ಶುಚಿ ಮಾಡಲು ಎಂದು ಯಂತ್ರದ ಒಳಗೆ ಇಳಿದವ ಮಾಂಸದ ಮುದ್ದೆಯಾದ


Updated:September 27, 2018, 2:52 PM IST
ಶುಚಿ ಮಾಡಲು ಎಂದು ಯಂತ್ರದ ಒಳಗೆ ಇಳಿದವ ಮಾಂಸದ ಮುದ್ದೆಯಾದ
  • Share this:
ನ್ಯೂಸ್​ 18 ಕನ್ನಡ

ನೋಯ್ಡಾ (ಸೆ. 27): ಯಂತ್ರವನ್ನು ಶುಚಿಗೊಳಿಸಲು ವ್ಯಕ್ತಿಯೊಬ್ಬ ಯಂತ್ರದ ಒಳಗೆ ಇಳಿದಾಗ ಈ  ಬಗ್ಗೆ ತಿಳಿಯದೇ ಮತ್ತೊಬ್ಬ ನೌಕರ ಬಂದು ಯಂತ್ರದ ಸ್ವೀಚ್​ ಆನ್​ ಮಾಡಿದರ ಪರಿಣಾಮ ಶುಚಿಗೊಳಿಸಲು ಇಳಿದಿದ್ದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ,

ಉತ್ತರ ಪ್ರದೇಶದ ನೋಯ್ಡಾ ವಿಶೇಷ ಆರ್ಥಿಕ ವಲಯ ಎರಡನೇ ವಲಯದ ಪ್ಲಾಸ್ಟಿಕ್​ ಕಾರ್ಖಾನೆಯಲ್ಲಿ ಈ ಅವಘಡ ನಡೆದಿದೆ.

ಪ್ಲಾಸ್ಟಿಕ್​ ಕಾರ್ಖಾನೆಯ ನೌಕರ ವಾಜಿದ್,​ ನುಣುಪಾದ ಬ್ಲೇಡ್​ ಹೊಂದಿದ್ದ ದೊಡ್ಡ ಯಂತ್ರವನ್ನು ಶುಚಿಗೊಳಿಸಲು ಯಂತ್ರದ ಒಳಗೆ ಇಳಿದಿದ್ದಾರೆ. ಈ ವೇಳೆ ಮತ್ತೊಬ್ಬ ನೌಕರ ಯಂತ್ರದ ಸ್ವೀಚ್​ ಆನ್​ ಮಾಡಿದ ಪರಿಣಾಮ ಆತ ದೇಹ ಚಟ್ನಿಯಾಗಿದೆ.

ಲೆಕ್ಕವಿಲ್ಲದಷ್ಟು ಸ್ತ್ರೀಯರೊಂದಿಗಿನ ಸಂಬಂಧಕ್ಕೆ ಹುಟ್ಟಿರುವ ಮಗುವಿಗಾಗಿ ಹುಡುಕಾಟ ನಡೆಸುತ್ತಿರುವ ಭೂಪ..!

ಬಿಹಾರ ಮೂಲದ ವಾಜಿದ್​ ಕೆಲಸಕ್ಕೆ  ವಲಸೆ ಬಂದು ಇಲ್ಲಿಯೇ ನೆಲೆಯೂರಿದ್ದರು. ಘಟನೆ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ವಾಜಿದ್​ ಸಹೋದರ ಹೇಳಿಕೆ ಆಧಾರದ ಮೇಲೆ ಕೊಲೆ ಪ್ರಯತ್ನದಲ್ಲಿ ಇಬ್ಬರು ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಕಾರ್ಖಾನೆಯ ಸಿಸಿ ಟಿವಿ ದೃಶ್ಯದ ಪರಿಶೀಲನೆಗೆ ಪೊಲೀಸರು ಮುಂದಾಗಿದ್ದಾರೆ.
First published:September 27, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ