Fact Check: ಪ್ರಧಾನಿ ಮೋದಿಗೆ ನೊಬೆಲ್ ಪ್ರಶಸ್ತಿ? ಈ ಸುದ್ದಿಯ ಅಸಲಿಯತ್ತೇನು?

ಪ್ರಧಾನಿ ಮೋದಿ

ಪ್ರಧಾನಿ ಮೋದಿ

ಈ ಹಿಂದೆ ಹಲವು ಬಾರಿ ನೊಬೆಲ್ ಶಾಂತಿ ಪ್ರಶಸ್ತಿಗೆ ಪ್ರಧಾನಿ ಮೋದಿ ಹೆಸರು ಕೇಳಿಬಂದಿತ್ತು. ಹಲವು ಮಹತ್ಕಾರ್ಯಗಳಿಗಾಗಿ ಮೋದಿಯವರಿಗೆ ನೊಬೆಲ್‌ ಪ್ರಶಸ್ತಿ ಬರಬಹುದು ಎಂಬುವುದು ಹಲವರ ಅಭಿಪ್ರಾಯವಾಗಿದೆ.

  • Share this:

ನವದೆಹಲಿ(ಮಾ. 21): ಕೆಲ ದಿನಗಳ ಹಿಂದೆ ಮಾಧ್ಯಮಗಳಲ್ಲಿ ಸೇರಿ ಎಲ್ಲೆಡೆ ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ನೊಬೆಲ್‌ ಪ್ರಶಸ್ತಿ ಬರುತ್ತದೆಯೇ ಎಂಬುವುದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿತ್ತು. ಈ ಊಹಾಪೋಹಾಗಳಿಗೆ (Gossips) ಕಾರಣವಾಗಿದ್ದು ನೊಬೆಲ್ ಸಮಿತಿಯ ಉಪಾಧ್ಯಕ್ಷ ಅಸ್ಲೆ ತೋಜೆ ಅವರ ಹೇಳಿಕೆ. ನಾರ್ವೇಜಿಯನ್ ನೊಬೆಲ್ ಸಮಿತಿಯ ಉಪ ನಾಯಕ ಅಸ್ಲೆ ತೋಜೆ ಪ್ರಧಾನಿ ನರೇಂದ್ರ ಮೋದಿ ಅವರು ನೊಬೆಲ್ ಶಾಂತಿ ಪ್ರಶಸ್ತಿಯ (Nobel Prize) ಪ್ರಮುಖ ಸ್ಪರ್ಧಿ ಎಂದು ಹೇಳಿದ್ದಾರೆ ಎಂಬ ವರದಿಗಳು ಹರಿದಾಡಿದ್ದವು.


ಇದರ ಬೆನ್ನಲ್ಲೇ ಪ್ರಧಾನಿ ನೊಬೆಲ್‌ ಪ್ರಶಸ್ತಿಗೆ ಭಾಜನರಾಗುತ್ತಾರೆ ಎಂಬ ಚರ್ಚೆಗಳು ಹುಟ್ಟಿಕೊಂಡಿದ್ದವು. ಆದರೆ ಈ ಮಾಧ್ಯಮ ವರದಿಗಳನ್ನು ಅಸ್ಲೆ ತೋಜೆ ಖಡಾಖಂಡಿತವಾಗಿ ತಳ್ಳಿಹಾಕಿದ್ದಾರೆ.


ಇದು ನಕಲಿ ಸುದ್ದಿ ಎಂದ ಅಸ್ಲೆ ತೋಜೆ


ಪ್ರಸ್ತುತ ಅಸ್ಲೆ ತೋಜೆ ಪ್ರಧಾನಿ ನರೇಂದ್ರ ಮೋದಿ ಅವರು ನೊಬೆಲ್ ಶಾಂತಿ ಪ್ರಶಸ್ತಿಯ ಪ್ರಮುಖ ಸ್ಪರ್ಧಿ ಎಂದು ಹೇಳುವ ಮಾಧ್ಯಮ ವರದಿಗಳನ್ನು ತಳ್ಳಿಹಾಕಿದ್ದಾರೆ.


ಇದನ್ನೂ ಓದಿ: Modi With Japan PM: ಜಪಾನ್​ ಪ್ರಧಾನಿಯೊಂದಿಗೆ ಗೋಲ್​ ಗಪ್ಪ, ಲಸ್ಸಿ ಸವಿದ ಪಿಎಂ ಮೋದಿ, ಪಾರ್ಕ್​ನಲ್ಲೇ ಹಲವು ವಿಚಾರಗಳ ಕುರಿತು ಚರ್ಚೆ!


"ಇದು ಸಂಪೂರ್ಣವಾಗಿ ನಕಲಿ ಸುದ್ದಿ. ನಾವು ಇದರ ಬಗ್ಗೆ ಹೆಚ್ಚು ಚರ್ಚಿಸಬಾರದು. ನಾನು ಇದಕ್ಕೆ ಹೋಲುವ ಯಾವುದೇ ಹೇಳಿಕೆಯನ್ನು ನೀಡಿಲ್ಲ" ಎಂದಿದ್ದಾರೆ.


ಭಾರತಕ್ಕೆ ಭೇಟಿ ನೀಡಿರುವ ತೋಜೆ, ಪ್ರಧಾನಿ ನರೇಂದ್ರ ಮೋದಿ ನೊಬೆಲ್ ಶಾಂತಿ ಪ್ರಶಸ್ತಿಗೆ ಪ್ರಮುಖ ಸ್ಪರ್ಧಿ ಎಂದು ಹೇಳಿರುವುದಾಗಿ ಮಾಧ್ಯಮಗಳ ವರದಿ ವೈರಲ್ ಆದ ಬೆನ್ನಲ್ಲೇ ಅವರು ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ.


"ನಾನು ಗೌರವಾನ್ವಿತ ಸಮಿತಿಯ ಉಪ ನಾಯಕನಾಗಿ ಭಾರತಕ್ಕೆ ಬಂದಿಲ್ಲ, ಆದರೆ ಇಂಟರ್ ನ್ಯಾಷನಲ್ ಪೀಸ್ ಆಂಡ್ ಅಂಡರ್​​ಸ್ಟ್ಯಾಂಡಿಗ್ ನಿರ್ದೇಶಕರಾಗಿ ಮತ್ತು ಇಂಡಿಯಾ ಸೆಂಟರ್ ಫೌಂಡೇಶನ್‌ನ ಸ್ನೇಹಿತನಾಗಿ ಭಾರತದಲ್ಲಿದ್ದೇನೆ.


ಯಾವುದೇ ನಾಯಕರು ಈ ಪ್ರಶಸ್ತಿಗೆ ಅರ್ಹರಾಗಲು ಜಗತ್ತಿನಲ್ಲಿ ಶಾಂತಿಗಾಗಿ ಹೆಚ್ಚಿನದನ್ನು ಮಾಡಲು ಪ್ರಯತ್ನಿಸಬೇಕು. ಆದರೆ, ಕೆಲಸವು ಮೊದಲು ಬರುತ್ತದೆ ಮತ್ತು ಜಗತ್ತು ನಂತರ ಬರುತ್ತದೆ" ಎಂದು ತೋಜೆ ನಕಲಿ ವರದಿಗಳ ಬಗ್ಗೆ ಸ್ಪಷ್ಟನೆ ನೀಡಿದರು.


ಮೋದಿಗೆ ನೊಬೆಲ್‌ ಪ್ರಶಸ್ತಿ ವಿಚಾರ ಹಿಂದಿನಿಂದಲೂ ಚರ್ಚೆಯಲ್ಲಿದೆ


ಈ ಹಿಂದೆ ಹಲವು ಬಾರಿ ನೊಬೆಲ್ ಶಾಂತಿ ಪ್ರಶಸ್ತಿಗೆ ಪ್ರಧಾನಿ ಮೋದಿ ಹೆಸರು ಕೇಳಿಬಂದಿತ್ತು. ಹಲವು ಮಹತ್ಕಾರ್ಯಗಳಿಗಾಗಿ ಮೋದಿಯವರಿಗೆ ನೊಬೆಲ್‌ ಪ್ರಶಸ್ತಿ ಬರಬಹುದು ಎಂಬುವುದು ಹಲವರ ಅಭಿಪ್ರಾಯವಾಗಿದೆ.


ಇದನ್ನೂ ಓದಿ: Tirupati: ತಿರುಪತಿ ತಿಮ್ಮಪ್ಪನಿಗೆ ಪ್ರಧಾನಿ ನರೇಂದ್ರ ಮೋದಿಯಿಂದ ಕಾಣಿಕೆ


ಅಂತರರಾಷ್ಟ್ರೀಯ ಯೋಗ ದಿನ ಮತ್ತು ಅಂತರರಾಷ್ಟ್ರೀಯ ಸೌರ ಒಕ್ಕೂಟದಂತಹ ವಿವಿಧ ಉಪಕ್ರಮಗಳ ಮೂಲಕ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು, ಬಡತನವನ್ನು ಕಡಿಮೆ ಮಾಡಲು ಮತ್ತು ಅಂತರರಾಷ್ಟ್ರೀಯ ಸಂಬಂಧಗಳನ್ನು ಸುಧಾರಿಸಲು ಅವರ ಪ್ರಯತ್ನಗಳಿಗಾಗಿ ಪ್ರತಿಷ್ಠಿತ ಪ್ರಶಸ್ತಿ ಸಿಗಬೇಕೆಂಬುವುದು ಹಲವರ ಆಶಯ ಕೂಡ ಹೌದು. ಹೀಗಾಗಿ ಇಂತದ್ದೊಂದು ಚರ್ಚೆ ಈ ಹಿಂದಿನಿಂದಲೂ ಇದೆ.


ಸಿಯೋಲ್‌ ಶಾಂತಿ ಪ್ರಶಸ್ತಿಗೆ ಭಾಜನರಾಗಿರುವ ಮೋದಿ


2018 ರಲ್ಲಿ, ಮಹತ್ವದ ಸಾಧನೆಯಲ್ಲಿ, ಅಂತರರಾಷ್ಟ್ರೀಯ ಸಹಕಾರ ಮತ್ತು ಜಾಗತಿಕ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ನೀಡಿದ ಕೊಡುಗೆಗಾಗಿ ಪ್ರಧಾನಿ ಮೋದಿಯವರಿಗೆ ಪ್ರತಿಷ್ಠಿತ ಸಿಯೋಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಯಿತು.


ಈ ಗೌರವವು, 28 ವರ್ಷಗಳಲ್ಲಿ ಈ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು, ಈ ಹಿಂದೆ ಪ್ರಪಂಚದಾದ್ಯಂತದ 13 ಪ್ರತಿಷ್ಠಿತ ವ್ಯಕ್ತಿಗಳಿಗೆ ನೀಡಲಾಗಿದೆ.


ವಿಶ್ವ ಶಾಂತಿ ಮತ್ತು ಶಕ್ತಿಯ ಸಮತೋಲನಕ್ಕೆ ಮಹತ್ವದ ಕೊಡುಗೆ ನೀಡಿದವರಿಗೆ ಸಿಯೋಲ್ ಶಾಂತಿ ಪ್ರಶಸ್ತಿಯನ್ನು ದ್ವೈವಾರ್ಷಿಕವಾಗಿ ನೀಡಲಾಗುತ್ತದೆ.


ಕುತೂಹಲಕಾರಿಯಾಗಿ, ಈ ಹಿಂದೆ ಈ ಪ್ರಶಸ್ತಿಯನ್ನು ಪಡೆದ ಅನೇಕರು ನೊಬೆಲ್ ಶಾಂತಿ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ, ಇದು ಪಿಎಂ ಮೋದಿ ಅವರಿಗೆ ಈ ವರ್ಷದ ನೋಬೆಲ್‌ ಪ್ರಶಸ್ತಿ ಬರಬಹುದು ಎಂಬ ಊಹಾಪೋಹಗಳಿಗೆ ಮತ್ತಷ್ಟು ಪು಼ಷ್ಠಿ ನೀಡಿತು.


ನೊಬೆಲ್‌ ಶಾಂತಿ ಪ್ರಶಸ್ತಿ


ನೊಬೆಲ್ ಶಾಂತಿ ಪ್ರಶಸ್ತಿಯು ವಿಶ್ವದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾಗಿದೆ, ಶಾಂತಿಯನ್ನು ಉತ್ತೇಜಿಸಲು ಮತ್ತು ಸಂಘರ್ಷಗಳನ್ನು ಪರಿಹರಿಸಲು ಗಮನಾರ್ಹ ಕೊಡುಗೆ ನೀಡಿದವರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆ.


ಈ ವರ್ಷದ ನೊಬೆಲ್ ಪ್ರಶಸ್ತಿ ಘೋಷಣೆಗಳು ಅಕ್ಟೋಬರ್ 2-9 ರಂದು ನಡೆಯಲಿದೆ. ಎಲ್ಲಾ ಪ್ರಕಟಣೆಗಳನ್ನು nobelprize.org ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ನೊಬೆಲ್ ಶಾಂತಿ ಪ್ರಶಸ್ತಿಯನ್ನು ಅಕ್ಟೋಬರ್ 6 ರಂದು ಪ್ರಕಟಿಸಲಾಗುವುದು.

First published: