Vikas Tyagi: ಸಾಕುನಾಯಿಯನ್ನು ಕೇದಾರನಾಥಕ್ಕೆ ಕರೆದೊಯ್ದ ವಿಕಾಸ್ ತ್ಯಾಗಿ ಪ್ರಧಾನಿ ಮೋದಿಗೆ ಪತ್ರ ಬರೆದರೇಕೆ?

ಇತ್ತೀಚೆಗೆ ನೋಯ್ಡಾ ಮೂಲದ ವಿಕಾಸ್ ತ್ಯಾಗಿ ಎಂಬ ಬ್ಲಾಗರ್ ತಮ್ಮ ಮುದ್ದಿನ ನಾಯಿ ನವಾಬ್ ನನ್ನು ಪ್ರವಾಸಕ್ಕೆಂದು ತಮ್ಮ ಭುಜದ ಮೇಲೆ ಎತ್ತಿಕೊಂಡು ಕೇದಾರನಾಥ ದೇವಾಲಯಕ್ಕೆ ಕರೆದೊಯ್ದು ಅಲ್ಲಿ ದೇವರಿಗೆ ನಮಸ್ಕರಿಸುವಂತೆ ಮಾಡಿ ನಂತರ ಈ ಘಟನೆಯು ವಿವಾದಕ್ಕೆ ಗುರಿಯಾಗಿದ್ದು ನಮಗೆಲ್ಲಾ ಗೊತ್ತೇ ಇದೆ. ಈಗ ಈ ವಿಷಯಕ್ಕೆ ಸಂಬಂಧಪಟ್ಟಂತೆ ಹೊಸದೊಂದು ಸುದ್ದಿ ಜೋರಾಗಿಯೇ ಹರಿದಾಡುತ್ತಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಸಾಕುನಾಯಿಯನ್ನು ಕೇದಾರನಾಥಕ್ಕೆ ಕರೆದೊಯ್ದ ವಿಕಾಸ್ ತ್ಯಾಗಿ

ಸಾಕುನಾಯಿಯನ್ನು ಕೇದಾರನಾಥಕ್ಕೆ ಕರೆದೊಯ್ದ ವಿಕಾಸ್ ತ್ಯಾಗಿ

  • Share this:
ಇತ್ತೀಚೆಗೆ ನೋಯ್ಡಾ (Noida) ಮೂಲದ ವಿಕಾಸ್ ತ್ಯಾಗಿ (Vikas Tyagi) ಎಂಬ ಬ್ಲಾಗರ್ (Blogger) ತಮ್ಮ ಮುದ್ದಿನ ನಾಯಿ ನವಾಬ್ ನನ್ನು (Nawab) ಪ್ರವಾಸಕ್ಕೆಂದು ತಮ್ಮ ಭುಜದ ಮೇಲೆ ಎತ್ತಿಕೊಂಡು ಕೇದಾರನಾಥ ದೇವಾಲಯಕ್ಕೆ ಕರೆದೊಯ್ದು ಅಲ್ಲಿ ದೇವರಿಗೆ ನಮಸ್ಕರಿಸುವಂತೆ ಮಾಡಿ ನಂತರ ಈ ಘಟನೆಯು ವಿವಾದಕ್ಕೆ (Controversy) ಗುರಿಯಾಗಿದ್ದು ನಮಗೆಲ್ಲಾ ಗೊತ್ತೇ ಇದೆ. ಈಗ ಈ ವಿಷಯಕ್ಕೆ ಸಂಬಂಧಪಟ್ಟಂತೆ ಹೊಸದೊಂದು ಸುದ್ದಿ ಜೋರಾಗಿಯೇ ಹರಿದಾಡುತ್ತಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಏಕೆಂದರೆ ವಿಕಾಸ್ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಮಧ್ಯಪ್ರವೇಶಿಸುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಮತ್ತು ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.

ತನ್ನ ಇಚ್ಛೆಯಂತೆ ವರ್ತಿಸುತ್ತಿದೆ ಬದರೀನಾಥ್-ಕೇದಾರನಾಥ ದೇವಾಲಯ ಸಮಿತಿ
ವಿಕಾಸ್ ತ್ಯಾಗಿ ಪರ ವಕೀಲರು ಕಳುಹಿಸಿದ ಆ ಪತ್ರದಲ್ಲಿ ಬದರೀನಾಥ್-ಕೇದಾರನಾಥ ದೇವಾಲಯ ಸಮಿತಿ (ಬಿಕೆಟಿಸಿ) ತನ್ನ ಇಚ್ಛೆಯಂತೆ ವರ್ತಿಸುತ್ತಿದೆ ಎಂದು ಆರೋಪಿಸಿದ್ದಾರೆ ಎಂದು ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.

ದೆಹಲಿ ಹೈಕೋರ್ಟ್ ವಕೀಲೆ ನೇಹಾ ರಸ್ತೋಗಿ ಅವರು ಸಾಕುನಾಯಿಗಳು ಕೇದಾರನಾಥಕ್ಕೆ ಪ್ರವೇಶಿಸುವುದನ್ನು ನಿಷೇಧಿಸುವ ಯಾವುದೇ ನಿಯಮಗಳ ಅಸ್ತಿತ್ವದ ಬಗ್ಗೆ ಮಾಹಿತಿ ಕೋರಿದ್ದಾರೆ. ಪತ್ರದ ಪ್ರತಿಗಳನ್ನು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಗೆ ಈಗಾಗಲೇ ಕಳುಹಿಸಲಾಗಿದೆ.

ವಿಕಾಸ್ ತ್ಯಾಗಿ ಕುಟುಂಬಕ್ಕೆ ಬೆದರಿಕೆ ಕರೆ ಹಾಗೂ ಸಂದೇಶ
ಬಿಕೆಟಿಸಿ ಬ್ಲಾಗರ್ ವಿರುದ್ಧ ಎಫ್ಐಆರ್ ದಾಖಲಿಸಿದಾಗಿನಿಂದ ತ್ಯಾಗಿ ಮತ್ತು ಅವರ ಕುಟುಂಬವು ಈ ವಿಷಯದಲ್ಲಿ ಬೆದರಿಕೆಗಳನ್ನು ಸ್ವೀಕರಿಸುತ್ತಿರುವುದರಿಂದ ಮಧ್ಯಪ್ರವೇಶವನ್ನು ಕೋರಲಾಗುತ್ತಿದೆ ಎಂದು ರಸ್ತೋಗಿ ಅವರು ಹೇಳಿದರು. ಸಾಮಾಜಿಕ ಮಾಧ್ಯಮಗಳಲ್ಲಿ ಬೆದರಿಕೆಗಳನ್ನು ಕಳುಹಿಸುವ ಜನರಿಂದ ಅವರು ಮಾನಸಿಕವಾಗಿ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ ಎಂದು ಸಹ ಹೇಳಿದರು.

ದೇವಾಲಯಕ್ಕೆ ನಾಯಿಯನ್ನು ಕರೆದೊಯ್ಯುವುದು ಅಪರಾಧವಲ್ಲ
ದೇವಾಲಯಕ್ಕೆ ನಾಯಿಯನ್ನು ಕರೆದೊಯ್ಯುವುದು ಅಪರಾಧವಲ್ಲ ಮತ್ತು ಅದು ಇದ್ದಿದ್ದರೆ, ತ್ಯಾಗಿಯನ್ನು ಕೇದಾರನಾಥಕ್ಕೆ ಹೋಗುವ ರಸ್ತೆಯಲ್ಲಿ ನಿಯೋಜಿಸಲಾದ ಪೊಲೀಸ್ ಸಿಬ್ಬಂದಿ ತಡೆಯುತ್ತಿದ್ದರು ಎಂದು ರಸ್ತೋಗಿ ಹೇಳಿದರು.

ಇದನ್ನೂ ಓದಿ:   Lion And Dog: ಕಾಡಿನಿಂದ ನಾಡಿಗೆ ಬಂದ ಸಿಂಹಕ್ಕೆ ನಾಯಿ ಬೆಸ್ಟ್​ಫ್ರೆಂಡ್, ಪ್ರಾಣಿಗಳ ಗೆಳೆತನ ನೋಡಿ ನೆಟ್ಟಿಗರು ಫಿದಾ

ಆರೋಪಕ್ಕೆ ಬೆಂಬಲವಾಗಿ ನಿಂತ ಬಿಕೆಟಿಸಿ
ಬಿಕೆಟಿಸಿ ತನ್ನ ಆರೋಪಕ್ಕೆ ಬೆಂಬಲವಾಗಿ ನಿಂತಿದೆ. ಈ ಹಿಂದೆ ಬ್ಲಾಗರ್ ವಿರುದ್ಧ ದೂರು ದಾಖಲಿಸಿದ್ದು, ಅವರ ಕೃತ್ಯಗಳು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿವೆ ಎಂದು ಆರೋಪಿಸಿದೆ. ಈ ನಾಯಿ ನವಾಬ್ ತ್ಯಾಗಿ ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್ ಪುಟವನ್ನು ಹೊಂದಿದ್ದು, ಕಳೆದ ನಾಲ್ಕು ವರ್ಷಗಳಿಂದ ಈ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

"ಹೋರಾಡಲು ಸಿದ್ಧರಾಗಿ"
ನವಾಬ್ ಶ್ವಾನದ ಪುಟದಲ್ಲಿ ಇತ್ತೀಚಿನ ಪ್ರವಾಸದ ಸಮಯದಲ್ಲಿ ತೆಗೆಸಿಕೊಂಡ ವೀಡಿಯೋ ಪೋಸ್ಟ್ ಮಾಡಲಾಗಿದ್ದು ಅದಕ್ಕೆ "ಹೋರಾಡಲು ಸಿದ್ಧರಾಗಿ" ಎಂಬ ಶೀರ್ಷಿಕೆಯನ್ನು ಸಹ ಬರೆಯಲಾಗಿದೆ. ಈ ವೀಡಿಯೋ ಪೋಸ್ಟ್ ಗೆ ಈಗಾಗಲೇ 6,000ಕ್ಕೂ ಹೆಚ್ಚು ಲೈಕ್ ಗಳು ಲಭಿಸಿವೆ.
"ಚಿಂತೆ ಮಾಡಬೇಡಿ ನವಾಬ್ ಎಲ್ಲವೂ ಸರಿ ಹೋಗುತ್ತದೆ” ಎಂದು ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. “ಎಲ್ಲವೂ ನವಾಬನ ಕೃಪೆಗೆ ತಿರುಗುತ್ತದೆ ನೋಡಿ. ಮಹಾದೇವನ ಜೊತೆಯಲ್ಲಿ ಅನೇಕರ ಆಶೀರ್ವಾದ ಮತ್ತು ಪ್ರೀತಿ ನಿಮ್ಮ ಮೇಲಿದೆ” ಎಂದು ಇನ್ನೊಬ್ಬರು ಬರೆದಿದ್ದಾರೆ.

ಇದನ್ನೂ ಓದಿ:   Crocodile: ಸ್ವಿಮ್ಮಿಂಗ್​ ಪೂಲ್​ಗೆ ಹಾರೋ ಮುನ್ನ ಹುಷಾರ್, ತಂಪು ಕೊಳದಲ್ಲಿತ್ತು ಡೆಡ್ಲೀ ಮೊಸಳೆ

ಕೇದಾರನಾಥ ಪ್ರವಾಸಕ್ಕೆ ಹೋದಾಗ ದೇವಾಲಯದ ಹೊರಗಿನ ಆವರಣದಲ್ಲಿರುವ ನಂದಿಯ ವಿಗ್ರಹವನ್ನು ಸಾಕುನಾಯಿ ಸ್ಪರ್ಶಿಸುತ್ತಿರುವ ವೀಡಿಯೋ ಹಂಚಿಕೊಂಡು ಅದಕ್ಕೆ "ಹೇ ನಾನು ನವಾಬ್ (ನಾಯಿ) ಮತ್ತು ನನಗೆ ಈಗ 4.5 ವರ್ಷ. ನಾನು ಈ 4 ವರ್ಷಗಳಲ್ಲಿ ಪ್ರಯಾಣಿಸಿದಷ್ಟು, ಒಬ್ಬ ವ್ಯಕ್ತಿ ತನ್ನ ಜೀವಮಾನದ 70 ವಯಸ್ಸಿನಲ್ಲಿ ಇಷ್ಟೊಂದು ಪ್ರಯಾಣಿಸಲು ಸಾಧ್ಯವಾಗುವುದಿಲ್ಲ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ. ನನ್ನ ಒಡೆಯ ನನ್ನನ್ನು ಎಲ್ಲೆಡೆಗೆ ಕರೆದೊಯ್ಯುವುದರಿಂದ ಇದೆಲ್ಲವೂ ಸಂಭವಿಸಿತು" ಎಂದು ಶೀರ್ಷಿಕೆಯನ್ನು ಸಹ ಬರೆದುಕೊಂಡಿದ್ದಾರೆ. ನವಾಬ್ ನನ್ನು ಕೇದಾರನಾಥ ದೇವಾಲಯಕ್ಕೆ ಕರೆದೊಯ್ಯುವ ತನ್ನ ನಿರ್ಧಾರವನ್ನು ವಿಕಾಸ್ ಈ ಹಿಂದೆ ಸಹ ಸಮರ್ಥಿಸಿಕೊಂಡಿದ್ದರು.
Published by:Ashwini Prabhu
First published: