ನ್ಯಾಯಮೂರ್ತಿ ಕೆ.ಎಂ ಜೋಸೆಫ್​ ವಿವಾದ: ನ್ಯಾಯಾಂಗ-ಶಾಸಕಾಂಗ ನಡುವೆ ಮುಸುಕಿನ ಗುದ್ದಾಟ


Updated:August 6, 2018, 4:42 PM IST
ನ್ಯಾಯಮೂರ್ತಿ ಕೆ.ಎಂ ಜೋಸೆಫ್​ ವಿವಾದ: ನ್ಯಾಯಾಂಗ-ಶಾಸಕಾಂಗ ನಡುವೆ ಮುಸುಕಿನ ಗುದ್ದಾಟ
**FILE PHOTO** New Delhi: A file photo of Chief Justice of Uttarakhand High Court K M Joseph during the inauguration of the Joint Conference of Chief Ministers and Chief Justices at Vigyan Bhavan in New Delhi on Sunday, April 24, 2016. PTI Photo by Shahbaz Khan (PTI4_26_2018_000058B)

Updated: August 6, 2018, 4:42 PM IST
ದೆಬಾಯನ್​ ರಾಯ್​, ನ್ಯೂಸ್​-18 ಕನ್ನಡ

ನವದೆಹಲಿ(ಆಗಸ್ಟ್​.06):  ಸುಪ್ರೀಂಕೋರ್ಟ್​ ನ್ಯಾಯಮೂರ್ತಿಯಾಗಿ ಕೆ.ಎಂ.ಜೋಸೆಫ್ ಅವರಿಗೆ ಬಡ್ತಿ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ಮತ್ತು ಸುಪ್ರೀಂಕೋರ್ಟ್ ಕೊಲಿಜಿಯಂ (ನ್ಯಾಯಮಂಡಳಿ) ನಡುವೆ ಮುಸುಕಿನ ಗುದ್ದಾಟ ಮುಂದುವರೆದಿದೆ.

ಈ ಹಿಂದೆ ಕೇಂದ್ರ ಸರ್ಕಾರ ಉತ್ತರಾಖಂಡದ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಜೋಸೆಫ್ ಅವರನ್ನು ಮೇಲಿನ ಸ್ಥಾನಕ್ಕೆ ವರ್ಗಾಯಿಸುವ ಬಗ್ಗೆ ವಸ್ತುನಿಷ್ಠ ನೋಟ ಸಿಗಬೇಕಾಗಿದೆ ಎಂದು ಸುಪ್ರೀಂಕೋರ್ಟ್​ಗೆ ಹೇಳಿತ್ತು. ಈ ವಿವಾದ ಮುಗಿಯುವ ಹೊತ್ತಲ್ಲೇ ಕೇಂದ್ರ ಸರ್ಕಾರ ಮತ್ತೊಂದು ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ.

ನ್ಯಾಯಮೂರ್ತಿ ಎಂ ಜೋಸೆಫ್‌ ಅವರನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕ ಮಾಡುವ ಅಧಿಸೂಚನೆಯಲ್ಲಿ ಕೇಂದ್ರ ಸರಕಾರವು ಮೂರನೇ ಕ್ರಮಸಂಖ್ಯೆಯಲ್ಲಿ ನಮೂದಿಸಿದೆ. ಈ ಹಿನ್ನಲ್ಲೆಯಲ್ಲಿ ಹಿರಿಯ ನ್ಯಾಯಮೂರ್ತಿಗಳಿಂದ ಅಸಮಾಧಾನ ವ್ಯಕ್ತವಾಗಿದೆ.

ಸೇವಾ ಹಿರಿತನ ಕಡೆಗಣಿಸಿ ಜೋಸೆಫ್​ ಅವರನ್ನು 3ನೇ ಕ್ರಮಾಂಕದಲ್ಲಿ ಹೆಸರಿಸಿದ ಕ್ರಮದಿಂದ ಬೇಸರಗೊಂಡಿರುವ ಸುಪ್ರೀಂ ಕೋರ್ಟ್‌ ಹಿರಿಯ ಮೂವರು ನ್ಯಾಯಮೂರ್ತಿಗಳು ಸಿಜೆಐ ದೀಪಕ್‌ ಮಿಶ್ರಾ ಇಂದು ಭೇಟಿಯಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನುತ್ತಿವೆ ಉನ್ನತ ಮೂಲಗಳು.

ಜೋಸೆಫ್‌ ಅವರು ಮಂಗಳವಾರ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಹಿಂದೆ ಕೊಲಿಜಿಯಂ ಶಿಫಾರಸನ್ನು ಕೇಂದ್ರ ಹಿಂತಿರುಗಿಸಿದ್ದರಿಂದ ನ್ಯಾಯಾಂಗ ಮತ್ತು ಶಾಸಕಾಂಗದ ನಡುವೆ ಮತ್ತೊಮ್ಮೆ ಮುಸುಕಿನ ಗುದ್ದಾಟ ಮುಂದುವರೆದಿದೆ.

ಈ ಹಿಂದೆ ಸುಪ್ರೀಂಕೋರ್ಟ್​ ನ್ಯಾಯಾಧೀಶೆಯಾಗಿ ಹಿರಿಯ ವಕೀಲೆ ಇಂದು ಮಲ್ಹೋತ್ರಾ ಅವರನ್ನು ನೇಮಕ ಮಾಡಿ ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಸರ್ಕಾರದ ಈ ಶಿಫಾರಸು ಮಾಡಿದ ಬಳಿಕ ನ್ಯಾಯಮೂರ್ತಿ ಜೋಸೆಫ್ ಅವರಿಗೆ ಬಡ್ತಿ ನೀಡುವ ಆದೇಶವನ್ನು ತಡೆಹಿಡಿಯಲಾಗಿತ್ತು.
Loading...

ಸುಪ್ರೀಂಕೋರ್ಟ್​ ಆದೇಶದಂತೆ ಜೋಸೆಫ್​ ಅವರು ಮೊದಲು ಪ್ರಮಾಣ ವಚನ ಸ್ವೀಕಾರ ಮಾಡಬೇಕು. ಆದರೆ, ಕೇಂದ್ರ ಸರ್ಕಾರ ಮೂರನೇ ಕ್ರಮಾಂಕದಲ್ಲಿ ಜೋಸೆಫ್​ ಹೆಸರು ಸೂಚಿಸಿದ್ದು, ನ್ಯಾಯಮೂರ್ತಿ ಜೋಸೆಫ್​ ಅವರು ಕೊನೆಗೂ ಪ್ರಮಾಣ ವಚನ ಸ್ವೀಕರಿಸಬೇಕಾಗುತ್ತದೆ.

ಯಾರು ಮೊದಲು ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೋ ಅವರನ್ನು ಸುಪ್ರೀಂಕೋರ್ಟ್​ ಹಿರಿಯ ನ್ಯಾಯಮೂರ್ತಿಗಳಾಗಿ ಪರಿಗಣಿಸಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ನೇಮಿಸಲು ಅರ್ಹರಾಗುರಾತ್ತಾರೆ.

ಒಂದು ವೇಳೆ ಕೇಂದ್ರ ಸರ್ಕಾರದ ಆದೇಶದಂತೆ ಜೋಸೆಫ್​ ಕೊನೆಗೆ ಪ್ರಮಾಣ ವಚನ ಸ್ವೀಕಾರ ಮಾಡಿದರೆ, ಮೇಲಿನ ಸ್ಥಾನಕ್ಕೆ ನ್ಯಾಯಮೂರ್ತಿಯಾಗಿ ವರ್ಗಾಯಿಸುವ ವಿಚಾರದಲ್ಲಿ ತೊಡಕಾಗಬಹುದು ಎನ್ನುತ್ತಿವೆ ಮೂಲಗಳು.

ಇದರಿಂದ ಆಘಾತಕ್ಕೊಳಗಾಗಿರುವ ಜೋಸೆಫ್​ಪರ ನ್ಯಾಯದೀಶರು ಮತ್ತು ವಕೀಲರ ಒಂದು ತಂಡ ಮುಖ್ಯ ನ್ಯಾಯಮೂರ್ತಿ ದೀಪಕ್​ ಮಿಶ್ರಾ ಅವರಿಗೆ ಕೇಂದ್ರ ಸರ್ಕಾರದ ವಿರುದ್ಧ ದೂರು ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ, ಜೋಸೆಫ್​ ಮೊದಲು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎಂದು ನಾಳೆ ಕಾದು ನೋಡಬೇಕಿದೆ.
First published:August 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...