Crime: ಗಂಡನ ಮನೆಯಲ್ಲಿ ಶೌಚಾಲಯವಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ 27ರ ಯುವತಿ

ಗಂಡನ ಮನೆಯಲ್ಲಿ ಶೌಚಾಲಯ (Toilet) ಇಲ್ಲದಿರುವುದಕ್ಕೆ ಮನನೊಂದ 27 ವರ್ಷದ ಮಹಿಳೆಯೊಬ್ಬರು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ತಮಿಳುನಾಡಿನ (Tamilnadu) ಕಡಲೂರಿನಲ್ಲಿ (cuddalore ) ನಡೆದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತಮಿಳುನಾಡು: ಪ್ರತಿಯೊಂದು ಹೆಣ್ಣು ಸಹ ತಾನು ಮದುವೆ ಅಗಿ ಹೋಗುವ ಮನೆ ಹೀಗಿರಬೇಕು, ಹಾಗಿರಬೇಕು ಎಂದೆಲ್ಲಾ ಕನಸು (Dream) ಕಾಣುವುದು ಸಹಜವಾಗಿರುತ್ತದೆ. ಅಲ್ಲದೇ ಕನಿಷ್ಠ ಪಕ್ಷ ತನ್ನ ಗಂಡನ ಮನೆಯಲ್ಲಿ ಸಾಮಾನ್ಯ ಅಂಶಗಳಾದರೂ ಇದ್ದರೆ ಸಾಕು ಎನ್ನುವವರೂ ಇದ್ದಾರೆ. ಆದರೆ ಇಲ್ಲೊಂದು ಘಟನೆಯಲ್ಲಿ ಗಂಡನ ಮನೆಯಲ್ಲಿ ಶೌಚಾಲಯ (Toilet) ಇಲ್ಲದಿರುವುದಕ್ಕೆ ಮನನೊಂದ 27 ವರ್ಷದ ಮಹಿಳೆಯೊಬ್ಬರು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ತಮಿಳುನಾಡಿನ (Tamilnadu) ಕಡಲೂರಿನಲ್ಲಿ (cuddalore ) ನಡೆದಿದೆ. ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ರಮ್ಯಾ ಎಂಬ ಮಹಿಳೆ ಕಳೆದ ಏಪ್ರಿಲ್ 6 ರಂದು ತಮಿಳುನಾಡಿನ ಕಾರ್ತಿಕೇಯನ್ ಎಂಬುವವರನ್ನು ವಿವಾಹವಾಗಿದ್ದರು. ಆದರೆ ಗಂಡನ ಮನೆಯಲ್ಲಿ ಶೌಚಾಲಯ ಇಲ್ಲದ ಕಾರಣಕ್ಕೆ ಮನನೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

ಶೌಚಾಲಯ ಇಲ್ಲದ ಕಾರಣಕ್ಕೆ ಆತ್ಮಹತ್ಯೆ:

ಇನ್ನು, ಕಾರ್ತಿಕೇಯನ್ ಜೊತೆ ವಿವಾಹವಾಗಿದ್ದ ರಮ್ಯಾ ನಂತರದಲ್ಲಿ, ತನ್ನ ಗಂಡನ ಮನೆಯಲ್ಲಿ ಶೌಚಾಲಯವಿಲ್ಲವೆಂದು ತಿಳಿದು ಮದುವೆಯ ನಂತರವೂ ತಾಯಿಯೊಂದಿಗೆ ತವರು ಮನೆಯಲ್ಲಿಯೇ ವಾಸಿಸುತ್ತಿದ್ದಳು. ಅಲ್ಲದೇ ಗಂಡನ ಹತ್ತರಿ ನಗರದಲ್ಲಿ ಶೌಚಾಲಯವಿರುವ ಮನೆಯನ್ನು ಹುಡುಕುವಂತೆ ಹೇಳಿದ್ದರಿಂದ ಅವರಿಬ್ಬರ ನಡುವೆ ಆಗ್ಗಾಗ್ಗೆ ಜಗಳಗಳಾಗುತ್ತಿತ್ತು ಎಂದು ತಿಳಿದುಬಂದಿದೆ. ಹೀಗಾಗಿ ರಮ್ಯಾ ಮನನೊಂದು ಮನೆಯ ಸೀಲಿಂಗ್ ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಮಕೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಇನ್ನು, ರಮ್ಯಾ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ರಮ್ಯಾ


ಪ್ರೀತಿಸಿ ಮದುವೆಯಾಗಿದ್ದ ರಮ್ಯಾ ಮತ್ತು ಕಾರ್ತಿಕೇಯನ್:

ಇನ್ನು, ರಮ್ಯಾ ಮತ್ತು ಕಾರ್ತೀಕೇಯನ್ ಕಳೆದ 2 ವರ್ಷಗಳಿಂದ ಪ್ರೀತಿಸುತ್ತಿದ್ದರು. ಅಲ್ಲದೇ ರಮ್ಯಾ ಕಡಲೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಮನೆಯವರ ಒಪ್ಪಿಗೆ ಮೇರೆಗೆ ಎಪ್ರಿಲ್ 6ರಂದು ರಮ್ಯಾ ಮತ್ತು ಕಾರ್ತಿಕೇಯನ್ ವಿವಾಹ ಮಾಡಿಕೊಂಡಿದ್ದರು. ಆದರೆ ಮದುವೆಯಾದ ಮರುದಿನವೇ ಗಂಡನ ಮನೆಯಲ್ಲಿ ಶೌಚಾಲಯ ಇಲ್ಲದ ಕಾರಣ ರಮ್ಯಾ ಅಮ್ಮನ ಮನೆಗೆ ತೆರಳಿದ್ದರು.

ಇದನ್ನೂ ಓದಿ: Crime: ಮದುವೆಯಾದ 36ದಿನಕ್ಕೆ ಗಂಡನ ಕೊಂದ ಹೆಂಡತಿ; ಹೃದಯಾಘಾತ ಎಂದು ಬಿಂಬಿಸಿ ಕಡೆಗೂ ಸಿಕ್ಕಬಿದ್ಲು

ಶೌಚಾಲಯ ವಿಷಯವನ್ನು ಗಂಭಿರವಾಗಿ ಪರಿಗಣಿಸದ ಪತಿ:

ರಮ್ಯಾ ಜೊತೆ ಈ ವಿಷಯವಾಗಿ ಮಾತನಾಡಿದ್ದ ಪತಿ ಕಾರ್ತಿಕೇಯನ್ ಆದಷ್ಟು ಬೇಗ ಶೌಚಾಲಯವಿರುವ ಮನೆಯನ್ನು ಬಾಡಿಗೆಗೆ ಹುಡಕುವುದಾಗಿ ಹೇಳಿದ್ದರು. ಆದರೆ, ಈ ವಿಷಯವನ್ನು ಪತಿ ಗಂಭೀರವಾಗಿ ಪರಿಗಣಿಸದ ಕಾರಣ ಮನನೊಂದ ರಮ್ಯಾ ಮೇ 10ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಮ್ಯಾಳನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.

ಇದನ್ನೂ ಓದಿ: Heart Attack: 17 ವರ್ಷದ ಬಾಲಕನಿಗೆ ಹೃದಯಾಘಾತ, ಎದೆ ನೋಯ್ತಿದೆ ಎಂದವನು ಹೆಚ್ಚು ಹೊತ್ತು ಬದುಕಲಿಲ್ಲ

ಅಳಿಯನ ವಿರುದ್ಧ ದೂರು:

ರಮ್ಯಾಳ ತಾಯಿ ಮಂಜುಳಾ ತಿರುಪತಿರುಪುಲಿಯೂರು ಪೊಲೀಸ್ ಠಾಣೆಗೆ ಅಳಿಯನ ವಿರುದ್ಧವಾಗಿ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಹೇಳಲಾಗಿದೆ. ಹೆಚ್ಚಿನ ತನಿಖೆಗಾಗಿ ಪೊಲೀಸರು ಕಾರ್ತಿಕೇಯನ್ ಮತ್ತು ಆತನ ಕುಟುಂಬದವರನ್ನು ವಿಚಾರಿಸುತ್ತಿದ್ದು, ನೈಜ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ. ಸದ್ಯ ಶೌಚಾಲಯದ ಕಾರಣವಾಗಿ ಆತ್ಮಹ್ತಯೆ ಮಾಡಿಕೊಂಡಿರುವುದಾಗಿ ಕಂಡುಬರುತ್ತಿರುವುದಾಗಿ ತಿಳಿದುಬಂದಿದೆ.
Published by:shrikrishna bhat
First published: