HOME » NEWS » National-international » NOBEL AWARDEE MALALA YOUSAFZAI SHOOTER TALIBAN TERRORIST THREATENS HER ON TWITTER STG SCT

Malala: ನೊಬೆಲ್‌ ಶಾಂತಿ ಪುರಸ್ಕೃತೆ ಮಲಾಲಾಗೆ ತಾಲಿಬಾನ್‌ ಉಗ್ರನಿಂದ ಮತ್ತೆ ಕೊಲೆ ಬೆದರಿಕೆ!

ತಾಲಿಬಾನ್ ಭಯೋತ್ಪಾದಕ ಎಹಸನುಲ್ಲಾ ಎಹಸಾನ್ 2012ರಲ್ಲಿ ಮಲಾಲಾ ಅವರ ತಲೆಗೆ ಗುಂಡು ಹಾರಿಸಿ ಹತ್ಯೆ ಮಾಡಲು ಯತ್ನಿಸಿದ್ದ. ಇದೀಗ ಮತ್ತೆ ಹತ್ಯೆ ಮಾಡುವ ಬೆದರಿಕೆ ಹಾಕಿದ್ದಾನೆ.

news18-kannada
Updated:February 19, 2021, 3:22 PM IST
Malala: ನೊಬೆಲ್‌ ಶಾಂತಿ ಪುರಸ್ಕೃತೆ ಮಲಾಲಾಗೆ ತಾಲಿಬಾನ್‌ ಉಗ್ರನಿಂದ ಮತ್ತೆ ಕೊಲೆ ಬೆದರಿಕೆ!
ಮಲಾಲ
  • Share this:
ನವದೆಹಲಿ : ಪಾಕಿಸ್ತಾನದ ಹೆಣ್ಣುಮಕ್ಕಳ ಶಿಕ್ಷಣ ಹಕ್ಕುಗಳ ಪರ ಹೋರಾಟಗಾರ್ತಿ ಹಾಗೂ ವಿಶ್ವದ ಅತೀ ಕಿರಿಯ ನೊಬೆಲ್ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸುಫ್ ಝಾಯಿ ಅವರಿಗೆ 9 ವರ್ಷಗಳ ಹಿಂದೆಯೇ ಗುಂಡಿಟ್ಟು ಹತ್ಯೆಗೆ ಯತ್ನಿಸಿದ್ದ ತಾಲಿಬಾನ್ ಉಗ್ರ ಇದೀಗ ಮತ್ತೆ ಹತ್ಯೆ ಮಾಡುವ ಬೆದರಿಕೆ ಹಾಕಿದ್ದಾನೆ.

ಈ ಬಗ್ಗೆ ಟ್ವೀಟ್ ಮಾಡಿರುವ ತಾಲಿಬಾನ್ ಭಯೋತ್ಪಾದಕ ಎಹಸನುಲ್ಲಾ ಎಹಸಾನ್, ‘ನೀನು ಪಾಕಿಸ್ತಾನಕ್ಕೆ ಬಾ… ಹಿಂದಿನಂತೆ ಈ ಬಾರಿ ನಾನು ತಪ್ಪು ಮಾಡುವುದಿಲ್ಲ. ಮಲಾಲಾರನ್ನು ಕೊಲೆ ಮಾಡಿಯೇ ತೀರುತ್ತೇನೆ’ ಎಂದು ಬೆದರಿಕೆ ಹಾಕಿದ್ದಾನೆ. ಇದರ ಬೆನ್ನಲ್ಲೇ ಎಹಸನುಲ್ಲಾ ಟ್ವಿಟರ್ ಖಾತೆಯನ್ನು ಸಂಪೂರ್ಣವಾಗಿ ಬ್ಯಾನ್ ಮಾಡಲಾಗಿದೆ. ಈತ 9 ವರ್ಷದ ಹಿಂದೆ ಅಂದರೆ 2012ರಲ್ಲಿ ಮಲಾಲಾ ಅವರ ತಲೆಗೆ ಗುಂಡು ಹಾರಿಸಿ ಹತ್ಯೆ ಮಾಡಲು ಯತ್ನಿಸಿದ್ದ. ಇದೀಗ ಮತ್ತೆ ಹತ್ಯೆ ಮಾಡುವ ಬೆದರಿಕೆ ಹಾಕಿದ್ದಾನೆ.
ತಮಗೆ ಮತ್ತೆ ಹತ್ಯೆ ಬೆದರಿಕೆ ಬಂದಿರುವ ಬಗ್ಗೆ ಮಲಾಲಾ ಆತಂಕ ವ್ಯಕ್ತಪಡಿಸಿದ್ದು, ‘ಈತ ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನದ ಮಾಜಿ ವಕ್ತಾರ. ನನ್ನ ಮತ್ತು ಅನೇಕ ಮುಗ್ಧ ಜನರ ಮೇಲಿನ ದಾಳಿಯ ಹೊಣೆ ಹೊತ್ತಿರುವ ವ್ಯಕ್ತಿ. ಆತನೇ ಈಗ ಸಾಮಾಜಿಕ ಮಾಧ್ಯಮದಲ್ಲಿ ಜನರಿಗೆ ಬೆದರಿಕೆ ಹಾಕುತ್ತಿದ್ದಾರೆ. ಆತ ಹೇಗೆ ತಪ್ಪಿಸಿಕೊಂಡ?’ ಎಂದು ಟ್ವೀಟ್ ಮಾಡುವ ಮೂಲಕ ಮಲಾಲಾ ಪ್ರಶ್ನಿಸಿದ್ದಾರೆ. ಈ ಹತ್ಯೆ ಬೆದರಿಕೆಗೆ ಮಲಾಲಾ ಮಾತ್ರವಲ್ಲದೇ ಅನೇಕರು ಆತಂಕ ವ್ಯಕ್ತಪಡಿಸಿದ್ದಾರೆ. ಟ್ವಿಟರ್ ಎಹಸನುಲ್ಲಾ ಖಾತೆಯನ್ನು ಸಂಪೂರ್ಣವಾಗಿ ತೆಗೆದುಹಾಕಿದ್ದರೂ ಕೂಡ ಆತ ಈ ರೀತಿ ಬೆದರಿಕೆ ಹಾಕಿ ಟ್ವೀಟ್ ಮಾಡಲು ಹೇಗೆ ಅನುಮತಿ ನೀಡಲಾಯಿತು ಎಂದು ಅನೇಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: Viral Video | ಮೇಲೆ ಹಾರಿ ತಟ್ಟೆಗೆ ಬೀಳುತ್ತೆ ಮಸಾಲೆ ದೋಸೆ!; ಮುಂಬೈನ ಫ್ಲೈಯಿಂಗ್ ದೋಸೆ ವಿಡಿಯೋ ವೈರಲ್

ಕಳೆದ ವರ್ಷ ಫೆಬ್ರವರಿಯಲ್ಲಿ ಎಹಸನುಲ್ಲಾ ತಪ್ಪಿಸಿಕೊಂಡ ಸುದ್ದಿ ಹೊರಬಂದಾಗ ಹಲವು ತಾಲಿಬಾನ್ ದಾಳಿಗೆ ತನ್ನ ಗುಂಪಿನ ಪರವಾಗಿ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ. ತಾನು ತಪ್ಪಿಸಿಕೊಂಡಿರುವ ಬಗ್ಗೆ ಟ್ವಿಟರ್ ನಲ್ಲಿ ಆತ ಘೋಷಿಸಿಕೊಂಡಿದ್ದ. ನಂತರ ಈ ತಿಂಗಳ ಆರಂಭದಲ್ಲಿ ಪಾಕಿಸ್ತಾನದ ಮಾಧ್ಯಮಗಳಿಗೆ ಆಡಿಯೋ ಸಂದೇಶವನ್ನು ಕೂಡ ಕಳುಹಿಸಿದ್ದ. ಈ ಸಂಗತಿಯನ್ನು ಪಾಕಿಸ್ತಾನದ ಆಂತರಿಕ ಸಚಿವ ಇಜಾಜ್ ಷಾ ದೃಢಪಡಿಸಿದ್ದಾರೆ. ಎಹಸನುಲ್ಲಾ ಅವರನ್ನು 3 ವರ್ಷಗಳ ಕಾಲ ಬಂಧನದಲ್ಲಿರಿಸಿದ್ದ ಪಾಕಿಸ್ತಾನದ ಮಿಲಿಟರಿ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ.

ಮಲಾಲಾ ಹತ್ಯೆಗೆ ಯತ್ನಿಸಿದ್ದು ಮಾತ್ರವಲ್ಲದೆ 2014ರಲ್ಲಿ ಪೇಶಾವರ್ ಆರ್ಮಿ ಶಾಲೆಯ ಮೇಲೆ ಭಯೋತ್ಪಾದಕ ದಾಳಿ ನಡೆಸಿದ್ದಕ್ಕಾಗಿ ಎಹಸನುಲ್ಲಾನನ್ನು ಬಂಧಿಸಿ ಜೈಲಿನಲ್ಲಿರಿಸಲಾಗಿತ್ತು. ಆತ ತಪ್ಪಿಸಿಕೊಂಡಾಗಿನಿಂದ ಉರ್ದು ಭಾಷೆಯಲ್ಲಿ ಟ್ವೀಟ್ ಮಾಡುತ್ತಾ ಬೆದರಿಕೆ ಹಾಕುತ್ತಿದ್ದು, ಪಾಕಿಸ್ತಾನಿ ಮೂಲದ ಪತ್ರಕರ್ತರೊಂದಿಗೆ ವಿಚಾರ ವಿನಿಮಯ ಮಾಡಿಕೊಂಡಿದ್ದಾನೆ. ಆತ ಅನೇಕ ಟ್ವಿಟರ್ ಖಾತೆಗಳನ್ನು ಹೊಂದಿರುವ ಶಂಕೆ ಇದ್ದು, ಅವುಗಳನ್ನು ಅಮಾನತುಗೊಳಿಸಬೇಕಾಗಿದೆ.

ಪಾಕಿಸ್ತಾನ ಸರ್ಕಾರವು ಈ ಬೆದರಿಕೆಯ ಬಗ್ಗೆ ತನಿಖೆ ನಡೆಸುತ್ತಿದೆ ಮತ್ತು ತಕ್ಷಣವೇ ಆತನ ಖಾತೆಯನ್ನು ಬ್ಯಾನ್ ಮಾಡುವಂತೆ ಟ್ವಿಟರ್‌ಗೆ ಸೂಚಿಸಲಾಗಿದೆ ಎಂದು ಪ್ರಧಾನ ಮಂತ್ರಿ ಸಲಹೆಗಾರ ರಾವೂಫ್ ಹಸನ್ ಹೇಳಿದ್ದಾರೆ. 2017ರಲ್ಲಿ ಬಂಧನವಾಗಿದ್ದ ಎಹಸನುಲ್ಲಾ 2020ರ ಜನವರಿಯಲ್ಲಿ ತಪ್ಪಿಸಿಕೊಂಡಿದ್ದರ ಬಗ್ಗೆ ಉತ್ತರ ನೀಡುವಂತೆ ಮಲಾಲಾ ಅವರು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಪಾಕ್ ಸೇನೆಗೆ ಟ್ವಿಟರ್ ಮೂಲಕ ಪ್ರಶ್ನಿಸಿದ್ದಾರೆ.
Published by: Sushma Chakre
First published: February 19, 2021, 3:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories