ವಾಟ್ಸಾಪ್​ ಗೂಢಚಾರಿಕೆ ವಿವಾದ; ಅನಧಿಕೃತ ವ್ಯಕ್ತಿಗಳನ್ನು ತಡೆಗಟ್ಟಲಾಗಿದೆ ಎಂದ ಕಾನೂನು ಸಚಿವ ರವಿಶಂಕರ್ ಪ್ರಸಾದ್

ಭಾರತ ಸರ್ಕಾರ ಪೆಗಾಸಸ್​ ಸಾಫ್ಟ್​ವೇರ್​ಅನ್ನು ಖರೀದಿಸಿದೆಯೋ ಅಥವಾ ಇಲ್ಲವೋ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಕೇಳಿದರು. ಇದಕ್ಕೆ ನೇರ ಉತ್ತರ ನೀಡಲು ನಿರಾಕರಿಸಿದ ಕೇಂದ್ರ ಸಚಿವರು ಯಾವುದೇ ಅನಧಿಕೃತ ವ್ಯಕ್ತಿಗಳು ಭಾರತೀಯರ ಮಾಹಿತಿ ಕದಿಯುವುದನ್ನು ತಡೆಗಟ್ಟಲಾಗಿದೆ ಎಂದು ಹೇಳಿದರು.

HR Ramesh | news18-kannada
Updated:November 28, 2019, 4:42 PM IST
ವಾಟ್ಸಾಪ್​ ಗೂಢಚಾರಿಕೆ ವಿವಾದ; ಅನಧಿಕೃತ ವ್ಯಕ್ತಿಗಳನ್ನು ತಡೆಗಟ್ಟಲಾಗಿದೆ ಎಂದ ಕಾನೂನು ಸಚಿವ ರವಿಶಂಕರ್ ಪ್ರಸಾದ್
ರಾಜ್ಯಸಭೆಯಲ್ಲಿ ಮಾತನಾಡಿದ ಕಾನೂನು ಸಚಿವ ರವಿಶಂಕರ್ ಪ್ರಸಾದ್.
  • Share this:
ನವದೆಹಲಿ: ದೇಶದ ಜನರ ಮಾಹಿತಿ ಭದ್ರತೆಗೆ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ರಾಜ್ಯಸಭೆಯಲ್ಲಿ ಹೇಳಿದ್ದಾರೆ.

ಅನಧಿಕೃತ ವ್ಯಕ್ತಿಗಳು ಇಸ್ರೇಲ್​ ಮೂಲದ ಸ್ಪೈವೇರ್ ಪೆಗಾಸಸ್​ ಸಾಫ್ಟ್​ವೇರ್ ಬಳಸಿ, ಭಾರತೀಯರು, ಪ್ರಮುಖ ವ್ಯಕ್ತಿಗಳು ಹಾಗೂ ಪತ್ರಕರ್ತರು, ಮಾನವ ಹಕ್ಕು ಕಾರ್ಯಕರ್ತರ ವಾಟ್ಸಾಪ್​ಅನ್ನು ಗೂಢಚಾರಿಕೆ ಮಾಡುತ್ತಿದ್ದಾರೆ. ಇದು ಕೇವಲ ಭಾರತದಲ್ಲಿ ಮಾತ್ರವಲ್ಲದೇ ಜಗತ್ತಿನಾದ್ಯಂತ ಈ ದಾಳಿ ನಡೆದಿದೆ ಎಂದು ಫೇಸ್​ಬುಕ್​ ಒಡೆತನದ ವಾಟ್ಸಾಪ್ ಕಂಪನಿಯೂ ಬಹಿರಂಗಪಡಿಸಿತ್ತು. ಇದೇ ವಿಚಾರವಾಗಿ ಇಂದು ರಾಜ್ಯಸಭೆಯಲ್ಲಿ ನಡೆದ ಚರ್ಚೆಯ ವೇಳೆ ಮಾತನಾಡಿದ ಸಚಿವ ರವಿಶಂಕರ್ ಪ್ರಸಾದ್, ಅನಧಿಕೃತ ಸಂಸ್ಥೆ ಅಥವಾ ವ್ಯಕ್ತಿಗಳ ವಾಟ್ಸಾಪ್​ ಗೂಢಚಾರಿಕೆ ತಡೆಗಟ್ಟಲಾಗಿದೆ ಎಂದು ಎಂದು ಹೇಳಿದರು.

ಸೈಬರ್ ಬೇಹುಗಾರಿಕೆ ವಿಚಾರವಾಗಿ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ಸಾಫ್ಟ್​ವೇರ್​ ಬಳಕೆಯಾಗಿದೆ ಎಂದ ಮೇಲೆ ಅದನ್ನು ಬಳಸಿದವರು ಯಾರು ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದರು. ಇದರಲ್ಲಿ ಸರ್ಕಾರದ ಪಾತ್ರವೇನು? ಒಂದು ವೇಳೆ ಜನರು ಬೇಹುಗಾರಿಕೆಗೆ ಒಳಪಟ್ಟಿದ್ದರೆ ಅದನ್ನು ಸದನಕ್ಕೆ ತಿಳಿಸಬೇಕು. ಯಾವ ಪತ್ರಕರ್ತರು, ಕಾರ್ಯಕರ್ತರನ್ನು ಗುರಿ ಮಾಡಲಾಗಿದೆ ಎಂಬುದನ್ನು ತಿಳಿಸಬೇಕು. ಇದು ಸಂಪೂರ್ಣವಾಗಿ ಖಾಸಗಿ ಹಕ್ಕಿನ ಉಲ್ಲಂಘನೆ ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ರವಿಶಂಕರ್ ಪ್ರಸಾದ್ ಅವರು,  ಡಿಜಿಟಲ್​ ಕ್ಷೇತ್ರಕ್ಕೆ ಭಾರತೀಯರು ಮತ್ತು ವಿದೇಶಿಗರು ಇಬ್ಬರಿಗೂ ಮುಕ್ತ ಸ್ವಾಗತವಿದೆ. ಆದರೆ, ಭಾರತೀಯರ ಸುರಕ್ಷತೆ ಮತ್ತು ಭದ್ರತೆ ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂಬುದನ್ನು ಎಲ್ಲರೂ ಮನದಟ್ಟು ಮಾಡಿಕೊಳ್ಳಬೇಕು ಎಂದು ಹೇಳಿದರು.

ಇದನ್ನು ಓದಿ: ಗೋಡ್ಸೆ ಭಯೋತ್ಪಾದಕನಲ್ಲ ಆದರೆ, ಸಣ್ಣ ತಪ್ಪು ಮಾಡಿದ; ಪ್ರಗ್ಯಾ ಬಳಿಕ ಮತ್ತೊಬ್ಬ ಬಿಜೆಪಿ ನಾಯಕನಿಂದ ಶಾಕಿಂಗ್​ ಹೇಳಿಕೆ

ಬಳಿಕ ಈ ಸೂಕ್ಷ್ಮ ವಿಷಯನ್ನು ಜಂಟಿ ಸಂಸದೀಯ ಸಮಿತಿಯ ತನಿಖೆಗೆ ದಿಗ್ವಿಜಯ್ ಸಿಂಗ್ ಒತ್ತಾಯಿಸಿದರು. ನಮ್ಮ ಮೂಲಭೂತ ಹಕ್ಕು ಮತ್ತು ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಈ ಸೂಕ್ಷ್ಮ ವಿಷಯದ ತನಿಖೆಗೆ ಜಂಟಿ ಸಂಸದೀಯ ಸಮಿತಿ ರಚಿಸಬೇಕು ಎಂದು ನಾನು ಎಲ್ಲ ಪಕ್ಷಗಳಲ್ಲೂ ಮನವಿ ಮಾಡುತ್ತೇವೆ ಎಂದು ಹೇಳಿದರು. ಬಳಿಕ ಭಾರತ ಸರ್ಕಾರ ಪೆಗಾಸಸ್​ ಸಾಫ್ಟ್​ವೇರ್​ಅನ್ನು ಖರೀದಿಸಿದೆಯೋ ಅಥವಾ ಇಲ್ಲವೋ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಕೇಳಿದರು. ಇದಕ್ಕೆ ನೇರ ಉತ್ತರ ನೀಡಲು ನಿರಾಕರಿಸಿದ ಕೇಂದ್ರ ಸಚಿವರು ಯಾವುದೇ ಅನಧಿಕೃತ ವ್ಯಕ್ತಿಗಳು ಭಾರತೀಯರ ಮಾಹಿತಿ ಕದಿಯುವುದನ್ನು ತಡೆಗಟ್ಟಲಾಗಿದೆ ಎಂದು ಹೇಳಿದರು.

First published:November 28, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ