ನೊಯ್ಡಾ ಶಾಲೆಯಲ್ಲಿ 14 ವರ್ಷದ ಬಾಲಕಿ ನಿಗೂಢ ಸಾವು; ಗುಟ್ಟಾಗಿ ಅಂತ್ಯಕ್ರಿಯೆ ನಡೆಸಿದ್ದರ ಹಿಂದಿನ ರಹಸ್ಯವೇನು?

ಉತ್ತರಪ್ರದೇಶದ ನೋಯ್ಡಾದ ಶಾಲೆವೊಂದರಲ್ಲಿ 14 ವರ್ಷದ ಬಾಲಕಿ ಮೃತದೇಹ ಪತ್ತೆಯಾಗಿದೆ. ಆಕೆ ಶಾಲೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದು, ಆ ವಿಷಯವನ್ನು ಪೊಲೀಸರಿಂದ ಮುಚ್ಚಿಟ್ಟು ಮೃತದೇಹದ ಅಂತ್ಯಕ್ರಿಯೆ ನಡೆಸಲಾಗಿದೆ.

news18-kannada
Updated:July 14, 2020, 7:16 AM IST
ನೊಯ್ಡಾ ಶಾಲೆಯಲ್ಲಿ 14 ವರ್ಷದ ಬಾಲಕಿ ನಿಗೂಢ ಸಾವು; ಗುಟ್ಟಾಗಿ ಅಂತ್ಯಕ್ರಿಯೆ ನಡೆಸಿದ್ದರ ಹಿಂದಿನ ರಹಸ್ಯವೇನು?
ಸಾಂದರ್ಭಿಕ ಚಿತ್ರ
  • Share this:
ನೊಯ್ಡಾ (ಜು 14): ದೇಶದೆಲ್ಲೆಡೆ ಕೊರೋನಾ ಸೋಂಕು ವಿಪರೀತವಾಗುತ್ತಿದೆ. ಇದರಿಂದ ಜನರು ಮನೆಯಿಂದ ಹೊರಬರಲೂ ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ ಅಪರಾಧ ಪ್ರಕರಣಗಳೇನೂ ಕಡಿಮೆಯಾಗಿಲ್ಲ. ಲಾಕ್​ಡೌನ್ ನಂತರದ ಈ ನಾಲ್ಕು ತಿಂಗಳಲ್ಲಿ ಕೊಲೆ, ಅತ್ಯಾಚಾರ ಪ್ರಕರಣಗಳು ಮುಂದುವರೆದಿವೆ. ಉತ್ತರ ಪ್ರದೇಶದ ನೊಯ್ಡಾದಲ್ಲಿ ಸೋಮವಾರ ಹೇಯಕೃತ್ಯವೊಂದು ಬೆಳಕಿಗೆ ಬಂದಿದ್ದು, ಬಾಲಕಿಯೊಬ್ಬಳ ಮೇಲೆ ಶಾಲೆಯಲ್ಲೇ ಅತ್ಯಾಚಾರ ನಡೆಸಿ, ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಉತ್ತರಪ್ರದೇಶದ ನೋಯ್ಡಾದ ಶಾಲೆವೊಂದರಲ್ಲಿ 14 ವರ್ಷದ ಬಾಲಕಿ ಮೃತದೇಹ ಪತ್ತೆಯಾಗಿದೆ. ಆಕೆ ಶಾಲೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದು, ಆ ವಿಷಯವನ್ನು ಪೊಲೀಸರಿಂದ ಮುಚ್ಚಿಟ್ಟು ಮೃತದೇಹದ ಅಂತ್ಯಕ್ರಿಯೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಜುಲೈ 3ರಂದು ಈ ಘಟನೆ ನಡೆದಿದ್ದು, ಇಲ್ಲಿಯವರೆಗೆ ಯಾವುದೇ ರೀತಿಯ ದೂರು ದಾಖಲಾಗಿಲ್ಲ. ಆದರೆ ಇದೇ ವಿಷಯವಾಗಿ ಮಾತನಾಡಿರುವ ಪೊಲೀಸ್​ ಅಧಿಕಾರಿ ಪೋಷಕರು ದಾಖಲೆ ಸಹಿತವಾಗಿ ಬಂದರೆ ನಾವು ತನಿಖೆ ನಡೆಸಲು ಸಿದ್ಧರಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ: ವಿಕಾಸ್​ ದುಬೆ ಎನ್​ಕೌಂಟರ್​; ಮಗ ಸಾವನ್ನಪ್ಪಿದ ಮೂರೇ ದಿನಕ್ಕೆ ಹೃದಯಾಘಾತದಿಂದ ಅಪ್ಪನೂ ನಿಧನ

ಹರಿಯಾಣ ಮೂಲದ ಬಾಲಕಿ ತನ್ನ ತಂದೆ, ತಾಯಿ, ತಂಗಿಯೊಂದಿಗೆ ನೊಯ್ಡಾದಲ್ಲಿ ವಾಸವಾಗಿದ್ದಳು. ಆಕೆಯ 13 ವರ್ಷ ತಂಗಿ ಕೂಡ ಅದೇ ಶಾಲೆಯಲ್ಲಿ ಓದುತ್ತಿದ್ದಳು. ಆ 14 ವರ್ಷದ ಬಾಲಕಿ ಶಾಲೆಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯ ಪೋಷಕರು ಆಕೆಯ ಬ್ಯಾಗ್​ ಹುಡುಕಾಡಿದಾಗ ಅದರಲ್ಲಿ ನನ್ನ ಜೀವನವನ್ನು ದ್ವೇಷಿಸುತ್ತೇನೆ, ಯಾರೂ ಸ್ನೇಹಿತರಲ್ಲ, ಎಲ್ಲರೂ ನನ್ನನ್ನು ಕೆಟ್ಟದಾಗಿ ನೋಡುತ್ತಾರೆ, ನನ್ನ ಜೀವನದ ಕೆಟ್ಟ ದಿನ ಎಂದೆಲ್ಲ ನೋಟ್​ ಪುಸ್ತಕದಲ್ಲಿ ಬರೆದಿರುವುದು ಗೊತ್ತಾಗಿದೆ.

ಲಾಕ್​ಡೌನ್ ಘೋಷಣೆಯಾದ ಬಳಿಕ ಹರಿಯಾಣಕ್ಕೆ ಮಕ್ಕಳೊಂದಿಗೆ ಹೋಗಿದ್ದ ಕುಟುಂಬಕ್ಕೆ ಮಕ್ಕಳನ್ನು ಶಾಲೆಗೆ ಕರೆತರಬೇಕೆಂದು ಶಾಲೆಗಳಿಂದ ಲೆಟರ್ ಬಂದಿತ್ತು. ಹೀಗಾಗಿ, ಮಕ್ಕಳ ಮೆಡಿಕಲ್ ಪರೀಕ್ಷೆ ಮಾಡಿಸಿ, ಶಾಲೆಗೆ ಬಿಟ್ಟುಬಂದಿದ್ದರು. ಆದರೆ, ಶಾಲೆಯ ಮುಖ್ಯಸ್ಥರಿಂದ ತಕ್ಷಣ ಶಾಲೆಗೆ ಬರುವಂತೆ ಫೋನ್ ಬಂದಿತ್ತು. ಹೋಗಿ ನೋಡಿದಾಗ ಅವರ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಬಗ್ಗೆ ಶಾಲಾ ಸಮಿತಿಯವರು ಪೊಲೀಸರಿಗೂ ಮಾಹಿತಿ ನೀಡಿಲ್ಲ.

ಇದನ್ನೂ ಓದಿ: Crime News: ಪ್ರೇಯಸಿಯನ್ನು ಕೊಂದು, ತಾನೂ ಶೂಟ್ ಮಾಡಿಕೊಂಡ ಡಾಬಾ ಮಾಲೀಕ

ತಮ್ಮ ಮಗಳದ್ದು ಆತ್ಮಹತ್ಯೆಯಲ್ಲ ಕೊಲೆ ಎಂದು ಬಾಲಕಿಯ ಪೋಷಕರು ಆರೋಪಿಸಿದ್ದಾರೆ. ನಾವು ನೊಯ್ಡಾಗೆ ಸದ್ಯಕ್ಕೆ ಬರಲು ಸಾಧ್ಯವಿಲ್ಲ ಎಂದರೂ ಒತ್ತಾಯದಿಂದ ನಮ್ಮನ್ನು ಕರೆಸಿಕೊಂಡರು. ನಮ್ಮ ಮಗಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ. ಮಗಳದ್ದು ಆತ್ಮಹತ್ಯೆ ಎಂದು ನಮ್ಮ ಬಳಿ ಬಲವಂತದಿಂದ ಸಹಿ ಹಾಕಿಸಿಕೊಳ್ಳಲಾಗಿದೆ. ನಮಗೆ ಮಗಳ ಹೆಣವನ್ನು ಊರಿಗೆ ತೆಗೆದುಕೊಂಡು ಹೋಗಲೂ ಬಿಡದೆ ಇಲ್ಲೇ ಸಂಸ್ಕಾರ ಮಾಡಿಸಿಕೊಂಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

ನಾವು ಪೊಲೀಸರಿಗೆ ದೂರು ನೀಡಿದರೆ ಶಾಲಾ ಸಮಿತಿಯವರು ನಮಗೇನಾದರೂ ತೊಂದರೆ ಕೊಡಬಹುದು ಎಂದು ನಾವೂ ಸುಮ್ಮನಾದೆವು. ಆದರೆ, ನಮ್ಮ ಮಗಳ ಸಾವಿನ ವಿಷಯದಲ್ಲಿ ಯಾರದ್ದೋ ಕೈವಾಡವಿದೆ ಎಂದು ಬಾಲಕಿಯ ಪೋಷಕರು ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಶಾಲಾ ಅಧ್ಯಕ್ಷರು ತಳ್ಳಿಹಾಕಿದ್ದಾರೆ. ಬಾಲಕಿಯ ಬ್ಯಾಗ್​ನಲ್ಲಿ ಸೂಸೈಡ್ ನೋಟ್ ಕೂಡ ಸಿಕ್ಕಿದೆ ಎಂದಿದ್ದಾರೆ.
Published by: Sushma Chakre
First published: July 14, 2020, 7:16 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading