• Home
  • »
  • News
  • »
  • national-international
  • »
  • Nobel Prize: ಈ ಬಾರಿ ನೊಬೆಲ್ ಶಾಂತಿ ಪ್ರಶಸ್ತಿ ಯಾರಿಗೆ ಸಿಗಲಿದೆ? ಇಲ್ಲಿದೆ ವಿವರ

Nobel Prize: ಈ ಬಾರಿ ನೊಬೆಲ್ ಶಾಂತಿ ಪ್ರಶಸ್ತಿ ಯಾರಿಗೆ ಸಿಗಲಿದೆ? ಇಲ್ಲಿದೆ ವಿವರ

ನೊಬೆಲ್ ಪ್ರಶಸ್ತಿ

ನೊಬೆಲ್ ಪ್ರಶಸ್ತಿ

Nobel Prize: 2022 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಹಾಗೂ ಅರ್ಥಶಾಸ್ತ್ರ ಕ್ಷೇತ್ರಕ್ಕೆ ಸಲ್ಲುವ ಪ್ರಶಸ್ತಿಯನ್ನು ಅಕ್ಟೋಬರ್ 10 ರಂದು ಪ್ರಕಟಿಸಲಾಗುತ್ತದೆ.

  • Share this:

ಅಕ್ಟೋಬರ್ ತಿಂಗಳ ಆರಂಭ ಎಂಬುದು ನೊಬೆಲ್ ಪ್ರಶಸ್ತಿಗಳ (Nobel Prize) ಋತು ಎಂದಾಗಿದೆ. ಆರು ದಿನಗಳು, ಆರು ಬಹುಮಾನಗಳು, ಪ್ರಪಂಚದಾದ್ಯಂತವಿರುವ ನೂತನ ವಿಜ್ಞಾನಿಗಳು, ಬರಹಗಾರರು, (Writers) ಅರ್ಥಶಾಸ್ತ್ರಜ್ಞರು ಮತ್ತು ಮಾನವ ಹಕ್ಕುಗಳ ನಾಯಕರ ವಿಶ್ವದ ಅತ್ಯಂತ ಗಣ್ಯರ ಪಟ್ಟಿಗೆ ಹೊಸ ವ್ಯಕ್ತಿಗಳನ್ನು (Persons) ಸೇರಿಸಲಾಗಿದೆ. ಈ ವರ್ಷದ ನೊಬೆಲ್ ಪ್ರಶಸ್ತಿ ಸಮಾರಂಭವು ಔಷಧ ಕ್ಷೇತ್ರಕ್ಕೆ ನೀಡುವ ಪುರಸ್ಕಾರದೊಂದಿಗೆ ಆರಂಭಗೊಳ್ಳಲಿದೆ ನಂತರ ಭೌತಶಾಸ್ತ್ರ, ರಸಾಯನಶಾಸ್ತ್ರ, ಸಾಹಿತ್ಯ (Literature) ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಘೋಷಿಸುವ ಪ್ರಕ್ರಿಯೆ ಮುಂದುವರಿಯುತ್ತದೆ. 2022 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಹಾಗೂ ಅರ್ಥಶಾಸ್ತ್ರ ಕ್ಷೇತ್ರಕ್ಕೆ ಸಲ್ಲುವ ಪ್ರಶಸ್ತಿಯನ್ನು ಅಕ್ಟೋಬರ್ 10 ರಂದು ಪ್ರಕಟಿಸಲಾಗುತ್ತದೆ.


ನೊಬೆಲ್ ಪ್ರಶಸ್ತಿಗಳನ್ನು ಯಾರು ಸ್ಥಾಪಿಸಿದರು


ಔಷಧಿ, ಭೌತಶಾಸ್ತ್ರ, ರಸಾಯನಶಾಸ್ತ್ರ, ಸಾಹಿತ್ಯ ಮತ್ತು ಶಾಂತಿಯ ಬಹುಮಾನಗಳನ್ನು ಶ್ರೀಮಂತ ಸ್ವೀಡಿಷ್ ಕೈಗಾರಿಕೋದ್ಯಮಿ ಮತ್ತು ಡೈನಮೇಟ್ ಅನ್ನು ಸಂಶೋಧಿಸಿದ ಆಲ್ಫ್ರೆಡ್ ನೊಬೆಲ್ ಅವರ ಇಚ್ಛೆಯಂತೆಯೇ ಸ್ಥಾಪಿಸಲಾಯಿತು. ನೊಬೆಲ್ ಅವರ ಮರಣದ ಐದು ವರ್ಷಗಳ ನಂತರ 1901 ರಲ್ಲಿ ಮೊದಲ ಪ್ರಶಸ್ತಿಗಳನ್ನು ನೀಡಲಾಯಿತು.


ಪ್ರಶಸ್ತಿ ಮೌಲ್ಯವೇನು


ಪ್ರತಿಯೊಂದು ಪುರಸ್ಕಾರವು 10 ಮಿಲಿಯನ್ ಕ್ರೋನರ್ (ಸುಮಾರು $900,000) ಮೌಲ್ಯದ್ದಾಗಿದೆ, ರಾಷ್ಟ್ರ ಪತ್ರ ಮತ್ತು ಚಿನ್ನದ ಪದಕದೊಂದಿಗೆ 1896 ರಲ್ಲಿ ನೊಬೆಲ್ ನಿಧನರಾದ ದಿನಾಂಕ ಡಿಸೆಂಬರ್ 10 ರಂದು ಹಸ್ತಾಂತರಿಸಲಾಗುತ್ತದೆ.


ಅರ್ಥಶಾಸ್ತ್ರ ಪ್ರಶಸ್ತಿ


ಅರ್ಥಶಾಸ್ತ್ರ ಪ್ರಶಸ್ತಿ - ಅಧಿಕೃತವಾಗಿ ಆಲ್ಫ್ರೆಡ್ ನೊಬೆಲ್ ಅವರ ನೆನಪಿಗಾಗಿ ಆರ್ಥಿಕ ವಿಜ್ಞಾನದಲ್ಲಿ ಬ್ಯಾಂಕ್ ಆಫ್ ಸ್ವೀಡನ್ ಪ್ರಶಸ್ತಿ ಎಂದು ಕರೆಯಲಾಗುತ್ತದೆ - ಇದನ್ನು ನೊಬೆಲ್ ರೂಪಿಸಿಲ್ಲ, ಆದರೆ 1968 ರಲ್ಲಿ ಸ್ವೀಡನ್‌ನ ಕೇಂದ್ರ ಬ್ಯಾಂಕ್ ರೂಪಿಸಿದೆ.


ಇದನ್ನೂ ಓದಿ: ಕರ್ನಾಟಕಕ್ಕೆ ಕಾದಿದೆ ಕಂಟಕ ಎಂದು ಕೋಡಿಮಠ ಶ್ರೀ ಭವಿಷ್ಯ, ಜಮ್ಮು ಕಾಶ್ಮೀರದ ಕುರಿತು ಮಹತ್ವದ ಘೋಷಣೆ; ಈ ಸಂಜೆಯ ಟಾಪ್ ನ್ಯೂಸ್ ಇಲ್ಲಿವೆ


ಯಾರು ಗೆಲ್ಲುತ್ತಾರೆ ಮತ್ತು ಏಕೆ ಎಂಬುದು ಯಾರಿಗೆ ತಿಳಿದಿರುತ್ತದೆ?


ನ್ಯಾಯಾಧೀಶರು ತಾವು ನಡೆಸಿದ ಎಲ್ಲಾ ರೀತಿಯ ವಿಚಾರ ವಿನಿಮಯ, ಚರ್ಚೆಗಳನ್ನು 50 ವರ್ಷಗಳವರೆಗೆ ಚರ್ಚಿಸುವುದನ್ನು ನೊಬೆಲ್ ಕಾನೂನುಗಳು ನಿಷೇಧಿಸುತ್ತವೆ. ಆದ್ದರಿಂದ 2022 ಕ್ಕೆ ತೀರ್ಪುಗಾರರು ತಮ್ಮ ಆಯ್ಕೆಗಳನ್ನು ಹೇಗೆ ಮಾಡಿದ್ದಾರೆ ಮತ್ತು ಅವರ ನಾಮ ನಿರ್ದೇಶಿತ ಪಟ್ಟಿಗಳಲ್ಲಿ ಯಾರಿದ್ದಾರೆ ಎಂಬುದನ್ನು ನಾವು ಖಚಿತವಾಗಿ ತಿಳಿದುಕೊಳ್ಳಲು ಸ್ವಲ್ಪ ಸಮಯ ಹಿಡಿಯುತ್ತದೆ.


ಅಭ್ಯರ್ಥಿಯನ್ನು ಯಾರು ನಾಮನಿರ್ದೇಶನ ಮಾಡಬಹುದು?


ವಿಶ್ವದಾದ್ಯಂತ ಸಾವಿರಾರು ಜನರು ನೊಬೆಲ್ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳನ್ನು ಸಲ್ಲಿಸಲು ಅರ್ಹರಾಗಿದ್ದಾರೆ. ಅವರಲ್ಲಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು, ಶಾಸಕರು, ಹಿಂದಿನ ನೊಬೆಲ್ ಪ್ರಶಸ್ತಿ ವಿಜೇತರು ಮತ್ತು ಸಮಿತಿಯ ಸದಸ್ಯರು ಸೇರಿದ್ದಾರೆ.


ನೊಬೆಲ್ ಪ್ರಶಸ್ತಿಗೂ ನಾರ್ವೆಗೂ ಸಂಬಂಧವೇನು?


ನೊಬೆಲ್ ಶಾಂತಿ ಪ್ರಶಸ್ತಿಯನ್ನು ನಾರ್ವೆಯಲ್ಲಿ ನೀಡಲಾಗುತ್ತದೆ, ಇತರ ಪ್ರಶಸ್ತಿಗಳನ್ನು ಸ್ವೀಡನ್‌ನಲ್ಲಿ ನೀಡಲಾಗುತ್ತದೆ. ಆಲ್ಫ್ರೆಡ್ ನೊಬೆಲ್ ಇದೇ ರೀತಿ ಪ್ರಶಸ್ತಿಯನ್ನು ನೀಡಬೇಕು ಎಂದು ಬಯಸಿದ್ದರು.


ನೊಬೆಲ್ ಪ್ರಶಸ್ತಿಗೆ ಅರ್ಹತೆ ಪಡೆದುಕೊಳ್ಳುವುದು ಹೇಗೆ?


ಇದಕ್ಕೆಲ್ಲಾ ಒಂದೇ ಉತ್ತರ ತಾಳ್ಮೆ. ಯಾವುದೇ ಪ್ರಗತಿಗೆ ಸಮಯ ಹಿಡಿಯುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಲು, ನೊಬೆಲ್ ತೀರ್ಪುಗಾರರು ವಿಜ್ಞಾನಿಗಳು ಸಾಧಿಸಿರುವ ಪ್ರಗತಿಯನ್ನು ಗುರುತಿಸಲು ದಶಕಗಳ ಸಮಯವನ್ನು ತೆಗೆದುಕೊಳ್ಳುತ್ತಾರೆ. ಅಂತೆಯೇ ವಿಜ್ಞಾನಿಗಳು ಇದಕ್ಕಾಗಿ ಹಲವಾರು ವರ್ಷಗಳ ಕಾಲ ಕಾಯಬೇಕಾಗುತ್ತದೆ. ಹಿಂದಿನ ವರ್ಷದಲ್ಲಿ ಮಾನವ ಕುಲಕ್ಕೆ ಹೆಚ್ಚಿನ ಪ್ರಯೋಜನವನ್ನುಂಟು ಮಾಡಿದವರಿಗೆ ಪಶಸ್ತಿಯನ್ನು ನೀಡಬೇಕು ಎಂಬುದಾಗಿ ನೊಬೆಲ್ ತಿಳಿಸುತ್ತದೆ. ಶಾಂತಿ ಪ್ರಶಸ್ತಿ ಸಮಿತಿಯು ಮಾತ್ರ ಹಿಂದಿನ ವರ್ಷದಲ್ಲಿ ಮಾಡಿದ ಸಾಧನೆಗಳನ್ನು ನಿಯಮಿತವಾಗಿ ಪುರಸ್ಕರಿಸುತ್ತದೆ.


ಇದನ್ನೂ ಓದಿ: ಮಾಸ್ಕ್ ಹಾಕದಿದ್ರೆ ಇನ್ಮೇಲೆ ₹ 500 ಫೈನ್ ಇಲ್ಲ! ಮಹತ್ವದ ನಿರ್ಧಾರ


ನೊಬೆಲ್‌ನ ಆಶಯಗಳ ಪ್ರಕಾರ, ಬಹುಮಾನವು "ರಾಷ್ಟ್ರಗಳ ನಡುವಿನ ಭ್ರಾತೃತ್ವಕ್ಕಾಗಿ, ಸೇನೆಗಳ ನಿರ್ಮೂಲನೆ ಅಥವಾ ಹಿಂತೆಗೆದುಕೊಳ್ಳಲು ಮತ್ತು ಶಾಂತಿ ಒಟ್ಟುಸೇರುವಿಕೆ ಮತ್ತು ಪ್ರಚಾರಕ್ಕಾಗಿ ಅತ್ಯುನ್ನತ ಕೆಲಸ ಮಾಡಿದ ಅರ್ಹ ವ್ಯಕ್ತಿಗೆ ಸಲ್ಲಬೇಕು" ಎಂದಾಗಿದೆ.

First published: