HOME » NEWS » National-international » NO WATER FOR HUSBAND SEXUAL HARASSMENT WOMAN RECOUNT EXPERIENCE IN BIHAR HOSPITALS MAK

ಬಿಹಾರ: ಕೋವಿಡ್ ಚಿಕಿತ್ಸೆಗಾಗಿ ಗಂಡನನ್ನ ದಾಖಲಿಸಿದ್ದ ಆಸ್ಪತ್ರೆಯಲ್ಲೇ ಮಹಿಳೆಗೆ ಲೈಂಗಿಕ ಕಿರುಕುಳ!

ತನ್ನ ಗಂಡನನ್ನು ಮೊದಲು ದಾಖಲಿಸಿದ ಭಾಗಲ್ಪುರದ ಗ್ಲೋಕಲ್ ಆಸ್ಪತ್ರೆಯ ಸಿಬ್ಬಂದಿ ರೆಮ್‌ಡೆಸಿವಿರ್‌ ಅರ್ಧ ಬಾಟಲಿಯನ್ನು ವ್ಯರ್ಥ ಮಾಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

news18-kannada
Updated:May 11, 2021, 9:49 PM IST
ಬಿಹಾರ: ಕೋವಿಡ್ ಚಿಕಿತ್ಸೆಗಾಗಿ ಗಂಡನನ್ನ ದಾಖಲಿಸಿದ್ದ ಆಸ್ಪತ್ರೆಯಲ್ಲೇ ಮಹಿಳೆಗೆ ಲೈಂಗಿಕ ಕಿರುಕುಳ!
ಪ್ರಾತಿನಿಧಿಕ ಚಿತ್ರ.
  • Share this:
ಬಿಹಾರದ ಭಾಗಲ್ಪುರದ ಖಾಸಗಿ ಆಸ್ಪತ್ರೆಯಲ್ಲಿ ತನ್ನ ಗಂಡನಿಗೆ ಕೊರೋನಾ ಚಿಕಿತ್ಸೆಗಾಗಿ ದಾಖಲಿಸಿದ್ದ ಮಹಿಳೆಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಅಲ್ಲದೆ, ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯ ವಿರುದ್ಧ ನಿರ್ಲಕ್ಷ್ಯದಿಂದ ತನ್ನ ಪತಿ ಸಾವನ್ನಪ್ಪಿದ್ದಾರೆ ಎಂದು ದೂಷಿಸಿದ್ದಾರೆ. ಮಹಿಳೆ ಆರೋಪಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗ್ಲೋಕಲ್ ಆಸ್ಪತ್ರೆಯ ಸಿಬ್ಬಂದಿಯ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಜೊತೆಗೆ ಮಾಯಗಂಜ್ ಮತ್ತು ಪಾಟ್ನಾದಲ್ಲಿ ವೈದ್ಯರ ನಿರ್ಲಕ್ಷ್ಯ ತನ್ನ ಪತಿಯ ಸಾವಿಗೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.

ಮಹಿಳೆಯ 12 ನಿಮಿಷಗಳ ವಿಡಿಯೋ ಮನವಿಯಲ್ಲಿ, ಮೂರು ಆಸ್ಪತ್ರೆಗಳ ವೈದ್ಯರು ಮತ್ತು ಸಿಬ್ಬಂದಿ ತನ್ನ ಪತಿಗೆ ಚಿಕಿತ್ಸೆ ನೀಡಲು ನಿರಾಕರಿಸಿದರು, ಎಷ್ಟೇ ಬೇಡಿಕೊಂಡರೂ ಅವರಿಗೆ ಚಿಕಿತ್ಸೆ ನೀಡಲಿಲ್ಲ. ಅಲ್ಲದೆ, ಅವರ ಕೊಳಕು ಹಾಸಿಗೆಯನ್ನೂ ಸಹ ಬದಲಾಯಿಸಲು ಆಸ್ಪತ್ರೆಯ ಸಿಬ್ಬಂದಿ ಗಳು ಸಹಕರಿಸಲಿಲ್ಲ ಎಂದು ದೂರಿದ್ದಾರೆ.

ತನ್ನ ಗಂಡನನ್ನು ಮೊದಲು ದಾಖಲಿಸಿದ ಭಾಗಲ್ಪುರದ ಗ್ಲೋಕಲ್ ಆಸ್ಪತ್ರೆಯ ಸಿಬ್ಬಂದಿ ರೆಮ್‌ಡೆಸಿವಿರ್‌ ಅರ್ಧ ಬಾಟಲಿಯನ್ನು ವ್ಯರ್ಥ ಮಾಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

"ನಾವು ಆರ್‌ಟಿ-ಪಿಸಿಆರ್ ಪರೀಕ್ಷಾ ಫಲಿತಾಂಶಗಳಿಗಾಗಿ ಕಾಯುತ್ತಿರುವಾಗ, ನೋಯ್ಡಾ ವೈದ್ಯರು ಸಿಟಿ ಸ್ಕ್ಯಾನ್ ಮಾಡಿಸಲು ಹೇಳಿದರು. ನಾವು ಒಪ್ಪಿಕೊಂಡೆವು. ನನ್ನ ತಾಯಿ ಕೂಡ ಅಸ್ವಸ್ಥರಾಗಿದ್ದರು, ಆಸ್ಪತ್ರೆಯಲ್ಲಿ ತುಂಬಾ ನಿರ್ಲಕ್ಷ್ಯವಿತ್ತು. ವೈದ್ಯರು ಹಾಗೆ ಬಂದು ಹೋಗುತ್ತಿದ್ದರು. ಸಿಬ್ಬಂದಿ ಇರುತ್ತಿರಲಿಲ್ಲ. ಔಷಧಿಗಳನ್ನು ನೀಡಲು ನಿರಾಕರಿಸುತ್ತಿದ್ದರು. ನನ್ನ ತಾಯಿ ಸ್ಥಿತಿ ಪರವಾಗಿರಲಿಲ್ಲ. ಆದರೆ ನನ್ನ ಪತಿಗೆ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಅವರು ನೀರಿಗಾಗಿ ಕೈ ಸನ್ನೆ ಮಾಡುತ್ತಿದ್ದರು, ಆದರೆ ಯಾರೂ ಅವರಿಗೆ ನೀರನ್ನೂ ನೀಡಲಿಲ್ಲ" ಎಂದು ಸಂತ್ರಸ್ತೆ ವಿಡಿಯೋದಲ್ಲಿ ಹೇಳಿದ್ದಾರೆ.

"ಗ್ಲೋಕಲ್ ಆಸ್ಪತ್ರೆಯಲ್ಲಿ ಅಟೆಂಡೆಂಟ್ ಆಗಿದ್ದ ಜ್ಯೋತಿ ಕುಮಾರ್ ಎಂಬ ವ್ಯಕ್ತಿಯ ಬಳಿ ನನ್ನ ಪತಿಗೆ ಕ್ಲೀನ್ ಬೆಡ್‌ಶೀಟ್‌ಗಳನ್ನು ನೀಡಲು ಸಹಾಯ ಮಾಡಬೇಕೆಂದು ವಿನಂತಿಸಿದೆ. ಸಹಾಯ ಮಾಡುತ್ತೇನೆಂದು ಹೇಳಿದ ಆ ವ್ಯಕ್ತಿ ನನ್ನ ದುಪ್ಪಟ್ಟಾ ಎಳೆದು, ಸೊಂಟಕ್ಕೆ ಕೈ ಹಾಕಿ ನಗುತ್ತಿದ್ದರು. ನಾನು ಯಾರಿಗೂ ಹೇಳುವ ಸ್ಥಿತಿಯಲ್ಲಿ ಇರಲಿಲ್ಲ. ಏಕೆಂದರೆ, ನನ್ನ ಪತಿ, ನನ್ನ ತಾಯಿ ಇಲ್ಲಿ ದಾಖಲಾಗಿದ್ದರು" ಎಂದಿದ್ದಾರೆ.

ಮಹಿಳೆ ಮಾಡಿರುವ ಆರೋಪಗಳ ಬಗ್ಗೆ ತನಿಖೆ ನಡೆಸಲು ಸ್ಥಳೀಯ ಸರ್ಕಾರಿ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ವಿಚಾರಣೆ ನಡೆಸಿದ ನಂತರ, ಗ್ಲೋಕಲ್ ಆಸ್ಪತ್ರೆ ಆರೋಪಿ ನೌಕರನನ್ನು ಅಮಾನತು ಗೊಳಿಸಲಾಗಿದ್ದು, ತನಿಖಾ ಸಮಿತಿಯನ್ನು ರಚಿಸಿದೆ ಎಂದು ತಿಳಿದುಬಂದಿದೆ.

ಮಾಯಾಗಂಜ್‌ನ ಭಾಗಲ್ಪುರ್ ಸರ್ಕಾರಿ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯಲ್ಲಿ ವೈದ್ಯರು ತನ್ನ ಮತ್ತು ತನ್ನ ಸಹೋದರಿ ಹಲವು ಬಾರಿ ಮನವಿ ಮಾಡಿದರು ನನ್ನ ಗಂಡನಿಗೆ ಆಮ್ಲಜನಕವನ್ನು ನೀಡಲು ನಿರಾಕರಿಸಿದರು ಎಂದಿದ್ದಾರೆ.ಇದನ್ನೂ ಓದಿ: Covid Vaccine Shortage: ಮಹಾರಾಷ್ಟ್ರದಲ್ಲಿ ಕೋವಿಡ್ ಲಸಿಕೆಗಳ ಕೊರತೆ; 45 ವರ್ಷಕ್ಕೆ ಮೇಲ್ಪಟ್ಟವರಿಗೆ ಮಾತ್ರ ವಾಕ್ಸಿನೇಷನ್!

ಪಾಟ್ನಾದಲ್ಲಿ (ನಗರದ ರಾಜೇಶ್ವರ ಆಸ್ಪತ್ರೆಯಲ್ಲಿ), ಆಕ್ಸಿಜನ್ ಮಟ್ಟವು ಅಪಾಯಕಾರಿಯಾಗಿ ಕಡಿಮೆಯಾಗಿದ್ದರೂ ಸಹ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಆಮ್ಲಜನಕ ಸ್ಥಿರವಾದ ನಂತರ, ಸಿಬ್ಬಂದಿ ಅವರಿಗೆ ಆಮ್ಲಜನಕ ಸರಬರಾಜನ್ನು ಕಡಿತಗೊಳಿಸಿ, ಬ್ಲಾಕ್ ಮಾರ್ಕೆಟ್‌ಯಿಂದ ಆಕ್ಸಿಜನ್ ಸಿಲಿಂಡರ್‌ ಖರೀದಿಸಲು ಆಸ್ಪತ್ರೆ ಸಿಬ್ಬಂದಿ ಒತ್ತಾಯಿಸಿದ್ದರು ಎಂದು ಹೇಳಿದ್ದಾರೆ.
Youtube Video

"ಪ್ರಾಥಮಿಕ ವಿಚಾರಣೆಯಲ್ಲಿ ಮಹಿಳೆಯ ಆರೋಪವನ್ನು ಬೆಂಬಲಿಸುವ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಆದರೆ ಆರೋಪ ನಿಜವೆಂದು ಸಾಬೀತಾದರೆ, ಖಂಡಿತವಾಗಿಯೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮಹಿಳೆಗೆ ನ್ಯಾಯ ಒದಗಿಸಲಾಗುವುದು " ಎಂದು ಆಸ್ಪತ್ರೆ ತಿಳಿಸಿದೆ.
Published by: MAshok Kumar
First published: May 11, 2021, 9:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories