ಒಂದೇ ಕೈಯಲ್ಲಿ ಚಪ್ಪಾಳೆ ಹೊಡೆಯಲು ಅಸಾಧ್ಯ; ಪೊಲೀಸ್- ವಕೀಲರ ಗಲಭೆ ಕುರಿತು ಸುಪ್ರೀಂ ಪ್ರತಿಕ್ರಿಯೆ

ನವೆಂಬರ್ 2ರಂದು ತೀಸ್ ಹಜಾರಿ ಕೋರ್ಟ್ ನಲ್ಲಿ ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರ ಮತ್ತು ವಕೀಲರ ನಡುವೆ ಘರ್ಷಣೆಯಾಗಿತ್ತು. ಈ ವೇಳೆ ವಕೀಲರು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದ್ದರು.

Sushma Chakre | news18-kannada
Updated:November 8, 2019, 3:10 PM IST
ಒಂದೇ ಕೈಯಲ್ಲಿ ಚಪ್ಪಾಳೆ ಹೊಡೆಯಲು ಅಸಾಧ್ಯ; ಪೊಲೀಸ್- ವಕೀಲರ ಗಲಭೆ ಕುರಿತು ಸುಪ್ರೀಂ ಪ್ರತಿಕ್ರಿಯೆ
ಸುಪ್ರೀಂಕೋರ್ಟ್
  • Share this:
ನವದೆಹಲಿ (ನ. 8): ರಾಷ್ಟ್ರ ರಾಜಧಾನಿ ನವದೆಹಲಿಯ ತೀಸ್ ಹಜಾರಿ ಕೋರ್ಟ್​ನಲ್ಲಿ ನಡೆದಿದ್ದ ವಕೀಲರು ಮತ್ತು ಪೊಲೀಸರ ನಡುವಿನ ಗಲಭೆಯ ಕುರಿತು ಮೊದಲ ಬಾರಿಗೆ ಸುಪ್ರೀಂಕೋರ್ಟ್​ ಪ್ರತಿಕ್ರಿಯೆ ನೀಡಿದೆ. ಈ ಪ್ರಕರಣದಲ್ಲಿ ಪೊಲೀಸರು ಮತ್ತು ವಕೀಲರು ಎರಡೂ ಕಡೆಯವರ ತಪ್ಪಿದೆ. ಯಾಕೆಂದರೆ ಒಂದೇ ಕೈಯಲ್ಲಿ ಚಪ್ಪಾಳೆ ಹೊಡೆಯಲು ಸಾಧ್ಯವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.

ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಚೇರ್ಮನ್ ಮನನ್ ಮಿಶ್ರಾ ನ. 2ರಂದು ಕೋರ್ಟ್​ ಆವರಣದಲ್ಲಿ ನಡೆದ ಘಟನೆಯ ಬಗ್ಗೆ ಪೊಲೀಸರ ವಿರುದ್ಧ ದೂರು ನೀಡಿದ್ದರು. ಆ ದೂರಿನ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್​ ಒಂದು ಕೈಯಲ್ಲಿ ಚಪ್ಪಾಳೆ ಹೊಡೆಯಲು ಸಾಧ್ಯವಿಲ್ಲ. ಹೀಗಾಗಿ, ಈ ಪ್ರಕರಣದಲ್ಲಿ ಎರಡೂ ಕಡೆಯವರ ತಪ್ಪಿದೆ ಎಂದು ಘೋಷಿಸಿದೆ.

ಈ ಪ್ರಕರಣದ ವಿಚಾರಣೆ ನಡೆಸಿರುವ ನ್ಯಾ. ಸಂಜಯ್ ಕಿಷನ್ ಕೌಲ್ ಮತ್ತು ನ್ಯಾ. ಕೆ.ಎಂ. ಜೋಸೆಫ್ ನ್ಯಾಯಪೀಠ ಈ ಪ್ರತಿಕ್ರಿಯೆ ನೀಡಿದೆ. ಪೊಲೀಸರ ವರ್ತನೆಯನ್ನು ಖಂಡಿಸಿ ಒರಿಸ್ಸಾದಲ್ಲಿ ವಕೀಲರು ಪ್ರತಿಭಟನೆ ನಡೆಸುತ್ತಿದ್ದಾರೆ. ಒರಿಸ್ಸಾದಲ್ಲಿ ಪ್ರತಿಭಟನೆ, ಪೊಲೀಸರ ವಿರುದ್ಧದ ಹೋರಾಟಗಳು ಆರಂಭವಾಗಿ ಹಲವು ದಿನಗಳೇ ಆದ್ದರಿಂದ ಇಂದು ಸುಪ್ರೀಂಕೋರ್ಟ್​ ತನ್ನ ಪ್ರತಿಕ್ರಿಯೆ ನೀಡಿದೆ.

ಬಾರ್​​ ಮುಚ್ಚಲು ಮುಂದಾದ ಆಂಧ್ರ ಸಿಎಂ: ಸದ್ಯದಲ್ಲೇ ಜಗನ್​​ ಸರ್ಕಾರ ಮಹತ್ವದ ಆದೇಶ

ಸುಪ್ರೀಂಕೋರ್ಟ್​ನ ನ್ಯಾಯಪೀಠದ ವಿಚಾರಣೆ ವೇಳೆ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಕೂಡ ಹಾಜರಿದ್ದರು. ತೀಸ್ ಹಜಾರಿ ಕೋರ್ಟ್​ನಲ್ಲಿ ನಡೆದ ಘಟನೆಯ ಬಳಿಕ ದೆಹಲಿ ಹೈಕೋರ್ಟ್​ನಲ್ಲೂ ಪ್ರತಿಭಟನೆಗಳು ನಡೆಯುತ್ತಿವೆ ಎಂದು ವೇಣುಗೋಪಾಲ್ ಹೇಳಿದ್ದಾರೆ. ಆದರೆ, ಹಿರಿಯ ವಕೀಲರಾದ ಮಿಶ್ರಾ ಮತ್ತು ವಿಕಾಸ್ ಸಿಂಗ್ ಪೊಲೀಸರ ಕ್ರಮಗಳನ್ನು ಪ್ರಶ್ನಿಸಿದ್ದಾರೆ.

ಪೊಲೀಸ್-ವಕೀಲರ ನಡುವೆ ಘರ್ಷಣೆ ವೇಳೆ ಕೈ ಮುಗಿದು ಮನವಿ ಮಾಡಿಕೊಂಡ ಮಹಿಳಾ ಅಧಿಕಾರಿ ಮೇಲೆ ಗುಂಪಿನಿಂದ ಹಲ್ಲೆ

ತೀಸ್ ಹಜಾರಿ ಕೋರ್ಟ್​ನಲ್ಲಿ ನಡೆದ ಅಹಿತಕರ ಘಟನೆಯ ಬಗ್ಗೆ ನಾವು ಪ್ರತಿಕ್ರಿಯಿಸದೇ ಇರುವುದೇ ಒಳ್ಳೆಯದು. ಕೆಲವೊಮ್ಮೆ ನಮ್ಮ ಮೌನವೇ ಹಲವು ಸಮಸ್ಯೆಗಳಿಗೆ ಸರಿಯಾದ ಉತ್ತರವಾಗಿರುತ್ತದೆ. ಎರಡೂ ಕಡೆಗೂ ತಪ್ಪಿರುವುದರಿಂದ ಆ ಬಗ್ಗೆ ಹೆಚ್ಚು ಮಾತನಾಡುವುದು ಬೇಡ ಎಂದು ನ್ಯಾಯಮೂರ್ತಿ ಕೌಲ್ ಹೇಳಿದ್ದಾರೆ.ನವೆಂಬರ್ 2ರಂದು ತೀಸ್ ಹಜಾರಿ ಕೋರ್ಟ್ ನಲ್ಲಿ ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರ ಮತ್ತು ವಕೀಲರ ನಡುವೆ ಘರ್ಷಣೆಯಾಗಿತ್ತು. ಈ ವೇಳೆ ವಕೀಲರು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಪೊಲೀಸರ ಗುಂಡಿನ ದಾಳಿಯಲ್ಲಿ ತಮ್ಮ ಇಬ್ಬರು ಸಹೋದ್ಯೋಗಿಗಳು ಗಾಯಗೊಂಡಿದ್ದಾರೆ ಎಂದು ವಕೀಲರು ಆರೋಪಿಸಿದ್ದರು. ಆದರೆ ವಕೀಲರ ಆರೋಪವನ್ನು ತಳ್ಳಿಹಾಕಿರುವ ಪೊಲೀಸರು, ತಾವು ಗುಂಡು ಹಾರಿಸಿಲ್ಲ ಎಂದು ಹೇಳಿದ್ದರು. ಘಟನೆಯಲ್ಲಿ ಓರ್ವ ವಕೀಲನಿಗೆ ಗಂಭೀರ ಗಾಯವಾಗಿತ್ತು. ಆ ಘರ್ಷಣೆಯ ವಿಡಿಯೋವೊಂದು ವೈರಲ್ ಆಗಿತ್ತು. ನಾಲ್ವರು ಪೊಲೀಸ್ ಅಧಿಕಾರಿಗಳೊಂದಿಗೆ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಗಲಾಟೆ ಮಾಡದಂತೆ ವಕೀಲರಿಗೆ ಕೈ ಮುಗಿದು ಕೇಳಿಕೊಳ್ಳುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿತ್ತು. ಆದರೆ, ಅದಕ್ಕೆ ಮಣಿಯದ ವಕೀಲರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು.

(ವರದಿ: ಉತ್ಕರ್ಷ್​ ಆನಂದ್)

 

First published:November 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading