Shrikant Tyagi: ಮಹಿಳೆ ಮೇಲೆ ಹಲ್ಲೆ, ಉರುಳಿತು ಆರೋಪಿ ಮನೆ; ಬಂಧಿತ ಬಿಜೆಪಿ ನಾಯಕನೇ?

ನೋಯ್ಡಾದ ಗ್ರ್ಯಾಂಡ್ ಓಮ್ಯಾಕ್ಸ್ ಸೊಸೈಟಿಯಲ್ಲಿ ಶ್ರೀಕಾಂತ್ ತ್ಯಾಗಿ ಮಹಿಳೆಯೊಬ್ಬರನ್ನು ಅವಾಚ್ಯವಾಗಿ ನಿಂದಿಸುವ ಮತ್ತು ಹಲ್ಲೆ ಮಾಡಿದ ವಿಡಿಯೋ ವೈರಲ್ ಆಗಿತ್ತು.

ಶ್ರೀಕಾಂತ್ ತ್ಯಾಗಿ

ಶ್ರೀಕಾಂತ್ ತ್ಯಾಗಿ

  • Share this:
    ನೋಯ್ಡಾ: ಮಹಿಳೆಯೊಬ್ಬರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ವಿಡಿಯೋ ವೈರಲ್ ಆದ (Viral Video) ನಂತರ ಪರಾರಿಯಾಗಿದ್ದ ನೋಯ್ಡಾದ ರಾಜಕಾರಣಿ ಶ್ರೀಕಾಂತ್ ತ್ಯಾಗಿ (Shrikanth Tyagi) ಅವರನ್ನು ಉತ್ತರ ಪ್ರದೇಶ ಪೊಲೀಸರು ಇಂದು ಮೀರತ್‌ನಿಂದ ಬಂಧಿಸಿದ್ದಾರೆ. ಶ್ರೀಕಾಂತ್ ತ್ಯಾಗಿ ತಾನು ಬಿಜೆಪಿ ನಾಯಕ (BJP Leader) ಎಂದು ಬಿಂಬಿಸಿಕೊಂಡಿದ್ದು ಆದರೆ ಬಿಜೆಪಿ ಮಾತ್ರ ತನಗೂ ಶ್ರೀಕಾಂತ್ ತ್ಯಾಗಿಗೂ ಯಾವುದೇ ಸಂಬಂಧವಿಲ್ಲ ಎಂದು ಆರೋಪ ನಿರಾಕರಿಸಿದೆ. ಉತ್ತರ ಪ್ರದೇಶ ಪೊಲೀಸರು ಶ್ರೀಕಾಂತ್ ತ್ಯಾಗಿ ಬಗ್ಗೆ ಮಾಹಿತಿ ನೀಡಿದವರಿಗೆ ₹ 25,000 ಬಹುಮಾನವನ್ನು ಘೋಷಿಸಿದ ನಂತರ ಬಂಧನ ಮಾಡಲಾಗಿದೆ. 

    ಪೊಲೀಸ್ ಮೂಲಗಳ ಪ್ರಕಾರ ಮೀರತ್‌ನ ಹೊರವಲಯದಲ್ಲಿರುವ ಶ್ರದ್ಧಾಪುರಿಯಲ್ಲಿರುವ ಅವರ ಸಹಾಯಕನ ಮನೆಯಿಂದ ತ್ಯಾಗಿಯನ್ನು ಬಂಧಿಸಲಾಗಿದೆ. ಶ್ರೀಕಾಂತ್ ತ್ಯಾಗಿ ಡೆಹ್ರಾಡೂನ್, ಹರಿದ್ವಾರ ಮತ್ತು ರಿಷಿಕೇಶ ಮೂಲಕ ಸಹರಾನ್‌ಪುರಕ್ಕೆ ಹೋಗಲು ಯೋಜಿಸಿದ್ದರು ಎಂದು ಮೂಲಗಳು ತಿಳಿಸಿವೆ.

    ಕುಟುಂಬದ ಜೊತೆ ಸಂಪರ್ಕದಲ್ಲಿದ್ದ ತ್ಯಾಗಿ
    ಅಲ್ಲದೇ ಈ ಸಂದರ್ಭದಲ್ಲಿ ಶ್ರೀಕಾಂತ್ ತ್ಯಾಗಿ  ಪತ್ನಿ ಮತ್ತು ವಕೀಲರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

    ವೈರಲ್ ಆಗಿತ್ತು ಮಹಿಳೆಯನ್ನು ನಿಂದಿಸುವ ವಿಡಿಯೋ
    ನೋಯ್ಡಾದ ಗ್ರ್ಯಾಂಡ್ ಓಮ್ಯಾಕ್ಸ್ ಸೊಸೈಟಿಯಲ್ಲಿ ಶ್ರೀಕಾಂತ್ ತ್ಯಾಗಿ ಮಹಿಳೆಯೊಬ್ಬರನ್ನು ಅವಾಚ್ಯವಾಗಿ ನಿಂದಿಸುವ ಮತ್ತು ಹಲ್ಲೆ ಮಾಡಿದ ವಿಡಿಯೋ ವೈರಲ್ ಆಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರವು ಶ್ರೀಕಾಂತ್ ತ್ಯಾಗಿ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ನಿನ್ನೆ ಶ್ರೀಕಾಂತ್ ತ್ಯಾಗಿ ರೆಸಿಡೆನ್ಶಿಯಲ್ ಸೊಸೈಟಿಗೆ ಬುಲ್ಡೋಜರ್ ಉರುಳಿಬಿದ್ದಿದ್ದು, ತ್ಯಾಗಿ ಅವರ ನಿವಾಸದಲ್ಲಿದ್ದ ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಿದೆ.

    ಉತ್ತರ ಪ್ರದೇಶದ ಬುಲ್ಡೋಜರ್ ಸರ್ಕಾರ ಎಂಬ ಪದ ದೇಶದಲ್ಲೆಡೆ ಆಗಾಗ ಸುದ್ದಿಯಾಗುತ್ತಲೆ ಇರುತ್ತದೆ. ಮಹಿಳೆಯೊಬ್ಬರನ್ನು ನಿಂದಿಸಿದ ಮತ್ತು ಹಲ್ಲೆ ಮಾಡಿದ ಆರೋಪದ ಮೇಲೆ ನೋಯ್ಡಾ ಹೌಸಿಂಗ್ ಸೊಸೈಟಿಯಲ್ಲಿ ರಾಜಕಾರಣಿಯೊಬ್ಬರ ಕಟ್ಟಡಗಳನ್ನು ಬುಲ್ಡೋಜರ್ ಬಳಸಿ ಕೆಡವಲಾಗಿದೆ. ಬಿಜೆಪಿಯ ಕಿಸಾನ್ ಮೋರ್ಚಾದ ನಾಯಕ ಎಂದು ಹೇಳಲಾದ ಶ್ರೀಕಾಂತ್ ತ್ಯಾಗಿ ಎಂಬುವವರ ಅಕ್ರಮ ಕಟ್ಟಡಗಳನ್ನು ಬುಲ್ಡೋಜರ್ ಬಳಸಿ ಕೆಡವಲಾಗಿದೆ.

    ಇದನ್ನೂ ಓದಿ: Bulldozer Government: ಮಹಿಳೆ ಮೇಲೆ ಹಲ್ಲೆ; ಬುಲ್ಡೋಜರ್​ನಿಂದ ರಾಜಕೀಯ ನಾಯಕನ ಮನೆ ಕೆಡವಿದ ಪೊಲೀಸ್!

    ಶ್ರೀಕಾಂತ್ ತ್ಯಾಗಿ ಬಗ್ಗೆ ಸುಳಿವು ನೀಡಿದವರಿಗೆ 25 ಸಾವಿರ ಬಹುಮಾನ ಘೋಷಣೆ
    ಶ್ರೀಕಾಂತ್ ತ್ಯಾಗಿ ನಾಪತ್ತೆಯಾಗಿದ್ದು, ಪೊಲೀಸರು ಸತತ ಹುಡುಕಾಟ ನಡೆಸುತ್ತಿದ್ದಾರೆ. ಅಲ್ಲದೇ ಶ್ರೀಕಾಂತ್ ತ್ಯಾಗಿ ಬಗ್ಗೆ ಸುಳಿವು ನೀಡಿದವರಿಗೆ 25 ಸಾವಿರ ಬಹುಮಾನವನ್ನೂ ಘೋಷಿಸಲಾಗಿತ್ತು.

    ಶ್ರೀಕಾಂತ್ ತ್ಯಾಗಿ ನಮಗೆ ಸಂಬಂಧವಿಲ್ಲ ಎಂದಿದ್ದ ಬಿಜೆಪಿ
    ಶ್ರೀಕಾಂತ್ ತ್ಯಾಗಿಗೂ ನಮಗೂ ಏನೇನೂ ಸಂಬಂಧವಿಲ್ಲ ಎಂದು ಸಂಬಂಧ ನಿರಾಕರಿಸಿದೆ ಬಿಜೆಪಿ. ಕೆಲವು ದಿನಗಳ ಹಿಂದೆ ಗ್ರ್ಯಾಂಡ್ ಓಮ್ಯಾಕ್ಸ್ ಸೊಸೈಟಿಯಲ್ಲಿ ಶ್ರೀಕಾಂತ್ ತ್ಯಾಗಿ ಮತ್ತು ಮಹಿಳೆಯ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ.

    ಇದೇ ಘಟನೆಗೆ ಸಂಬಂಧಿಸಿ ಶ್ರೀಕಾಂತ್ ತ್ಯಾಗಿ ಮಹಿಳೆ ಮೇಲೆ ಹಲ್ಲೆ ನಡೆಸಿದ್ದರು ಎಂಬ ಆರೋಪ ಕೇಳಿಬಂದಿತ್ತು.

    ಇದನ್ನೂ ಓದಿ: Langya Virus: ಚೀನಾದಲ್ಲಿ ಹರಡುತ್ತಿದೆ ಹೊಸ 'ಲ್ಯಾಂಗ್ಯಾ ವೈರಸ್', ಇದುವರೆಗೆ 35 ಜನರು ಸೋಂಕಿಗೆ ಬಲಿ!

    ಹೈದರಾಬಾದ್​ನಲ್ಲಿ ಬಿಜೆಪಿ ನಾಯಕನ ಸಾವು
    ಬಿಜೆಪಿ ನಾಯಕನೋರ್ವ ಶವವಾಗಿ ಪತ್ತೆಯಾಗಿರುವ ಘಟನೆ ವರದಿಯಾಗಿದೆ. ಭಾರತೀಯ ಜನತಾ ಪಕ್ಷದ ತೆಲಂಗಾಣದ  ನಾಯಕ ಜ್ಞಾನೇಂದ್ರ ಪ್ರಸಾದ್ ಅವರ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತಲುಪಿದಾಗ ಜ್ಞಾನೇಂದ್ರ ಪ್ರಸಾದ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ. ಮಿಯಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಸೋಮವಾರ ಬೆಳಗ್ಗೆ ಮಿಯಾಪುರ ಪೊಲೀಸರಿಗೆ ಮಾಹಿತಿ ಲಭಿಸಿದಾಗ ಘಟನೆ ಬೆಳಕಿಗೆ ಬಂದಿದೆ.
    Published by:guruganesh bhat
    First published: