Video: ಎಲ್ಲಿ ನೋಡಿದರೂ ಬೆಳ್ಳನೆಯ ಹಿಮ, ಸುರಿಯುತ್ತಿರುವ ಮಳೆ; ಶಿಮ್ಲಾದಂತಾದ ನೊಯ್ಡಾ, ದೆಹಲಿ

ನೊಯ್ಡಾದಲ್ಲಿನ ಹಿಮಪಾತ

ನೊಯ್ಡಾದಲ್ಲಿನ ಹಿಮಪಾತ

ನೀವೇನಾದರೂ ಈಗ ದೆಹಲಿ ಅಥವಾ ನೊಯ್ಡಾಗೆ ಕಾಲಿಟ್ಟರೆ ನಿಮ್ಮ ಕಣ್ಣನ್ನೇ ನಂಬುವುದಿಲ್ಲ. ನಾವೇನಾದರೂ ಶಿಮ್ಲಾದಲ್ಲಿದ್ದೇವಾ? ಎಂದು ನಿಮಗೆ ಆಶ್ಚರ್ಯವಾಗುವುದು ಖಂಡಿತ. ಯಾಕೆ ಅಂತೀರಾ? ಈ ಸುದ್ದಿಯಲ್ಲಿರುವ ಫೋಟೋ, ವಿಡಿಯೋಗಳನ್ನೊಮ್ಮೆ ನೋಡಿ.

  • News18
  • 3-MIN READ
  • Last Updated :
  • Share this:

    ನವದೆಹಲಿ (ಫೆ.7):  ಸುಂಯ್​ ಎಂದು ಬೀಸುವ ಗಾಳಿ... ಎಲ್ಲಿ ನೋಡಿದರೂ ಬಿಳಿ ಮಂಜುಗಡ್ಡೆಯ ರಾಶಿ. ಸ್ವಟ್ಟರ್​ ಒಳಗೂ ತೂರಿಕೊಂಡು ಬಂದು ಮೈ ನೇವರಿಸುವ ತಣ್ಣನೆಯ ಗಾಳಿ. ಬಿಸಿ ಕಾಫಿ ಕಪ್​ ಕೈಯಲ್ಲಿ ಹಿಡಿದು ಹೊರಗೆ ಕಾಲಿಟ್ಟರೆ ಸ್ವರ್ಗದಲ್ಲಿದ್ದೇವೇನೋ ಎಂಬ ಅನುಭೂತಿ. ಇದನ್ನೆಲ್ಲ ಕೇಳುತ್ತಿದ್ದರೆ ಹಿಮಾಲಯವೋ, ಶಿಮ್ಲಾದ್ದೋ ಚಿತ್ರಣ ನಿಮ್ಮ ಕಣ್ಮುಂದೆ ಬರುತ್ತಿದೆಯಾ? ಆದರೆ ನಿಮ್ಮ ಊಹೆ ತಪ್ಪು.

    ಸದ್ಯಕ್ಕೆ ನವದೆಹಲಿಯ ಕೆಲ ಭಾಗ, ಉತ್ತರ ಪ್ರದೇಶದ ನೊಯ್ಡಾದಲ್ಲಿ ಸಂಪೂರ್ಣ ಮಂಜು ತುಂಬಿಕೊಂಡಿದ್ದು, ಹಲವೆಡೆ ಮಳೆಯೂ ಆಗಿದೆ. ಬಿರುಗಾಳಿ, ಮಳೆ, ದಟ್ಟ ಮಂಜು ತುಂಬಿಕೊಂಡು ನೊಯ್ಡಾ, ಗುರುಗಾಂವ್​, ಫರೀದಾಬಾದ್​ ಮತ್ತು ದೆಹಲಿಯ ಕೆಲವು ಭಾಗದಲ್ಲಿ ಶಿಮ್ಲಾದ ವಾತಾವರಣ ನಿರ್ಮಾಣವಾಗಿದೆ. ಇಂದು ಸಂಜೆಯ ವೇಳೆಗೆ ಈ ಪ್ರದೇಶದಲ್ಲಿ 16 ಡಿಗ್ರಿ ಸೆಲ್ಷಿಯಸ್​ ಉಷ್ಣಾಂಶವಿತ್ತು.


    ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ದೆಹಲಿ ಮತ್ತು ಉತ್ತರಾಖಂಡದಲ್ಲಿ ಬಿರುಗಾಳಿ ಮತ್ತು ಭಾರೀ ಮಳೆಯಾವಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ದೆಹಲಿ, ನೊಯ್ಡಾದ ಫೋಟೋ ಮತ್ತು ವಿಡಿಯೋಗಳನ್ನು ಅಲ್ಲಿನ ನಿವಾಸಿಗಳು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ. ಆ ಫೋಟೋಗಳನ್ನು ನೋಡಿದವರು ವಾವ್​! ಎನ್ನುತ್ತಿದ್ದಾರೆ. ನೀವೇನಾದರೂ ನೊಯ್ಡಾದ ಫೋಟೋ, ವಿಡಿಯೋಗಳನ್ನು ನೋಡಿಲ್ಲವಾದರೆ ನೋಡಿ ಕಣ್ಣು ತಂಪಾಗಿಸಿಕೊಳ್ಳಿ.















    top videos
      First published: