ಭೌತಶಾಸ್ತ್ರದಲ್ಲಿ ಮೂವರು ವಿಜ್ಞಾನಿಗಳಿಗೆ 2019ರ ಸಾಲಿನ ನೊಬೆಲ್ ಪ್ರಶಸ್ತಿ

ಈ ಎಲ್ಲಾ ನೊಬೆಲ್ ಪ್ರಶಸ್ತಿ ವಿಜೇತರಿಗೆ ಡಿಸೆಂಬರ್ 10ರಂದು ಸ್ವೀಡನ್​ನ ಸ್ಟಾಕ್​ಹಾಮ್ ನಗರದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

news18
Updated:October 8, 2019, 10:00 PM IST
ಭೌತಶಾಸ್ತ್ರದಲ್ಲಿ ಮೂವರು ವಿಜ್ಞಾನಿಗಳಿಗೆ 2019ರ ಸಾಲಿನ ನೊಬೆಲ್ ಪ್ರಶಸ್ತಿ
ನೊಬೆಲ್ ಪ್ರಶಸ್ತಿ ಪಡೆದ ಭೌತಶಾಸ್ತ್ರ ವಿಜ್ಞಾನಿಗಳು
news18
Updated: October 8, 2019, 10:00 PM IST
ಸ್ಟಾಕ್​ಹಾಮ್(ಅ. 08): ನಿನ್ನೆ ವೈದ್ಯಕೀಯ ಕ್ಷೇತ್ರದ ಮೂವರು ವಿಜ್ಞಾನಿಗಳಿಗೆ ನೊಬೆಲ್ ಪಾರಿತೋಷಕ ಸಿಕ್ಕರೆ, ಇವತ್ತೂ ಕೂಡ ಮೂರು ವಿಜ್ಞಾನಿಗಳಿಗೆ ಭೌತಶಾಸ್ತ್ರ ವಿಭಾಗದಲ್ಲಿ ನೊಬೆಲ್ ಬಂದಿದೆ. ಜೇಮ್ಸ್ ಪೀಬಲ್ಸ್, ಮಿಶೆಲ್ ಮೇಯರ್ ಮತ್ತು ಡಿಡಿಯರ್ ಕ್ವೆಲೋಜ್ ಅವರಿಗೆ 2019ನೇ ಸಾಲಿನ ಭೌತಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ ನೀಡಲಾಗಿದೆ.

ನಮ್ಮ ವಿಶ್ವ ಬೆಳೆದು ಬಂದದ್ದು ಹೇಗೆ, ಈ ವಿಶ್ವದಲ್ಲಿ ಭೂಮಿಯ ಸ್ಥಾನ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಲು ಈ ವಿಜ್ಞಾನಿಗಳ ಸಂಶೋಧನೆ ಮತ್ತು ಅಧ್ಯಯನ ಬಹಳ ಮಹತ್ವಪೂರ್ಣವಾದುದು ಎಂದು ಪರಿಗಣಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇವರಿಗೆ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಇದನ್ನೂ ಓದಿ: ವೈದ್ಯಕೀಯ ವಿಭಾಗದಲ್ಲಿ ಮೂವರು ವಿಜ್ಞಾನಿಗಳಿಗೆ ನೋಬೆಲ್ ಪ್ರಶಸ್ತಿ

ಭೌತ ವಿಶ್ವಶಾಸ್ತ್ರದಲ್ಲಿ ಜೇಮ್ಸ್ ಪೀಬಲ್ಸ್ ಹಲವು ಮಹತ್ವದ ಸಂಶೋಧನೆಗಳನ್ನು ಮಾಡಿದ್ದಾರೆ. ಇನ್ನು, ಮಿಶೆಲ್ ಮೇಯರ್ ಮತ್ತು ಡಿಡಿಯರ್ ಕ್ವಿಲೋಜ್ ಅವರು ಎಕ್ಸೋಪ್ಲಾನೆಟ್​ವೊಂದನ್ನು ಪತ್ತೆ ಹೆಚ್ಚಿದ್ದರು. ಎಕ್ಸೋಪ್ಲಾನೆಟ್ ಎಂಬುದು ಸೌರ ವ್ಯವಸ್ಥೆ ಹೊರಗಿರುವ ಗ್ರಹವಾಗಿದೆ. ಈ ಬಾಹ್ಯ ಗ್ರಹದ ಪತ್ತೆಯಿಂದ ವಿಶ್ವ ರಚನೆಯ ಅಭ್ಯಾಸಕ್ಕೆ ಸಹಾಯವಾಗಲಿದೆ.

ನಿನ್ನೆ ವೈದ್ಯವಿಜ್ಞಾನ ವಿಭಾಗದಲ್ಲಿ ವಿಜ್ಞಾನಿಗಳಾದ ವಿಲಿಯಮ್ ಕೇಲಿನ್ ಜೂನಿಯರ್, ಗ್ರೆಗ್ ಸೆಮೆಂಜಾ ಮತ್ತು ಪೀಟರ್ ರಾಟ್​ಕ್ಲಿಫ್ ಅವರಿಗೆ ನೊಬೆಲ್ ಬಹುಮಾನ ಘೋಷಿಸಲಾಗಿತ್ತು. ನಾಳೆ ರಸಾಯಶಾಸ್ತ್ರ, ಗುರುವಾರ ಸಾಹಿತ್ಯ ವಿಭಾಗ ಹಾಗೂ ಶುಕ್ರವಾರ ಶಾಂತಿ ವಿಭಾಗದಲ್ಲಿ ನೊಬೆಲ್ ಬಹುಮಾನ ಘೋಷಿಸಲಾಗುತ್ತದೆ.

ಈ ಎಲ್ಲಾ ನೊಬೆಲ್ ಪ್ರಶಸ್ತಿ ವಿಜೇತರಿಗೆ ಡಿಸೆಂಬರ್ 10ರಂದು ಸ್ವೀಡನ್​ನ ಸ್ಟಾಕ್​ಹಾಮ್ ನಗರದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
Loading...

First published:October 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...