• Home
  • »
  • News
  • »
  • national-international
  • »
  • Nobel Prize in literature 2022: ನೊಬೆಲ್ ಸಾಹಿತ್ಯ ಪ್ರಶಸ್ತಿ ಇದೇ ಮೊದಲ ಬಾರಿ ಫ್ರೆಂಚ್ ಲೇಖಕಿಗೆ; ಇವರ ಸಾಧನೆ ಹೀಗಿದೆ

Nobel Prize in literature 2022: ನೊಬೆಲ್ ಸಾಹಿತ್ಯ ಪ್ರಶಸ್ತಿ ಇದೇ ಮೊದಲ ಬಾರಿ ಫ್ರೆಂಚ್ ಲೇಖಕಿಗೆ; ಇವರ ಸಾಧನೆ ಹೀಗಿದೆ

ಅನ್ನಿ ಎರ್ನಾಕ್ಸ್

ಅನ್ನಿ ಎರ್ನಾಕ್ಸ್

ಈ ಪೈಕಿ ಕೇವಲ 17 ಮಹಿಳಾ ಲೇಖಕಿಯರಿಗೆ ಮಾತ್ರ ಸಾಹಿತ್ಯಕ್ಕೆ ಸಂಬಂಧಿಸಿದ ನೊಬೆಲ್ ಪ್ರಶಸ್ತಿ ನೀಡಲಾಗಿದೆ. ಈ ವರ್ಷದ ವಿಜೇತ, ಲೇಖಕಿ ಅನ್ನಿ ಎರ್ನಾಕ್ಸ್ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದ 17 ನೇ ಮಹಿಳಾ ಲೇಖಕಿಯಾಗಿದ್ದಾರೆ.

  • Share this:

2022 ನೇ ಸಾಲಿನ ನೊಬೆಲ್ ಸಾಹಿತ್ಯ ಪ್ರಶಸ್ತಿಯನ್ನು (Nobel Prize in literature 2022) ಫ್ರೆಂಚ್ ಬರಹಗಾರ್ತಿ ಅನ್ನಿ ಎರ್ನಾಕ್ಸ್ ಅವರಿಗೆ ಅಕ್ಟೋಬರ್ 6, 2022 ರಂದು ಸ್ಟಾಕ್‌ಹೋಮ್‌ನಲ್ಲಿರುವ ಸ್ವೀಡಿಷ್ ಅಕಾಡೆಮಿಯಲ್ಲಿ ನೀಡಲಾಯಿತು. ಪ್ರಶಸ್ತಿಯು 10 ಮಿಲಿಯನ್ ಸ್ವೀಡಿಷ್ ಕ್ರೋನರ್ (£807,000) ಮೌಲ್ಯದ್ದಾಗಿದೆ. ವೈಯಕ್ತಿಕ ಸ್ಮರಣೆಯ ಮೂಲಾಧಾರಗಳು, ಪ್ರತ್ಯೇಕತೆ ಹಾಗೂ ಸಾಮೂಹಿಕ ನಿರ್ಬಂಧಗಳನ್ನು ಬಹಿರಂಗಪಡಿಸಲು ಪ್ರದರ್ಶಿಸಿದ ಧೈರ್ಯ ಹಾಗೂ ನಿಷ್ಠತೆಗಾಗಿ ಅನ್ನಿ ಎರ್ನಾಕ್ಸ್ ಅವರಿಗೆ (French Author Annie Ernaux) ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ನೊಬೆಲ್ ಸಮಿತಿ ತಿಳಿಸಿದೆ.


ಎರ್ನಾಕ್ಸ್ ತಮ್ಮ ಬರವಣಿಗೆಯಲ್ಲಿ ಸ್ಥಿರ ಹಾಗೂ ವಿಭಿನ್ನ ಕೋನಗಳಿಂದ ಲಿಂಗ, ಭಾಷೆ ಹಾಗೂ ವರ್ಗಕ್ಕೆ ಸಂಬಂಧಿಸಿದ ಅಸಮಾನತೆಯ ಜೀವನವನ್ನು ಪರಿಶೀಲಿಸಿದ್ದು ಆಕೆಯ ಬರವಣಿಗೆಯ ದಾರಿಯು ದೀರ್ಘ ಮತ್ತು ಪ್ರಯಾಸದಾಯಕವಾಗಿತ್ತು ಎಂಬುದು ನೊಬೆಲ್ ಪ್ರಶಸ್ತಿಯ ವೆಬ್‌ಸೈಟ್‌ನಲ್ಲಿ ಲೇಖಕರ ಬಗೆಗಿನ ಮಾಹಿತಿಯು ತಿಳಿಸುತ್ತದೆ.


ಸಮರ್ಥ ಬರಹಗಾರ್ತಿಯಾದ ಅನ್ನಿ ಎರ್ನಾಕ್ಸ್
ಅನ್ನಿ ಎರ್ನಾಕ್ಸ್ 1940 ರಲ್ಲಿ ಜನಿಸಿದರು. ಉತ್ತರ ಫ್ರಾನ್ಸ್‌ನ ನಾರ್ಮಂಡಿಯಲ್ಲಿರುವ ಯ್ವೆಟಾಟ್ ಎಂಬ ಸಣ್ಣ ಪಟ್ಟಣದಲ್ಲಿ ಬೆಳೆದರು. ಆಕೆಯ ಪೋಷಕರು ನಗರದಲ್ಲಿ ಕಿರಾಣಿ ಅಂಗಡಿ ಹಾಗೂ ಕೆಫೆಯನ್ನಿರಿಸಿಕೊಂಡಿದ್ದರು.


ಅನ್ನಿ ತಮ್ಮ ಬರವಣಿಗೆಯಲ್ಲಿ ವಿಭಿನ್ನತೆಯನ್ನು ಹೊಂದಿದ್ದರು ಅಂತೆಯೇ ಲಿಂಗ, ಭಾಷೆ ಮತ್ತು ವರ್ಗಕ್ಕೆ ಸಂಬಂಧಿಸಿದಂತೆ ಬಲವಾದ ಅಸಮಾನತೆಗಳಿಂದ ಗುರುತಿಸಲಾದ ಜೀವನವನ್ನು ವಿಭಿನ್ನ ಕೋನಗಳಿಂದ ಪರಿಶೀಲನೆ ನಡೆಸಿದ್ದಾರೆ ಇದು ಅವರ ಬರವಣಿಗೆಗಳಿಂದ ವ್ಯಕ್ತವಾಗಿದೆ ಎಂಬುದಾಗಿ ನೊಬೆಲ್ ಪ್ರಶಸ್ತಿಯ ವೆಬ್‌ಸೈಟ್‌ನ ಪ್ರಕಾರ ಸ್ವೀಡಿಷ್ ಅಕಾಡೆಮಿಯ ನೊಬೆಲ್ ಸಮಿತಿಯ ಅಧ್ಯಕ್ಷ ಆಂಡರ್ಸ್ ಓಲ್ಸನ್ ಅವರ ಹೇಳಿಕೆಯು ತಿಳಿಸಿದೆ.


ಇವರ ಕೃತಿಗಳ ಲಿಸ್ಟ್ ಇಲ್ಲಿದೆ
ಲೇಖಕಿಯ ಕೆಲವು ಗಮನಾರ್ಹ ಕೃತಿಗಳು: ಲೆಸ್ (1974; Cleaned Out, 1990) ಕ್ಲೀನ್ಡ್ ಔಟ್, (1987; A Woman’s Story, 1990) ವಿಮೆನ್ಸ್ ಸ್ಟೋರಿ, (1996; Shame, 1998) ಶೇಮ್, (2000; Happening, 2001) ಹ್ಯಾಪನಿಂಗ್ ಮುಂತಾದುವು.


ಲೇಖಕಿಯ ಹರ್ಷೋದ್ಗಾರದ ಮಾತುಗಳೇನು?
ಲೇಖಕಿಯು ತಮಗೆ ಸಂದ ಗೌರವಕ್ಕೆ ಚಿರಋಣಿಯಾಗಿದ್ದು ಇದೊಂದು ಜೀವಮಾನದ ಗೌರವವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. 82 ರ ಹರೆಯದ ಅನ್ನಿಯವರ ಬರವಣಿಗೆಗಳು ಶ್ಲಾಘನೀಯ ಹಾಗೂ ನಿರಂತರ ಎಂಬುದಾಗಿ ಸಮಿತಿ ಹೊಗಳಿದೆ.


ಎರ್ನಾಕ್ಸ್ ಸಾಹಿತ್ಯ ಪ್ರಶಸ್ತಿಯನ್ನು ಗೆದ್ದ ಮೊದಲ ಫ್ರೆಂಚ್ ಮಹಿಳೆಯಾಗಿದ್ದು, ಪ್ರಶಸ್ತಿಯು ಅನ್ಯಾಯದ ವಿರುದ್ಧ ಹೋರಾಟವನ್ನು ಮುಂದುವರೆಸುವ ಜವಾಬ್ದಾರಿಯನ್ನು ಸೃಷ್ಟಿಸಿದೆ ಎಂಬುದಾಗಿ ಲೇಖಕಿ ತಿಳಿಸಿದ್ದಾರೆ.


ಇದನ್ನೂ ಓದಿ: Mysuru Dasara: ಚಾಮುಂಡೇಶ್ವರಿಗೆ ನಮೋ ಎಂದ ಪ್ರಧಾನಿ, ಮೈಸೂರು ದಸರಾ ಬಗ್ಗೆ ಮೋದಿ ಮೆಚ್ಚುಗೆ


ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಎರ್ನಾಕ್ಸ್ ಅವರನ್ನು ಅಭಿನಂದಿಸಿದ್ದು, ಅನ್ನಿಗೆ ಸಂದ ಗೌರವವು ಮಹಿಳೆಯರ ಮತ್ತು ಇತಿಹಾಸದಿಂದ ಮರ್ಯಾದೆಯವರೆಗೆ ಸಿಕ್ಕ ಮನ್ನಣೆಯಾಗಿದೆ ಎಂದು ಅಭಿನಂದಿಸಿದ್ದಾರೆ. ಸಾಹಿತ್ಯವು ಶೀಘ್ರವೇ ಪರಿಣಾಮವನ್ನು ಬೀರದೇ ಇದ್ದರೂ ಮಹಿಳೆಯರು ಹಾಗೂ ಅನ್ಯಾಯಕ್ಕೊಳಗಾದವರ ದನಿಯಾಗಿ ತಮ್ಮ ಬರವಣಿಗೆಯ ಮೂಲಕ ಅನ್ನಿ ಧ್ವನಿಯಾದರು.


ಸಾಹಿತ್ಯ ವಿಭಾಗಕ್ಕೆ ಸಂದ ನೊಬೆಲ್ ಬಹುಮಾನ
1901 ರಿಂದ, ಸಾಹಿತ್ಯ ವಿಭಾಗದಲ್ಲಿ ಲೇಖಕರ ಅಸಾಧಾರಣ ಕೊಡುಗೆಗಳನ್ನು ಪರಿಗಣಿಸಿ ಪ್ರಪಂಚದಾದ್ಯಂತವಿರುವ ಬರಹಗಾರರಿಗೆ ಈ ವಿಭಾಗದಲ್ಲಿ ಒಟ್ಟು 115 ನೊಬೆಲ್ ಪ್ರಶಸ್ತಿಗಳನ್ನು ನೀಡಲಾಗಿದೆ.


ಈ ಪೈಕಿ ಕೇವಲ 17 ಮಹಿಳಾ ಲೇಖಕಿಯರಿಗೆ ಮಾತ್ರ ಸಾಹಿತ್ಯಕ್ಕೆ ಸಂಬಂಧಿಸಿದ ನೊಬೆಲ್ ಪ್ರಶಸ್ತಿ ನೀಡಲಾಗಿದೆ. ಈ ವರ್ಷದ ವಿಜೇತ, ಲೇಖಕಿ ಅನ್ನಿ ಎರ್ನಾಕ್ಸ್ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದ 17 ನೇ ಮಹಿಳಾ ಲೇಖಕಿಯಾಗಿದ್ದಾರೆ.


2021 ರಲ್ಲಿ, ಸಾಹಿತ್ಯಕ್ಕೆ ಸಂಬಂಧಿಸಿದ ನೊಬೆಲ್ ಪ್ರಶಸ್ತಿಯನ್ನು ತಾಂಜೇನಿಯಾ ಮೂಲದ ಯುಕೆ ಮೂಲದ ಕಾದಂಬರಿಕಾರ ಅಬ್ದುಲ್ ರಜಾಕ್ ಗುರ್ನಾ ಅವರು ಪಡೆದಿದ್ದಾರೆ.


ಇದನ್ನೂ ಓದಿ: Vande Bharat Express Accident: ವಂದೇ ಭಾರತ್ ಎಕ್ಸ್​ಪ್ರೆಸ್​ಗೆ ಡಿಕ್ಕಿ ಹೊಡೆದ ಎಮ್ಮೆಗಳ ಮಾಲೀಕರ ವಿರುದ್ಧ FIR


ವಸಾಹತುಶಾಹಿಯ ಪರಿಣಾಮಗಳು ಮತ್ತು ಸಂಸ್ಕೃತಿಗಳು ನಡುವೆ ನಿರಾಶ್ರಿತರ ಭವಿಷ್ಯಕ್ಕಾಗಿ ರಾಜಿಯಾಗದ ಮತ್ತು ಸಹಾನುಭೂತಿಯ ತೀಕ್ಷ್ಣ ದೃಷ್ಟಿಯ ಅಂಶಗಳನ್ನು ತಮ್ಮ ಬರವಣಿಗೆಯಲ್ಲಿ ಪ್ರದರ್ಶಿಸಿದ್ದಕ್ಕಾಗಿ ಅವರಿಗೆ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು.

Published by:ಗುರುಗಣೇಶ ಡಬ್ಗುಳಿ
First published: