• Home
  • »
  • News
  • »
  • national-international
  • »
  • No Sir, No Madam: ಕೇರಳದ ಈ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಯಾರನ್ನೂ ನೀವು 'ಸರ್' ಅಥವಾ 'ಮೇಡಂ' ಎಂದು ಕರೆಯುವಂತಿಲ್ಲ

No Sir, No Madam: ಕೇರಳದ ಈ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಯಾರನ್ನೂ ನೀವು 'ಸರ್' ಅಥವಾ 'ಮೇಡಂ' ಎಂದು ಕರೆಯುವಂತಿಲ್ಲ

ಮಾಥುರ್ ಗ್ರಾಮ ಪಂಚಾಯ್ತಿ ಕಚೇರಿ

ಮಾಥುರ್ ಗ್ರಾಮ ಪಂಚಾಯ್ತಿ ಕಚೇರಿ

Call me by my name: ಉತ್ತರ ಕೇರಳ ಜಿಲ್ಲೆಯ ಮಾಥುರ್ ಗ್ರಾಮ ಪಂಚಾಯತ್ ತನ್ನ ಕಚೇರಿ ಆವರಣದಲ್ಲಿ 'ಸರ್' ಮತ್ತು 'ಮೇಡಂ' ನಂತಹ ವಸಾಹತುಶಾಹಿ ಗೌರವಾನ್ವಿತ ಪದಗಳನ್ನು ನಿಷೇಧಿಸಲಾಗಿದ್ದು, 'ಸರ್' ಅಥವಾ 'ಮೇಡಂ' ನಂತಹ ಪದಗಳ ಬಳಸುವ ಬದಲು ತಮ್ಮ ಹೆಸರಿನಿಂದ ಕರೆಯುವಂತೆ ಅಧಿಕಾರಿಗಳು ನಿಮಗೆ ಇನ್ಮುಂದೆ ವಿನಯದಿಂದ ಕೇಳಿಕೊಳ್ಳುತ್ತಿದ್ದಾರೆ.

ಮುಂದೆ ಓದಿ ...
  • Share this:

Courtesy in Kerala: ನೀವು ಕೇರಳ ಜಿಲ್ಲೆಯ ಮಾಥುರ್ ಗ್ರಾಮ ಪಂಚಾಯತ್ ಕಚೇರಿಗೆ ಹೋದಾಗ, ಅಲ್ಲಿನ ಅಧಿಕಾರಿಗಳಿಗೆ ನೀವು ‘ಸರ್’, ‘ಮೇಡಂ’ ಅಂತ ತುಂಬಾ ಗೌರವದಿಂದ ಸಂಬೋಧಿಸಿದರೆ, ಅವರು ನಿಮಗೆ “ಹಾಗೆ ನಮ್ಮನ್ನು ಕರೆಯಬೇಡಿ, ನಮ್ಮನ್ನು ನಮ್ಮ ಹೆಸರಿನಿಂದ ಕರೆಯಿರಿ" ಅಂತ ಹೇಳುವುದನ್ನು ಕೇಳಿ ನಿಮಗೆ ಆಶ್ಚರ್ಯವಾಗಬಹುದು. ಹೌದು, ಜನರ, ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಡುವೆ ಪರಸ್ಪರ ಪ್ರೀತಿ ಮತ್ತು ನಂಬಿಕೆಯ ಬಂಧವನ್ನು ಏರ್ಪಡಿಸುವುದರ ಮೂಲಕ ಈ ‘ಸರ್’ ಮತ್ತು ‘ಮೇಡಂ’ ಎನ್ನುವಂತಹ ಗೌರವಾನ್ವಿತ ಪದಗಳ ಬಳಕೆಯನ್ನು ಸ್ಥಳೀಯ ಗ್ರಾಮ ಪಂಚಾಯತ್‌ನ ಅಧಿಕಾರಿಗಳು ನಿಷೇಧಿಸಿದ್ದಾರೆ. ಉತ್ತರ ಕೇರಳ ಜಿಲ್ಲೆಯ ಮಾಥುರ್ ಗ್ರಾಮ ಪಂಚಾಯತ್ ತನ್ನ ಕಚೇರಿ ಆವರಣದಲ್ಲಿ 'ಸರ್' ಮತ್ತು 'ಮೇಡಂ' ನಂತಹ ವಸಾಹತುಶಾಹಿ ಗೌರವಾನ್ವಿತ ಪದಗಳನ್ನು ನಿಷೇಧಿಸಲಾಗಿದ್ದು, 'ಸರ್' ಅಥವಾ 'ಮೇಡಂ' ನಂತಹ ಪದಗಳ ಬಳಸುವ ಬದಲು ತಮ್ಮ ಹೆಸರಿನಿಂದ ಕರೆಯುವಂತೆ ಅಧಿಕಾರಿಗಳು ನಿಮಗೆ ಇನ್ಮುಂದೆ ವಿನಯತೆಯಿಂದ ಕೇಳಿಕೊಳ್ಳಬಹುದು.


ಇದು ಸಾಮಾನ್ಯ ಜನರು, ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಡುವಿನ ಒಂದು ವ್ಯತ್ಯಾಸವನ್ನು ನಿವಾರಿಸುವ ಮತ್ತು ಆ ಮೂಲಕ ಪರಸ್ಪರ ಪ್ರೀತಿ ಮತ್ತು ನಂಬಿಕೆಯ ಬಂಧವನ್ನು ನಿರ್ಮಿಸುವ ಗುರಿಯನ್ನು ಇವರು ಹೊಂದಿದ್ದಾರೆ. ಇತ್ತೀಚೆಗೆ ನಡೆದ ಪಂಚಾಯಿತಿ ಮಂಡಳಿಯ ಸಭೆ ಸರ್ವಾನುಮತದಿಂದ ಐತಿಹಾಸಿಕ ನಿರ್ಧಾರ ತೆಗೆದುಕೊಂಡು ಹೊಸ ನಿಯಮವನ್ನು ಜಾರಿಗೆ ತರುವಂತೆ ನಿರ್ಧರಿಸಲಾಗಿದೆ.


ಮಾಥುರ್ ಪಂಚಾಯತಿಯ ಉಪಾಧ್ಯಕ್ಷ ಪಿ.ಆರ್.ಪ್ರಸಾದ್ ಅವರು “ತಮ್ಮ ಅವಶ್ಯಕತೆಗಳಿಗೆ ಪಂಚಾಯತ್ ಕಚೇರಿಗಳಿಗೆ ಭೇಟಿ ನೀಡುವ ಜನ ಸಾಮಾನ್ಯರು ಮತ್ತು ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಡುವಿನ ಅಂತರವನ್ನು ಕಡಿಮೆ ಮಾಡುವುದು ಈ ಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.


ಇದನ್ನೂ ಓದಿ: EPFO: ನಿಮ್ಮ ಪಿಎಫ್ ಖಾತೆಗೆ 2.5 ಲಕ್ಷಕ್ಕಿಂತ ಹೆಚ್ಚು ಹಣ ಹೋಗ್ತಿದ್ಯಾ? ಹಾಗಿದ್ರೆ ನಿಮ್ಗೆ ಎರಡೆರಡು PF Account ಇರುತ್ತೆ

"ರಾಜಕೀಯವನ್ನು ಪಕ್ಕಕ್ಕೆ ಸರಿಸಿ, ನಮ್ಮ ಪಂಚಾಯತಿ ಕಚೇರಿಯಲ್ಲಿರುವಂತಹ ಪ್ರತಿಯೊಬ್ಬರೂ ಸ್ನೇಹಪರ ವಾತಾವರಣವನ್ನು ಸೃಷ್ಟಿಸುವ ಬಗ್ಗೆ ಆಸಕ್ತಿಯನ್ನು ಹೊಂದಿದ್ದು, ಸರ್ ಅಥವಾ ಮೇಡಮ್‌ನಂತಹ ಪದಗಳನ್ನು ಬಳಸಿ ತಮ್ಮ ಸಮಸ್ಯೆಗಳೊಂದಿಗೆ ನಮ್ಮನ್ನು ಬಂದು ಭೇಟಿಯಾಗುವವರಿಗೆ ಮತ್ತು ನಮ್ಮ ನಡುವೆ ಒಂದು ಅಂತರ ಸೃಷ್ಟಿಯಾಗುತ್ತದೆ, ಆ ಅಂತರವನ್ನು ಹೋಗಲಾಡಿಸಲು ನಾವು ಈ ನಿರ್ಧಾರವನ್ನು ಮಾಡಿದ್ದೇವೆ” ಎಂದು ಪ್ರಸಾದ್ ಹೇಳಿದರು.


"ಪ್ರಜಾಪ್ರಭುತ್ವದಲ್ಲಿ, ಜನರು ಯಜಮಾನರು ಮತ್ತು ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಅವರ ಸೇವೆ ಮಾಡಲು ಇದ್ದಾರೆ. ಅವರಿಗಾಗಿ ಕೆಲಸ ಮಾಡುವಂತೆ ಅವರು ನಮ್ಮನ್ನು ವಿನಂತಿಸುವ ಅಗತ್ಯವಿಲ್ಲ, ಅದು ಅವರ ಹಕ್ಕು ಎಂದು ತಿಳಿದುಕೊಂಡು ಅವರು ಸೇವೆಯನ್ನು ನಮ್ಮಿಂದ ವಿನಂತಿಸಬಹುದು" ಎಂದು ಅವರು ಹೇಳಿದರು.


ಪಂಚಾಯಿತಿ ಕಚೇರಿಯಲ್ಲಿ ಪ್ರತಿಯೊಬ್ಬ ಅಧಿಕಾರಿಯೂ ತಮ್ಮ ಹೆಸರುಗಳನ್ನು ಪ್ರದರ್ಶಿಸುವ ಬೋರ್ಡ್ ಅನ್ನು ತಮ್ಮ ಟೇಬಲ್ ಗಳ ಮೇಲೆ ಇರಿಸಿಕೊಳ್ಳಬೇಕು. ವಯಸ್ಸಾದ ಅಧಿಕಾರಿಗಳನ್ನು ತಮ್ಮ ಹೆಸರುಗಳಿಂದ ಕರೆಯುವಲ್ಲಿ ಕಿರಿಯರಿಗೆ ಕಿರಿಕಿರಿ ಅನ್ನಿಸಿದರೆ ಅಂತಹವರು ಮಲಯಾಳಂನಲ್ಲಿ 'ಚೇಟಾ' (ಅಣ್ಣ) ಅಥವಾ 'ಚೇಚಿ' (ಅಕ್ಕ) ಅಂತಹ ಸ್ನೇಹಪರ ಪದಗಳನ್ನು ಬಳಸಿ ಅವರನ್ನು ಕರೆಯಬಹುದು ಎಂದು ಅವರು ಹೇಳಿದರು.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

Published by:Soumya KN
First published: