ನೋಯ್ಡಾ: ಯಾವುದೇ ವ್ಯಕ್ತಿಯಾದರೂ ಕೆಲಸ (Job) ಕಳೆದುಕೊಂಡಾಗ ನೋವಿಗೆ ಒಳಗಾಗುವುದು ಸಹಜ. ಯಾರೇ ಆದರೂ ದಿಢೀರ್ ಕೆಲಸದಿಂದ ತೆಗೆದರೆ ಕಂಪನಿಯವರನ್ನು (Company) ಶಪಿಸುತ್ತಾರೆ, ಮೃದು ಸ್ವಭಾವದವರಾದರೆ ಕಣ್ಣೀರಿಡುತ್ತಾರೆ. ಇನ್ನೂ ಕೆಲವರೂ ಬೈಯ್ದುಕೊಂಡು ಬೇರೆ ಕೆಲಸ ಹುಡುಕುತ್ತಾರೆ. ಆದರೆ ಇಲ್ಲೊಬ್ಬ ಖತರ್ನಾಕ್ ವ್ಯಕ್ತಿ ತನ್ನನ್ನು ಕೆಲಸದಿಂದ ವಜಾ (Fired) ಮಾಡಿದ್ದಕ್ಕಾಗಿ ಕೋಪದಲ್ಲಿ ಮಾಲೀಕರ ಕಾರುಗಳ (Car) ಮೇಲೆ ಆ್ಯಸಿಡ್ (Acid) ಎರಚುವ ಮೂಲಕ ಹಾಳು ಮಾಡಿದ್ದಾನೆ. ಹೀಗೆ ಬೆಲೆ ಬಾಳುವ ಕಾರುಗಳನ್ನು ಹಾಳು ಮಾಡಿರುವ ಘಟನೆ ನೋಯ್ಡಾದಲ್ಲಿ (Noida) ನಡೆದಿದ್ದು, ಕಾರು ವಾಶ್ ಮಾಡುವ ವ್ಯಕ್ತಿ ತನ್ನನ್ನು ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಈ ದುಷ್ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.
ನೋಯ್ಡಾದ ಸೆಕ್ಟರ್ 75ನ ಅಪಾರ್ಟ್ಮೆಂಟ್ ನಿವಾಸಿಗಳ ಕಾರುಗಳನ್ನು ತೊಳೆಯುವ ಮೂಲಕ ಜೀವನ ಸಾಗಿಸುತ್ತಿದ್ದ 25 ವರ್ಷದ ರಾಮರಾಜ್ ಎಂಬ ವ್ಯಕ್ತಿಯನ್ನು ಸರಿಯಾಗಿ ಕೆಲಸ ಮಾಡದ ಕಾರಣ ಕೆಲಸದಿಂದ ವಜಾ ಮಾಡಲಾಗಿತ್ತು. ಇದೇ ಕೋಪದಲ್ಲಿ ಆತ ಅಲ್ಲಿನ ನಿವಾಸಿಗಳ ಎಸ್ಯುವಿ ಸೇರಿದಂತೆ 14 ಕಾರುಗಳ ಮೇಲೆ ಆ್ಯಸಿಡ್ ಸುರಿದು ಹಾಳು ಮಾಡಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸೇಡಿಗಾಗಿ ಕೃತ್ಯ
ಆರೋಪಿಯನ್ನು ಹರ್ದೋಯಿ ನಿವಾಸಿ ರಾಮರಾಜ್ ಎಂದು ಗುರುತಿಸಲಾಗಿದೆ. ಆತ ಸರಿಯಾಗಿ ಕೆಲಸ ಮಾಡುವುದಿಲ್ಲ ಎಂದು ಅಲ್ಲಿನ ನಿವಾಸಿಗಳಿಗೆ ಪದೇ ಪದೇ ದೂರುಗಳು ಬರುತ್ತಿದ್ದರಿಂದ, ಅಪಾರ್ಟ್‌ಮೆಂಟ್‌ನ ಕೆಲಸದಿಂದ ಆತನನ್ನು ವಜಾಗೊಳಿಸಲಾಗಿತ್ತು. ಇದಕ್ಕಾಗಿ ಸೇಡು ತೀರಿಸಿಕೊಳ್ಳಲು ರಾಮರಾಜ್ ಈ ಕೆಲಸ ಮಾಡಿದ್ದಾನೆ. ಆ್ಯಸಿಡ್ ಸುರಿದು ಹಲವಾರು ಕಾರುಗಳನ್ನು ಧ್ವಂಸಗೊಳಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
#बेरोजगार हो जाने के गुस्से की #आग
ऐसी भड़की की 15 गाड़ियों के अंदर #तेजाब डाल दिया इस शख्स ने 😳
मामला #Noida के #Sector_75 की सोसायटी का है, जहां के कार सफाईकर्मी
को नौकरी से निकाल दिया गया था. pic.twitter.com/sUhIvTyBPl
— Ruby Arun रूबी अरुण روبی ارون 🇮🇳 (@arunruby08) March 17, 2023
" ಆರೋಪಿ ರಾಮರಾಜ್ ಸೊಸೈಟಿಯಲ್ಲಿ ಕಾರ್ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ. ಕೆಲವು ನಿವಾಸಿಗಳಿಗೆ ಈತನ ಕೆಲಸದ ಗುಣಮಟ್ಟ ಇಷ್ಟವಾಗುತ್ತಿರಲಿಲ್ಲ. ಆದ್ದರಿಂದ ಅವರು ಅವನನ್ನು ಕೆಲಸದಿಂದ ಬಿಡಿಸಿದ್ದರು. ಆದಾಗ್ಯೂ, ಬುಧವಾರ ಸೊಸೈಟಿಗೆ ಬಂದಿರುವ ಆತ ಸುಮಾರು 14 ಕಾರುಗಳ ಮೇಲೆ ಆ್ಯಸಿಡ್ ಸುರಿದು ಹಾನಿಗೊಳಿಸಿದ್ದಾನೆ " ಎಂದು ನೋಯ್ಡಾ ಸೆಕ್ಟರ್ 113 ಪೊಲೀಸ್ ಠಾಣೆಯ ಎಸ್‌ಎಚ್‌ಒ ಜಿತೇಂದ್ರ ಸಿಂಗ್ ಮಾಹಿತಿ ನೀಡಿದ್ದಾರೆ.
ಸಿಸಿಟಿವಿಯಲ್ಲಿ ದೃಶ್ಯ ಸೆರೆ
ರಾಮರಾಜ್ ಮ್ಯಾಕ್ಸ್‌ಬ್ಲಿಸ್ ವೈಟ್ ಹೌಸ್ ಸೊಸೈಟಿಯ ಪಾರ್ಕಿಂಗ್ ಪ್ರದೇಶದಲ್ಲಿ ಕಾರುಗಳ ಮೇಲೆ ಆ್ಯಸಿಡ್ ಎರಚುವುದು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ರಾಮರಾಜ್ ಅಪರಾಧ ಮಾಡಿದ ನಂತರ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಭದ್ರತಾ ಸಿಬ್ಬಂದಿ ಅವನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಹರ್ದೋಯಿ ಜಿಲ್ಲೆಗೆ ಸೇರಿದ ರಾಮರಾಜ್ನನ್ನು ಭದ್ರತಾ ಸಿಬ್ಬಂದಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ರಾಮರಾಜ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 427 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: Earthquake: ಈಕ್ವೆಡಾರ್‌ನಲ್ಲಿ ಪ್ರಬಲ ಭೂಕಂಪಕ್ಕೆ ಕನಿಷ್ಠ 14 ಸಾವು! ನೂರಾರು ಮಂದಿಗೆ ಗಂಭೀರ ಗಾಯ
ಸರ್ಕಾರಿ ನೌಕರಿಗಾಗಿ ಪತಿಯನ್ನು ಕೊಂದ ಪತ್ನಿಗೆ ಜೀವಾವಧಿ ಶಿಕ್ಷೆ
ಗಂಡನ ಸಾವಿನಿಂದ ಬರುವ ಅನುಕಂಪದ ಕೆಲಸಕ್ಕಾಗಿ ಮಹಿಳೆಯೊಬ್ಬಳು ತನ್ನ ಗಂಡನನ್ನೇ ಕೊಂದಿರುವ ಘಟನೆ ಜಾರ್ಖಂಡ್ನಲ್ಲಿ ನಡೆದಿದೆ. ಸರ್ಕಾರಿ ಕೆಲಸದ ಆಸೆಗೆ ಗಂಡನನ್ನು ಹತ್ಯೆ ಮಾಡಿ ಸೀಲಿಂಗ್ ಫ್ಯಾನ್ಗೆ ನೇತುಹಾಕಿ ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ್ದಾಳೆ. ಆಕೆಯ ಕೃತ್ಯ ತನಿಖೆಯಲ್ಲಿ ಬಯಲಾಗಿದ್ದು, ಇದೀಗ ಮಹಿಳೆಗೆ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 10,000 ರೂ. ದಂಡವನ್ನೂ ವಿಧಿಸಿದೆ. 2017ರಲ್ಲಿ ಈ ಘಟನೆ ನಡೆದಿತ್ತು ಎಂದು ತಿಳಿದುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ