ಎರಡನೇ ಹಂತದ ಚುನಾವಣೆ: ಜಮ್ಮು-ಕಾಶ್ಮೀರದ 90 ಮತಗಟ್ಟೆಗಳಲ್ಲಿ ಶೂನ್ಯ ಮತದಾನ

ಶ್ರೀನಗರದಲ್ಲಿ ಒಟ್ಟು ಮತದಾರರ ಸಂಖ್ಯೆ 137,560 ಇದ್ದು, ಕಣದಲ್ಲಿ 22 ಅಭ್ಯರ್ಥಿಗಳಿದ್ದಾರೆ. ಈ ಪೈಕಿ ಪ್ರಮುಖವಾಗಿ ನ್ಯಾಷನಲ್ ಕಾನ್ಪರೆನ್ಸ್ ಅಧ್ಯಕ್ಷ ಒಮರ್ ಅಬ್ದುಲ್ಹಾ, ಪಿಡಿಪಿಯ ಕ್ವಾಜಿ ಮುಹಮ್ಮದ್ ಅಪ್ಜಲ್, ಕಾಂಗ್ರೆಸ್‌ನ ಶೇಖ್ ಮುಹಮ್ಮದ್ ಅಶ್ಪಕ್ ಸೇರಿದಂತೆ ಒಟ್ಟು 11 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ ಎಂದು ತಿಳಿದು ಬಂದಿದೆ.

Ganesh Nachikethu | news18
Updated:April 19, 2019, 3:01 PM IST
ಎರಡನೇ ಹಂತದ ಚುನಾವಣೆ: ಜಮ್ಮು-ಕಾಶ್ಮೀರದ 90 ಮತಗಟ್ಟೆಗಳಲ್ಲಿ ಶೂನ್ಯ ಮತದಾನ
ಜಮ್ಮು-ಕಾಶ್ಮೀರ
  • News18
  • Last Updated: April 19, 2019, 3:01 PM IST
  • Share this:
ನವದೆಹಲಿ(ಏ.19): ಜಮ್ಮು-ಕಾಶ್ಮೀರದಲ್ಲಿ ನಡೆದ ಎರಡನೇ ಹಂತದ ಮತದಾನಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಿನ್ನೆ ಗುರುವಾರ ಇಲ್ಲಿನ ಶ್ರೀನಗರ ಮತ್ತು ಉದಾಮ್​​ಪುರ ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಿತು. ಈ ಎರಡು ಕ್ಷೇತ್ರಗಳಲ್ಲಿ ಪ್ರಮುಖವಾಗಿ ಈದ್ಗಾ, ಖನ್ಯಾರ್‌, ಹಬ್ಬಾ ಕದಲ್‌ ಸೇರಿದಂತೆ ಹಲವೆಡೆ 90ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಶೂನ್ಯ ಮತದಾನ ದಾಖಲಾಗಿದೆ. ಶ್ರೀನಗರ ವ್ಯಾಪ್ತಿಯಲ್ಲಂತೂ 50 ಮತಗಟ್ಟೆ ಕೇಂದ್ರಗಳು ತೆರೆದಿದ್ದರೂ ಜನ ಮತ ಹಾಕಲು ಬಾರದೆ ಶೂನ್ಯ ಮತದಾನ ದಾಖಲಾಗಿದೆ ಎನ್ನಲಾಗಿದೆ.

ದೇಶಾದ್ಯಂತ ನಿನ್ನೆ ಎರಡನೇ ಹಂತದ ಚುನಾವಣೆ ಶಾಂತಿಯುತವಾಗಿ ಆಗಿದೆ. ಆದರೆ, ಜಮ್ಮು-ಕಾಶ್ಮೀರದಲ್ಲಿ ಮಾತ್ರ ತುಸು ಹೆಚ್ಚಿನ ಬಿಗಿ ಭದ್ರತೆ ನಡುವೆ ಮತದಾನವಾಗಿದೆ. ಪ್ರತಿ ಬಾರಿಯಂತೆ ಈ ಸಲವೂ ಬೆಳಗ್ಗೆ 7 ಗಂಟೆಗೆ ಮತಚಲಾವಣೆ ಪ್ರಾರಂಭವಾಗಿದೆ. ಶೀತದ ವಾತಾವರಣ ಹಿನ್ನೆಲೆಯಲ್ಲಿ ಮತಗಟ್ಟೆಗಳ ಹೊರಗೆ ಮತದಾರರ ಸಂಖ್ಯೆ ಅಲ್ಪವಾಗಿ ಕಂಡು ಬಂದಿದೆ. ಕನಿಷ್ಠ ಮಧ್ಯಾಹ್ನದ ವೇಳೆಗೆ ಮತದಾನ ಪ್ರಕ್ರಿಯೆ ಚುರುಕುಗೊಳ್ಳಬಹುದು ಎಂದು ಭಾವಿಸಿದ್ದ ಚುನಾವಣೆ ಅಧಿಕಾರಿಗಳ ನಂಬಿ
First published:April 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading