• Home
  • »
  • News
  • »
  • national-international
  • »
  • Chemistry Nobel: ಮಹತ್ವದ ಸಂಶೋಧನೆಗೆ ರಸಾಯನಶಾಸ್ತ್ರ ನೊಬೆಲ್​ ಪುರಸ್ಕಾರ ಪ್ರಕಟ

Chemistry Nobel: ಮಹತ್ವದ ಸಂಶೋಧನೆಗೆ ರಸಾಯನಶಾಸ್ತ್ರ ನೊಬೆಲ್​ ಪುರಸ್ಕಾರ ಪ್ರಕಟ

ಕ್ಯಾರೊಲಿನ್ ಆರ್. ಬರ್ಟೊಝಿ

ಕ್ಯಾರೊಲಿನ್ ಆರ್. ಬರ್ಟೊಝಿ

ರಸಾಯನಶಾಸ್ತ್ರದ ಹೆಚ್ಚು ಕ್ರಿಯಾತ್ಮಕ ರೂಪಕ್ಕೆ ಅಡಿಪಾಯ ಹಾಕಿದ ಯುಎಸ್ ಮತ್ತು ಡೆನ್ಮಾರ್ಕ್‌ನ ಮೂವರು ರಸಾಯನಶಾಸ್ತ್ರಜ್ಞರಿಗೆ 2022 ರ ನೊಬೆಲ್ ರಸಾಯನಶಾಸ್ತ್ರ ಪ್ರಶಸ್ತಿಯನ್ನು ಬುಧವಾರ ಘೋಷಿಸಲಾಗಿದೆ. 

  • Share this:

ಪ್ರತಿಷ್ಠಿತ ನೊಬೆಲ್‌ ಪ್ರಶಸ್ತಿ (Nobel Award) ವಿಜೇತರ ಘೋಷಣೆ ಸೋಮವಾರದಿಂದ ಆರಂಭವಾಗಿದೆ. ಮೆಡಿಸಿನ್‌, ಭೌತಶಾಸ್ತ್ರ ವಿಭಾಗದ ನಂತರ ಇದೀಗ ರಸಾಯನಶಾಸ್ತ್ರ ವಿಭಾಗದ ಪ್ರಶಸ್ತಿಯನ್ನು (Chemistry Nobel) ಪ್ರಕಟಿಸಲಾಗಿದೆ. ರಸಾಯನಶಾಸ್ತ್ರ ವಿಭಾಗದಲ್ಲಿ‌ ನೊಬೆಲ್ ಪ್ರಶಸ್ತಿಗೆ ಮೂವರು ರಸಾಯನಶಾಸ್ತ್ರರು ಭಾಜನರಾಗಿದ್ದಾರೆ. ಕ್ಯಾರೊಲಿನ್ ಆರ್. ಬರ್ಟೊಝಿ, ಮಾರ್ಟೆನ್ ಮೆಲ್ಡಾಲ್ ಮತ್ತು ಕೆ. ಬ್ಯಾರಿ ಶಾರ್ಪ್‌ಲೆಸ್ ಅವರಿಗೆ ʼಕ್ಲಿಕ್ ಕೆಮಿಸ್ಟ್ರಿ ಮತ್ತು ಬಯೋಆರ್ಥೋಗೋನಲ್ ಕೆಮಿಸ್ಟ್ರಿʼ ಅಭಿವೃದ್ಧಿಗಾಗಿ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ.  ರಸಾಯನಶಾಸ್ತ್ರದ ಹೆಚ್ಚು ಕ್ರಿಯಾತ್ಮಕ ರೂಪಕ್ಕೆ ಅಡಿಪಾಯ ಹಾಕಿದ ಯುಎಸ್ ಮತ್ತು ಡೆನ್ಮಾರ್ಕ್‌ನ ಮೂವರು ರಸಾಯನಶಾಸ್ತ್ರಜ್ಞರಿಗೆ 2022 ರ ನೊಬೆಲ್ ರಸಾಯನಶಾಸ್ತ್ರ ಪ್ರಶಸ್ತಿಯನ್ನು ಬುಧವಾರ ಘೋಷಿಸಲಾಗಿದೆ. 


ಕ್ಯಾರೊಲಿನ್ ಆರ್. ಬರ್ಟೊಝಿ, ಮಾರ್ಟೆನ್ ಮೆಲ್ಡಾಲ್ ಮತ್ತು ಕೆ. ಬ್ಯಾರಿ ಶಾರ್ಪ್ಲೆಸ್ ಅವರಿಗೆ “ಅಣುಗಳನ್ನು ನಿರ್ಮಿಸಲು ಒಂದು ಚತುರ ಸಾಧನ” ಅಭಿವೃದ್ಧಿಪಡಿಸಿದ್ದಕ್ಕಾಗಿ ನೊಬೆಲ್ ಪ್ರಶಸ್ತಿ ನೀಡಲಾಗುತ್ತಿದೆ ಎಂದು ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಸ್ಟಾಕ್ ಹೋಮ್ಸ್ ನಲ್ಲಿ ತಿಳಿಸಿದೆ.


ಯಾವ ಸಾಧನೆಗೆ ಈ ಪ್ರಶಸ್ತಿ?
ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಕ್ಯಾರೊಲಿನ್ ಬರ್ಟೋಝಿ, ಕ್ಲಿಕ್ ರಸಾಯನಶಾಸ್ತ್ರವನ್ನು ಹೊಸ ಆಯಾಮಕ್ಕೆ ತೆಗೆದುಕೊಂಡು ಅದನ್ನು ಜೀವಂತ ಕೋಶಗಳಲ್ಲಿ ಬಳಸಲು ಪ್ರಾರಂಭಿಸಿದ್ದಾರೆ. ಜೀವಕೋಶದ ಸಾಮಾನ್ಯ ರಸಾಯನಶಾಸ್ತ್ರವನ್ನು ಅಡ್ಡಿಪಡಿಸದೆಯೇ ಅವರ ಬಯೋ ಆರ್ಥೋಗೋನಲ್ ಪ್ರತಿಕ್ರಿಯೆಗಳು ನಡೆಯುತ್ತವೆ. ಇನ್ನಿಬ್ಬರಾದ ಬ್ಯಾರಿ ಶಾರ್ಪ್‌ಲೆಸ್ ಮತ್ತು ಮಾರ್ಟೆನ್ ಮೆಲ್ಡಾಲ್ ರಸಾಯನಶಾಸ್ತ್ರದ ಕ್ರಿಯಾತ್ಮಕ ರೂಪಕ್ಕೆ ಅಡಿಪಾಯವನ್ನು ಹಾಕಿದ್ದಾರೆ. ಕ್ಲಿಕ್ ಕೆಮಿಸ್ಟ್ರಿಯಲ್ಲಿ ಅಣುಗಳು ಬ್ಲಾಕ್ ರಚನೆ ಮಾಡಿಕೊಂಡು ಒಟ್ಟಿಗೆ ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ವಿಭಜನೆಯಾಗುತ್ತವೆ ಎಂದು ತೋರಿಸಿವೆ.


ಇದನ್ನೂ ಓದಿ: Economy: ಚೀನಾದ ಕೈಗಾರಿಕಾ ಯೋಜನೆ ತನ್ನೆಡೆ ಸೆಳೆಯಲು ಭಾರತದ ಬಿಗ್ ಪ್ಲಾನ್!


ಅಮೇರಿಕನ್ ಪ್ರೊಫೆಸರ್ ಶಾರ್ಪ್‌ಲೆಸ್ ಸ್ಕ್ರಿಪ್ಸ್ ರಿಸರ್ಚ್‌ನಲ್ಲಿ ಕೆಲಸ ಮಾಡುತ್ತಿದ್ದು ಮೆಲ್ಡಾಲ್ ಕೋಪನ್ ಹ್ಯಾಗನ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಕ್ಲಿಕ್ ರಸಾಯನಶಾಸ್ತ್ರ ಮತ್ತು ಜೈವಿಕ ಆರ್ಥೋಗೋನಲ್ ಪ್ರತಿಕ್ರಿಯೆಗಳು ರಸಾಯನಶಾಸ್ತ್ರವನ್ನು ಕ್ರಿಯಾತ್ಮಕತೆಯ ಯುಗಕ್ಕೆ ಕರೆದೊಯ್ದಿದೆ ಎಂದು ಅಕಾಡೆಮಿ ಹೇಳಿದೆ.


ಸಂಶೋಧನೆಯ ಪ್ರಯೋಜನಗಳು
ಕ್ಲಿಕ್ ರಸಾಯನಶಾಸ್ತ್ರವನ್ನು ಔಷಧಗಳ ಅಭಿವೃದ್ಧಿಯಲ್ಲಿ ಡಿಎನ್ಎ ಮ್ಯಾಪಿಂಗ್ ಮಾಡಲು ಮತ್ತು ಉದ್ದೇಶಕ್ಕಾಗಿ ಹೆಚ್ಚು ಸೂಕ್ತವಾದ ವಸ್ತುಗಳನ್ನು ರಚಿಸಲು ಬಳಸಲಾಗುತ್ತದೆ. ಜೈವಿಕ ಆರ್ಥೋಗೋನಲ್ ಪ್ರತಿಕ್ರಿಯೆಗಳನ್ನು ಬಳಸಿಕೊಂಡು, ಸಂಶೋಧಕರು ಕ್ಯಾನ್ಸರ್ ಫಾರ್ಮಾಸ್ಯುಟಿಕಲ್‌ಗಳ ಗುರಿಯನ್ನು ಸುಧಾರಿಸಿದ್ದಾರೆ. ಕಳೆದ ವರ್ಷ ಈ ಪ್ರಶಸ್ತಿಯನ್ನು ವಿಜ್ಞಾನಿಗಳಾದ ಬೆಂಜಮಿನ್ ಲಿಸ್ಟ್ ಮತ್ತು ಡೇವಿಡ್ ಡಬ್ಲ್ಯೂಸಿ ಮ್ಯಾಕ್‌ಮಿಲನ್ ಅವರಿಗೆ ನೀಡಲಾಗಿತ್ತು.


ಯಾರಿಗೆಲ್ಲಾ ಪ್ರಶಸ್ತಿ ಬಂದಿದೆ?
ಸ್ವೀಡಿಷ್ ವಿಜ್ಞಾನಿ ಸ್ವಾಂಟೆ ಪಾಬೊ ಅವರು ವೈದ್ಯಕೀಯದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸುವುದರೊಂದಿಗೆ ನೊಬೆಲ್ ಪ್ರಶಸ್ತಿ ಘೋಷಣೆಗಳು ಸೋಮವಾರ ಪ್ರಾರಂಭವಾದವು. ಅಳಿವಿನಂಚಿನಲ್ಲಿರುವ ಹೋಮಿನಿನ್‌ಗಳು ಮತ್ತು ಮಾನವ ವಿಕಾಸದ ಜೀನೋಮ್‌ಗಳಿಗೆ ಸಂಬಂಧಿಸಿದಂತೆ ವೈದ್ಯಕೀಯ ವಿಭಾಗದಲ್ಲಿ ಸ್ವಾಂಟೆ ಪಾಬೊಗೆ ನೊಬೆಲ್ ಪ್ರಶಸ್ತಿ‌ ಘೋಷಿಸಲಾಗಿದೆ. ಇನ್ನೂ ಮಂಗಳವಾರ ಭೌತಶಾಸ್ತ್ರದಲ್ಲಿ ಪ್ರತ್ಯೇಕವಾದಾಗಲೂ ಸಣ್ಣ ಕಣಗಳು ಪರಸ್ಪರ ಸಂಪರ್ಕವನ್ನು ಉಳಿಸಿಕೊಳ್ಳಬಹುದು ಎಂಬ ಸಂಶೋಧನೆಗೆ ಫ್ರೆಂಚ್‌ನ ಅಲೈನ್ ಆಸ್ಪೆಕ್ಟ್, ಅಮೇರಿಕನ್ ಜಾನ್ ಎಫ್ ಕ್ಲೌಸರ್ ಮತ್ತು ಆಸ್ಟ್ರಿಯನ್ ಆಂಟನ್ ಝೈಲಿಂಗರ್‌ ಈ ಮೂವರು ವಿಜ್ಞಾನಿಗಳು ಜಂಟಿಯಾಗಿ ಪ್ರಶಸ್ತಿ ಗೆದ್ದಿದ್ದಾರೆ.


ಇದನ್ನೂ ಓದಿ: Chennai: 12,000 ವರ್ಷ ಹಳೆಯ ಕಲ್ಲಿನ ಉಪಕರಣಗಳು ಪತ್ತೆ! ಇವು ಬರೀ ಕಲ್ಲಲ್ಲ, ಅಮೂಲ್ಯ ನಿಧಿ!


ಗುರುವಾರ ಸಾಹಿತ್ಯ ವಿಭಾಗದೊಂದಿಗೆ ಪ್ರಶಸ್ತಿ ಘೋಷಣೆ ಮುಂದುವರಿಯುತ್ತವೆ. 2022ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಶುಕ್ರವಾರ ಮತ್ತು ಅರ್ಥಶಾಸ್ತ್ರ ಪ್ರಶಸ್ತಿಯನ್ನು ಸೋಮವಾರ ಪ್ರಕಟಿಸಲಾಗುವುದು.


ಡಿಸೆಂಬರ್‌ 10ಕ್ಕೆ ಪ್ರಶಸ್ತಿ ಪುರಸ್ಕಾರ
ಪ್ರತಿ ನೊಬೆಲ್‌ ಪ್ರಶಸ್ತಿಯು 10 ದಶಲಕ್ಷ ಕ್ರೊನೊರ್‌ (ಸುಮಾರು 7.36 ಕೋಟಿ ರೂಪಾಯಿ) ಮೊತ್ತವನ್ನು ಹೊಂದಿರುತ್ತದೆ. ಡಿಸೆಂಬರ್‌ ಹತ್ತರಂದು ನೊಬೆಲ್‌ ಪಡೆದವರಿಗೆ ಪ್ರಶಸ್ತಿ ಸರ್ಟಿಫಿಕೇಟ್‌ ಮತ್ತು ಚಿನ್ನದ ಪದಕವನ್ನೂ ನೀಡಲಾಗುತ್ತದೆ.
ನೊಬೆಲ್‌ ಪ್ರಶಸ್ತಿಯನ್ನು ಸ್ವಿಡನ್‌ನ ಕೈಗಾರಿಕೋದ್ಯಮಿ ಆಲ್‌ಫ್ರೆಡ್‌ ನೊಬೆಲ್‌ ಅವರು ಆರಂಭಿಸಿದರು 1901ರಲ್ಲಿ ಮೊದಲ ಬಾರಿಗೆ ನೊಬೆಲ್‌ ಪ್ರಶಸ್ತಿ ನೀಡಲಾಯಿತು. ವಿಜೇತರಿಗೆ ನೀಡುವ ಬಹುಮಾನ ಮೊತ್ತದ ಹಣವು ಆಲ್ಫ್ರೆಡ್ ನೊಬೆಲ್ 1895ರಲ್ಲಿ ಬಿಟ್ಟುಹೋದ ಉಯಿಲಿನಿಂದ ಬರುತ್ತದೆ.

Published by:ಗುರುಗಣೇಶ ಡಬ್ಗುಳಿ
First published: