ಉತ್ತರ ಪ್ರದೇಶ, ಬಿಹಾರ ಹಾಗೂ ಅಸ್ಸಾಂನಲ್ಲಿ ಕಂಪಿಸಿದ ಭೂಮಿ: ಮನೆಗಳಿಂದ ಹೊರಬಂದ ಜನರು


Updated:September 12, 2018, 11:57 AM IST
ಉತ್ತರ ಪ್ರದೇಶ, ಬಿಹಾರ ಹಾಗೂ ಅಸ್ಸಾಂನಲ್ಲಿ ಕಂಪಿಸಿದ ಭೂಮಿ: ಮನೆಗಳಿಂದ ಹೊರಬಂದ ಜನರು

Updated: September 12, 2018, 11:57 AM IST
ನ್ಯೂಸ್​ 18 ಕನ್ನಡ

ಅಸ್ಸಾಂ(ಸೆ.12): ಉತ್ತರ ಪ್ರದೇಶ, ಬಿಹಾರ ಹಾಗೂಗು ಅಸ್ಸಾಂನ ಕೆಲ ಪ್ರದೇಶಗಳಲ್ಲಿ ಬುಧವಾರ ಬೆಳಗ್ಗೆ ಸುಮಾರು 10 ಗಂಟೆಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ತಮ್ಮ ಮನೆಗಳಿಂದ ಓಡಿ ಬಂಣದಿದ್ದಾಋಎ. ಅಸ್ಸಾಂ ಹಾಗೂ ಬಿಹಾರದ ಉತ್ತರ ಪೂರ್ವ ಪ್ರದೇಶಗಳನ್ನು ಹೊರತುಪಡಿಸಿ ಪಶ್ಚಿಮ ಬಂಗಾಳ, ನಾಗಾಲ್ಯಾಂಡ್​, ಉತ್ತರಖಂಡ್​ನ ಕೆಲ ಪ್ರದೇಶಗಳಲ್ಲೂ ಭೂಕಂಪನದ ಅನುಭವವಾಗಿದೆ ಎನ್ನಲಾಗಿದೆ.

ಭೂಕಂಪನ ಸಮೀಕ್ಷಾ ಸಂಸ್ಥೆಯು ಅಸ್ಸಾಂನ ಕೋಕ್ರಾಝಾರ್​ ಇದರ ಕೇಂದ್ರ ಬಿಂದುವಾಗಿತ್ತು ಎನ್ನುವ ಮೂಲಕ ಭೂಮಿ ಕಂಪಿಸಿರುವುದನ್ನು ಖಚಿತಪಡಿಸಿದ್ದಾರೆ. ಇವರು ನೀಡಿರುವ ವರದಿಯಲ್ಲಿ ಬೆಳಗ್ಗೆ ಸರಿಯಾಗಿ 10 ಗಂಟೆ 20 ನಿಮಿಷ 48 ಸೆಕೆಂಡ್​ಗೆ ಭೂಮಿ ಕಂಪಿಸಿದ್ದು, ಸುಮಾರು 15 ನಿಮಿಷಗಳ ಕಾಲ ಭೂಮಿ ಅಲುಗಾಡಿರುವ ಅನುಭವವಾಗಿದೆ ಎಂದು ತಿಳಿದು ಬಂದಿದೆ. ಭೂಕಂಪನದ ಬಳಿಕ ಹಲವಾರು ಮಂದಿ ತಮ್ಮ ಮನೆಗಳಿಂದ ಹೊರಗೋಡಿ ಬಂದಿದ್ದಾರೆ.

ಈವರೆಗೂ ಭೂಕಂಪನದ ತೀವ್ರತೆ ಎಷ್ಟಿತ್ತು ಎಂಬುವುದು ಸ್ಪಷ್ಟವಾಗಿ ತಿಳಿದು ಬಂದಿಲ್ಲವಾದರೂ ರಿಕ್ಟರ್​ ಮಾಪನದಲ್ಲಿ ಇದರ ಕಂಪನದ ತೀವ್ರತೆ 5 ರಷ್ಟು ದಾಖಲಾಗಿದೆ. ಇನ್ನು ಯಾವುದೇ ಪ್ರದೆಶದಲ್ಲೂ ಸಾವು ನೋವುಗಳಾಗಿರುವ ವರದಿಯೂ ಕೇಳಿ ಬಂದಿಲ್ಲ.

ಇದಕ್ಕೂ ಮೊದಲು ಇಂದು ಮುಂಜಾನೆ ಜಮ್ಮು ಕಾಶ್ಮೀರ ಹಾಗೂ ಹರ್ಯಾಣದಲ್ಲಿ ಕಡಿಮೆ ತೀವ್ರತೆಯಲ್ಲಿ ಭೂಮಿ ಕಂಪಿಸಿದ ಅನುಭವವಾಗಿತ್ತೆಂದು ವರದಿಯಾಗಿತ್ತು. ಅತ್ತ ಹರ್ಯಾಣದಲ್ಲಿ ಝಜ್ಜರ್​ ಭೂಕಂಪನದ ಕೇಂದ್ರ ಬಿಂದು ಎಂದು ದಾಖಲಾಗಿತ್ತು.
First published:September 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626