ಹೆಂಡತಿಯ ರೇಪ್​, ಕೊಲೆಯಾಗಿದೆ ಎಂದು ಪೊಲೀಸರಿಗೆ ಕರೆ ಮಾಡಿದ ಗಂಡ; ಆಮೇಲೆ ಏನಾಯ್ತು?

ಪೊಲೀಸರಿಗೆ ಸುಳ್ಳು ದೂರು ನೀಡಿ, ಅವರನ್ನು ದಾರಿ ತಪ್ಪಿಸಿದ್ದಕ್ಕೆ  ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Latha CG | news18
Updated:July 4, 2019, 2:52 PM IST
ಹೆಂಡತಿಯ ರೇಪ್​, ಕೊಲೆಯಾಗಿದೆ ಎಂದು ಪೊಲೀಸರಿಗೆ ಕರೆ ಮಾಡಿದ ಗಂಡ; ಆಮೇಲೆ ಏನಾಯ್ತು?
ಸಾಂದರ್ಭಿಕ ಚಿತ್ರ
Latha CG | news18
Updated: July 4, 2019, 2:52 PM IST
ನೋಯ್ಡಾ,(ಜು.04): ತನ್ನ ಹೆಂಡತಿಯನ್ನು ಯಾರೋ ಅತ್ಯಾಚಾರ ಮಾಡಿ, ಕೊಲೆ ಮಾಡಿದ್ದಾರೆ ಎಂದು ಪೊಲೀಸ್​ ಕಂಟ್ರೋಲ್​ ರೂಂಗೆ ಕರೆ ಮಾಡಿದ ವ್ಯಕ್ತಿಯನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ನೋಯ್ಡಾದ ಇಲಹಬ್ಬಾಸ್​ ಗ್ರಾಮದ  ನರೇಶ್​ ಸಿಂಗ್​(30) ಬಂಧಿತ ವ್ಯಕ್ತಿ.

ವ್ಯಕ್ತಿಯ ಕರೆಯನ್ನು ಆಧರಿಸಿ ಸ್ಥಳಕ್ಕೆ ಬಂದ ಪೊಲೀಸರಿಗೆ ಬಿಗ್ ಶಾಕ್ ಕಾದಿತ್ತು. ಯಾಕೆಂದರೆ ಅಲ್ಲಿ ಆತ ಹೇಳಿದ ಪ್ರಕಾರ, ಅಲ್ಲಿ ಯಾವುದೇ ಪರಿಸ್ಥಿತಿ ನಿರ್ಮಾಣವಾಗಿರಲಿಲ್ಲ. ಕರೆ ಮಾಡಿ ದೂರು ನೀಡಿದ್ದ ವ್ಯಕ್ತಿಯ ಹೆಂಡತಿ ಆರಾಮಾಗಿ ಕುಳಿತಿದ್ದರು. ಇದನ್ನು ನೋಡಿ ಪೊಲೀಸರು ಅವಾಕ್ಕಾಗಿದ್ಧಾರೆ. ಕಂಟ್ರೋಲ್​ ರೂಂಗೆ ಕರೆ ಮಾಡಿದ್ದ ವ್ಯಕ್ತಿ ಸುಳ್ಳು ಹೇಳಿದ್ದ ಎಂದು ಪೊಲೀಸರಿಗೆ ತಿಳಿದಿದೆ. ತಕ್ಷಣ ಆತನನ್ನು ಬಂಧಿಸಿದ್ದಾರೆ.

ಸಮುದ್ರ ತೀರದಲ್ಲೊಂದು ಮನಕಲುಕುವ ದೃಶ್ಯ; ಆಹಾರವೆಂದು ಭಾವಿಸಿ ತನ್ನ ಮರಿಗೆ ಸಿಗರೇಟ್​ ತುಂಡು ತಿನಿಸಿದ ತಾಯಿ ಪಕ್ಷಿ

ಮುಂಜಾನೆ ಸುಮಾರು 5 ಗಂಟೆ ಸಮಯದಲ್ಲಿ ಪೊಲೀಸ್​ ಕಂಟ್ರೋಲ್​ ರೂಂಗೆ ಕರೆಯೊಂದು ಬಂದಿತ್ತು. ವ್ಯಕ್ತಿಯೊಬ್ಬ ಎಮೆರ್ಜೆನ್ಸಿ ನಂಬರ್ 100 ಕ್ಕೆ ಕರೆ ಮಾಡಿ, ತನ್ನ ಹೆಂಡತಿಯ ರೇಪ್ ಹಾಗೂ ಮರ್ಡರ್​ ಆಗಿದೆ. ದಯವಿಟ್ಟು ಬೇಗನೇ ಬನ್ನಿ ಎಂದು ತಾನಿರುವ ಸ್ಥಳದ ಅಡ್ರೆಸ್​ ಕೂಡ ನೀಡಿದ್ದ. ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ  ಧಾವಿಸಿದ್ದರು. ಆದರೆ ಅಲ್ಲಿ ಯಾವುದೇ ರೇಪ್​, ಕೊಲೆ ಆಗಿರಲಿಲ್ಲ, ಪರಿಸ್ಥಿತಿ ತಿಳಿಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಬಳಿಕ ಕಂಟ್ರೋಲ್​ ರೂಂಗೆ ಕರೆ ಮಾಡಿದ್ದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಿದಾಗ, ಸುಳ್ಳು ಹೇಳಿರುವುದಾಗಿ ಒಪ್ಪಿಕೊಂಡಿದ್ದಾನೆ. ಪೊಲೀಸರಿಗೆ ಸುಳ್ಳು ದೂರು ನೀಡಿ, ಅವರನ್ನು ದಾರಿ ತಪ್ಪಿಸಿದ್ದಕ್ಕೆ  ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಐಪಿಸಿ ಸೆಕ್ಷನ್​ 107, 116 ಮತ್ತು 151ರ ಅಡಿಯಲ್ಲಿ ದೂರು ದಾಖಲಿಸಿದ್ದಾರೆ.

First published:July 4, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...