Jewar Airport: ಏಷ್ಯಾದಲ್ಲೇ ಅತಿ ದೊಡ್ಡ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾದ ನೋಯ್ಡಾ; ಏನಿದರ ವಿಶೇಷತೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ, ಏಷ್ಯಾದಲ್ಲೇ ಅತಿ ದೊಡ್ಡ ಮತ್ತು ಪ್ರಪ್ರಥಮ ನಿವ್ವಳ ಶೂನ್ಯ ಹೊರ ಸೂಸುವಿಕೆ ವಿಮಾನ ನಿಲ್ದಾಣ ಎಂಬ ಹೆಗ್ಗಳಿಗೆ ಪಾತ್ರವಾಗಿರುವ ಈ ವಿಮಾನ ನಿಲ್ದಾಣದ ಶಂಕು ಸ್ಥಾಪನೆ ಮಾಡಿದ್ದಾರೆ.

ವಿಮಾನ ನಿಲ್ದಾಣದ ದೃಶ್ಯ

ವಿಮಾನ ನಿಲ್ದಾಣದ ದೃಶ್ಯ

  • Share this:
ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರ, ಭವಿಷ್ಯದ ವಾಯುಯಾನ ವಲಯ ರೂಪಿಸುವ ದೃಷ್ಟಿಕೋನದ ಒಂದು ಭಾಗವಾಗಿರುವ, ನೋಯ್ಡಾ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣದ (Noida International Airport) ನಿರ್ಮಾಣ ಕಾರ್ಯವು ಈಗಾಗಲೇ ಆರಂಭವಾಗಿದ್ದು, 2024ರ ಅವಧಿಗೆ ಅದರ ಕಾರ್ಯಾಚರಣೆಗಳು ಆರಂಭವಾಗುವ ನಿರೀಕ್ಷೆ ಇದೆ. ಈ ವಿಮಾನ ನಿಲ್ದಾಣವನ್ನು ಜೇವರ್ ವಿಮಾನ ನಿಲ್ದಾಣ ಎಂದು ಕೂಡ ಕರೆಯಲಾಗುತ್ತದೆ. ಇಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸಮ್ಮುಖದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಏಷ್ಯಾದಲ್ಲೇ ಅತಿ ದೊಡ್ಡ ಮತ್ತು ಪ್ರಪ್ರಥಮ ನಿವ್ವಳ ಶೂನ್ಯ ಹೊರ ಸೂಸುವಿಕೆ ವಿಮಾನ ನಿಲ್ದಾಣ ಎಂಬ ಹೆಗ್ಗಳಿಗೆ ಪಾತ್ರವಾಗಿರುವ ಈ ವಿಮಾನ ನಿಲ್ದಾಣದ ಶಂಕು ಸ್ಥಾಪನೆ ಮಾಡಿದ್ದಾರೆ.

ಜೇವರ್ ವಿಮಾನ ನಿಲ್ದಾಣವು, ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು ಸುಮಾರು 72 ಕಿಮೀ ದೂರದಲ್ಲಿ ಮತ್ತು ದಾದ್ರಿಯಲ್ಲಿರುವ ಮಲ್ಟಿ-ನೋಡಲ್ ಲಾಜಿಸ್ಟಿಕ್ ಹಬ್‍ನಿಂದ 40 ಕಿಮೀ ದೂರದಲ್ಲಿ ಆಯಕಟ್ಟಿನ ಸ್ಥಳದಲ್ಲಿದ್ದು, ಉತ್ತರ ಪ್ರದೇಶದ ಆರ್ಥಿಕತೆ ಉತ್ತೇಜಿಸುವ ನಿರೀಕ್ಷೆ ಇದೆ. ವಿಮಾನ ನಿಲ್ದಾಣ ಕಾರ್ಗೋ ಸೇವೆಗಳಿಂದ ನೋಯ್ಡಾ ದೊಡ್ಡ ಲಾಭ ಪಡೆಯುವ ನಿರೀಕ್ಷೆ ಇದೆ. ಅಧಿಕೃತ ಹೇಳಿಕೆಯ ಪ್ರಕಾರ, ಮುಂಬರುವ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಆರಂಭಿಕ ವರ್ಷದಲ್ಲಿ ಅಕ್ಕಪಕ್ಕದ ಪ್ರದೇಶಗಳಿಗೆ 10,000 ಕೋಟಿ ರೂ. ಹೂಡಿಕೆಗಳನ್ನು ಪಡೆಯುವ ನಿರೀಕ್ಷೆಯಿದೆ.

ಜೇವರ್ ವಿಮಾನ ನಿಲ್ದಾಣ ಕನಸಿನ ಯೋಜನೆ ಹೇಗೆ ಗೊತ್ತಾ..?
ಇದು 4 ಹಂತಗಳಲ್ಲಿ ನಿರ್ಮಾಣಗೊಳ್ಳಲಿರುವ ಗ್ರೀನ್‍ಫೀಲ್ಡ್ ಯೋಜನೆ. ಮೊದಲ ಹಂತದ ಯೋಜನೆಯ ವೆಚ್ಚ 8,916 ಕೋಟಿ ರೂ. ಆಗಿದೆ. ಈ ವಿಮಾನ ನಿಲ್ದಾಣವು 1,334 ಹೆಕ್ಟೇರ್ ಪ್ರದೇಶದಲ್ಲಿ ಹರಡಿಕೊಳ್ಳಲಿದೆ ಮತ್ತು ಸುಮಾರು 1.2 ಕೋಟಿ ಪ್ರಯಾಣಿಕರಿಗೆ ಸೇವೆ ಒದಗಿಸುವ ಸಾಮರ್ಥ್ಯ ಹೊಂದಲಿದೆ.

ಇದನ್ನು ಓದಿ: ಗೌತಮ್​ ಗಂಭೀರ್​ಗೆ ಜೀವ ಬೆದರಿಕೆ ಹಾಕಿದ್ದು ಪಾಕ್ ವಿದ್ಯಾರ್ಥಿ; ತನಿಖೆಯಲ್ಲಿ ಬಹಿರಂಗ

ವಿಮಾನ ನಿಲ್ದಾಣದ ಕೆಲಸಗಳಿಂದ ಮಾತ್ರವಲ್ಲದೆ, ಸಂಗ್ರಹಣೆ, ರಕ್ಷಣೆ ಮತ್ತು ಆಹಾರ ಮುಂತಾದಂತಹ ಉದ್ಯಮಗಳಿಂದಲೂ ಉದ್ಯೋಗಾವಕಾಶಗಳು ಬರುತ್ತವೆ. ಮುಂದಿನ ವರ್ಷಗಳಲ್ಲಿ ಇಂದಿರಾಗಾಂಧಿ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣದ ದಟ್ಟಣೆ ಜೆವರ್ ನಿಲ್ದಾಣದ ಕಡೆಗೆ ತಿರುಗುವ ನಿರೀಕ್ಷೆ ಇದೆ.

ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೊದಲ ಹಂತದಲ್ಲಿ, ವರ್ಷಕ್ಕೆ 12 ಮಿಲಿಯನ್ ಪ್ರಯಾಣಿಕರನ್ನು ನಿರೀಕ್ಷಿಸಲಾಗಿದ್ದು, 2040 - 50 ಅವಧಿಯಲ್ಲಿ, ಜೇವರ್ ವಿಮಾನ ನಿಲ್ದಾಣ 70 ಮಿಲಿಯನ್ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯ ಹೊಂದಲಿದೆ.

ಇದನ್ನು ಓದಿ: ಕಿಡ್ನಿ ಸಮಸ್ಯೆಗೆ ವಿಟಮಿನ್​ 12 ಕೊರತೆ ಕೂಡ ಕಾರಣ; ಅದಕ್ಕೆ ಈ ಆಹಾರ ಸೇವಿಸಿ

ಭೂಸ್ವಾಧೀನ, ಪುನಸ್ಥಾಪನೆ ಮತ್ತು ಪುನರ್ವಸತಿಗಾಗಿ ಉತ್ತರ ಪ್ರದೇಶ ಸರಕಾರ 4,326 ಕೋಟಿ ರೂ. ವೆಚ್ಚ ಮಾಡುತ್ತಿದೆ. ಈ ವಿಮಾನ ನಿಲ್ದಾಣವು ರಕ್ಷಣಾ ಕಾರಿಡಾರ್‌ನಿಂದ 50 ಕಿಮೀ ದೂರದಲ್ಲಿದ್ದು, ಯುವಕರಿಗೆ ಉದ್ಯೋಗ ಒದಗಿಸುವುದರ ಜೊತೆಗೆ ಉದ್ಯಮ ಉತ್ತೆಜಿಸಲು ಕೂಡ ಸಹಾಯ ಮಾಡುತ್ತದೆ. ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನೆಲ ಸಾರಿಗೆ ಕೇಂದ್ರವಾಗಿ ಕಲ್ಪಿಸಲಾಗಿದ್ದು, ಅದು ಮಲ್ಟಿಮೋಡ್ ಟ್ರಾನ್ಸಿಟ್ ಹಬ್ ಹೊಂದಿರುತ್ತದೆ.

ಈಗಾಗಲೇ ಅಸ್ಥಿತ್ವದಲ್ಲಿರುವ ಯಮುನಾ ಎಕ್ಸ್‍ಪ್ರೆಸ್‍ವೇ ಮತ್ತು ಈಸ್ಟರ್ನ್ ಪೆರಿಫೆರಲ್ ಎಕ್ಸ್‌ಪ್ರೆಸ್‍ವೇಗೆ ವಿಮಾನ ನಿಲ್ದಾಣ ಸಮೀಪವಿದೆ. ಜೇವರ್ ವಿಮಾನ ನಿಲ್ದಾಣವು ಹರಿಯಾಣದ ಫರೀದಾಬಾದ್ ಜಿಲ್ಲೆಯ ಬಲ್ಲಭ್‍ಗಢದ ದೆಹಲಿ - ಮುಂಬೈ ಎಕ್ಸ್‍ಪ್ರೆಸ್‍ವೇಗೆ ಕೂಡ ಸಂಪರ್ಕ ಕಲ್ಪಿಸುತ್ತದೆ.
First published: