದ ಎಂಜಿನಿಯರ್​ಗಳ ಜೊತೆಗೆ ಪ್ರಾಜೆಕ್ಟ್ ಮ್ಯಾನೇಜರ್ ಸಹ ಸ್ಥಳದಲ್ಲಿದ್ದು ಡಿಟೊನೇಟರ್ ಮೂಲಕ ಸ್ಫೋಟಕಗಳನ್ನು ಆಕ್ಟಿವೇಟ್ ಮಾಡುತ್ತಾರೆ. ಸ್ಫೋಟಗೊಳ್ಳುವ ಸ್ಥಳಕ್ಕೆ ಅತ್ಯಂತ ಸಮೀಪದಲ್ಲಿ ಒಟ್ಟು 10 ಮಂದಿ ಮಾತ್ರ ಇರುತ್ತಾರೆ. ಸ್ಫೋಟಗೊಳ್ಳುವ ಕಟ್ಟಡಕ್ಕೆ ಕೇವಲ 450 ಮೀಟರ್ ದೂರದಲ್ಲಿ ಗ್ರೇಟರ್ ನೋಯ್ಡಾ ಎಕ್ಸ್​ಪ್ರೆಸ್ ವೇ ಹೆದ್ದಾರಿಯಿದ್ದು ಅದರಲ್ಲಿ ಕನಿಷ್ಠ ಅರ್ಧಗಂಟೆ ಸಂಚಾರ ನಿರ್ಬಂಧಿಸಲಾಗುತ್ತದೆ.

    ಇದನ್ನೂ ಓದಿ: Noida Twin Towers: ಸೂಪರ್‌ಟೆಕ್ ಅವಳಿ ಗೋಪುರ ಉರುಳಿಸಲು ಬೇಕು ಕೋಟಿ ಕೋಟಿ ಹಣ!

    ಮೋಡವು ತಿಳಿಯಾಗಲು 12 ನಿಮಿಷ ಬೇಕು
    ಕಟ್ಟಡ ಸ್ಫೋಟದಿಂದ ಉಂಟಾಗುವ ಮೋಡವು ತಿಳಿಯಾಗಲು 12 ನಿಮಿಷ ಬೇಕಾಗಬಹುದು. ಗಾಳಿ ವೇಗವಾಗಿ ಬೀಸಿದರೆ, ಗಾಳಿಯ ದಿಕ್ಕು ಬದಲಾದರೆ ಇದು ಬೇಗ ಕಡಿಮೆಯಾಗಬಹುದು. ಧೂಳು ಕಡಿಮೆಯಾದ ನಂತರ ಕಾರ್ಮಿಕರು ಅಕ್ಕಪಕ್ಕದ ಕಟ್ಟಡಗಳಿಗೆ ಧಾವಿಸಿ, ಸ್ವಚ್ಛತಾ ಕಾರ್ಯಾಚರಣೆ ಆರಂಭಿಸುತ್ತಾರೆ. ನಂತರ ಉರುಳಿದ ಕಟ್ಟಡದ ಅವಶೇಷ ತೆರವುಗೊಳಿಸಲು ಮುಂದಾಗುತ್ತಾರೆ. ಸುಮಾರು ಕಟ್ಟಡ ಕುಸಿದ ನಂತರ 55,000 ಟನ್ ಅವಶೇಷ ಸಿಗಬಹುದು ಎಂದು ಅಂದಾಜಿಸಲಾಗಿದ್ದು, ಇದನ್ನು ಸಾಗಿಸಲು 3,000 ಟ್ರಕ್ ಟ್ರಿಪ್‍ಗಳು ಬೇಕಾಗುತ್ತವೆ.

    ಭೂಕಂಪದ ಅನುಭವ
    ಕಟ್ಟಡ ಕೆಡವಲು ಸ್ಫೋಟಕಗಳು ಸ್ಫೋಟಿಸಿದಾಗ ಅಕ್ಕಪಕ್ಕದ ಕಟ್ಟಡಗಳಲ್ಲಿ ಸೆಕೆಂಡ್‍ಗೆ 30 ಎಂಎಂ ತೀವ್ರತೆಯ ಭೂಕಂಪದ ಅನುಭವ ಆಗಬಹುದು. ಇದು ರಿಕ್ಟರ್ ಮಾಪಕದ ಲೆಕ್ಕದಲ್ಲಿ 0.4 ತೀವ್ರತೆಯ ಭೂಕಂಪ. ಸಾಮಾನ್ಯವಾಗಿ ಹೊಸದಾಗಿ ನಿರ್ಮಿಸಿದ ಕಟ್ಟಡಗಳಿಗೆ ರಿಕ್ಟರ್ ಮಾಪಕದ 6 ತೀವ್ರತೆಯ ಭೂಕಂಪ ತಡೆದುಕೊಳ್ಳುವ ಸಾಮಥ್ರ್ಯ ಇರುತ್ತದೆ.

    ಜನರ ಸ್ಥಳಾಂತರ
    ಕೆಡಗುವುತ್ತಿರುವ ಕಟ್ಟಡಕ್ಕೆ ಸಮೀಪದಲ್ಲಿ ಸುಮಾರು 7,000 ಜನರು ವಾಸವಿದ್ದಾರೆ. ಇದರ ಜೊತಗೆ 150 ಸಾಕುಪ್ರಾಣಿಗಳು ಮತ್ತು 2,500 ವಾಹನಗಳು ಇವೆ. ಮುಂಜಾನೆ 7 ಗಂಟೆಗೆ ಜನರು ಮತ್ತು ಸಾಕುಪ್ರಾಣಿಗಳನ್ನು ಸ್ಥಳಾಂತರಿಸಲಾಗಿದೆ. ಈ ಪ್ರದೇಶದಲ್ಲಿ ಅಡುಗೆ ಅನಿಲ ಮತ್ತು ವಿದ್ಯುತ್ ಸಂಪರ್ಕವನ್ನು ಸಂಜೆ 4 ಗಂಟೆಗೆ ಮರುಸ್ಥಾಪಿಸಲಾಗುತ್ತದೆ. ಸಂಜೆ 5.30ರ ನಂತರ ಜನರು ನಿರ್ಬಂಧಿತ ಪ್ರದೇಶ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ.

    100 ಕೋಟಿ ರೂಪಾಯಿ ಬಜೆಟ್
    ಕಟ್ಟಡ ಕೆಡಗುವ ಕಾರ್ಯಾಚರಣೆಗಾಗಿ 100 ಕೋಟಿ ಮೊತ್ತದ ಬಜೆಟ್ ಕಾಮಗಾರಿ ನಡೆಯಲಿದೆ. ಬೀಳಿಸುವಾಗ ಅಕ್ಕಪಕ್ಕದ ಕಟ್ಟಡಗಳಿಗೆ ಆಗುವ ಹಾನಿಯನ್ನೂ ಭರಿಸಬೇಕಿದೆ. ಈ ವೆಚ್ಚಗಳನ್ನು ಸೂಪರ್​ಟೆಕ್ ಕಂಪನಿಯೇ ಭರಿಸಬೇಕಿದೆ. ಈ ಕಾರ್ಯಾಚರಣೆಗೆ 20 ಕೋಟಿ ಖರ್ಚಾದರೆ, ಕಟ್ಟಡದ ಅಸ್ಥಿಪಂಜರದಂಥ ಆಕೃತಿ ಕೆಡವಲು 50 ಕೋಟಿ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
    Published by:Savitha Savitha
    First published: